Drone Strike: ಇಸ್ರೇಲ್ ಸೇನಾ ನೆಲೆ ಮೇಲೆ ಡ್ರೋನ್ ದಾಳಿ: 4 ಯೋಧರು ಮೃತ್ಯು, 60 ಮಂದಿಗೆ ಗಾಯ
Team Udayavani, Oct 14, 2024, 8:56 AM IST
ಟೆಲ್ ಅವಿವ್: ಮಧ್ಯ ಇಸ್ರೇಲ್‌ನ ಬಿನ್ಯಾಮಿನಾ ಬಳಿಯ ಸೇನಾ ನೆಲೆಯ ಮೇಲೆ ಲೆಬನಾನ್‌ನ ಉಗ್ರಗಾಮಿ ಗುಂಪು ಹಿಜ್ಬುಲ್ಲಾ ನಡೆಸಿದ ಡ್ರೋನ್ ದಾಳಿಯಲ್ಲಿ ಇಸ್ರೇಲ್ ನ ನಾಲ್ವರು ಯೋಧರು ಮೃತಪಟ್ಟಿರುವುದಾಗಿ ಇಸ್ರೇಲ್ ಮಿಲಿಟರಿ ಮಾಹಿತಿ ನೀಡಿದೆ.
ಭಾನುವಾರ(ಅ.13) ರಾತ್ರಿ ನಡೆಸಿದ ಈ ದಾಳಿಯಲ್ಲಿ 4 ಇಸ್ರೇಲಿ ಸೈನಿಕರು ಮೃತಪಟ್ಟಿದ್ದು ಮತ್ತು 67 ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಲೆಬನಾನಿನ ಉಗ್ರಗಾಮಿ ಗುಂಪು ಹಿಜ್ಬುಲ್ಲಾ ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ, ಇದು ಐಡಿಎಫ್‌ನ ಗೋಲಾನಿ ಬ್ರಿಗೇಡ್ ತರಬೇತಿ ನೆಲೆಯನ್ನು ಗುರಿಯಾಗಿಸಿ ನಡೆಸಿದ ದಾಳಿಯಾಗಿದೆ ಎಂದು ಹೇಳಿದೆ. ಇಸ್ರೇಲ್ ಸೇನೆ ಇತ್ತೀಚಿಗೆ ಲೆಬನಾನ್ ಮೇಲೆ ದಾಳಿ ನಡೆಸಿದ ಕೆಲವೇ ದಿನಗಳಲ್ಲಿ ಈ ಘಟನೆ ನಡೆದಿದೆ.
ಮೊಳಗದ ಸೈರನ್:
ಭಾನುವಾರ ರಾತ್ರಿ ಸುಮಾರು 7 ಗಂಟೆಯ ಮೊದಲು ಡ್ರೋನ್ ದಾಳಿ ನಡೆಸಲಾಗಿದೆ ಎಂದು IDF ಹೇಳಿದೆ. ಸೇನಾ ಶಿಬರವನ್ನು ಗುರಿಯಾಗಿಸಿ ದಾಳಿ ನಡೆಸಲಾಗಿದ್ದು ಈ ವೇಳೆ ನಾಲ್ವರು ಯೋಧರು ಮೃತಪಟ್ಟರೆ, ಏಳು ಸೈನಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ ಐಡಿಎಫ್ ವರದಿ ಮಾಡಿದೆ. 28 ಮಂದಿ ಗಾಯಾಳುಗಳನ್ನು ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಡ್ರೋನ್ ಆಗಮನದ ಮೊದಲು ಯಾವುದೇ ಸೈರನ್ ಮೊಳಗಲಿಲ್ಲ, ಇದರಿಂದಾಗಿ ಸೈನಿಕರು ಸುರಕ್ಷಿತ ಪ್ರದೇಶಗಳಿಗೆ ತೆರಳಲು ಸಾಧ್ಯವಾಗಲಿಲ್ಲ ಎಂದು ಹೇಳಲಾಗಿದೆ.
Yesterday, a UAV launched by the Hezbollah terrorist organization hit an army base.
4 IDF soldiers were killed in the incident.
The IDF shares in the grief of the bereaved families and will continue to accompany them.
We ask to refrain from spreading rumours and the names of…
— Israel Defense Forces (@IDF) October 13, 2024
אמש, כלי טיס בלתי מאויש של ארגון הטרור חיזבאללה פגע בבסיס צבאי סמוך לבנימינה. כלל הפצועים פונו לבתי החולים והודעה נמסרה למשפחותיהם.
באירוע נהרגו ארבעה חיילי צה״ל ושבעה חיילים נפצעו באורח קשה>> pic.twitter.com/H2z3fbm2Mz
— צבא ההגנה לישראל (@idfonline) October 13, 2024
ಇದನ್ನೂ ಓದಿ: BBK11: ಇಡೀ ಬಿಗ್ ಬಾಸ್ ಮನೆಗೆ ಆತಂಕ ತಂದ ಆ ಒಂದು ಕರೆ… ಮಾಡಿದ್ಯಾರು…?
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chido Cyclone: ಫ್ರಾನ್ಸ್ ನಲ್ಲಿ ಭೀಕರ ಚಂಡಮಾರುತದ… ಸಾವಿರ ಗಡಿ ದಾಟಿದ ಮೃತರ ಸಂಖ್ಯೆ?
San Francisco; ತಬಲಾ ಮಾಂತ್ರಿಕ ಜಾಕೀರ್ ಹುಸೇನ್ ಅವರಿಗೆ ಐಸಿಯುನಲ್ಲಿ ಚಿಕಿತ್ಸೆ
‘Miss Netherlands’ ಇನ್ನು ಮುಂದೆ ನಡೆಯುವುದಿಲ್ಲ…: ಸೌಂದರ್ಯಕ್ಕೆ ಮಹತ್ವ ಬೇಡ!
South Korea; ಮಿಲಿಟರಿ ಆಡಳಿತ ಹೇರಿ ಅಧಿಕಾರ ಕಳೆದುಕೊಂಡ ಅಧ್ಯಕ್ಷ!
Football ಮಾಜಿ ತಾರೆ ಮಿಖಾಯಿಲ್ ಈಗ ಜಾರ್ಜಿಯಾ ಅಧ್ಯಕ್ಷ
MUST WATCH
ಹೊಸ ಸೇರ್ಪಡೆ
Chido Cyclone: ಫ್ರಾನ್ಸ್ ನಲ್ಲಿ ಭೀಕರ ಚಂಡಮಾರುತದ… ಸಾವಿರ ಗಡಿ ದಾಟಿದ ಮೃತರ ಸಂಖ್ಯೆ?
INDvsAUS: ಮಳೆಯಾಟದಲ್ಲಿ ಜಾರಿದ ಭಾರತದ ಬ್ಯಾಟಿಂಗ್; ಆಸೀಸ್ ಬಿಗಿ ಹಿಡಿತ
Loophole: ನಿಮ್ಮ ಪಡಿತರ ಅಪಾಯದಲ್ಲಿ? ಸೇವಿಸುವ ಆಹಾರ ಎಷ್ಟು ಸುರಕ್ಷಿತ?
Big Claim: ನನ್ನ ರಾಜಕೀಯ ಜೀವನ ರೂಪಿಸಿದ್ದು, ಕೆಡವಿದ್ದು ಗಾಂಧಿಗಳು: ಮಣಿಶಂಕರ್ ಅಯ್ಯರ್
WPL Auction: ಮಹಿಳಾ ಐಪಿಎಲ್ ಮಿನಿ ಹರಾಜು: ಸಿಮ್ರಾನ್ ಶೇಖ್ ದುಬಾರಿ ಆಟಗಾರ್ತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.