ಪಾತಕಿ ಲಾರೆನ್ಸ್‌ ಜೈಲಿನಲ್ಲಿ-ಮುಂಬೈ ಪೊಲೀಸರಿಗೆ ವಶಕ್ಕೆ ಪಡೆಯಲು ಸಾಧ್ಯವಾಗುತ್ತಿಲ್ಲ ಯಾಕೆ?

ಗೋಲ್ಡಿ ಬ್ರಾರ್‌ ಹಾಗೂ ರೋಹಿತ್‌ ಗೋದಾರ್‌ ಪಾತಕ ಚಟುವಟಿಕೆಯ ರೂವಾರಿಗಳು..

ನಾಗೇಂದ್ರ ತ್ರಾಸಿ, Oct 14, 2024, 1:24 PM IST

ಪಾತಕಿ ಲಾರೆನ್ಸ್‌ ಜೈಲಿನಲ್ಲಿ-ಮುಂಬೈ ಪೊಲೀಸರಿಗೆ ವಶಕ್ಕೆ ಪಡೆಯಲು ಸಾಧ್ಯವಾಗುತ್ತಿಲ್ಲ ಯಾಕೆ?

ಡಿಸಿಎಂ ಅಜಿತ್‌ ಪವಾರ್‌ ಬಣದ ಎನ್‌ ಸಿಪಿ ನಾಯಕ, ಮಹಾರಾಷ್ಟ್ರದ ಮಾಜಿ ಸಚಿವ ಬಾಬಾ ಸಿದ್ದಿಕಿ ಹತ್ಯೆಯ ಹೊಣೆಯನ್ನು ಲಾರೆನ್ಸ್‌ ಬಿಷ್ಣೋಯಿ ಗ್ಯಾಂಗ್‌ ಹೊತ್ತುಕೊಂಡಿದೆ. ಇದರ ಹೊರತಾಗಿಯೂ ಹೈ ಪ್ರೊಫೈಲ್‌ ಪ್ರಕರಣಗಳಲ್ಲೂ ಲಾರೆನ್ಸ್‌ ಹೆಸರು ಹರಿದಾಡುತ್ತಿದ್ದರೂ ಕೂಡಾ ಗುಜರಾತ್‌ ನ ಸಬರ್‌ ಮತಿ ಜೈಲಿನಲ್ಲಿರುವ ಪಾತಕಿಯನ್ನು ತಮ್ಮ ಕಸ್ಟಡಿಗೆ ಪಡೆದುಕೊಳ್ಳಲು ಮುಂಬೈ ಕ್ರೈಂ ಬ್ರ್ಯಾಂಚ್‌ ಭಾರೀ ಸವಾಲನ್ನು ಎದುರಿಸುತ್ತಿದೆ!

ಏಪ್ರಿಲ್‌ ತಿಂಗಳಲ್ಲಿ ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ ನಿವಾಸದ ಮೇಲೆ ಗುಂಡಿನ ದಾಳಿ ನಡೆಸಿದ್ದ ಪ್ರಕರಣದ ಹೊಣೆ ಕೂಡಾ ಬಿಷ್ಣೋಯಿ ಗ್ಯಾಂಗ್‌ ಹೊತ್ತುಕೊಂಡಿತ್ತು. ಆ ಬಳಿಕ ಸಲ್ಮಾನ್‌ ಖಾನ್‌ ಹಾಗೂ ನಿವಾಸದ ಭದ್ರತೆಯನ್ನು ಬಿಗಿಗೊಳಿಸಿದೆ.

ಲಾರೆನ್ಸ್‌ ಬಿಷ್ಣೋಯಿ ವಶಕ್ಕೆ ಪಡೆಯಲು ಮುಂಬೈ ಪೊಲೀಸರಿಗೆ ಅಡ್ಡಿಯಾಗಿದ್ದೇನು?

ಗುಜರಾತ್‌ ನ ಸಬರಮತಿ ಜೈಲಿನಲ್ಲಿರುವ ನಟೋರಿಯಸ್‌ ಗ್ಯಾಂಗ್‌ ಸ್ಟರ್‌ ಲಾರೆನ್ಸ್‌ ಬಿಷ್ಣೋಯಿಯನ್ನು ತಮ್ಮ ಕಸ್ಟಡಿಗೆ ಒಪ್ಪಿಸಿ ಎಂದು ಮುಂಬೈ ಪೊಲೀಸರು ಹಲವು ಮನವಿಯನ್ನು ಸಲ್ಲಿಸಿದ್ದರು ಕೂಡಾ ಅದು ನಿಷ್ಪ್ರಯೋಜಕವಾಗಿತ್ತು ಎಂದು ವರದಿ ತಿಳಿಸಿದೆ.

ಅಂದ ಹಾಗೆ ಗುಜರಾತ್‌ ಜೈಲಿನಲ್ಲಿರುವ ಬಿಷ್ಣೋಯಿಯನ್ನು‌ ಮಹಾರಾಷ್ಟ್ರ ಪೊಲೀಸರಿಗೆ ಒಪ್ಪಿಸುತ್ತಿಲ್ಲ ಯಾಕೆ ಎಂಬ ಪ್ರಶ್ನೆ ಸಹಜ. ಇದಕ್ಕೆ ಕಾರಣ ಕೇಂದ್ರ ಗೃಹ ಸಚಿವಾಲಯ! ಅಹಮದಾಬಾದ್‌ ನ ಸಬರಮತಿ ಜೈಲಿನಲ್ಲಿರುವ ಬಿಷ್ಣೋಯಿ ಟ್ರಾನ್ಸ್‌ ಫರ್‌ (ಒಂದು ಜೈಲಿನಿಂದ ಮತ್ತೊಂದು ರಾಜ್ಯಕ್ಕೆ ಹಸ್ತಾಂತರಿಸುವ ಪ್ರಕ್ರಿಯೆ)ಗೆ ಸಚಿವಾಲಯ ನಿರ್ಬಂಧ ವಿಧಿಸಿರುವುದಾಗಿ ವರದಿ ವಿವರಿಸಿದೆ.

2024ರ ಆಗಸ್ಟ್‌ ವರೆಗೆ ಈ ಆದೇಶ ಅನ್ವಯ ಎಂದು ಸಚಿವಾಲಯ ತಿಳಿಸಿತ್ತು. ಆದರೆ ಇದೀಗ ಆ ಅವಧಿಯನ್ನು‌ ವಿಸ್ತರಿಸಲಾಗಿದೆ ಎಂದು ವರದಿ ತಿಳಿಸಿದೆ. ಗಡಿಭಾಗದ ಡ್ರಗ್ಸ್‌ ಕಳ್ಳಸಾಗಣೆ ಪ್ರಕರಣದ ಸಂಬಂಧ 2023ರ ಆಗಸ್ಟ್‌ ನಲ್ಲಿ ಗ್ಯಾಂಗ್‌ ಸ್ಟರ್‌ ಬಿಷ್ಣೋಯಿಯನ್ನು ದೆಹಲಿಯ ತಿಹಾರ್‌ ಜೈಲಿನಿಂದ ಸಬರಮತಿ ಸೆಂಟ್ರಲ್‌ ಜೈಲ್‌ ಗೆ ಸ್ಥಳಾಂತರಿಸಲಾಗಿತ್ತು.

ಕುಖ್ಯಾತ ಪಾತಕಿ ಲಾರೆನ್ಸ್‌ ಬಿಷ್ಣೋಯಿ ವಿರುದ್ಧ 12ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿವೆ. ಅಷ್ಟೇ ಅಲ್ಲ‌ ಪಂಜಾಬ್‌ ನ ಖ್ಯಾತ ಗಾಯಕ ಸಿಧು ಮೂಸೆ ವಾಲಾ ಅವರ ಹತ್ಯೆಯ ಹೊಣೆಯನ್ನು ಬಿಷ್ಣೋಯಿ ಗ್ಯಾಂಗ್‌ ಹೊತ್ತುಕೊಂಡಿತ್ತು.

ಬಿಷ್ಣೋಯಿ ಜೈಲಿನಲ್ಲಿದ್ದಾಗ ಈತನ ಗ್ಯಾಂಗ್‌ ನ ಕಾರ್ಯಾಚರಣೆಗಳನ್ನು ಲಾರೆನ್ಸ್‌ ಗ್ಯಾಂಗ್‌ ನ ವಿದೇಶದಲ್ಲಿ ನೆಲೆಸಿರುವ ಮೂವರು ನಟೋರಿಯಸ್‌ ಗ್ಯಾಂಗ್‌ ಸ್ಟರ್ಸ್‌ ಗಳು ನೋಡಿಕೊಳ್ಳುತ್ತಾರೆ. ಲಾರೆನ್ಸ್‌ ಸಹೋದರ ಅನ್ಮೋಲ್‌ ಬಿಷ್ಣೋಯಿ, ಗೋಲ್ಡಿ ಬ್ರಾರ್‌ ಹಾಗೂ ರೋಹಿತ್‌ ಗೋದಾರ್‌ ಪಾತಕ ಚಟುವಟಿಕೆಯ ರೂವಾರಿಗಳಾಗಿದ್ದಾರೆ. ಆರಂಭದಲ್ಲಿ‌ ಸಣ್ಣ-ಪುಟ್ಟ ಅಪರಾಧ ಮಾಡುತ್ತಿದ್ದ ದಾವೂದ್‌ ಇಬ್ರಾಹಿಂ 1990ರ ದಶಕದಲ್ಲಿ ಹೇಗೆ ಬೃಹತ್‌ ಭಯೋತ್ಪಾದಕ ಗ್ಯಾಂಗ್‌ ಅನ್ನು ಸಂಘಟಿಸಿದ್ದನೋ ಅದೇ ರೀತಿ ಈ ಬಿಷ್ಣೋಯಿ ಸಂಘಟನೆ ಕೂಡಾ ದೊಡ್ಡ ಪ್ರಮಾಣದಲ್ಲಿ ಬೆಳೆದು ಬಿಟ್ಟಿರುವುದಾಗಿ ಎನ್‌ ಐಎ ಆರೋಪಪಟ್ಟಿಯಲ್ಲಿ ಉಲ್ಲೇಖಿಸಿರುವುದಾಗಿ ವರದಿ ತಿಳಿಸಿದೆ.

ಭಾನುವಾರ(ಅ.13) ಬಿಷ್ಣೋಯಿ ಗ್ಯಾಂಗ್‌ ಎನ್‌ ಸಿಪಿ ಮುಖಂಡ ಬಾಬಾ ಸಿದ್ದಿಖಿಯನ್ನು ಹ*ತ್ಯೆಗೈದಿರುವುದಾಗಿ ಹೊಣೆ ಹೊತ್ತುಕೊಂಡಿತ್ತು. ಈ ಪ್ರಕರಣದ ಬಗ್ಗೆ ಮುಂಬೈ ಪೊಲೀಸರು ತನಿಖೆ ನಡೆಸುತ್ತಿದ್ದು, ಶಾರ್ಪ್‌ ಶೂಟರ್ಸ್‌ ಗಳನ್ನು ಬಂಧಿಸಿದ್ದು, ಆರೋಪಿಗಳು ಬಿಷ್ಣೋಯಿ ಗ್ಯಾಂಗ್‌ ಹೆಸರು ಹೇಳಿರುವುದಾಗಿ ಮೂಲಗಳು ತಿಳಿಸಿವೆ.

ಬಿಷ್ಣೋಯಿ ಸಮುದಾಯ ದೇವರು ಎಂದೇ ಪೂಜಿಸುವ ಎರಡು ಕೃಷ್ಣಮೃಗಗಳನ್ನು ಬೇಟೆಯಾಡಿದ್ದ ಪ್ರಕರಣದ ನಂತರ ಬಿಷ್ಣೋಯಿ ಗ್ಯಾಂಗ್‌ ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ ಮೇಲೆ ತಿರುಗಿಬಿದ್ದಿದ್ದು, ದಾಳಿ ನಡೆಸಲು ಸಂಚು ರೂಪಿಸಿತ್ತು. ಇದೀಗ ಸಿದ್ದಿಖಿ ಕೂಡಾ ಸಲ್ಮಾನ್‌ ಜೊತೆ ತುಂಬಾ ನಿಕಟ ಸಂಬಂಧ ಹೊಂದಿದ್ದರ ಪರಿಣಾಮ ಹ*ತ್ಯೆಗೈದಿರುವುದಾಗಿ ಬಿಷ್ಣೋಯಿ ಗ್ಯಾಂಗ್‌ ಸಾಮಾಜಿಕ ಜಾಲತಾಣದ ಪೋಸ್ಟ್‌ ನಲ್ಲಿ ಉಲ್ಲೇಖಿಸಿತ್ತು. ಅಷ್ಟೇ ಅಲ್ಲ ಯಾರೇ ಆಗಲಿ ಸಲ್ಮಾನ್‌ ಖಾನ್‌ ಅಥವಾ ದಾವೂದ್‌ ಗ್ಯಾಂಗ್‌ ಗೆ ನೆರವು ನೀಡಿದರೆ ಅವರನ್ನು ಬಿಡುವುದಿಲ್ಲ ಎಂಬ ಬೆದರಿಕೆ ಕೂಡಾ ಹಾಕಿತ್ತು.

ಕಳೆದ ಕೆಲವು ವರ್ಷಗಳಿಂದ ಲಾರೆನ್ಸ್‌ ಗ್ಯಾಂಗ್‌ ಸಲ್ಮಾನ್‌ ಖಾನ್‌ ಮೇಲೆ ದಾಳಿ ನಡೆಸಲು ಸಂಚು ರೂಪಿಸಿತ್ತು. ಏಪ್ರಿಲ್‌ ತಿಂಗಳಿನಲ್ಲಿ ಇಬ್ಬರು ವ್ಯಕ್ತಿಗಳು ಬೈಕ್‌ ನಲ್ಲಿ ಆಗಮಿಸಿ, ನಿವಾಸದ ಹೊರಭಾಗದಲ್ಲಿ ಗುಂಡಿನ ದಾಳಿ ನಡೆಸಿ ಪರಾರಿಯಾಗಿತ್ತು. 2022ರಲ್ಲಿ ಸಿಧು ಮೂಸೆವಾಲನಿಗೆ ಆದ ಗತಿ ನಿನಗೂ (ಸಲ್ಮಾನ್‌ ಖಾನ್)‌ ಆಗಲಿದೆ ಎಂದು ಎಚ್ಚರಿಕೆಯ ಪತ್ರ ಕಳುಹಿಸಿತ್ತು ಎಂದು ವರದಿ ತಿಳಿಸಿದೆ.

ಟಾಪ್ ನ್ಯೂಸ್

Beggars baby

Begging-free ಇಂದೋರ್‌ ಗುರಿ: ಜ.1ರಿಂದ ಭಿಕ್ಷೆ ಕೊಟ್ಟರೆ ಶಿಕ್ಷೆ!

1-pppp

Pakistan ಶರಣಾದ ಚಿತ್ರ ಸೇನಾ ಕಚೇರಿಯಿಂದ ತೆರವು: ಕಾಂಗ್ರೆಸ್‌ ಕಿಡಿ

mohamad-yunus

Bangladesh; 2025ರ ಅಂತ್ಯ ಇಲ್ಲವೇ 2026ಕ್ಕೆ ಚುನಾವಣೆ: ಯೂನುಸ್‌

1-rt

Farmers; ಬಟೋಂಗೆ ತೋ ಲುಟೋಂಗೆ: ಒಗ್ಗಟ್ಟಿಗೆ ಟಿಕಾಯತ್‌ ಕರೆ

1-tmk

T.M.Krishna ಅವರನ್ನು ಸುಬ್ಬುಲಕ್ಷ್ಮೀ ಪ್ರಶಸ್ತಿ ಪುರಸ್ಕೃತ ಎಂದು ಕರೆಯಬಾರದು: ಸುಪ್ರೀಂ

ಪಡಿತರ ವ್ಯವಸ್ಥೆ ಸಮರ್ಪಕವಾಗಲಿ

ಪಡಿತರ ವ್ಯವಸ್ಥೆ ಸಮರ್ಪಕವಾಗಲಿ

Bus-problem

Service Variation: ಸರಕಾರಿ ಬಸ್‌ ಸೇವೆಯಲ್ಲಿ ವ್ಯತ್ಯಯ: ಪ್ರಯಾಣಿಕರ ಪರದಾಟ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕಾಶೀರದಲ್ಲಿ ಮಾದಕ ಜಾಲ: 8,000 ಕೆ.ಜಿ. ಡ್ರಗ್ಸ್ ವಶ- 5ವರ್ಷದಲ್ಲಿ 6,500 ಪ್ರಕರಣ

ಕಾಶ್ಮೀರದಲ್ಲಿ ಮಾದಕ ಜಾಲ: 8,000 ಕೆ.ಜಿ. ಡ್ರಗ್ಸ್ ವಶ- 5ವರ್ಷದಲ್ಲಿ 6,500 ಪ್ರಕರಣ

Varanasi: ಕಾಳಿ ದೇವಿ ಪ್ರತ್ಯಕ್ಷವಾಗಲಿಲ್ಲ ಎಂದು ಕತ್ತು ಸೀಳಿಕೊಂಡು ಸಾ*ವಿಗೆ ಶರಣಾದ ಅರ್ಚಕ!

Varanasi:ಕಾಳಿ ದೇವಿ ಪ್ರತ್ಯಕ್ಷವಾಗಲಿಲ್ಲ ಎಂದು ಕತ್ತು ಸೀಳಿಕೊಂಡು ಸಾ*ವಿಗೆ ಶರಣಾದ ಅರ್ಚಕ!

ಮರ್ಯಾದಾ ಹ*ತ್ಯೆ: ಅಣ್ಣನಿಂದಲೇ ಪೊಲೀಸ್‌ ಕಾನ್ಸ್‌ ಟೇಬಲ್‌ ಬರ್ಬರ ಹ*ತ್ಯೆ!

ಮರ್ಯಾದಾ ಹ*ತ್ಯೆ: ಅಣ್ಣನಿಂದಲೇ ಮಹಿಳಾ ಪೊಲೀಸ್‌ ಕಾನ್ಸ್‌ ಟೇಬಲ್‌ ಬರ್ಬರ ಹ*ತ್ಯೆ!

Digital Arrest;  ತನಿಖೆ ನೆಪದಲ್ಲಿ ಯುವತಿಯನ್ನು ವಿವ*ಸ್ತ್ರಗೊಳಿಸಿ 1.7 ಲಕ್ಷ ರೂ. ವಂಚನೆ!

Digital Arrest;  ತನಿಖೆ ನೆಪದಲ್ಲಿ ಯುವತಿಯನ್ನು ವಿವ*ಸ್ತ್ರಗೊಳಿಸಿ 1.7 ಲಕ್ಷ ರೂ. ವಂಚನೆ!

ಬೆಳಗಾವಿ: ಸಾರಾಯಿ ಬಿಲ್‌ ಕೊಡದ್ದಕ್ಕೆ ಹ*ತ್ಯೆಗೈದ ಇಬ್ಬರು ಜೈಲಿಗೆ

ಬೆಳಗಾವಿ: ಸಾರಾಯಿ ಬಿಲ್‌ ಕೊಡದ್ದಕ್ಕೆ ಹ*ತ್ಯೆಗೈದ ಇಬ್ಬರು ಜೈಲಿಗೆ

MUST WATCH

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

udayavani youtube

ಅಯ್ಯಪ್ಪ ಸ್ವಾಮಿ ಪವಾಡ | ಮಾತು ಬಾರದ ಬಾಲಕನಿಗೆ ಮಾತು ಬಂತು!

udayavani youtube

CCTV Footage | Udupi; ಹೆದ್ದಾರಿಯಲ್ಲೇ ಶರವೇಗದಲ್ಲಿ ಬಂದು ಅಪ್ಪಳಿಸಿದ ಕಾರು.

ಹೊಸ ಸೇರ್ಪಡೆ

Beggars baby

Begging-free ಇಂದೋರ್‌ ಗುರಿ: ಜ.1ರಿಂದ ಭಿಕ್ಷೆ ಕೊಟ್ಟರೆ ಶಿಕ್ಷೆ!

1-pppp

Pakistan ಶರಣಾದ ಚಿತ್ರ ಸೇನಾ ಕಚೇರಿಯಿಂದ ತೆರವು: ಕಾಂಗ್ರೆಸ್‌ ಕಿಡಿ

mohamad-yunus

Bangladesh; 2025ರ ಅಂತ್ಯ ಇಲ್ಲವೇ 2026ಕ್ಕೆ ಚುನಾವಣೆ: ಯೂನುಸ್‌

1-rt

Farmers; ಬಟೋಂಗೆ ತೋ ಲುಟೋಂಗೆ: ಒಗ್ಗಟ್ಟಿಗೆ ಟಿಕಾಯತ್‌ ಕರೆ

1-tmk

T.M.Krishna ಅವರನ್ನು ಸುಬ್ಬುಲಕ್ಷ್ಮೀ ಪ್ರಶಸ್ತಿ ಪುರಸ್ಕೃತ ಎಂದು ಕರೆಯಬಾರದು: ಸುಪ್ರೀಂ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.