![5-belagavi](https://www.udayavani.com/wp-content/uploads/2024/12/5-belagavi-415x249.jpg)
Bantwal: ಮೊಡಂಕಾಪು ಶ್ರೀ ವನದುರ್ಗೆ ದೇವಸ್ಥಾನಕ್ಕೆ ಭೇಟಿ ನೀಡಿದ ನಟ ಶಿವಣ್ಣ ದಂಪತಿ
Team Udayavani, Oct 14, 2024, 5:15 PM IST
![Bantwal: ಮೊಡಂಕಾಪು ಶ್ರೀ ವನದುರ್ಗೆ ದೇವಸ್ಥಾನಕ್ಕೆ ಭೇಟಿ ನೀಡಿದ ನಟ ಶಿವಣ್ಣ ದಂಪತಿ](https://www.udayavani.com/wp-content/uploads/2024/10/shiva-620x385.jpg)
ಬಂಟ್ವಾಳ: ಕನ್ನಡ ಚಿತ್ರರಂಗದ ಖ್ಯಾತ ನಟ ಶಿವರಾಜ್ ಕುಮಾರ್ ಹಾಗೂ ಅವರ ಪತ್ನಿ ಗೀತಾಶಿವರಾಜ್ ಕುಮಾರ್ ಅವರು ಇಂದು ಬೆಳಿಗ್ಗೆ ಬಿಸಿರೋಡಿನ ಕೈಕಂಬ ಸಮೀಪದ ಮೊಡಂಕಾಪು ಶ್ರೀ ವನದುರ್ಗೆ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ.
Geetha pictures ಬ್ಯಾನರ್ ನಡಿಯಲ್ಲಿ ಗೀತಾಶಿವರಾಜ್ ಕುಮಾರ್ ಅವರ ನಿರ್ಮಾಣದ ಖ್ಯಾತ ನಟ ಶಿವರಾಜ್ ಕುಮಾರ್ ಅಭಿನಯದ ಹೊಸ ಚಲನಚಿತ್ರ “ಬೈರತಿ ರಣಗಲ್ ” ನ.15 ರಂದು ಕರ್ನಾಟಕ ರಾಜ್ಯದ್ಯಾಂತ ಏಕಕಾಲದಲ್ಲಿ ಬಿಡುಗಡೆಯಾಗಲಿದ್ದು, ಚಿತ್ರ ಯಶಸ್ವಿಯಾಗಬೇಕು ಎಂಬ ಸಂಕಲ್ಪದಿಂದ ಇಲ್ಲಿನ ವನದುರ್ಗೆ ದೇವಿಗೆ ಪತಿ ಪತ್ನಿ ಸಮೇತ ವಿಶೇಷ ಪೂಜೆ ಸಲ್ಲಿಸಿದರು.
ವನದುರ್ಗೆ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಇವರು ಅನ್ನಪ್ರಸಾದ ಸ್ವೀಕರಿಸಿ ಬಳಿಕ ಕುತ್ತಾರು ಕೊರಗಜ್ಜ ದೈವದ ಆದಿಸ್ಥಳಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.
” ಭೈರತಿರಣಗಲ್” ಚಿತ್ರ ಕನ್ನಡ,ತಮಿಳು, ತೆಲುಗು ಮತ್ತು ಮಲಯಾಳಂ ಸೇರಿದಂತೆ ಪಂಚ ಭಾಷೆಯಲ್ಲಿ ಪ್ರದರ್ಶನವಾಗಲಿದ್ದು, ನ.15 ಚಲನಚಿತ್ರ ತೆರೆಕಾಣಲಿದೆ.
ಈಗಾಗಲೇ ಚಿತ್ರದ ಆಡಿಯೋ ರಿಲೀಸ್ ಆಗಿದ್ದು,ಇದೇ ತಿಂಗಳ ಅ.20 ರಂದು ಟೀಸರ್ ಬಿಡುಗಡೆಯಾಗಲಿದೆ. ಇವರ ಜೊತೆ ಚಲನ ಚಿತ್ರ ನಿರ್ಮಾಪಕರುಗಳಾದ ಕೆ.ಪಿ.ಶ್ರೀನಾಥ್, ರಾಜೇಶ್ ಭಟ್, ಕೀರ್ತನ್ ಪೂಜಾರಿ, ಶಿವರಾಜ್ ಕುಮಾರ್ ಅವರ ಸಂಬಂಧಿ ನಟರಾಜ್ , ಸ್ನೇಹಿತರಾದ ವಿಜಯಪ್ರಸಾದ್, ಶೇಖರ್, ವನದುರ್ಗೆ ದೇವಸ್ಥಾನದ ಆಡಳಿತ ಮೊಕ್ತೇಸರ ಪಾಂಡುರಂಗ ಪ್ರಭು, ಕೊರಗಜ್ಜ ಕ್ಷೇತ್ರದ ಆಡಳಿತ ಮೊಕ್ತೇಸರ ಪ್ರೀತಮ್ ಶೆಟ್ಟಿ, ಗಾಯಕ ಜಿತೇಶ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
![5-belagavi](https://www.udayavani.com/wp-content/uploads/2024/12/5-belagavi-415x249.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
![5-belagavi](https://www.udayavani.com/wp-content/uploads/2024/12/5-belagavi-150x90.jpg)
KSDL ಲಾಭಾಂಶ ₹108 ಕೋಟಿ ಸರ್ಕಾರಕ್ಕೆ ಹಸ್ತಾಂತರ
![Food](https://www.udayavani.com/wp-content/uploads/2024/12/Food-150x90.jpg)
2024ರಲ್ಲಿ ಗೂಗಲ್ ನಲ್ಲಿ ಹೆಚ್ಚು ಹುಡುಕಲ್ಪಟ್ಟ ಟಾಪ್-10 ರೆಸಿಪಿ ಯಾವುದು ಗೊತ್ತಾ?
![4-panaji](https://www.udayavani.com/wp-content/uploads/2024/12/4-panaji-150x90.jpg)
Panaji: ಡಿ.19 ರಂದು ಮುಕ್ತಿ ಸಂಗ್ರಾಮದಲ್ಲಿ ಹೋರಾಡಿದ ಹುತಾತ್ಮರಿಗೆ ಸನ್ಮಾನ, ಗೌರವ
![3-winter-foods](https://www.udayavani.com/wp-content/uploads/2024/12/3-winter-foods-150x90.jpg)
Winter: ಚಳಿಗಾಲದಲ್ಲಿ ಆರೋಗ್ಯಕರವಾಗಿರಲು ಸೇವಿಸಬೇಕಾದ ಆಹಾರಗಳು ಇವು…
![Priyana-Bag-Poli](https://www.udayavani.com/wp-content/uploads/2024/12/Priyana-Bag-Poli-150x90.jpg)
Signature Bag: ನಿನ್ನೆ ಪ್ಯಾಲೆಸ್ತೀನ್ ಬೆಂಬಲ, ಇಂದು ಬಾಂಗ್ಲಾ ಪರ ಕೈ ಚೀಲ ತಂದ ಸಂಸದೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.