Rain Alert: ರಾಜ್ಯದ 18 ಜಿಲ್ಲೆಗಳಲ್ಲಿ ಅ.17ರವರೆಗೆ ಭಾರೀ ಮಳೆ ಸಾಧ್ಯತೆ

ಈ ಜಿಲ್ಲೆಗಳಲ್ಲಿ ಹಳದಿ, ಆರೆಂಜ್ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ

Team Udayavani, Oct 14, 2024, 7:35 PM IST

rain

ಬೆಂಗಳೂರು: ರಾಜ್ಯದ ಕರಾವಳಿ ಜಿಲ್ಲೆಗಳು ಸೇರಿದಂತೆ ಮಲೆನಾಡು ಜಿಲ್ಲೆಗಳಲ್ಲಿ ಅ. 22 ರವರೆಗೆ ವ್ಯಾಪಕವಾಗಿ ಸಾಧಾರಣ ಮಳೆಯಾಗುವ ನಿರೀಕ್ಷೆಯಿದ್ದು,  ಉತ್ತರ ಒಳನಾಡು ಜಿಲ್ಲೆಗಳ ಒಳಗೊಂಡಂತೆ ರಾಜ್ಯದ 18 ಜಿಲ್ಲೆಗಳಲ್ಲಿ ಅ. 17ರವರೆಗೆ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಜ್ಞ ಸಿ.ಎಸ್‌. ಪಾಟೀಲ್‌ ಮಾಹಿತಿ ನೀಡಿದ್ದಾರೆ.

ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಅ. 16 ಮತ್ತು 17 ರಂದು ವ್ಯಾಪಕವಾಗಿ ಸಾಧಾರಣ ಮಳೆ, ಅಲ್ಲಲ್ಲಿ ಚದುರಿದಂತೆ ಭಾರಿ ಮಳೆ ಸಾಧ್ಯತೆ ಇದೆ.  ದಕ್ಷಿಣ ಒಳನಾಡು ಪ್ರದೇಶದ ಪೂರ್ವ ಜಿಲ್ಲೆಗಳಲ್ಲೂ  ಭಾರಿ ಮಳೆಯ ನಿರೀಕ್ಷೆಯಿದೆ. ಅ.18ರ ಬಳಿಕ ಮಳೆ ಕಡಿಮೆ ಇರುವ ಸಾಧ್ಯತೆಯಿದೆ. ಎರಡು-ಮೂರು ದಿನಗಳಲ್ಲಿ ತಮಿಳುನಾಡು, ಪಾಂಡಿಚೇರಿ, ಆಂಧ್ರಪ್ರದೇಶ ಪ್ರದೇಶದಲ್ಲೂ ವಾಯುಭಾರ ಕುಸಿತ ಸಾಧ್ಯತೆಯ ಪರಿಣಾಮ ಕರಾವಳಿ, ದಕ್ಷಿಣ ಒಳನಾಡಿನಲ್ಲಿ 17ರವರೆಗೆ ವ್ಯಾಪಕ ಮಳೆಯಾಗುವ ಹೆಚ್ಚಿನ ಸಾಧ್ಯತೆ ಇದ್ದು, ಉತ್ತರ ಒಳನಾಡಿನ ಹಲವೆಡೆ ಮಳೆ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.

ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ರಾಮನಗರ, ಬೆಂಗಳೂರು, ಮಂಡ್ಯ, ಮೈಸೂರು, ಚಾಮರಾಜನಗರ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬೆಳಗಾವಿ, ಧಾರವಾಡ ಹಾಗೂ ಹಾವೇರಿ. ಈ ಜಿಲ್ಲೆಗಳ ಹಲವೆಡೆ ಅ. 17ರವರೆಗೆ ಭಾರಿ ಮಳೆ ಸಾಧ್ಯತೆ ಇರುವುದರಿಂದ ಈ ಜಿಲ್ಲೆಗಳಲ್ಲಿ ಅ. 17ರವರೆಗೆ ಹಳದಿ ಹಾಗೂ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ಬೆಂಗಳೂರಿನಲ್ಲಿ ಅ. 17ರವರೆಗೆ ಸಾಧಾರಣದಿಂದ ಭಾರಿ ಮಳೆ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಜ್ಞ ಸಿ.ಎಸ್ ಪಾಟೀಲ್ ತಿಳಿಸಿದ್ದಾರೆ.

ಬುಧವಾರದಿಂದ ರಾಜಧಾನಿ ಬೆಂಗಳೂರು ಸೇರಿ ವಿವಿಧ ಜಿಲ್ಲೆಗಳಲ್ಲಿ ಮಳೆಯ ಪ್ರಮಾಣ ಇನ್ನಷ್ಟು ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಳೆಯಾಗುತ್ತಿದೆ. ಬುಧವಾರದಿಂದ ಕರಾವಳಿ ಹಾಗೂ ಒಳನಾಡು ಭಾಗದಲ್ಲಿ ಇನ್ನಷ್ಟು ಮಳೆ ಹೆಚ್ಚಾಗಲಿದೆ. ಹಾಗಾಗಿ, ಅ.16 ಮತ್ತು 17ಕ್ಕೆ ಕರಾವಳಿಯ ಮೂರು ಜಿಲ್ಲೆಗಳಿಗೆ ಯಲ್ಲೋ ಅಲರ್ಟ್‌, ಅ.18ಕ್ಕೆ ಆರೆಂಜ್‌ ಅಲರ್ಟ್‌ ನೀಡಲಾಗಿದೆ.

ಟಾಪ್ ನ್ಯೂಸ್

R Ashok: ರೈತ, ಕನ್ನಡಪರ ಹೋರಾಟಕ್ಕೆ ಹುಬ್ಬಳ್ಳಿ ಗಲಭೆಯ ಹೋಲಿಕೆ ಸಲ್ಲ

R Ashok: ರೈತ, ಕನ್ನಡಪರ ಹೋರಾಟಕ್ಕೆ ಹುಬ್ಬಳ್ಳಿ ಗಲಭೆಯ ಹೋಲಿಕೆ ಸಲ್ಲ

ಹುಬ್ಬಳ್ಳಿ ಕೇಸ್‌ ಮಾತ್ರವಲ್ಲ, 43 ಕೇಸ್‌ ವಾಪಸ್‌: ಪರಮೇಶ್ವರ್‌

Parameshwar: ಹುಬ್ಬಳ್ಳಿ ಕೇಸ್‌ ಮಾತ್ರವಲ್ಲ, 43 ಕೇಸ್‌ ವಾಪಸ್‌

BY Election: ನಾಳೆ ಬಿಜೆಪಿ ಪ್ರಮುಖರ ಸಭೆ ಕರೆದ ಯೋಗೇಶ್ವರ್‌

BY Election: ನಾಳೆ ಬಿಜೆಪಿ ಪ್ರಮುಖರ ಸಭೆ ಕರೆದ ಯೋಗೇಶ್ವರ್‌

T20-Womens

Womens T-20 World Cup: ಇಂದು ಇಂಗ್ಲೆಂಡಿಗೆ ವೆಸ್ಟ್‌ ಇಂಡೀಸ್‌ ಸವಾಲು

BBK11: ಬಿಗ್ ಬಾಸ್ ಮನೆಯಲ್ಲಿ ಸದ್ದು ಮಾಡಿದ ‘ಬಕೆಟ್’ ಜಗಳ

BBK11: ಬಿಗ್ ಬಾಸ್ ಮನೆಯಲ್ಲಿ ಸದ್ದು ಮಾಡಿದ ‘ಬಕೆಟ್’ ಜಗಳ

Hunasuru-Acc

Hunasur: ಪಿಕಪ್ ವಾಹನ ಪಲ್ಟಿ: ಯುವಕ ಮೃತ್ಯು, 8 ಮಂದಿಗೆ ತೀವ್ರ ಗಾಯ 

Hasana-HDK

By Poll: ಚನ್ನಪಟ್ಟಣ ಕ್ಷೇತ್ರಕ್ಕೆ ವಾರದೊಳಗೆ ಅಭ್ಯರ್ಥಿ ಘೋಷಣೆ: ಎಚ್‌.ಡಿ.ಕುಮಾರಸ್ವಾಮಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

R Ashok: ರೈತ, ಕನ್ನಡಪರ ಹೋರಾಟಕ್ಕೆ ಹುಬ್ಬಳ್ಳಿ ಗಲಭೆಯ ಹೋಲಿಕೆ ಸಲ್ಲ

R Ashok: ರೈತ, ಕನ್ನಡಪರ ಹೋರಾಟಕ್ಕೆ ಹುಬ್ಬಳ್ಳಿ ಗಲಭೆಯ ಹೋಲಿಕೆ ಸಲ್ಲ

ಹುಬ್ಬಳ್ಳಿ ಕೇಸ್‌ ಮಾತ್ರವಲ್ಲ, 43 ಕೇಸ್‌ ವಾಪಸ್‌: ಪರಮೇಶ್ವರ್‌

Parameshwar: ಹುಬ್ಬಳ್ಳಿ ಕೇಸ್‌ ಮಾತ್ರವಲ್ಲ, 43 ಕೇಸ್‌ ವಾಪಸ್‌

ತಲೆಯ ಮೇಲೆ ವಾಹನ ಹರಿದು 5 ವರ್ಷದ ಬಾಲಕ ಸ್ಥಳದಲ್ಲೇ ಸಾ*ವು

Road Mishap: ತಲೆಯ ಮೇಲೆ ವಾಹನ ಹರಿದು 5 ವರ್ಷದ ಬಾಲಕ ಸ್ಥಳದಲ್ಲೇ ಸಾ*ವು

Hasana-HDK

By Poll: ಚನ್ನಪಟ್ಟಣ ಕ್ಷೇತ್ರಕ್ಕೆ ವಾರದೊಳಗೆ ಅಭ್ಯರ್ಥಿ ಘೋಷಣೆ: ಎಚ್‌.ಡಿ.ಕುಮಾರಸ್ವಾಮಿ

1-bhat-bg

Bhatkal; ಯತಿ ನರಸಿಂಹಾನಂದ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಬೃಹತ್ ಪ್ರತಿಭಟನೆ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

R Ashok: ರೈತ, ಕನ್ನಡಪರ ಹೋರಾಟಕ್ಕೆ ಹುಬ್ಬಳ್ಳಿ ಗಲಭೆಯ ಹೋಲಿಕೆ ಸಲ್ಲ

R Ashok: ರೈತ, ಕನ್ನಡಪರ ಹೋರಾಟಕ್ಕೆ ಹುಬ್ಬಳ್ಳಿ ಗಲಭೆಯ ಹೋಲಿಕೆ ಸಲ್ಲ

ಹುಬ್ಬಳ್ಳಿ ಕೇಸ್‌ ಮಾತ್ರವಲ್ಲ, 43 ಕೇಸ್‌ ವಾಪಸ್‌: ಪರಮೇಶ್ವರ್‌

Parameshwar: ಹುಬ್ಬಳ್ಳಿ ಕೇಸ್‌ ಮಾತ್ರವಲ್ಲ, 43 ಕೇಸ್‌ ವಾಪಸ್‌

BY Election: ನಾಳೆ ಬಿಜೆಪಿ ಪ್ರಮುಖರ ಸಭೆ ಕರೆದ ಯೋಗೇಶ್ವರ್‌

BY Election: ನಾಳೆ ಬಿಜೆಪಿ ಪ್ರಮುಖರ ಸಭೆ ಕರೆದ ಯೋಗೇಶ್ವರ್‌

police-ban

Mysuru: ಹಣ ಸುಲಿಗೆಗೆ ಯತ್ನ: ದೂರು ದಾಖಲು

T20-Womens

Womens T-20 World Cup: ಇಂದು ಇಂಗ್ಲೆಂಡಿಗೆ ವೆಸ್ಟ್‌ ಇಂಡೀಸ್‌ ಸವಾಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.