Kalaburagi ಜೈಲಲ್ಲಿ ಕೈದಿಗಳ ಮಜಾ; ವಿಡಿಯೋ ವೈರಲ್
ಜೈಲಿನ ಮೇಲೆ ಪೊಲೀಸ್ ಕಮಿಷನರ್ ದಾಳಿ, ಹಲವು ವಸ್ತು ವಶ
Team Udayavani, Oct 15, 2024, 6:30 AM IST
ಕಲಬುರಗಿ:ಇಲ್ಲಿನ ಕೇಂದ್ರ ಕಾರಾಗೃಹದಲ್ಲಿ ಕೈದಿಗಳು ಜೈಲಿನಲ್ಲೇ ಕುಳಿತುಕೊಂಡು ಗಾಂಜಾ ಸೇದುತ್ತ ನಶೆ ಮಾಡಿದ್ದಲ್ಲದೆ, ನಶೆಯಲ್ಲಿ ಹೊರಗಿದ್ದವರಿಗೆ, ಶಿವಮೊಗ್ಗ ಜೈಲಿನಲ್ಲಿದ್ದ ಗೆಳೆಯರಿಗೆ ಸ್ಮಾರ್ಟ್ ಫೋನ್‌ನಿಂದ ವಿಡಿಯೋ ಕಾಲ್ ಮಾಡಿ ಮಾತನಾಡಿರುವ ವಿಡಿಯೋ ವೈರಲ್ ಆಗಿದೆ.
ಇದರೊಂದಿಗೆ ಜೈಲಿನಲ್ಲಿ ಕೈದಿಗಳು ಭಾರೀ ಮಸ್ತ್ ಜೀವನ ನಡೆಸುತ್ತಿರುವುದಲ್ಲದೇ ಅವರಿಗೆ ಬೇಕಾಗಿರುವ ಎಲ್ಲ ಐಷಾರಾಮಿ ವಸ್ತುಗಳು ಜೈಲಿನಲ್ಲಿ ದೊರೆಯುತ್ತಿರುವ ಮಾತಿಗೆ ಪುಷ್ಟಿಗೆ ನೀಡಿದೆ.
ಸುದ್ದಿ ತಿಳಿಯುತ್ತಿದ್ದಂತೆ ನಗರ ಪೊಲೀಸ್ ಕಮಿಷನರ್ ಡಾ| ಶರಣಪ್ಪ ಢಗೆ ಜೈಲಿನ ಮೇಲೆ ದಾಳಿ ಮಾಡಿದ್ದಾರೆ. ಜೈಲಿನಲ್ಲಿ ಗಾಂಜಾ, ಮೊಬೈಲ್ ಸೇರಿದಂತೆ ಇತರೆ ಐಷಾರಾಮಿ ವಸ್ತುಗಳು ಹೇಗೆ ಪೂರೈಕೆ ಆಗುತ್ತಿದೆ ಎನ್ನುವುದನ್ನು ವಿಚಾರಿಸಿದ್ದಾರೆ. ಹಲವು ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಮಧ್ಯೆ ಈ ವಿಡಿಯೋ ತಮ್ಮ ಜೈಲಿನಲ್ಲಿ ಮಾಡಿದ್ದಲ್ಲ. ಕೈದಿಗಳಾದ ವಿಶಾಲ್, ಸಾಗರ್ ಹಾಗೂ ಸೋನು ಈ ಮೂವರು ಶಿವಮೊಗ್ಗ ಜೈಲಿನಲ್ಲೂ ಇದ್ದರು. ಅಲ್ಲಿ ಇದನ್ನು ವಿಡಿಯೋ ಮಾಡಿಕೊಂಡಿರಬೇಕೆಂದು ಜೈಲಿನ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Covid Scam: ಕೋವಿಡ್ ಹಗರಣ ತಾರ್ಕಿಕ ಅಂತ್ಯ: ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್
Kalaburagi: ಭಾರತೀಯ ಸಂಸ್ಕೃತಿ ಉತ್ಸವ ಯಶಸ್ಸಿಗೆ ಸಕಲ ಸಿದ್ದತೆ
Kalaburagi: ಶಾರ್ಟ್ ಸರ್ಕ್ಯೂಟ್ ನಿಂದಾಗಿ ಹೊತ್ತಿ ಉರಿದ ಕಾಫಿಜಾ ಕೆಫೆ
ಸಿದ್ಧಗಂಗಾ ಮಠದ ಶ್ರೀಸಿದ್ದಲಿಂಗ ಹೆಸರಿನಲ್ಲಿ ದೇಣಿಗೆ ವಸೂಲಿ: ಹಳೆ ವಿದ್ಯಾರ್ಥಿಗಳ ಬೇಸರ
Agriculture: ನೆಟೆರೋಗದಿಂದ ತೊಗರಿ ಸಂಪೂರ್ಣ ನಾಶ
MUST WATCH
ಹೊಸ ಸೇರ್ಪಡೆ
Delhi; 38 ಅಭ್ಯರ್ಥಿಗಳ ಫೈನಲ್ ಪಟ್ಟಿ ಪ್ರಕಟಿಸಿದ ಆಪ್
Belagavi: ಎರಡು ತಿಂಗಳ ಹಸುಗೂಸನ್ನೇ ಕೆರೆಗೆ ಎಸೆದ ತಾಯಿ!; ಪ್ರಕರಣ ದಾಖಲು
Sagara: ಪ್ರವಾಸಿ ಬಸ್ ಅಪಘಾತ; 15ಕ್ಕೂ ಹೆಚ್ಚು ಮಂದಿಗೆ ಗಾಯ
Bengaluru: ದೇಶ-ವಿದೇಶಿಗರ ಗಮನ ಸೆಳೆಯುತ್ತಿರುವ ಸಿದ್ದಿ ಕಮ್ಯುನಿಟಿ ಟೂರಿಸಂ!
Gadaga: ಮೂರು ದಿನಗಳ ಕಾಲ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚೆ: ಸಿಎಂ ಸಿದ್ದರಾಮಯ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.