Womens T-20 World Cup: ಸೆಮಿಫೈನಲ್ ಪ್ರವೇಶಿಸಿದ ನ್ಯೂಜಿಲ್ಯಾಂಡ್; ಭಾರತ ಹೊರಕ್ಕೆ
ಪಾಕಿಸ್ಥಾನ ವಿರುದ್ಧ 54 ರನ್‌ಗಳ ಗೆಲುವು ಸಾಧಿಸಿದ ಕಿವೀಸ್, ಭಾರತದ ಕನಸು ಭಗ್ನ
Team Udayavani, Oct 15, 2024, 12:01 AM IST
ದುಬಾೖ: ವನಿತಾ ಟಿ20 ವಿಶ್ವಕಪ್ ಕ್ರಿಕೆಟ್ ಕೂಟದ “ಎ’ ಬಣದ ಅಂತಿಮ ಲೀಗ್ ಪಂದ್ಯದಲ್ಲಿ ಪಾಕಿಸ್ಥಾನ ತಂಡವನ್ನು 54 ರನ್ನುಗಳಿಂದ ಭರ್ಜರಿಯಾಗಿ ಸೋಲಿಸಿದ ನ್ಯೂಜಿಲ್ಯಾಂಡ್ ತಂಡವು ಸೆಮಿಫೈನಲ್ ಹಂತಕ್ಕೇರಿತು.
ಬೌಲರ್‌ಗಳು ಮೇಲುಗೈ ಸಾಧಿಸಿದ ಈ ಪಂದ್ಯದಲ್ಲಿ ಪಾಕಿಸ್ಥಾನ ದಾಳಿಗೆ ಕುಸಿದ ನ್ಯೂಜಿಲ್ಯಾಂಡ್ ತಂಡವು 6 ವಿಕೆಟಿಗೆ 110 ರನ್ ಗಳಿಸಿತ್ತು. ಇದಕ್ಕುತ್ತರವಾಗಿ ಆರಂಭದಿಂದಲೇ ಬ್ಯಾಟಿಂಗ್ ಕುಸಿತಕ್ಕೆ ಒಳಗಾದ ಪಾಕಿಸ್ಥಾನ 11.4 ಓವರ್‌ಗಳಲ್ಲಿ ಕೇವಲ 56 ರನ್ನಿಗೆ ಆಲೌಟಾಗಿ ಸೋಲನ್ನು ಕಂಡಿತು. ತಂಡದ ಮುನೀಬಾ ಅಲಿ ಮತ್ತು ನಾಯಕಿ ಫಾತಿಮಾ ಸನಾ ಮಾತ್ರ ಎರಡಂಕೆಯ ಮೊತ್ತ ಗಳಿಸಿದ್ದರು. ಈ ಗೆಲುವಿನಿಂದ ನ್ಯೂಜಿಲ್ಯಾಂಡ್ ತಾನಾಡಿದ ನಾಲ್ಕು ಪಂದ್ಯಗಳಿಂದ ಆರಂಕ ಪಡೆದು ದ್ವಿತೀಯ ತಂಡವಾಗಿ ಸೆಮಿಫೈನಲಿಗೇರಿದೆ.
ಬಣದ ನಾಲ್ಕು ಪಂದ್ಯಗಳಲ್ಲಿ ಜಯ ಸಾಧಿಸಿದ್ದ ಆಸ್ಟ್ರೇಲಿಯ ತಂಡವು ಅಜೇಯ ತಂಡವಾಗಿ ಸೆಮಿಫೈನಲಿಗೇರಿತ್ತು. ಈ ಮಹತ್ವದ ಪಂದ್ಯದಲ್ಲಿ ಒಂದು ವೇಳೆ ಪಾಕಿಸ್ಥಾನ ಜಯ ಸಾಧಿಸಿದ್ದರೆ ಭಾರತಕ್ಕೆ ಸೆಮಿಫೈನಲಿಗೇರುವ ಅವಕಾಶವೊಂದಿತ್ತು. ನ್ಯೂಜಿಲ್ಯಾಂಡ್ ತಂಡ 110 ರನ್ ಗಳಿಸಿದಾಗ ಪಾಕಿಸ್ಥಾನ ಗೆಲ್ಲಬಹುದೆಂದು ಭಾವಿಸಲಾಗಿತ್ತು. ಆದರೆ ನ್ಯೂಜಿಲ್ಯಾಂಡಿನ ನಿಖರ ದಾಳಿಗೆ ಪಾಕಿಸ್ಥಾನ ನೆಲಕಚ್ಚಿದರಿಂದ ಭಾರತ ಸೆಮಿಫೈನಲಿಗೇರುವ ಆಸೆ ದೂರ ಆಯಿತು.
ಈ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿ ಅಮೋಘ ನಿರ್ವಹಣೆ ನೀಡಿತು. ಬ್ಯಾಟಿಂಗ್‌ನಲ್ಲಿ ಆರಂಭಿಕ ಆಟಗಾರ್ತಿ ಸೂಜಿ ಬೇಟ್ಸ್, ಸೋಫಿ ಡಿವೈನ್ ಮತ್ತು ಬ್ರೂಕ್ ಹಾಲಿಡೇ ಉತ್ತಮ ನಿರ್ವಹಣೆ ನೀಡಿದರು. ಬೌಲಿಂಗ್‌ನಲ್ಲಿ ನಿಖರ ದಾಳಿ ಸಂಘಟಿಸಿದ ಅಮೇಲಿಯಾ ಕೆರ್ರ 14 ರನ್ನಿಗೆ 3 ವಿಕೆಟ್ ಕಿತ್ತು ಮಿಂಚಿದರು. ಎಡೆನ್ ಕಾರ್ಸನ್ 7 ರನ್ನಿಗೆ 2 ವಿಕೆಟ್ ಪಡೆದರು.
ಸಂಕ್ಷಿಪ್ತ ಸ್ಕೋರು: ನ್ಯೂಜಿಲ್ಯಾಂಡ್ 6 ವಿಕೆಟಿಗೆ 110 (ಸೂಜಿ ಬೇಟ್ಸ್ 28, ಬ್ರೂಕ್ ಹಾಲಿಡೇ 22, ನಸ್ರಾ ಸಂಧು 18ಕ್ಕೆ 3); ಪಾಕಿಸ್ಥಾನ 11.4 ಓವರ್‌ಗಳಲ್ಲಿ 56 (ಮುನೀಬಾ ಅಲಿ 15, ಫಾತಿಮಾ ಸನಾ 21, ಅಮೇಲಿಯಾ ಕೆರ್ರ 14ಕ್ಕೆ 3, ಎಡೆನ್ ಕಾರ್ಸನ್ 7ಕ್ಕೆ 2).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BGT: ಆಸೀಸ್ ಮಾಧ್ಯಮದ ವಿರುದ್ದ ವಿರಾಟ್ ಗರಂ: ಏರ್‌ಪೋರ್ಟ್ ನಲ್ಲಿ ವರದಿಗಾರ್ತಿ ಜತೆ ಜಗಳ
Warner-Ashwin; 2024ರಲ್ಲಿ ವಿದಾಯ ಹೇಳಿದ್ದು ಬರೋಬ್ಬರಿ 28 ಕ್ರಿಕೆಟಿಗರು; ಇಲ್ಲಿದೆ ಪಟ್ಟಿ
INDvAUS: ಶಮಿ ವಿರುದ್ದ ನಿಂತರೇ ನಾಯಕ ರೋಹಿತ್?; ವೇಗಿಗೆ ಆಸೀಸ್ ಪ್ರವಾಸ ಕಷ್ಟ!
WTC 25; ಕಠಿಣವಾಯ್ತು ಭಾರತದ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಹಾದಿ; ಹೀಗಿದೆ ಲೆಕ್ಕಾಚಾರ
R.Ashwin retirement: ಅಶ್ವಿನ್ ವಿದಾಯದ ಸುತ್ತಮುತ್ತ…
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.