BY Vijayendra: 5 ವರ್ಷ ಸಿಎಂ ಎಂದು ಖರ್ಗೆ ಹೇಳಲಿ

ಕಾಂಗ್ರೆಸ್‌ನಲ್ಲಿ ಹೆಚ್ಚಿದ್ದಾರೆ ಸಿಎಂ ಸ್ಥಾನದ ಆಕಾಂಕ್ಷಿಗಳು ಮುಖ್ಯಮಂತ್ರಿ ರಾಜೀನಾಮೆ ನಿಶ್ಚಿತ

Team Udayavani, Oct 15, 2024, 6:45 AM IST

BY Vijayendra: 5 ವರ್ಷ ಸಿಎಂ ಎಂದು ಖರ್ಗೆ ಹೇಳಲಿ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪಾಪದ ಕೊಡ ತುಂಬುತ್ತಿದ್ದು, ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದು ಸೂರ್ಯ-ಚಂದ್ರರು ಇರುವಷ್ಟೇ ಸತ್ಯ ಎಂದು ಬಿಜೆಪಿ ರಾಜ್ಯಾ ಧ್ಯಕ್ಷ ಬಿ.ವೈ.ವಿಜಯೇಂದ್ರ ಮತ್ತೆ ಭವಿಷ್ಯ ನುಡಿದಿದ್ದಾರೆ.

ಸಿದ್ದರಾಮಯ್ಯ ರಾಜೀನಾಮೆ ನೀಡುವುದಿಲ್ಲ ಎನ್ನುವ ಕಾಂಗ್ರೆಸ್‌ ನಾಯಕರೆ ಲ್ಲರೂ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿ ಗಳೇ ಆಗಿದ್ದಾರೆ. ಪೂರ್ಣಾವಧಿ ಅಧಿಕಾರ ನಡೆಸುವ ವಿಶ್ವಾಸವಿದ್ದರೆ ಸಿದ್ದರಾಮಯ್ಯನವರೇ 5 ವರ್ಷ ಮುಖ್ಯಮಂತ್ರಿ ಎಂದು ನಿಮ್ಮ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರಿಂದ ಹೇಳಿಸಿ ನೋಡೋಣ ಎಂದು ಸವಾಲು ಹಾಕಿದರು.

ಹುಬ್ಬಳ್ಳಿ ಗಲಭೆ ಆರೋಪಿಗಳ ವಿರುದ್ಧದ ಪ್ರಕರಣವನ್ನು ವಾಪಸ್‌ ಪಡೆಯಲು ನಿರ್ಧರಿಸಿರುವ ರಾಜ್ಯ ಸರಕಾರದ ನಿರ್ಧಾರ ಖಂಡಿಸಿ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ವಿಜಯೇಂದ್ರ ಏನು ಭವಿಷ್ಯ ಹೇಳುತ್ತಾರಾ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ನಾನು ಈಗಲೂ ಹೇಳುತ್ತೇನೆ, ಸಿದ್ದರಾಮಯ್ಯ ರಾಜೀನಾಮೆ ನಿಶ್ಚಿತ ಎಂದರು.

ರಾಜ್ಯದಲ್ಲಿ ಹಿಂದೂ ವಿರೋಧಿ ಸರಕಾರ ಅಧಿಕಾರದಲ್ಲಿದ್ದು, ಅಲ್ಪಸಂಖ್ಯಾಕ‌ರ ತುಷ್ಟೀಕರಣಕ್ಕಾಗಿ ದೇಶದ್ರೋಹಿಗಳನ್ನು ರಕ್ಷಿಸುವ ಕೆಲಸ ಮಾಡುತ್ತಿದ್ದಾರೆ.

ಅಲ್ಪಸಂಖ್ಯಾಕರ ಓಲೈಕೆ ಮಾಡುವ ದುಷ್ಟ ಕಾಂಗ್ರೆಸ್‌ ಸರಕಾರದ ವಿರುದ್ಧ ಇದು ಸಾಂಕೇತಿಕ ಪ್ರತಿಭಟನೆಯಾಗಿದೆ. ಹುಬ್ಬಳ್ಳಿ ಘಟನೆ ವಿಷಯದಲ್ಲಿ ಎನ್‌ಐಎ ತನಿಖೆ ನಡೆಯುತ್ತಿದೆ. ಮುಖ್ಯಮಂತ್ರಿಗಳ ಕುರ್ಚಿ ಅಲ್ಲಾಡುತ್ತಿದೆ. ಸಾರ್ವಜನಿಕರ ಲಕ್ಷ್ಯ ಬೇರೆಡೆ ಸೆಳೆಯುವುದಕ್ಕಾಗಿ ಯಾವ ಮಟ್ಟಕ್ಕೆ ಬೇಕಾದರೂ ಹೋಗುವುದಕ್ಕೆ ಕಾಂಗ್ರೆಸ್‌ ಸಿದ್ಧವಿದೆ ಎಂದು ಟೀಕಿಸಿದರು.

ಬಡವರಿಗೆ ಮೀಸಲಿಟ್ಟ ನಿವೇಶನಗಳನ್ನು ಮೈಸೂರಿನಲ್ಲಿ ಮುಖ್ಯಮಂತ್ರಿಗಳ ಕುಟುಂಬವೇ ಲೂಟಿ ಮಾಡಿದೆ. ಎಸ್‌ಇಪಿ, ಟಿಎಸ್‌ಪಿ ಹಣ ದುರುಪಯೋಗದ ಕುರಿತು ಜನರು ಚರ್ಚೆ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಅಭಿವೃದ್ಧಿಯೇ ಇಲ್ಲವಾಗಿದೆ. ಇಂಥ ಸರಕಾರದಲ್ಲಿ ಶಾಸಕರಾಗಿರುವ ಬದಲು ಆತ್ಮಹತ್ಯೆ ಮಾಡಿಕೊಳ್ಳುವುದೇ ಒಳಿತೆಂದು ಕಾಂಗ್ರೆಸ್‌ ಶಾಸಕ ರಾಜು ಕಾಗೆ ಹೇಳಿದ್ದಾರೆ. ಗ್ಯಾರಂಟಿಯಿಂದ ಅಭಿವೃದ್ಧಿ ಕೆಲಸ ನಿಂತು ಹೋಗಿದೆ ಎಂದು ಆರೋಪಿಸಿದರು.

ಟಾಪ್ ನ್ಯೂಸ್

Cancer Rates: ದೇಶದಲ್ಲಿ ಕ್ಯಾನ್ಸರ್ ಕೇಸ್ ಹೆಚ್ಚಳ… ಬಾಯಿ, ಸ್ತನ ಕ್ಯಾನ್ಸರ್ ಗಳೇ ಹೆಚ್ಚು

Cancer Cases: ದೇಶದಲ್ಲಿ ಕ್ಯಾನ್ಸರ್ ಕೇಸ್ ಹೆಚ್ಚಳ… ಬಾಯಿ, ಸ್ತನ ಕ್ಯಾನ್ಸರ್ ಗಳೇ ಹೆಚ್ಚು

Election Date: ಮಹಾರಾಷ್ಟ್ರ, ಜಾರ್ಖಂಡ್ ರಾಜ್ಯಗಳಿಗೆ ಇಂದು ಚುನಾವಣೆ ದಿನಾಂಕ ಘೋಷಣೆ!

Election Date: ಮಹಾರಾಷ್ಟ್ರ, ಜಾರ್ಖಂಡ್ ರಾಜ್ಯಗಳಿಗೆ ಇಂದು ಚುನಾವಣೆ ದಿನಾಂಕ ಘೋಷಣೆ!

2

Bilichukki Hallihakki kannada Movie: ಇದು ಹಳ್ಳಿ ಹಕ್ಕಿಯ ಬಿಳಿಚುಕ್ಕಿ

Security: ಬಾಬಾ ಸಿದ್ದಿಕಿ ಹತ್ಯೆ ಬೆನ್ನಲ್ಲೇ ಸಲ್ಮಾನ್ ಖಾನ್ ಗೆ ಹೆಚ್ಚುವರಿ ಭದ್ರತೆ

Security: ಬಾಬಾ ಸಿದ್ದಿಕಿ ಹತ್ಯೆ ಬೆನ್ನಲ್ಲೇ ಸಲ್ಮಾನ್ ಖಾನ್ ಗೆ ಹೆಚ್ಚುವರಿ ಭದ್ರತೆ

salman

Baba Siddique Case: ಸಲ್ಮಾನ್‌ಗೆ ನೆರವಾಗುವ ಎಲ್ಲರಿಗೂ ಇದೇ ಗತಿ: ಬಿಷ್ಣೋಯ್‌ ಗ್ಯಾಂಗ್‌!

Chinnaswamy

India-New Zeland Test: ಚಿನ್ನಸ್ವಾಮಿ ಮೈದಾನಕ್ಕೆ 25ನೇ ಟೆಸ್ಟ್‌ ಪಂದ್ಯದ ಗರಿಮೆ

HAL

Central Government: ಭದ್ರತಾ ಉದ್ಯಮದ ಪ್ರಧಾನ ಸಂಸ್ಥೆ ಎಚ್‌ಎಎಲ್‌ಗೆ “ಮಹಾರತ್ನ’

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Exam

Post Graduate Course; ಕಳೆದ ವರ್ಷದಷ್ಟೇ ಶುಲ್ಕ: ಉನ್ನತ ಶಿಕ್ಷಣ ಇಲಾಖೆ

1-dasasasa

Mysuru Dasara; ವಹಿವಾಟು ದಾಖಲೆ: 500 ಕೋಟಿಗೂ ಅಧಿಕ!

siddaramaiah

Siddaramaiah; ಸಿಎಂಗೆ ಮುಡಾ ಬಳಿಕ ಅರ್ಕಾವತಿ ಕಂಟಕ

Manjunath Bhandary: ಬಿಜೆಪಿ-ಸಂಘ ಪರಿವಾರದವರೂ ಭೂಮಿ ಹಿಂದಿರುಗಿಸುವರೇ?

Manjunath Bhandary: ಬಿಜೆಪಿ-ಸಂಘ ಪರಿವಾರದವರೂ ಭೂಮಿ ಹಿಂದಿರುಗಿಸುವರೇ?

BJP FLAG

BJP; ಬಂಟ್ವಾಳ, ಉಡುಪಿಯಲ್ಲಿ ಇಂದು ಜನಪ್ರತಿನಿಧಿಗಳ ಸಮಾವೇಶ: ವಿಜಯೇಂದ್ರ,  ಅಶೋಕ್‌ ಭಾಗಿ

MUST WATCH

udayavani youtube

ಮಕ್ಕಳ ಸ್ಕ್ರೀನ್ ಟೈಮಿಂಗ್ ಕುರಿತು ಎಚ್ಚರಿಕೆ ಅತ್ಯವಶ್ಯಕ.. ಇಲ್ಲಿದೆ ಅಗತ್ಯ ಮಾಹಿತಿ

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

ಹೊಸ ಸೇರ್ಪಡೆ

Cancer Rates: ದೇಶದಲ್ಲಿ ಕ್ಯಾನ್ಸರ್ ಕೇಸ್ ಹೆಚ್ಚಳ… ಬಾಯಿ, ಸ್ತನ ಕ್ಯಾನ್ಸರ್ ಗಳೇ ಹೆಚ್ಚು

Cancer Cases: ದೇಶದಲ್ಲಿ ಕ್ಯಾನ್ಸರ್ ಕೇಸ್ ಹೆಚ್ಚಳ… ಬಾಯಿ, ಸ್ತನ ಕ್ಯಾನ್ಸರ್ ಗಳೇ ಹೆಚ್ಚು

Arrested: ವೃದ್ಧ ದಂಪತಿ ಮನೆಗೆ ನುಗ್ಗಿ ಒಡವೆ, ನಗದು ದರೋಡೆ; ಮೂವರ ಬಂಧನ

Arrested: ವೃದ್ಧ ದಂಪತಿ ಮನೆಗೆ ನುಗ್ಗಿ ಒಡವೆ, ನಗದು ದರೋಡೆ; ಮೂವರ ಬಂಧನ

Bengaluru: ಮದ್ಯದ ಬಾಟಲಿಯಿಂದ ಹೊಡೆದು ಸ್ನೇಹಿತನ ಹತ್ಯೆ

Bengaluru: ಮದ್ಯದ ಬಾಟಲಿಯಿಂದ ಹೊಡೆದು ಸ್ನೇಹಿತನ ಹತ್ಯೆ

Bengaluru: ಕಾಲೇಜಲ್ಲೇ ಮಹಿಳಾ ಪ್ರೊಫೆಸರ್‌ ಆತ್ಮಹತ್ಯೆಗೆ ಯತ್ನ

Bengaluru: ಕಾಲೇಜಲ್ಲೇ ಮಹಿಳಾ ಪ್ರೊಫೆಸರ್‌ ಆತ್ಮಹತ್ಯೆಗೆ ಯತ್ನ

Ramanagar: ಮಕ್ಕಳ ಕೊಲೆ; ಶವ ಹೊರ ತೆಗೆದು ಮರಣೋತ್ತರ ಪರೀಕ್ಷೆ

Ramanagar: ಮಕ್ಕಳ ಕೊಲೆ; ಶವ ಹೊರ ತೆಗೆದು ಮರಣೋತ್ತರ ಪರೀಕ್ಷೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.