Anganwadi workers; ಅಂಗನವಾಡಿ ಕಾರ್ಯಕರ್ತೆಯರಿಗೆ ಕಳಪೆ ಸೀರೆ
15 ದಿನಗಳಲ್ಲೇ ನೂಲು ಬಿಟ್ಟ ಸೀರೆಯಲ್ಲಿ ಕಪ್ಪು ಕಲೆಗಳೂ ಪ್ರತ್ಯಕ್ಷ!
Team Udayavani, Oct 15, 2024, 6:35 AM IST
ಪುತ್ತೂರು: ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಸರಕಾರ ಸಮವಸ್ತ್ರವಾಗಿ ನೀಡಿದ ಸೀರೆ ಹದಿನೈದು ದಿನಗಳಲ್ಲೇ ನೂಲು ಬಿಟ್ಟಿದ್ದು, ಇದು ತೀರಾ ಕಳಪೆಯಾಗಿದೆ ಎಂಬ ದೂರು ಕೇಳಿ ಬರುತ್ತಿದೆ.
ರಾಜ್ಯದ ಎಲ್ಲ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ “ಸಮಗ್ರ ಶಿಶು ಅಭಿವೃದ್ಧಿ ಯೋಜನೆ’ಯಡಿ (ಐಸಿಡಿಎಸ್) 2024-25ನೇ ಸಾಲಿನಲ್ಲಿ ಸಮವಸ್ತ್ರವಾಗಿ ಸೀರೆ ವಿತರಿಸಿತ್ತು.
ಹದಿನೈದು ದಿನವಾದದಷ್ಟೇ
ಒಂದು ಅಂಗನವಾಡಿಯ ಕಾರ್ಯಕರ್ತೆ ಹಾಗೂ ಸಹಾಯಕಿಯರಿಗೆ ತಲಾ ಎರಡರಂತೆ ಒಟ್ಟು ನಾಲ್ಕು ಸೀರೆಗಳನ್ನು ವಿತರಿಸಲಾಗಿದೆ. ಮುಂದಿನ ಒಂದು ವರ್ಷದ ತನಕ ದಿನಂಪ್ರತಿ ಈ ಸೀರೆಯನ್ನು ಸಮವಸ್ತ್ರವನ್ನಾಗಿ ಬಳಸಲು ಸೂಚಿಸಲಾಗಿತ್ತು. ಸೆ.15ರಂದು ಸೀರೆ ಬಂದಿದ್ದು, ಅ.2ರಿಂದ ಉಡುವಂತೆ ಸೂಚಿಸಲಾಗಿತ್ತು. ಸೀರೆ ಉಡಲು ಆರಂಭಿಸಿದ ಹದಿನೈದು ದಿನದಲ್ಲೇ ಸೀರೆಯ ಒಂದು ಭಾಗದಲ್ಲಿ ನೂಲು ಬಿಡಲು ಆರಂಭಿಸಿದೆ. ಕೆಲವು ಸೀರೆಗಳಲ್ಲಿ ಕಪ್ಪು ಕಲೆಗಳೂ ಕಂಡು ಬಂದಿವೆ ಎಂದು ದೂರಲಾಗಿದೆ.
ಸೀರೆಯ ಬೆಲೆ 400 ರೂಪಾಯಿ!
ರಾಜ್ಯದ 69,919 ಅಂಗನವಾಡಿ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 1,37,509 ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿರಿಗೆ ಸರಕಾರವೇ ನೇರವಾಗಿ ಸೀರೆ ವಿತರಿಸಿದೆ. ಸೀರೆಗೆ ತಲಾ 400 ರೂ. ಬೆಲೆ ನಿಗದಿಯಾಗಿದೆ. ಆದರೆ ಗುಣಮಟ್ಟ ನೋಡುವಾಗ 100 ರೂ.ನ ಆಸುಪಾಸಿನಲ್ಲಿದೆ ಎನ್ನುತ್ತಾರೆ ಫಲಾನುಭವಿಗಳು.
ಸಮವಸ್ತ್ರವಾಗಿ ನೀಡಿರುವ ಸೀರೆ ಹದಿನೈದು ದಿನದಲ್ಲಿಯೇ ನೂಲು ಬಿಟ್ಟಿದೆ. ಹೀಗಾಗಿ ಇದನ್ನು ಒಂದು ವರ್ಷ ಉಡುವುದು ಹೇಗೆ? ಹಲವಾರು ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಈ ಸಮಸ್ಯೆಯನ್ನು ಪ್ರಸ್ತಾವಿಸಿದ್ದಾರೆ.
ತಾರಾ ಜೆ. ಬಲ್ಲಾಳ್ ಅಧ್ಯಕ್ಷೆ,ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಸಂಘ, ದ.ಕ.ಜಿಲ್ಲೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Dinner Politics: ಮುಖ್ಯಮಂತ್ರಿ ಊಟಕ್ಕೆ ಹೋದ್ರೆ ತಪ್ಪೇನಿದೆ?: ಸಚಿವ ಎಂ.ಬಿ.ಪಾಟೀಲ್
Assault: ನಾಗಮಂಗಲದಲ್ಲಿ ಎಎಸ್‌ಐಯ ಹಿಡಿದು ಎಳೆದಾಡಿ, ಹಲ್ಲೆ ಮಾಡಿದ ಆರೋಪಿ!
ಬೈಲುಕುಪ್ಪೆಗೆ ಟಿಬೇಟಿಯನ್ನರ 14ನೇ ಧರ್ಮಗುರು ದಲೈಲಾಮಾ ಆಗಮನ
Congress Gurantee: ಗ್ಯಾರಂಟಿಯಿಂದ ಅಭಿವೃದ್ಧಿ ಕುಂಠಿತ: ಕಾಂಗ್ರೆಸ್ ಶಾಸಕ
Kolara: ಹೈಕೋರ್ಟ್ ಅನುಮತಿ ಬಳಿಕ ಬಿಗಿ ಭದ್ರತೆಯಲ್ಲಿ ಆರೆಸ್ಸೆಸ್ ಪಥಸಂಚಲನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.