Lucknow: ಹಸುವಿನ ಕೊಟ್ಟಿಗೆಯಲ್ಲಿ ಮಲಗಿದ್ರೆ ಕ್ಯಾನ್ಸರ್‌ನಿಂದ ಮುಕ್ತಿ: ಯುಪಿ ಸಚಿವ!
Team Udayavani, Oct 15, 2024, 6:23 AM IST
ಲಕ್ನೋ: ಹಸುವಿನ ಕೊಟ್ಟಿಗೆಯಲ್ಲಿ ಮಲಗುವುದರಿಂದ ಮತ್ತು ಕೊಟ್ಟಿಗೆ ಸ್ವಚ್ಛಗೊಳಿಸುವುದರಿದ ಕ್ಯಾನ್ಸರ್‌ನಿಂದ ಮುಕ್ತಿ ಪಡೆಯಬಹುದು ಎಂಬ ವಿಲಕ್ಷಣ ಸಲಹೆ ಯೊಂದನ್ನು ಉತ್ತರಪ್ರದೇಶದ ಸಚಿವರೊಬ್ಬರು ನೀಡಿದ್ದಾರೆ.
ಗೋಶಾಲೆ ಉದ್ಘಾಟಿಸಿ ಮಾತನಾಡಿರುವ ಬಿಜೆಪಿ ನಾಯಕ ಸಂಜಯ್ ಸಿಂಗ್ ಗಂಗ್ವಾರ್, ಹಸುವಿನ ಬೆನ್ನು ತಟ್ಟುವ ಮೂಲಕ ರಕ್ತದೊತ್ತಡವನ್ನೂ ನಿಯಂತ್ರಿಸ ಬಹುದು. ಬೆರಣಿ ಸುಡುವುದರಿಂದ ಸೊಳ್ಳೆ, ಇತರೆ ಕೀಟಗಳು ಹಿಮ್ಮೆಟ್ಟುತ್ತವೆ. ಬಿಪಿ ಇರುವವರು ಗೋವಿನ ಬೆನ್ನ ಮೇಲೆ ಪ್ರತಿದಿನ ಕೈಯಾಡಿಸಿದರೆ, ಕಾಯಿಲೆ ಉಪಶಮನಕ್ಕಾಗಿ ಸೇವಿಸಬೇಕಾದ ಔಷಧ ಪ್ರಮಾಣ ತಗ್ಗುತ್ತದೆ ಎಂದು ಹೇಳಿದ್ದಾರೆ.
ದೇಶದಲ್ಲಿ ಕ್ಯಾನ್ಸರ್ ಕೇಸ್ ಹೆಚ್ಚಳ: ಬಾಯಿ, ಸ್ತನ ಕ್ಯಾನ್ಸರ್‌ಗಳೇ ಹೆಚ್ಚು!
ಹೊಸದಿಲ್ಲಿ: ಭಾರತದಲ್ಲಿ ಕ್ಯಾನ್ಸರ್ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದ್ದು, ಪುರುಷರಲ್ಲಿ ಬಾಯಿ ಮತ್ತು ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನ ಮಂಡಳಿ ತಿಳಿಸಿದೆ.
ಭಾರತ, ಬ್ರೆಜಿಲ್, ರಷ್ಯಾ, ಚೀನ ಮತ್ತು ದ.ಆಫ್ರಿಕಾಗಳಿರುವ ಬ್ರಿಕ್ಸ್ ರಾಷ್ಟ್ರಗಳಲ್ಲಿ ಕ್ಯಾನ್ಸರ್ ಪ್ರಕರಣಗಳ ಕುರಿತು ನಡೆದಿ ರುವ ತುಲನಾತ್ಮಕ ಅಧ್ಯಯನದ ವರದಿ ಇಕ್ಯಾನ್ಸರ್ ಜರ್ನಲ್‌ನಲ್ಲಿ ಪ್ರಕಟವಾಗಿದೆ.
ವಿಶ್ವದ 42 ಪ್ರತಿಶತ ಕ್ಯಾನ್ಸರ್ ಸಾವುಗಳು ಬ್ರಿಕ್ಸ್ ರಾಷ್ಟಗಳಲ್ಲೇ ಆಗಿದ್ದು, ಭಾರತದಲ್ಲಿ ಸ್ತನ ಕ್ಯಾನ್ಸರ್ ಅತೀಹೆಚ್ಚು ಸಾವಿಗೆ ಕಾರಣ ವಾಗಿದ್ದರೆ, ಇತರೆ ಬ್ರಿಕ್ಸ್ ರಾಷ್ಟ್ರಗಳಲ್ಲಿ ಶ್ವಾಸಕೋಶದ ಕ್ಯಾನ್ಸರ್ ಕಾರಣವಾಗಿದೆ. 2022ರಿಂದ 2045ರ ವೇಳೆಗೆ ಭಾರತ ಮತ್ತು ದ.ಆಫ್ರಿಕಾಗಳಲ್ಲಿ ಕ್ಯಾನ್ಸರ್ ಹೆಚ್ಚಳವಾಗಬಹುದು ಎಂದು ವರದಿ ಎಚ್ಚರಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Yasin Malik ವಿಚಾರಣೆಗೆ ತಿಹಾರ್ ಜೈಲಿನಲ್ಲೇ ಕೋರ್ಟ್ ರೂಂ: ಸುಪ್ರೀಂ
Train ಜನಶತಾಬ್ದಿ ಎಕ್ಸ್‌ಪ್ರೆಸ್‌ನಲ್ಲಿ ಹಾವು ಪ್ರತ್ಯಕ್ಷ: ತನಿಖೆಗೆ ಆದೇಶ
Himachal Pradesh;ನಷ್ಟದಲ್ಲಿರುವ ಹೊಟೇಲ್ ಮುಚ್ಚಲು ಹೈಕೋರ್ಟ್ ಆದೇಶ
Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್ ಘೋಷಣೆ
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.