ದೇಶಕ್ಕಿಂದು ಆರ್‌ಎಸ್‌ಎಸ್ ಅನಿವಾರ್ಯ: ಅರವಿಂದರಾವ್ ದೇಶಪಾಂಡೆ
ಒಬ್ಬ ಮತಾಂತರವಾದರೆ ಆತ ಹಿಂದು ವಿರೋಧಿ ಆಗುತ್ತಾನೆ
Team Udayavani, Oct 15, 2024, 3:04 PM IST
ಉದಯವಾಣಿ ಸಮಾಚಾರ
ತೆಲಸಂಗ: ಆರೆಸ್ಸೆಸ್ ಇಲ್ಲದಿದ್ದರೆ ಇಂದು ಕಲ್ಪಿಸಿಕೊಳ್ಳಲಾರದ ಸ್ಥಿತಿಯಲ್ಲಿ ಭಾರತ ಇರುತ್ತಿತ್ತು. ಇಂದು ದೇಶಕ್ಕೆ ಆರ್‌ಎಸ್‌ಎಸ್
ಅನಿವಾರ್ಯ ಎಂದು ಉತ್ತರ ಕರ್ನಾಟಕ ಪ್ರಾಂತ ಕಾರ್ಯಕಾರಿಣಿ ಪ್ರಮುಖ ಅರವಿಂದರಾವ್ ದೇಶಪಾಂಡೆ ಹೇಳಿದರು.
ಗ್ರಾಮದ ಬಿವಿವಿ ಸಂಘದ ಮೈದಾನದಲ್ಲಿ ಸ್ಥಳಿಯ ಆರೆಸ್ಸೆಸ್ ಶಾಖೆ ವತಿಯಿಂದ ಹಮ್ಮಿಕೊಂಡ ವಿಜಯದಶಮಿ ಉತ್ಸವ
ಕಾರ್ಯಕ್ರಮದಲ್ಲಿ ಮುಖ್ಯ ವಕ್ತಾರರಾಗಿ ಮಾತನಾಡಿದ ಅವರು, ಜಾಗತಿಕ ವೇದಿಕೆಯಲ್ಲಿ ಭಾರತದ ಹೆಮ್ಮೆ ಬೆಳೆಯುತ್ತಿದೆ.
ಸಮಸ್ಯೆಗಳನ್ನು ನಿವಾರಿಸಲು ಜಗತ್ತು ಭಾರತದತ್ತ ನೋಡುತ್ತಿದೆ. ವಿಶ್ವಗುರು ಭಾರತ ಎಂದು ಜಗತ್ತು ಒಪ್ಪುತ್ತಿದೆ. ಇದಕ್ಕೆ
ಕಾರಣ ಆರೆಸ್ಸೆಸ್‌ನಿಂದ ಸಂಸ್ಕಾರ ಪಡೆದಂತಹ ವ್ಯಕ್ತಿ ಪ್ರಧಾನಿಯಾಗಿರುವುದು. ಅಟಲ್ ಬಿಹಾರಿ ವಾಜಪೇಯಿ ಹಾಗೂ ಮೋದಿ
ಅವರು ಸ್ವಂತ ಹಿತಕ್ಕಿಂತ ದೇಶದ ಹಿತ ಮೊದಲು ಎಮದು ಆಡಳಿತ ನಡೆಸುತ್ತಿರುವ ರೀತಿಯೇ ಆರ್‌ಎಸ್‌ಎಸ್ ನೀಡುವ
ಸಂಸ್ಕಾರಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದರು.
ಸಂಘ ಉದಯಿಸದೆ ಇದ್ದಿದ್ದರೆ ಬಾಂಗ್ಲಾ, ಪಾಕಿಸ್ಥಾನದಲ್ಲಿನ ಹಿಂದುಗಳ ಸ್ಥಿತಿ ಭಾರತಿಯ ಹಿಂದುಗಳೂ ಎದುರಾಗುತ್ತಿತ್ತು. ಆರ್.ಎಸ್. ಎಸ್ ವ್ಯಕ್ತಿ ನಿರ್ಮಾಣ ಒಂದನ್ನು ಬಿಟ್ಟು ಬೇರೇನು ಮಾಡುವುದಿಲ್ಲ. ಆದರೆ ಸಂಸ್ಕಾರ ಪಡೆದ ಸಂಘದ ಸ್ವಯಂಸೇವಕರು ಸುಮ್ಮನಿರುವುದಿಲ್ಲ. ಪ್ರತಿಯೊಂದು ಕ್ಷೇತ್ರದಲ್ಲಿಯೂ ವಿವಿಧ ಸಂಘಟನೆಗಳ ಮೂಲಕ ಸ್ವಯಂ ಸೇವಕರು ದೇಶದ, ಧರ್ಮದ ಕೆಲಸ ಮಾಡುತ್ತಿದ್ದಾರೆ ಎಂದರು.
ಒಬ್ಬ ಮತಾಂತರವಾದರೆ ಆತ ಹಿಂದು ವಿರೋಧಿ ಆಗುತ್ತಾನೆ. ಮತಾಂತರ ಇದು ರಾಷ್ಟ್ರಾಂತರವೂ ಹೌದು. ಕೇರಳದಲ್ಲಿ 11
ಸಾವಿರ ಕಾರ್ಯಕರ್ತರ ಕೊಲೆಯಾಗಿದೆ. ದೇಶದ ಉದ್ದಗಲಕ್ಕೂ ಸವಾಲುಗಳನ್ನು ಮೆಟ್ಟಿ ನಿಂತು ಸಂಘ ಹಿಂದುಗಳ ಮತ್ತು
ದೇಶದ ರಕ್ಷಣೆಯಲ್ಲಿ ತೊಡಗಿದೆ ಎಮದು ನುಡಿದರು.
ನಿವೃತ್ತ ಸೈನಿಕರ ಸಂಘದ ಅಧ್ಯಕ್ಷ ಬಸಲಿಂಗಪ್ಪಾ ಗಂಗಾಧರ ಮಾತನಾಡಿ, ದೇಶಕ್ಕಾಗಿ ದುಡಿಯುವ ಸಂಘಟನೆ ಆರೆಸ್ಸೆಸ್, ವ್ಯಕ್ತಿತ್ವ ನಿರ್ಮಾಣಕ್ಕೆ ಇನ್ನೊಂದು ಹೆಸರು ಆರೆಸ್ಸೆಸ್. ದೇಶ, ಧರ್ಮ ಉಳಿದರೆ ಮಾತ್ರ ಎಲ್ಲರೂ ನೆಮ್ಮದಿಯಿಂದ ಇರಲು
ಸಾಧ್ಯ. ಹೀಗಾಗಿ ಭವ್ಯ ಭಾರತ ನಿರ್ಮಾಣದಲ್ಲಿ ಆರೆಸ್ಸೆಸ್ ಪಾತ್ರ ಹಿರಿದಾಗಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Winter Session: ಇಂದಿನಿಂದ “ಉತ್ತರ’ ಅಧಿವೇಶನ; 3 ದಿನ ಉತ್ತರ ಕರ್ನಾಟಕದ ಸಮಸ್ಯೆಗಳ ಚರ್ಚೆ
Belagavi: ಎರಡು ತಿಂಗಳ ಹಸುಗೂಸನ್ನೇ ಕೆರೆಗೆ ಎಸೆದ ತಾಯಿ!; ಪ್ರಕರಣ ದಾಖಲು
Gruha Lakshmi Scheme ಹಣ ಕೂಡಿಟ್ಟು ಬೋರ್ ವೆಲ್ ಕೊರೆಸಿದ ಅತ್ತೆ-ಸೊಸೆ: ಸಚಿವೆ ಶ್ಲಾಘನೆ
Belagavi: ಹೋರಾಟ ಅಸಂವಿಧಾನಿಕ ಎಂದು ಸಮಾಜಕ್ಕೆ ಅವಮಾನ ಮಾಡಿದ ಸಿಎಂ: ಕೂಡಲಸಂಗಮ ಶ್ರೀ
Santosh Lad: ಒನ್ ನೇಶನ್ ಒನ್ ಎಲೆಕ್ಷನ್, ನೆಹರೂ ಕಾಲದಲ್ಲೇ ವಿಫಲ
MUST WATCH
ಹೊಸ ಸೇರ್ಪಡೆ
Chido Cyclone: ಫ್ರಾನ್ಸ್ ನಲ್ಲಿ ಭೀಕರ ಚಂಡಮಾರುತದ… ಸಾವಿರ ಗಡಿ ದಾಟಿದ ಮೃತರ ಸಂಖ್ಯೆ?
INDvsAUS: ಮಳೆಯಾಟದಲ್ಲಿ ಜಾರಿದ ಭಾರತದ ಬ್ಯಾಟಿಂಗ್; ಆಸೀಸ್ ಬಿಗಿ ಹಿಡಿತ
Loophole: ನಿಮ್ಮ ಪಡಿತರ ಅಪಾಯದಲ್ಲಿ? ಸೇವಿಸುವ ಆಹಾರ ಎಷ್ಟು ಸುರಕ್ಷಿತ?
Big Claim: ನನ್ನ ರಾಜಕೀಯ ಜೀವನ ರೂಪಿಸಿದ್ದು, ಕೆಡವಿದ್ದು ಗಾಂಧಿಗಳು: ಮಣಿಶಂಕರ್ ಅಯ್ಯರ್
WPL Auction: ಮಹಿಳಾ ಐಪಿಎಲ್ ಮಿನಿ ಹರಾಜು: ಸಿಮ್ರಾನ್ ಶೇಖ್ ದುಬಾರಿ ಆಟಗಾರ್ತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.