ಮೀಸಲಾತಿಗಾಗಿ ಮರಾಠ ಮೀಸಲು ಮಾದರಿ ಉಗ್ರ‌ ಹೋರಾಟ: ಪಂಚಮಸಾಲಿ ಶ್ರೀ

Team Udayavani, Oct 15, 2024, 5:25 PM IST

Will do Maratha Reservation Model protest for Reservation: Panchmasali Shri

ಹುಬ್ಬಳ್ಳಿ: ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲು ಕುರಿತಾಗಿ ಸಿಎಂ ಸಿದ್ದರಾಮಯ್ಯ ಅವರು ಅ.18 ರಂದು ಆಡಳಿತಾತ್ಮಕ ಸಭೆ ಕರೆಸಿದ್ದು, ಉತ್ತಮ ಸ್ಪಂದನೆ ವಿಶ್ವಾಸವಿದೆ. ನಿರೀಕ್ಷೆ ಹುಸಿಯಾದರೆ ಮಹಾರಾಷ್ಟ್ರದಲ್ಲಿ ಮರಾಠ ಮೀಸಲು ಮಾದರಿ ಉಗ್ರ‌ ಹೋರಾಟಕ್ಕೆ ಮುಂದಾಗುತ್ತೇವೆ‌ ಎಂದು ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಬಸವ ಜಯ ಮೃತ್ಯುಂಜಯ‌ ಸ್ವಾಮೀಜಿ ತಿಳಿಸಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ‌ಮಾತನಾಡಿದ ಅವರು, ಅ.18 ರಂದು‌ ಮಧ್ಯಾಹ್ನ 12:00 ಗಂಟೆಗೆ ವಿಧಾನಸೌಧದಲ್ಲಿ‌ ಸಿಎಂ ಅವರು‌ ಕರೆದ ಸಭೆಯಲ್ಲಿ ತಾವು ಸೇರಿದಂತೆ 11 ಜನ ಸಮಾಜದ ಹಿರಿಯ‌ ವಕೀಲರು ಜನಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ. ಸಾಮಾಜಿಕ ನ್ಯಾಯ, ಮೀಸಲಾತಿ ಬಗ್ಗೆ ಒಲವು ಇರುವ ಸಿಎಂ ನಮ್ಮ ಬೇಡಿಕೆಗೆ ಸ್ಪಂದಿಸುವ ವಿಶ್ವಾಸವಿದೆ. ಸ್ಪಂದನೆ ದೊರೆಯದಿದ್ದರೆ ಮುಂದಿನ ಹೋರಾಟ ಬಗ್ಗೆ ತೀರ್ಮಾನಿಸುತ್ತೇವೆ ಎಂದರು.

ಮೀಸಲು ವಿಚಾರದಲ್ಲಿ ಸಿಎಂ ಎರಡು‌ ಬಾರಿ‌ ಮಾತು ತಪ್ಪಿದ್ದರು. ಇದೀಗ ಸಭೆ ಕರೆದಿದ್ದು, ಆಶಾಭವನೆಯೊಂದಿಗೆ ಸಭೆಗೆ ಹೋಗುತ್ತಿದ್ದೇವೆ. ಸ್ಪಂದನೆ ದೊರೆಯದಿದ್ದರೆ ಬೆಳಗಾವಿ‌ ಅಧಿವೇಶನ ವೇಳೆ ಟ್ರ್ಯಾಕ್ಟರ್ ರ್ಯಾಲಿ ಸೇರಿದಂತೆ ತೀವ್ರ ಸ್ವರೂಪದ ಹೋರಾಟ ಅನಿವಾರ್ಯವಾಗಲಿದೆ ಎಂದು ಸ್ವಾಮೀಜಿ ಹೇಳಿದರು.

ಪಂಚಮಸಾಲಿ‌ ಸಮಾಜಕ್ಕೆ‌ ಮೀಸಲು‌ ವಿಚಾರದಲ್ಲಿ‌ ತಾವು‌ ಬದ್ದರಾಗಿ‌ ನಿಂತಿದ್ದು, ತಾರ್ಕಿಕ ಅಂತ್ಯ ಕಾಣುವವರೆಗೂ‌ ಹೋರಾಟ ಮಾಡುವೆ. ಸಮಾಜದ ಉಳಿದ ಎರಡು ಪೀಠಗಳ‌ ಬಗ್ಗೆ ನಾನೇನು‌ ಮಾತನಾಡುವುದಿಲ್ಲ. ಸಮಾಜದ ಹಿತಕ್ಕಾಗಿ‌ ಹೋರಾಟ ಬೆಂಬಲಿಸಬೇಕೆ ಬೇಡವೇ ಎಂಬ ತೀರ್ಮಾನ ಅವರಿಗೆ ಬಿಟ್ಟಿದ್ದು ಎಂದರು.

ಜಾತಿ ಗಣತಿಗೆ ವಿರೋಧವಿಲ್ಲ. ಆದರೆ, ಸರ್ಕಾರ ಮಂಡಿಸಲು‌‌ ಹೊರಟಿರುವ ಜಾತಿಗಣತಿ‌ ವರದಿ ಒಪ್ಪಲು‌ ಸಾಧ್ಯವಿಲ್ಲ. ಹೆದ್ದಾರಿಯಲ್ಲಿ ಕುಳಿತು‌ಕೊಂಡು ವರದಿ ‌ತಯಾರಿಸಿದ್ದನ್ನು ಜಾತಿಗಣತಿ‌ ವರದಿ ಎಂದು ಒಪ್ಪಿಕೊಳ್ಳಲು ಹೇಗೆ ಸಾಧ್ಯ‌ ಎಂದು ಪ್ರಶ್ನಿಸಿದರು.

ಟಾಪ್ ನ್ಯೂಸ್

priyanaka

Kerala By Poll: ವಯನಾಡ್‌ ಕ್ಷೇತ್ರದ ಉಪ ಚುನಾವಣೆಗೆ ಅಭ್ಯರ್ಥಿ ಘೋಷಿಸಿದ ಎಐಸಿಸಿ

Waqf issue: Letter from Opposition Leader to Speaker

Waqf issue: ಸ್ಪೀಕರ್‌ಗೆ ವಿಪಕ್ಷ ನಾಯಕರಿಂದ ಪತ್ರ

MUDA Case: ಸಾಕ್ಷ್ಯನಾಶ ಮಾಡಲು ಅದೇನು ಕೊಲೆ ಕೇಸಾ?: ಎಂ.ಲಕ್ಷ್ಮಣ್‌

MUDA Case: ಸಾಕ್ಷ್ಯನಾಶ ಮಾಡಲು ಅದೇನು ಕೊಲೆ ಕೇಸಾ?: ಎಂ.ಲಕ್ಷ್ಮಣ್‌

Heavy Rain: ರಾಜ್ಯಾದ್ಯಂತ ಇನ್ನೂ 4 ದಿನ ಭಾರೀ ಮಳೆ: 18 ಜಿಲ್ಲೆಗೆ ಆರೆಂಜ್‌ ಅಲರ್ಟ್‌

Heavy Rain: ರಾಜ್ಯಾದ್ಯಂತ ಇನ್ನೂ 4 ದಿನ ಭಾರೀ ಮಳೆ: 18 ಜಿಲ್ಲೆಗೆ ಆರೆಂಜ್‌ ಅಲರ್ಟ್‌

Janardhana Reddy: ಮುಡಾ ದಾಖಲೆ ಬಹಿರಂಗ ಮಾಡಿದ್ದು ಡಿಕೆಶಿ

Janardhana Reddy: ಮುಡಾ ದಾಖಲೆ ಬಹಿರಂಗ ಮಾಡಿದ್ದು ಡಿಕೆಶಿ

CM Siddaramaiah: ಡ್ರಗ್ಸ್‌ ನಿಯಂತ್ರಣಕ್ಕೆ ಕಾನೂನಲ್ಲಿ ತಿದ್ದುಪಡಿ ತರಲು ಚಿಂತನೆ

CM Siddaramaiah: ಡ್ರಗ್ಸ್‌ ನಿಯಂತ್ರಣಕ್ಕೆ ಕಾನೂನಲ್ಲಿ ತಿದ್ದುಪಡಿ ತರಲು ಚಿಂತನೆ

11-mudhol

ಕ್ಷೇತ್ರದ ಅಭಿವೃದ್ಧಿಗೆ ಶಕ್ತಿಮೀರಿ‌‌ ಪ್ರಯತ್ನಿಸುವೆ: ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Heavy Rain: ರಾಜ್ಯಾದ್ಯಂತ ಇನ್ನೂ 4 ದಿನ ಭಾರೀ ಮಳೆ: 18 ಜಿಲ್ಲೆಗೆ ಆರೆಂಜ್‌ ಅಲರ್ಟ್‌

Heavy Rain: ರಾಜ್ಯಾದ್ಯಂತ ಇನ್ನೂ 4 ದಿನ ಭಾರೀ ಮಳೆ: 18 ಜಿಲ್ಲೆಗೆ ಆರೆಂಜ್‌ ಅಲರ್ಟ್‌

CM Siddaramaiah: ಡ್ರಗ್ಸ್‌ ನಿಯಂತ್ರಣಕ್ಕೆ ಕಾನೂನಲ್ಲಿ ತಿದ್ದುಪಡಿ ತರಲು ಚಿಂತನೆ

CM Siddaramaiah: ಡ್ರಗ್ಸ್‌ ನಿಯಂತ್ರಣಕ್ಕೆ ಕಾನೂನಲ್ಲಿ ತಿದ್ದುಪಡಿ ತರಲು ಚಿಂತನೆ

SC-Meet-CM

Valmiki Nigama: ಹಣ ದುರ್ಬಳಕೆಯಾದರೂ ಈ ವರ್ಷದ ಅನುದಾನ ಕೊಡಲು ಸೂಚಿಸಿರುವೆ: ಸಿದ್ದರಾಮಯ್ಯ

Davanagere: ವರದಕ್ಷಿಣೆ ಸಂಬಂಧ ಪತ್ನಿಯ ಸಾವಿಗೆ ಕಾರಣವಾಗಿದ್ದ ಪತಿಗೆ ಕಠಿಣ ಕಾರಾಗೃಹ ಶಿಕ್ಷೆ

Davanagere: ವರದಕ್ಷಿಣೆ ಸಂಬಂಧ ಪತ್ನಿಯ ಸಾವಿಗೆ ಕಾರಣವಾಗಿದ್ದ ಪತಿಗೆ ಕಠಿಣ ಕಾರಾಗೃಹ ಶಿಕ್ಷೆ

Possibility of five days of heavy rain on the coast due to the fall in atmospheric pressure

Rain; ವಾಯುಭಾರ ಕುಸಿತದಿಂದ ಕರಾವಳಿಯಲ್ಲಿ ಐದು ದಿನ ಭಾರಿ ಗಾಳಿ ಮಳೆ ಸಾಧ್ಯತೆ

MUST WATCH

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

udayavani youtube

ಮಕ್ಕಳ ಸ್ಕ್ರೀನ್ ಟೈಮಿಂಗ್ ಕುರಿತು ಎಚ್ಚರಿಕೆ ಅತ್ಯವಶ್ಯಕ.. ಇಲ್ಲಿದೆ ಅಗತ್ಯ ಮಾಹಿತಿ

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

ಹೊಸ ಸೇರ್ಪಡೆ

priyanaka

Kerala By Poll: ವಯನಾಡ್‌ ಕ್ಷೇತ್ರದ ಉಪ ಚುನಾವಣೆಗೆ ಅಭ್ಯರ್ಥಿ ಘೋಷಿಸಿದ ಎಐಸಿಸಿ

Waqf issue: Letter from Opposition Leader to Speaker

Waqf issue: ಸ್ಪೀಕರ್‌ಗೆ ವಿಪಕ್ಷ ನಾಯಕರಿಂದ ಪತ್ರ

POlice

Sullia: ಅಕ್ರಮ ದನ ಸಾಗಾಟ ವೇಳೆ ಪೊಲೀಸ್‌ ದಾಳಿ  

Delhi Govt: ಮಾಲಿನ್ಯ ತಡೆಗೆ ಹೆಜ್ಜೆಯಿಟ್ಟ ದಿಲ್ಲಿ ಸರ್ಕಾರ: 99 ತಂಡ ಸಿದ್ಧ

Delhi Govt: ಮಾಲಿನ್ಯ ತಡೆಗೆ ಹೆಜ್ಜೆಯಿಟ್ಟ ದಿಲ್ಲಿ ಸರ್ಕಾರ: 99 ತಂಡ ಸಿದ್ಧ

4

Kundapura: ಕಡಿಮೆ ರಕ್ತದೋತ್ತಡ; ಮಹಿಳೆ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.