Dharwad: ಹುಬ್ಬಳ್ಳಿ ಗಲಭೆ ಪ್ರಕರಣ ವಾಪಸ್ ಪಡೆದಿದ್ದು ಸರಿ ಇದೆ : ಸಚಿವ ಮಧು ಬಂಗಾರಪ್ಪ

Team Udayavani, Oct 15, 2024, 6:45 PM IST

Madhu Bangarappa

ಧಾರವಾಡ: ಮನೆ ಹುಡುಕಿಕೊಂಡು ಅಮಾಯಕರ ಮೇಲೆ ಪ್ರಕರಣ ದಾಖಲಿಸಿರುವ ಉದಾಹರಣೆಗಳು ಇರುವಾಗ ಹುಬ್ಬಳ್ಳಿಯಲ್ಲಿ ಪೊಲೀಸ್ ಠಾಣೆ ಮೇಲೆ ನಡೆದ ಗಲಭೆ ಪ್ರಕರಣ ವಾಪಸ್ ಪಡೆದಿರುವುದು ಸರ್ಕಾರದ ಸರಿಯಾದ ನಿರ್ಧಾರವೇ ಆಗಿದ್ದು, ಬಿಜೆಪಿ ಪ್ರತಿಭಟನೆ ಮಾಡಿಕೊಳ್ಳಲಿ ಅಥವಾ ಕೋರ್ಟ್‌ಗೆ ಹೋಗಲಿ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹುಬ್ಬಳ್ಳಿ ಗಲಭೆ ಇರಲಿ, ಮುಡಾ ಪ್ರಕರಣವೇ ಇರಲಿ. ಇದರಲ್ಲಿ ಯಾವ ಪಕ್ಷ ಎನ್ನುವುದು ಮುಖ್ಯವಲ್ಲ, ಕಾನೂನಿನಲ್ಲಿ ಎಲ್ಲರಿಗೂ ಅವಕಾಶ ಪಡೆಯುವ ಹಕ್ಕಿದೆ. ಹೀಗಾಗಿ ಅದಕ್ಕೆ ಅವಕಾಶ ಕೊಡಬೇಕು. ಕಾನೂನಿನಲ್ಲಿ ಅವಕಾಶ ಇರುವ ಕಾರಣದಿಂದಲೇ ಹುಬ್ಬಳ್ಳಿ ಗಲಭೆ ಪ್ರಕರಣ ವಾಪಸ್ ಪಡೆದುಕೊಳ್ಳಲಾಗಿದೆ. ಇದು ತಪ್ಪು ಎನ್ನಲಾಗದು ಎಂದರು.

ಬಿಜೆಪಿ ಮೇಲೆ ಶೇ.29ರಷ್ಟು ಪ್ರಕರಣ

ಮುಡಾ ವಿಚಾರದಲ್ಲಿ ಬಿಜೆಪಿ ನಾಯಕರು ಪಾದಯಾತ್ರೆ ಮಾಡಿದರು. ಇದೇ ಬಿಜೆಪಿಯವರ ಮೇಲೆ ಎಷ್ಟು ಎಫ್‌ಐಆರ್ ಇದೇ ನೋಡಿಕೊಳ್ಳಲಿ. ಕೇಂದ್ರ ಸಚಿವರಗಳ ಮೇಲೆ ಶೇ.೩೯ ರಷ್ಟು ಪ್ರಕರಣಗಳಿದ್ದು, ಅವರನ್ನು ಒಳಗಡೆ ಹಾಕಬೇಕಿತ್ತು. ಅವರಿಂದ ರಾಜೀನಾಮೆ ಕೇಳಬೇಕಿತ್ತು. ಯಾರು ಮುಡಾ ವಿಚಾರವಾಗಿ ಪಾದಯಾತ್ರೆ ಮಾಡಿದರೋ ಅವರು ತಮ್ಮ ಚುನಾವಣೆಯಲ್ಲಿ ಸಲ್ಲಿಸಿರುವ ಅಫಿಡೇವಿಟ್ ತೆರೆದು ನೋಡಿಕೊಳ್ಳಲಿ ಎಂದರು.

ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆ ಕುಟುಂಬದವರು ನಿವೇಶನ ವಾಪಸ್ಸು ಕೊಟ್ಟಿದ್ದು, ಅದು ಅವರ ದೊಡ್ಡ ಗುಣ. ಇದಕ್ಕೆ ಖುಷಿ ಆಗಬೇಕು ಹೊರತು ರಾಜೀನಾಮೆ ಕೇಳುವುದು ಎಷ್ಟು ಸರಿ. ಪ್ರೇರಣಾ ಟ್ರಸ್ಟ್ ಗೆ ದುಡ್ಡು ಬಂದ ಮೇಲೆಯೇ ಯಡಿಯೂರಪ್ಪ ಆವರನ್ನು ಸಿಎಂ ಮಾಡಿದ್ದರು. ಯಾಕೆ ಮಾಡಿದ್ದು ಅಂದರೆ ಅವರ ಬಳಿ ವಾಶಿಂಗ್ ಮಶಿನ್ ಇದೆ. ಅದರಲ್ಲಿ ಹಾಕಿದ ತಕ್ಷಣ ಎಲ್ಲರೂ ಬೆಳ್ಳಗೆ ಆಗುತ್ತಾರೆ ಎಂದು ಲೇವಡಿ ಮಾಡಿದರು.

ಅತಿಥಿ ಶಿಕ್ಷಕರು ಹಾಗೂ ಅಡುವೆ ಸಹಾಯಕರ ವೇತನ ಹೆಚ್ಚಳ ಮಾಡಬೇಕಿದ್ದು, ಈ ಬಗ್ಗೆ ಸಿಎಂ ಅವರೊಂದಿಗೆ ಮಾತನಾಡಿದ್ದೇನೆ. ಶಿಕ್ಷಕರು ಶ್ರಮಪಟ್ಟು, ಕೆಲಸ ಮಾಡುತ್ತಾರೆ. ಅವರ ವೇತನ ಹೆಚ್ಚಳ ಮಾಡಲು ಕ್ರಮ ಕೈಗೊಳ್ಳುತ್ತೇವೆ ಎಂದರು.

ಇನ್ನು ಮುಂಬರುವ ಉಪಚುನಾವಣೆಯಲ್ಲಿ ಹೈಕಮಾಂಡ್ ಒಳ್ಳೆಯ ತೀರ್ಮಾನ ತೆಗೆದುಕೊಳ್ಳುತ್ತದೆ. ನಾವು ಹೋಗಿ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸುತ್ತೇವೆ ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು.

ಟಾಪ್ ನ್ಯೂಸ್

Madikeri: ವಿಷ ಸೇವನೆ: ಚಿಕಿತ್ಸೆ ಫಲಿಸದೆ ಗೃಹಿಣಿ ಸಾವುMadikeri: ವಿಷ ಸೇವನೆ: ಚಿಕಿತ್ಸೆ ಫಲಿಸದೆ ಗೃಹಿಣಿ ಸಾವು

Madikeri: ವಿಷ ಸೇವನೆ: ಚಿಕಿತ್ಸೆ ಫಲಿಸದೆ ಗೃಹಿಣಿ ಸಾವು

Vijayapura: 2-year-old child passed away after falling into Raj canal

Vijayapura: ರಾಜಕಾಲುವೆಗೆ ಬಿದ್ದು 2 ವರ್ಷದ ಮಗು ಸಾವು

priyanaka

Kerala By Poll: ವಯನಾಡ್‌ ಕ್ಷೇತ್ರದ ಉಪ ಚುನಾವಣೆಗೆ ಅಭ್ಯರ್ಥಿ ಘೋಷಿಸಿದ ಎಐಸಿಸಿ

Waqf issue: Letter from Opposition Leader to Speaker

Waqf issue: ಸ್ಪೀಕರ್‌ಗೆ ವಿಪಕ್ಷ ನಾಯಕರಿಂದ ಪತ್ರ

MUDA Case: ಸಾಕ್ಷ್ಯನಾಶ ಮಾಡಲು ಅದೇನು ಕೊಲೆ ಕೇಸಾ?: ಎಂ.ಲಕ್ಷ್ಮಣ್‌

MUDA Case: ಸಾಕ್ಷ್ಯನಾಶ ಮಾಡಲು ಅದೇನು ಕೊಲೆ ಕೇಸಾ?: ಎಂ.ಲಕ್ಷ್ಮಣ್‌

Heavy Rain: ರಾಜ್ಯಾದ್ಯಂತ ಇನ್ನೂ 4 ದಿನ ಭಾರೀ ಮಳೆ: 18 ಜಿಲ್ಲೆಗೆ ಆರೆಂಜ್‌ ಅಲರ್ಟ್‌

Heavy Rain: ರಾಜ್ಯಾದ್ಯಂತ ಇನ್ನೂ 4 ದಿನ ಭಾರೀ ಮಳೆ: 18 ಜಿಲ್ಲೆಗೆ ಆರೆಂಜ್‌ ಅಲರ್ಟ್‌

Janardhana Reddy: ಮುಡಾ ದಾಖಲೆ ಬಹಿರಂಗ ಮಾಡಿದ್ದು ಡಿಕೆಶಿ

Janardhana Reddy: ಮುಡಾ ದಾಖಲೆ ಬಹಿರಂಗ ಮಾಡಿದ್ದು ಡಿಕೆಶಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Will do Maratha Reservation Model protest for Reservation: Panchmasali Shri

ಮೀಸಲಾತಿಗಾಗಿ ಮರಾಠ ಮೀಸಲು ಮಾದರಿ ಉಗ್ರ‌ ಹೋರಾಟ: ಪಂಚಮಸಾಲಿ ಶ್ರೀ

Hubli: ರಾಜಕೀಯ ನಾಯಕರ ನಡುವೆ ಭಯೋತ್ಪಾದಕ ಪದ ಬಳಕೆ ಸರಿಯಲ್ಲ: ಶೆಟ್ಟರ್

Hubli: ರಾಜಕೀಯ ನಾಯಕರ ನಡುವೆ ಭಯೋತ್ಪಾದಕ ಪದ ಬಳಕೆ ಸರಿಯಲ್ಲ: ಶೆಟ್ಟರ್

H.K. Patil

Hubli: ಅಲ್ಪಸಂಖ್ಯಾತರ ಕಲ್ಯಾಣ ಮಾಡವುದು ತಪ್ಪೇ..?: ಎಚ್.ಕೆ. ಪಾಟೀಲ ಪ್ರಶ್ನೆ

Joshi–vija

Hubballi Riots Case: ಇಂದು ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ

DK-Shivakumar

Hubballi: ಬಿಜೆಪಿ ವಾಪಸ್‌ ಪಡೆದ ಕೇಸ್‌ ಪಟ್ಟಿ ಕೊಡುತ್ತೇವೆ: ಡಿ.ಕೆ.ಶಿವಕುಮಾರ್‌

MUST WATCH

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

udayavani youtube

ಮಕ್ಕಳ ಸ್ಕ್ರೀನ್ ಟೈಮಿಂಗ್ ಕುರಿತು ಎಚ್ಚರಿಕೆ ಅತ್ಯವಶ್ಯಕ.. ಇಲ್ಲಿದೆ ಅಗತ್ಯ ಮಾಹಿತಿ

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

ಹೊಸ ಸೇರ್ಪಡೆ

Madikeri: ವಿಷ ಸೇವನೆ: ಚಿಕಿತ್ಸೆ ಫಲಿಸದೆ ಗೃಹಿಣಿ ಸಾವುMadikeri: ವಿಷ ಸೇವನೆ: ಚಿಕಿತ್ಸೆ ಫಲಿಸದೆ ಗೃಹಿಣಿ ಸಾವು

Madikeri: ವಿಷ ಸೇವನೆ: ಚಿಕಿತ್ಸೆ ಫಲಿಸದೆ ಗೃಹಿಣಿ ಸಾವು

Vijayapura: 2-year-old child passed away after falling into Raj canal

Vijayapura: ರಾಜಕಾಲುವೆಗೆ ಬಿದ್ದು 2 ವರ್ಷದ ಮಗು ಸಾವು

priyanaka

Kerala By Poll: ವಯನಾಡ್‌ ಕ್ಷೇತ್ರದ ಉಪ ಚುನಾವಣೆಗೆ ಅಭ್ಯರ್ಥಿ ಘೋಷಿಸಿದ ಎಐಸಿಸಿ

Waqf issue: Letter from Opposition Leader to Speaker

Waqf issue: ಸ್ಪೀಕರ್‌ಗೆ ವಿಪಕ್ಷ ನಾಯಕರಿಂದ ಪತ್ರ

POlice

Sullia: ಅಕ್ರಮ ದನ ಸಾಗಾಟ ವೇಳೆ ಪೊಲೀಸ್‌ ದಾಳಿ  

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.