Railway Modernization: ಎರಡು ಎಕ್ಸ್‌ಪ್ರೆಸ್ ರೈಲುಗಳಿಗೆ ಎಲ್‌ಎಚ್‌ಬಿ ಕೋಚ್
ಮತ್ಸ್ಯಗಂಧ, ಮಂಗಳೂರು-ತಿರುವನಂತಪುರಂ ಎಕ್ಸ್‌ಪ್ರೆಸ್‌ಗೆ ಎಚ್‌ಎಚ್‌ಬಿ ರೇಕ್
Team Udayavani, Oct 16, 2024, 7:45 AM IST
ಮಂಗಳೂರು: ಹಳೆಯ ಬೋಗಿಗಳಿಂದಾಗಿ ಪ್ರಯಾಣಿಕರ ದೂರಿಗೆ ಕಾರಣವಾಗಿದ್ದ ಮತ್ಸ್ಯಗಂಧ ಎಕ್ಸ್‌ಪ್ರೆಸ್ (12630/12619) ಹಾಗೂ ತಿರುವನಂತಪುರ ಸೆಂಟ್ರಲ್-ಮಂಗಳೂರು ಸೆಂಟ್ರಲ್ ಎಕ್ಸ್‌ಪ್ರೆಸ್ ರೈಲುಗಳಿಗೆ ದಕ್ಷಿಣ ರೈಲ್ವೇ ಆಧುನಿಕ ಎಲ್‌ಎಚ್‌ಬಿ ಕೋಚ್‌ಗಳನ್ನು ಒದಗಿಸಿದೆ.
ಮಂಗಳೂರು ಸೆಂಟ್ರಲ್-ಲೋಕಮಾನ್ಯ ತಿಲಕ್-ಮಂಗಳೂರು ಸೆಂಟ್ರಲ್ ಮಧ್ಯೆ ಮತ್ಸ್ಯಗಂಧ ಎಕ್ಸ್‌ಪ್ರೆಸ್ 25 ವರ್ಷ ಗಳಿಂದ ಸಂಚರಿಸುತ್ತಿದೆ. ಇದು ಅತಿ ಹೆಚ್ಚು ಪ್ರಯಾಣಿಕರು ಸಂಚರಿಸುವ ರೈಲುಗಳ ಲ್ಲೊಂದು. 1998ರ ಮೇ 1ಕ್ಕೆ ಆರಂಭಗೊಂಡ ಈ ರೈಲು ಹಿಂದೆ ಮಂಗಳೂರು-ಕುರ್ಲಾ ಎಕ್ಸ್‌ಪ್ರೆಸ್ ಎಂದೇ ಕರೆಯಲ್ಪಡುತ್ತಿತ್ತು. ತಿರುವನಂತಪುರ-ಮಂಗಳೂರು ಸೆಂಟ್ರಲ್-ತಿರುವನಂತಪುರ ಸೆಂಟ್ರಲ್ ಎಕ್ಸಪ್ರಸ್ ಕೂಡ ಅಧಿಕ ದಟ್ಟಣೆಯ ರೈಲುಗಳಲ್ಲೊಂದು.
ಮುಖ್ಯವಾಗಿ ಮತ್ಸ್ಯಗಂಧ ರೈಲಿನ ಬೋಗಿಗಳು ಹಳೆಯದಾಗಿದ್ದು, ಬದಲಾಯಿ ಸಲೇಬೇಕು ಎನ್ನುವ ಬೇಡಿಕೆ ಹಲವು ವರ್ಷಗಳಿಂದ ಕೇಳಿಬಂದಿತ್ತು.
ಮುಂಬಯಿ – ಮಂಗಳೂರು ಮಧ್ಯೆ ಪ್ರಯಾಣಿಕರ ದಟ್ಟಣೆ ಅಧಿಕ, ಅದರಲ್ಲೂ ಮಹಿಳೆಯರು ಮಕ್ಕಳು ಹೆಚ್ಚು ಸಂಚರಿಸುತ್ತಾರೆ. ರೈಲನ್ನು ಅನೇಕ ಬಾರಿ ದುರಸ್ತಿಗೊಳಪಡಿಸಿದರೂ ಸುಧಾರಣೆ ಬಯಸುತ್ತಿತ್ತು. ಈ ಬೇಡಿಕೆ ಕುರಿತು ಉದಯವಾಣಿ ಜ. 10ರಂದು ವಿಶೇಷ ವರದಿ ಪ್ರಕಟಿಸಿತ್ತು.
ಎಲ್‌ಎಚ್‌ಬಿ ಕೋಚ್ ಒದಗಿಸುವ ಮೂಲಕ ಸಹಸ್ರಾರು ಪ್ರಯಾಣಿಕರ ಬೇಡಿಕೆ ಈಡೇರಿದಂತಾಗಿದೆ. ಮುಂಬರುವ 2025ರ ಫೆಬ್ರವರಿಯಿಂದ ಈ ಎರಡೂ ರೈಲುಗಳ ರೇಕ್‌ಗಳನ್ನು ಎಲ್‌ಎಚ್‌ಬಿ ರೇಕ್ ಆಗಿ ಪರಿವರ್ತಿಸಲಾಗುವುದು. ನಂ.16347 ತಿರುವನಂತಪುರ ಸೆಂಟ್ರಲ್-ಮಂಗಳೂರು ಸೆಂಟ್ರಲ್ ಎಕ್ಸ್‌ಪ್ರೆಸ್ ರೈಲು ಫೆ. 16ರಿಂದ ಮತ್ತು ನಂ.16348 ಮಂಗಳೂರು ಸೆಂಟ್ರಲ್-ತಿರುವನಂತಪುರ ರೈಲು ಫೆ.19ರಿಂದ ಎಲ್‌ಎಚ್‌ಬಿ ಕೋಚ್‌ಗಳೊಂದಿಗೆ ಸಂಚರಿಸಲಿದೆ.
ನಂ. 12620 ಮಂಗಳೂರು ಸೆಂಟ್ರಲ್-ಲೋಕಮಾನ್ಯ ತಿಲಕ್ ಮತ್ಸ್ಯಗಂಧ ಫೆ.17ರಿಂದ, ನಂ.12619 ಲೋಕಮಾನ್ಯ ತಿಲಕ್ – ಮಂಗಳೂರು ಸೆಂಟ್ರಲ್ ಮತ್ಸ್ಯಗಂಧ ಫೆ.18ರಿಂದ ಎಲ್‌ಎಚ್‌ಬಿ ಬೋಗಿಗಳೊಂದಿಗೆ ಪ್ರಯಾಣಿಸಲಿದೆ. ಎಲ್‌ಎಚ್‌ಬಿ ಕೋಚ್ ಆಗಿ ಬದಲಾದ ಬಳಿಕ ರೈಲಿನಲ್ಲಿ ನಾಲ್ಕು 2-ಟೈರ್ ಎಸಿ, ಎರಡು 3 ಟೈರ್ ಎಸಿ, ಎರಡು 3 ಟೈರ್ ಎಸಿ ಎಕಾನಮಿ ಕೋಚ್, 8 ಸ್ಲಿàಪರ್ ಕೋಚ್, 4 ಜನರಲ್ ಸೆಕೆಂಡ್ ಕ್ಲಾಸ್, 1 ಬ್ರೇಕ್ ವ್ಯಾನ್ ಕಂ ಲಗೇಜ್ ಸೆಕೆಂಡ್ ಕ್ಲಾಸ್ ಕೋಚ್, 1 ಜನರೇಟರ್ ಕಾರ್ ಇರಲಿದೆ.
ಎಲ್‌ಎಚ್‌ಬಿ ಕೋಚ್ ವೈಶಿಷ್ಟ್ಯ
ಎಲ್‌ಎಚ್‌ಬಿ ಎಂದರೆ ಲಿಂಕ್ ಹಾಫ್‌ಮನ್ ಬುಷ್. ಇದು ಜರ್ಮನ್ ವಿನ್ಯಾಸದ್ದಾಗಿದ್ದು ನಿರ್ವಹಣೆ ಸುಲಭ ಹಾಗೂ ಹೆಚ್ಚು ಪ್ರಯಾಣಿಕರನ್ನು ಕೊಂಡೊಯ್ಯ ಬಲ್ಲದು. ಸಾಂಪ್ರದಾಯಿಕ ಕೋಚ್‌ಗೆ ಹೋಲಿಸಿದರೆ ಡಿಸ್ಕ್ ಬ್ರೇಕ್ ಹೊಂದಿದೆ, ಹೆಚ್ಚು ಸುರಕ್ಷಿತ, ಅಧಿಕ ವೇಗದ ಚಾಲನೆಗೆ ಪೂರಕ, ಕಡಿಮೆ ಭಾರ ಹಾಗೂ ಇವುಗಳಲ್ಲಿ ಶಬ್ದ ಮಾಲಿನ್ಯವೂ ಕಡಿಮೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಇನ್ನು ಯುಪಿಐ ಮೂಲಕವೂ ಟ್ರಾಫಿಕ್ ದಂಡ ಪಾವತಿ
Sri Krishnadevaraya ವಿ.ವಿ.ಗೆ ಮಂಗಳಮುಖಿ ಅತಿಥಿ ಉಪನ್ಯಾಸಕಿ; ರಾಜ್ಯದಲ್ಲೇ ಮೊದಲು
Mangaluru: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: 1.15 ಕೋ.ರೂ. ಚಿನ್ನ, ಕೇಸರಿ ಪತ್ತೆ
Winter Session: ಬಾಣಂತಿ ಸಾವು: ನ್ಯಾಯಾಂಗ ತನಿಖೆಗೆ ಬಿಜೆಪಿ ಪಟ್ಟು
United Nations: ನಾಡಿದ್ದು ವಿಶ್ವ ಧ್ಯಾನ ದಿನ: ಶ್ರೀ ರವಿಶಂಕರ್ ನೇತೃತ್ವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.