BBK11: ಬಿಗ್‌ ಬಾಸ್‌ ಮನೆಯಲ್ಲಿ ಹೊಡೆದಾಟ; ಶೋನಿಂದ ಹೊರಬಿದ್ದ ಜಗದೀಶ್‌ – ರಂಜಿತ್‌?

Team Udayavani, Oct 16, 2024, 1:19 PM IST

8

ಬೆಂಗಳೂರು: ಬಿಗ್‌ ಬಾಸ್‌ ಕನ್ನಡ (Bigg Boss Kannada-11) ದೊಡ್ಮನೆಯಲ್ಲಿ ದೊಡ್ಡ ಜಗಳವೇ ಆಗಿದೆ. ದಿನಕಳೆದಂತೆ ಸ್ಪರ್ಧಿಗಳು ಹೊಡೆದಾಡಿಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಕಾರಣದಿಂದ ಇಬ್ಬರು ಸ್ಪರ್ಧಿಗಳನ್ನು ದೊಡ್ಮನೆಯಿಂದ ಆಚೆ ಕಳುಹಿಸಲಾಗಿದೆ ಎಂದು ವರದಿಯಾಗಿದೆ.

ನಿನ್ನೆಯ ಎಪಿಸೋಡ್‌ನಲ್ಲಿ ಜಗದೀಶ್‌ ಅವರ ಮೇಲೆ ಮನೆ ಅವರು ಮುಗಿಬಿದ್ದಿದ್ದರು. ಉಗ್ರಂ ಮಂಜು, ರಂಜಿತ್‌, ಚೈತ್ರಾ ಅವರು ಜಗದೀಶ್‌ ಅವರ ವರ್ತನೆಗೆ ಬೇಸತ್ತು ಅವರೊಂದಿಗೆ ವಾಗ್ವಾದಕ್ಕೆ ಇಳಿದಿದ್ದರು.

ಜಗದೀಶ್‌ ಹೇಳಿದ್ದೇನು?:

ನಾನು ಬಗ್ಗಿದರೆ ಹಿಂದಗಡೆ ನೋಡಿ ಯಾರೋ ನನ್ನ ಬಗ್ಗೆ ಕೆಟ್ಟದಾಗಿ ಮಾತನಾಡ್ತಾನೆ. ನನ್ನ ಇಮೇಜ್ ಡ್ಯಾಮೇಜ್ ಮಾಡೋಕೆ ನಾನಿಲ್ಲಿ ಬಂದಿಲ್ಲ. ಈಗ ಹೋಗ್ತೇನೆ ನಾನು, ನನಗೆ ಗತಿಯಿಲ್ಲದೆ ಇಲ್ಲಿಗೆ ಬಂದಿಲ್ಲ. ನನಗೆ ಯಾರೋ ಹೇಳ್ತಾನೆ ಮೆಂಟಲ್ ನನ್ಮಗ. ನಾನಿಲ್ಲಿ ಗತಿಯಿಲ್ಲದೆ ಬಂದಿಲ್ಲ. ನನಗೂ ನಾಲ್ಕು ಜನಕ್ಕೆ ಊಟ ಹಾಕೋ ಯೋಗ್ಯತೆ ಇದೆ. ಬಾಗಿಲು ಓಪನ್ ಮಾಡಿ ಈಗಲೇ ಹೊರಗಡೆ ಹೋಗ್ತೇನೆ. ನನ್ನ ಲಗೇಜ್ ಇಲ್ಲೇ ಇರಲಿ ಎಂದು ಜಗದೀಶ್ ಅವರು ತನ್ನ ಬಗ್ಗೆ ಆಡಿಕೊಳ್ಳುವ ಸಹ ಸ್ಪರ್ಧಿಗಳ ಬಗ್ಗೆ ಆಕ್ರೋಶ ಹೊರಹಾಕಿದ್ದರು.

ಜಗದೀಶ್ ಅವರು ಮಂಜು ಅವರ ಮೇಲೆ ಗರಂ ಆಗಿದ್ದಾರೆ. ಕ್ಯಾಮರ ಮುಂದೆ ಕೆಟ್ಟದಾಗಿ ಜಗದೀಶ್ ಮಾತನಾಡಿದ್ದಾರೆ. ತಮ್ಮ ಬಟ್ಟೆಯನ್ನು ಜಗದೀಶ್ ಅವರು ಪ್ಯಾಕ್ ಮಾಡಿರುವುದನ್ನು ತೋರಿಸಲಾಗಿತ್ತು.

ಮಂಜು ಹೇಳಿದ್ದೇನು?

ಇಲ್ಲಿ ವೈಯಕ್ತಿಕವಾಗಿ ಟಾರ್ಗೆಟ್ ಮಾಡೋದಲ್ಲ. ಹಲ್ಕಾ ಮಾತನಾಡೋದಲ್ಲ. ಹೋಗ್ತೇನೆ ಹೋಗ್ತೇನೆ ಅಂಥ ಹೇಳೋದಲ್ಲ. ತಿನ್ನೋ ಊಟಕ್ಕೆ ಗೌರವ ಕೊಡಬೇಕು. ಶೋ ಬಗ್ಗೆ ಇಲ್ಲಸಲ್ಲದ್ದು ಹೇಳೋದಲ್ಲ ಎಂದು ಮಂಜು ಇಲ್ಲಿ ಮುಖಾಮುಖಿಯಾಗಿ ಜಗದೀಶ್ ಗೆ ಹೇಳಿದ್ದಾರೆ.

ಬಿಗ್‌ ಬಾಸ್‌ ಮನೆಯಿಂದ ಜಗದೀಶ್‌ – ರಂಜಿತ್‌ ಔಟ್?:

ಪರಿಸ್ಥಿತಿ ವಿಕೋಪಕ್ಕೆ ತಿರುಗಿದ್ದಾಗ ಬಿಗ್‌ ಬಾಸ್‌ ಎಲ್ಲರನ್ನು ಕೂರಿಸಿ ಸಮಾಧಾನ ಮಾಡಲು ಯತ್ನಿಸಿದ್ದರು. ಆದರೆ ಮತ್ತೆ ಜಗದೀಶ್‌ – ರಂಜಿತ್‌ ನಡುವೆ ವಾಗ್ವಾದ ಶುರುವಾಗಿದ್ದು, ಇಬ್ಬರು ಹೊಡೆದಾಡಿಕೊಳ್ಳುವವರೆಗೂ ಇದು ಹೋಗಿದೆ ಎನ್ನಲಾಗಿದೆ. ಇದೇ ಕಾರಣದಿಂದ ದೊಡ್ಮನೆಯಿಂದ ಜಗದೀಶ್‌ ಹಾಗೂ ರಂಜಿತ್‌ ಅವರನ್ನು ಹೊರ ಕಳುಹಿಸಲಾಗಿದೆ ಎಂದು ಹೇಳಲಾಗುತ್ತಿದೆ.

ಮಾನಸ ಅವರ ವಿಚಾರದಲ್ಲಿ ಜಗದೀಶ್‌ ಅವರು ಮಧ್ಯ ಮಾತನಾಡಿದ ಸಂದರ್ಭದಲ್ಲಿ ರಂಜಿತ್‌, ಜಗದೀಶ್‌ ನಡುವೆ ಮಾತಿನ ಚಕಮಕಿ ನಡೆದಿದೆ. ಇದು ಹಲ್ಲೆ ಮಾಡುವವರೆಗೂ ಹೋಗಿದೆ. ಇಬ್ಬರು ಈ ಸಂದರ್ಭದಲ್ಲಿ ಹೊಡೆದಾಡಿಕೊಂಡಿದ್ದು, ನಿಯಮದ ಉಲ್ಲಂಘನೆ ಆದ ಕಾರಣ ಇಬ್ಬರನ್ನೂ ಮನೆಯಿಂದ ಆಚೆ ಕಳುಹಿಸಲಾಗಿದೆ ಎನ್ನಲಾಗುತ್ತಿದೆ.

ಈ ನಡುವೆ ಜಗದೀಶ್‌ ಅವರು ಮನೆಯಿಂದ ಆಚೆ ಬಂದು, ತೆಗೆದುಕೊಂಡಿರುವ ಫೋಟೋವೊಂದು ವೈರಲ್‌ ಆಗುತ್ತಿದೆ. ಇನ್ನೊಂದು ಕಡೆ ರಂಜಿತ್‌ ಅವರಿಗೆ ಎಚ್ಚರಿಕೆ ನೀಡಲಾಗಿದೆ ಎನ್ನಲಾಗಿದ್ದು, ಅವರು ಮನೆಯಿಂದ ಆಚೆ ಬಂದಿಲ್ಲ ಎನ್ನಲಾಗುತ್ತಿದೆ. ಯಾವುದಕ್ಕೂ ವಾಹಿನಿಯಿಂದಲೇ ಅಧಿಕೃತ ವಿಚಾರ ತಿಳಿದುಬರಬೇಕಿದೆ.

ಹುಚ್ಚ ವೆಂಕಟ್‌ ಹಲ್ಲೆ ಘಟನೆ: ಬಿಗ್‌ ಬಾಸ್‌ ಮನೆಯಲ್ಲಿ ಹಲ್ಲೆ ಮಾಡಿದ ಪ್ರಕರಣ ಈ ಹಿಂದೆಯೂ ನಡೆದಿತ್ತು. ಬಿಗ್ ಬಾಸ್‌ ಕನ್ನಡ ಸೀಸನ್ 3ರಲ್ಲಿ ಸಹ ಸ್ಪರ್ಧಿಯ ಮೇಲೆ ಹಲ್ಲೆ ಮಾಡಿದ್ದ ಕಾರಣಕ್ಕೆ ಹುಚ್ಚ ವೆಂಕಟ್ ಶೋನಿಂದ ಆಚೆ ಬಂದಿದ್ದರು. ಇದಾದ ಬಳಿಕ ಬಿಗ್ ಬಾಸ್ ಕನ್ನಡ ಸೀಸನ್ 4ರಲ್ಲಿಯೂ ಅವರನ್ನು ಮನೆಯೊಳಗೆ ಕಳುಹಿಸಲಾಗಿತ್ತು. ಜೊತೆಗೆ ಬೌನ್ಸರ್‌ಗಳೂ ಇದ್ದರು. ಆಗಲೂ ಅಲ್ಲಿದ್ದ ಪ್ರಥಮ್ ಮೇಲೆ ಹಲ್ಲೆ ವೆಂಕಟ್‌ ಹಲ್ಲೆ ಮಾಡಿದ್ದರು.

ಟಾಪ್ ನ್ಯೂಸ್

MUDA Scam: ಕೇಸ್‌ ವಾಪಸ್‌ಗೆ ಹಣದ ಆಮಿಷ? ಸ್ನೇಹಮಯಿ ಕೃಷ್ಣ ಲೋಕಾಯುಕ್ತಕ್ಕೆ ದೂರು

MUDA Scam: ಕೇಸ್‌ ವಾಪಸ್‌ಗೆ ಹಣದ ಆಮಿಷ? ಸ್ನೇಹಮಯಿ ಕೃಷ್ಣ ಲೋಕಾಯುಕ್ತಕ್ಕೆ ದೂರು

Priyank Kharge: ಎಲ್ಲವನ್ನೂ ನ್ಯಾಯಾಂಗವೇ ಮಾಡೋದಾದ್ರೆ ಶಾಸಕಾಂಗ ಏಕೆ?

Priyank Kharge: ಎಲ್ಲವನ್ನೂ ನ್ಯಾಯಾಂಗವೇ ಮಾಡೋದಾದ್ರೆ ಶಾಸಕಾಂಗ ಏಕೆ?

Krishna Byre Gowda: 16.5 ಸಾವಿರ ಗ್ರಾಮಗಳು ಈಗ ಪೋಡಿ ಮುಕ್ತ

Krishna Byre Gowda: 16.5 ಸಾವಿರ ಗ್ರಾಮಗಳು ಈಗ ಪೋಡಿ ಮುಕ್ತ

Karnataka: ಶಕ್ತಿ ಯೋಜನೆ ಬಳಿಕ ನಿತ್ಯ ಪ್ರಯಾಣಿಕರ ಸಂಖ್ಯೆ 23 ಲಕ್ಷ ಏರಿಕೆ

Karnataka: ಶಕ್ತಿ ಯೋಜನೆ ಬಳಿಕ ನಿತ್ಯ ಪ್ರಯಾಣಿಕರ ಸಂಖ್ಯೆ 23 ಲಕ್ಷ ಏರಿಕೆ

ಮಾಜಿ ಸೈನಿಕರಿಗೆ ಭೂಮಿ ಬದಲು ಬಡಾವಣೆ: ಸಚಿವ ಕೃಷ್ಣ ಬೈರೇಗೌಡ

ಮಾಜಿ ಸೈನಿಕರಿಗೆ ಭೂಮಿ ಬದಲು ಬಡಾವಣೆ: ಸಚಿವ ಕೃಷ್ಣ ಬೈರೇಗೌಡ

ಕನಸಲ್ಲೂ ಅಂಬೇಡ್ಕರ್‌ರನ್ನು ಅವಮಾನಿಸಿಲ್ಲ: ಅಮಿತ್‌

ಕನಸಲ್ಲೂ ಅಂಬೇಡ್ಕರ್‌ರನ್ನು ಅವಮಾನಿಸಿಲ್ಲ: ಅಮಿತ್‌

BBK11: ಟಾಸ್ಕ್ ವಿಚಾರದಲ್ಲಿ ಫೈಯರ್ ಚೈತ್ರಾ ಠುಸ್.. ಮನೆಮಂದಿ ಸುಸ್ತು

BBK11: ಟಾಸ್ಕ್ ವಿಚಾರದಲ್ಲಿ ಫೈಯರ್ ಚೈತ್ರಾ ಠುಸ್.. ಮನೆಮಂದಿ ಸುಸ್ತು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BBK11: ಟಾಸ್ಕ್ ವಿಚಾರದಲ್ಲಿ ಫೈಯರ್ ಚೈತ್ರಾ ಠುಸ್.. ಮನೆಮಂದಿ ಸುಸ್ತು

BBK11: ಟಾಸ್ಕ್ ವಿಚಾರದಲ್ಲಿ ಫೈಯರ್ ಚೈತ್ರಾ ಠುಸ್.. ಮನೆಮಂದಿ ಸುಸ್ತು

BBK11: ಮತ್ತೆ ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್.. ವಿಡಿಯೋದಲ್ಲಿ ಸುಳಿವು

BBK11: ಮತ್ತೆ ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್..? ವಿಡಿಯೋದಲ್ಲಿ ಸುಳಿವು

BBK11: ಗೆಲ್ಲಲೇ ಬೇಕಾದ ಟಾಸ್ಕ್‌ನಲ್ಲಿ ಎಡವಿದ ಚೈತ್ರಾ.. ನನ್ನಿಂದ ಆಗಲ್ಲವೆಂದು ಕಣ್ಣೀರು

BBK11: ಗೆಲ್ಲಲೇ ಬೇಕಾದ ಟಾಸ್ಕ್‌ನಲ್ಲಿ ಎಡವಿದ ಚೈತ್ರಾ.. ನನ್ನಿಂದ ಆಗಲ್ಲವೆಂದು ಕಣ್ಣೀರು

BBK11:‌ ಚೈತ್ರಾಳನ್ನು ದೂಡಿದ ರಜತ್.. ಮೈ ಮುಟ್ಟಿದ್ದಕ್ಕೆ ಫೈಯರ್ ಬ್ರ್ಯಾಂಡ್ ಗರಂ

BBK11:‌ ಚೈತ್ರಾಳನ್ನು ದೂಡಿದ ರಜತ್.. ಮೈ ಮುಟ್ಟಿದ್ದಕ್ಕೆ ಫೈಯರ್ ಬ್ರ್ಯಾಂಡ್ ಗರಂ

14

ಸಾಕಿದ ನಾಯಿಗಾಗಿ ಬಾಯ್‌ ಫ್ರೆಂಡ್‌ ಜತೆ ಬ್ರೇಕಪ್‌ ಮಾಡಿಕೊಂಡ ಬಿಗ್‌ ಬಾಸ್‌ ಮಾಜಿ ಸ್ಪರ್ಧಿ

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

MUDA Scam: ಕೇಸ್‌ ವಾಪಸ್‌ಗೆ ಹಣದ ಆಮಿಷ? ಸ್ನೇಹಮಯಿ ಕೃಷ್ಣ ಲೋಕಾಯುಕ್ತಕ್ಕೆ ದೂರು

MUDA Scam: ಕೇಸ್‌ ವಾಪಸ್‌ಗೆ ಹಣದ ಆಮಿಷ? ಸ್ನೇಹಮಯಿ ಕೃಷ್ಣ ಲೋಕಾಯುಕ್ತಕ್ಕೆ ದೂರು

Priyank Kharge: ಎಲ್ಲವನ್ನೂ ನ್ಯಾಯಾಂಗವೇ ಮಾಡೋದಾದ್ರೆ ಶಾಸಕಾಂಗ ಏಕೆ?

Priyank Kharge: ಎಲ್ಲವನ್ನೂ ನ್ಯಾಯಾಂಗವೇ ಮಾಡೋದಾದ್ರೆ ಶಾಸಕಾಂಗ ಏಕೆ?

Krishna Byre Gowda: 16.5 ಸಾವಿರ ಗ್ರಾಮಗಳು ಈಗ ಪೋಡಿ ಮುಕ್ತ

Krishna Byre Gowda: 16.5 ಸಾವಿರ ಗ್ರಾಮಗಳು ಈಗ ಪೋಡಿ ಮುಕ್ತ

Karnataka: ಶಕ್ತಿ ಯೋಜನೆ ಬಳಿಕ ನಿತ್ಯ ಪ್ರಯಾಣಿಕರ ಸಂಖ್ಯೆ 23 ಲಕ್ಷ ಏರಿಕೆ

Karnataka: ಶಕ್ತಿ ಯೋಜನೆ ಬಳಿಕ ನಿತ್ಯ ಪ್ರಯಾಣಿಕರ ಸಂಖ್ಯೆ 23 ಲಕ್ಷ ಏರಿಕೆ

ಮಾಜಿ ಸೈನಿಕರಿಗೆ ಭೂಮಿ ಬದಲು ಬಡಾವಣೆ: ಸಚಿವ ಕೃಷ್ಣ ಬೈರೇಗೌಡ

ಮಾಜಿ ಸೈನಿಕರಿಗೆ ಭೂಮಿ ಬದಲು ಬಡಾವಣೆ: ಸಚಿವ ಕೃಷ್ಣ ಬೈರೇಗೌಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.