Malpe: ಸಿಎನ್‌ಜಿ ಕೊರತೆ; ರಿಕ್ಷಾ ಚಾಲಕರಿಗೆ ಚಿಂತೆ

ಬಂಕ್‌ಗಳ ಮುಂದೆ ದಿನವಿಡೀ ವಾಹನಗಳ ಸರತಿ ಸಾಲು; 3-4 ಗಂಟೆ ಕಾಯುವ ಅನಿವಾರ್ಯತೆ; ರಸ್ತೆ ಬದಿಯಲ್ಲಿ ಸಾರ್ವಜನಿಕ ಸಂಚಾರಕ್ಕೂ ಕಿರಿಕಿರಿ; ರಿಕ್ಷಾ ಚಾಲಕರಿಗೆ ಬಾಡಿಗೆ ಇಲ್ಲದೆ ತೊಂದರೆ

Team Udayavani, Oct 16, 2024, 5:26 PM IST

14

ಮಲ್ಪೆ: ನಗರದಲ್ಲಿ ಸಿಎನ್‌ಜಿ ಇಂಧನ ಆಧಾರಿತ ವಾಹನಗಳು ಅದರಲ್ಲೂ ರಿಕ್ಷಾಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಆದರೆ, ಅದಕ್ಕೆ ಅನುಗುಣವಾಗಿ ಸಿಎನ್‌ಜಿ ಪೂರೈಕೆ ಬಂಕ್‌ಗಳು ಇಲ್ಲದ ಕಾರಣ ಆಗಾಗ ಇಂಧನ ಕೊರತೆ ಎದುರಾಗುತ್ತಿದೆ. ಇದರಿಂದಾಗಿ ರಿಕ್ಷಾ ಚಾಲಕರು ಭಾರೀ ಸಮಸ್ಯೆ ಎದುರಿಸುತ್ತಿದ್ದು, ಬಾಡಿಗೆ ಬಿಟ್ಟು ಬಂಕ್‌ಗಳ ಮುಂದೆ ದಿನವಿಡೀ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ.

ಕಳೆದ ಕೆಲವು ದಿನಗಳಿಂದ ಈ ಸಮಸ್ಯೆ ಇನ್ನಷ್ಟು ಬಿಗಡಾಯಿಸಿದ್ದು, ವಾಹನ ಚಾಲಕರು ಗ್ಯಾಸ್‌ ಸಿಗದೆ ಪರದಾಡುವಂತಾಗಿದೆ. ಇದಕ್ಕೆ ದಸರಾ ರಜೆ ನಿಮಿತ್ತ ರಾಜ್ಯದ ಬೇರೆ ಬೇರೆ ಭಾಗದ ಜನರು ದೊಡ್ಡ ಮಟ್ಟದಲ್ಲಿ ಪ್ರವಾಸಕ್ಕಾಗಿ ಕರಾವಳಿಗೆ ಬಂದಿದ್ದು ಕಾರಣ ಎನ್ನಲಾಗುತ್ತಿದೆ. ಬೇರೆ ಬೇರೆ ಭಾಗಗಳಿಂದ ಬಂದವರು ಇಲ್ಲಿ ಅನಿಲ ತುಂಬಿಕೊಳ್ಳುತ್ತಿರು ವುದರಿಂದ ಮೊದಲೇ ಕಡಿಮೆ ಪ್ರಮಾಣದಲ್ಲಿರುವ ಅನಿಲ ನಿತ್ಯ ಬಳಕೆದಾರರಿಗೆ ಸಿಗದೆ ಸಮಸ್ಯೆಯಾಗಿದೆ ಎನ್ನಲಾಗಿದೆ.

ಸಿಎನ್‌ಜಿ ಕೇಂದ್ರಗಳ ಕೊರತೆ
ಉಡುಪಿ ಜಿಲ್ಲೆಯಲ್ಲಿ ಕೋಟೇಶ್ವರ, ದೊಡ್ಡಣಗುಡ್ಡೆ, ಬ್ರಹ್ಮಾವರ, ಪಡುಬಿದ್ರೆ ಸೇರಿದಂತೆ ಕೆಲವೇ ಕೆಲವು ಕಡೆಗಳಲ್ಲಿ ಸಿಎನ್‌ಜಿ ಕೇಂದ್ರಗಳಿವೆ. ಇರುವಂತಹ ಬಹುತೇಕ ಎಲ್ಲ ಸಿಎನ್‌ಜಿ ಬಂಕ್‌ಗಳಲ್ಲಿ ಬೇಡಿಕೆಯಷ್ಟು ಪೂರೈಕೆ ಆಗದೇ ಇರುವುದು ಸಮಸ್ಯೆಗೆ ಕಾರಣವಾಗಿದೆ. ಅದರ ಜತೆಗೆ ಸಿಎನ್‌ಜಿ ಗ್ಯಾಸ್‌ ಬಳಸುವ ವಾಹನಗಳ ಸಂಖ್ಯೆಯೂ ಹೆಚ್ಚುತ್ತಿದೆ.

ರಿಕ್ಷಾ ಚಾಲಕರ ಪರದಾಟ
ಸಿಎನ್‌ಜಿ ಗ್ಯಾಸ್‌ ಅಲಭ್ಯತೆಯಿಂದ ಅತಿ ಹೆಚ್ಚು ತೊಂದರೆಗೆ ಒಳಗಾಗುವುದು ಜೀವನ ನಿರ್ವಹಣೆಗಾಗಿ ಆಟೋಗಳನ್ನೇ ನಂಬಿರುವ ಚಾಲಕರು. ಅವರು ಒಂದು ಟ್ಯಾಂಕ್‌ ತುಂಬಿಸಿಕೊಳ್ಳುವುದಕ್ಕಾಗಿ ಕನಿಷ್ಠ 3-4 ಗಂಟೆ ಬಂಕ್‌ಗಳ ಮುಂದೆ ಕಾದು ನಿಲ್ಲಬೇಕಾದ ಪರಿಸ್ಥಿತಿ ಇದೆ. ಕೆಲವೊಮ್ಮೆ ಅವರಿಗೆ ಒಂದು ಬಂಕ್‌ನಲ್ಲಿ ಅನಿಲ ಸಿಗದೆ ಕೊನೆಗೆ ಇನ್ನೊಂದು ಬಂಕ್‌ಗೆ ಓಡುವ ಸ್ಥಿತಿ ಬಂದಿದೆ. ಅಲ್ಲಿಯೂ ಸಿಗದೆ ನಿರಾಶರಾಗಿದ್ದೂ ಇದೆ. ದಿನದ 5-6 ಗಂಟೆ ಬಾಡಿಗೆ ಮಾಡಿ, 3-4 ಗಂಟೆ ಗ್ಯಾಸಿಗೆ ಕಾಯುವ ಸ್ಥಿತಿ ಅವರದ್ದು. ಕೆಲವರು ಹಗಲಿನ ಹೊತ್ತು ಬಾಡಿಗೆ ನಷ್ಟವಾಗುವ ಆತಂಕದಿಂದ ಬೆಳಗಿನ ಜಾವ, ರಾತ್ರಿ ಹೊತ್ತು ತಾಸುಗಟ್ಟಲೆ ಕಾಯುತ್ತಿದ್ದಾರೆ.

ರಸ್ತೆ ಬದಿಯಲ್ಲಿ ಸರತಿಸಾಲು
ಕಳೆದು ಹಲವು ದಿನಗಳಿಂದ ಮಲ್ಪೆಯ ಸಿಎನ್‌ಜಿ ಕೇಂದ್ರದ ಬಳಿ ರಿಕ್ಷಾಗಳ ಸಾಲು ಕಂಡು ಬರುತ್ತಿದೆ. ಪ್ರತಿದಿನ 2-3 ಲೋಡ್‌ಗಳು ಪೂರೈಕೆಯಾಗುತ್ತಿದೆ. ಅದು ಬಂದಷ್ಟೆ ಬೇಗ ಖಾಲಿಯಾಗುತ್ತದೆ. ಹಾಗಾಗಿ ಬರುವ ಲೋಡ್‌ಗಳನ್ನೇ ಕಾಯುತ್ತಾ ಇರುವ ರಿಕ್ಷಾಗಳ ಸಾಲು ಈಗ ಮಾಮೂಲಿಯಾಗಿದೆ. ರಿಕ್ಷಾಗಳನ್ನು ರಸ್ತೆ ಬದಿ ನಿಲ್ಲಿಸುವುದರಿಂದ ಸಮೀಪದ ಅಂಗಡಿಗಳಿಗೆ ತೊಂದರೆ ಉಂಟಾದರೆ, ಇತ್ತ ರಸ್ತೆಯ ಸಂಚಾರ, ಪಾದಚಾರಿಗಳಿಗೂ ಕೂಡ ಸಮಸ್ಯೆಯನ್ನು ತಂದೊಡ್ಡುತ್ತಿದೆ.

ಪ್ರವಾಸಿ ವಾಹನಗಳ ಹೆಚ್ಚಳ ಕಾರಣ
ನವರಾತ್ರಿಯಿಂದ ಆರಂಭಗೊಂಡು ಹೊಸ ವರ್ಷದವರೆಗೆ ಜಿಲ್ಲೆಗೆ ಆಗಮಿಸುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದೆ. ಪ್ರವಾಸಿಗರ ವಾಹನಗಳು ಜಿಲ್ಲೆಯಲ್ಲಿ ಇಂಧನ ಭರ್ತಿ ಮಾಡಿಕೊಳ್ಳುವುದರಿಂದ ಸ್ಥಳೀಯ ವಾಹನಗಳಿಗೆ ಇಂಧನದ ಕೊರತೆ ಉಂಟಾಗಿದೆ. ಜತೆಗೆ ಆಟೋ ರಿಕ್ಷಾ ಬಾಡಿಗೆ ಹತ್ತುವವರ ಸಂಖ್ಯೆ ಹೆಚ್ಚಾಗಿರುವುದರಿಂದ ಇಂಧನ ಬಳಕೆ ಹೆಚ್ಚಾಗಿದೆ. ಇದೀಗ ಎಲ್ಲ ವಾಹನಗಳು ಸಿಎನ್‌ಜಿ ಬಳಸುವುದರಿಂದ ಹೆಚ್ಚುವರಿ ಬಂಕ್‌ಗಳಲ್ಲಿ ತೆರೆಯಬೇಕಾಗಿದೆ ಎನ್ನುತ್ತಾರೆ ಮಲ್ಪೆ ಆಟೋ ರಿಕ್ಷಾ ಚಾಲಕ ಮಾಲಕರ ಸಂಘದ ಮಾಜಿ ಅಧ್ಯಕ್ಷ ಹರೀಶ್‌ ಸಾಲ್ಯಾನ್‌.

ಎಲ್ಲ ಬಂಕ್‌ಗಳಲ್ಲಿ ಸಿಎನ್‌ಜಿ ಸಿಗಲಿ
ವಾಹನಗಳು ಇಂಧನ ತುಂಬಿಸಿಕೊಳ್ಳಲು ವಾಹನಗಳು ಒಂದೇ ಕಡೆ ಸೇರುವುದರಿಂದ ರಸ್ತೆಯಲ್ಲಿ ಇತರ ವಾಹನಗಳಿಗೆ, ಸಾರ್ವಜನಿಕರಿಗೆ ಬಹಳಷ್ಟು ತೊಂದರೆಯಾಗುತ್ತಿದೆ. ರಿಕ್ಷಾ ಚಾಲಕರು ಬಾಡಿಗೆಯನ್ನು ಬಿಟ್ಟು ಇಂಧನಕ್ಕಾಗಿ ಕಾಯುವ ಆನಿವಾರ್ಯತೆ ಉಂಟಾಗಿದೆ. ಸರಕಾರ ಜಿಲ್ಲೆಯ ಪ್ರತಿಯೊಂದು ಬಂಕ್‌ಗಳಲ್ಲಿ ಸಿಎನ್‌ಜಿ ಇಂಧನ ಕೇಂದ್ರವನ್ನು ಸ್ಥಾಪನೆ ಮಾಡಬೇಕಾಗಿದೆ.
-ಪ್ರಕಾಶ್‌ ಎಂ. ಕಲ್ಮಾಡಿ, ಅಧ್ಯಕ್ಷರು, ಮಲ್ಪೆ ಅಟೋ ರಿಕ್ಷಾ ಚಾಲಕ ಮಾಲಕರ ಸಂಘ

ಟಾಪ್ ನ್ಯೂಸ್

Kylian Mbappe: ಅತ್ಯಾಚಾರ ಆರೋಪ ಸುಳ್ಳು

Kylian Mbappe: ಅತ್ಯಾಚಾರ ಆರೋಪ ಸುಳ್ಳು

Baba Siddique Case: ಯೂಟ್ಯೂಬ್‌ ನೋಡಿ ಗನ್‌ ಬಳಕೆ ಕಲಿತಿದ್ದ ಹಂತಕರು!

Baba Siddique Case: ಯೂಟ್ಯೂಬ್‌ ನೋಡಿ ಗನ್‌ ಬಳಕೆ ಕಲಿತಿದ್ದ ಹಂತಕರು!

Flight: ಬೆಳಗಾವಿ – ಬೆಂಗಳೂರು ವಿಮಾನ ರದ್ದು ಮಾಡದಂತೆ ಕೇಂದ್ರ ಸಚಿವರಿಗೆ ಶೆಟ್ಟರ್ ಮನವಿ

Flight: ಬೆಳಗಾವಿ – ಬೆಂಗಳೂರು ವಿಮಾನ ರದ್ದು ಮಾಡದಂತೆ ಕೇಂದ್ರ ಸಚಿವರಿಗೆ ಶೆಟ್ಟರ್ ಮನವಿ

Mangaluru: ಟ್ರೇಡಿಂಗ್‌ನಲ್ಲಿ ಲಾಭ ಗಳಿಸುವ ಆಸೆಯಿಂದ 1.12 ಕೋಟಿ ರೂ. ಕಳೆದುಕೊಂಡ ವ್ಯಕ್ತಿ!

Mangaluru: ಟ್ರೇಡಿಂಗ್‌ನಲ್ಲಿ ಲಾಭ ಗಳಿಸುವ ಆಸೆಯಿಂದ 1.12 ಕೋಟಿ ರೂ. ಕಳೆದುಕೊಂಡ ವ್ಯಕ್ತಿ!

Thief

Chamarajnagar: ಪೊಲೀಸ್ ಪೇದೆಯ ಮನೆಯಲ್ಲೇ ಕೈ ಚಳಕ ತೋರಿದ ಚಾಲಾಕಿ ಕಳ್ಳರು!

ಕಚ್ಚಿದ ಕನ್ನಡಿ ಹಾವನ್ನೇ ಕೈಯಲ್ಲಿ ಹಿಡಿದು ಆಸ್ಪತ್ರೆಗೆ ಬಂದ ವ್ಯಕ್ತಿ… ಕಂಗಾಲಾದ ವೈದ್ಯರು

ಕಚ್ಚಿದ ಕನ್ನಡಿ ಹಾವನ್ನೇ ಕೈಯಲ್ಲಿ ಹಿಡಿದು ಆಸ್ಪತ್ರೆಗೆ ಬಂದ ವ್ಯಕ್ತಿ… ಕಂಗಾಲಾದ ವೈದ್ಯರು

DVG

Davanagere: ಗಣೇಶ ಮೆರವಣಿಗೆ ವೇಳೆ ಕಲ್ಲು ತೂರಾಟ ಪ್ರಕರಣ​: 48 ಮಂದಿ ಆರೋಪಿಗಳಿಗೆ ಜಾಮೀನು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

sand 1

Padubidri: ಟಿಪ್ಪರ್‌ನಲ್ಲಿ ಅನಧಿಕೃತವಾಗಿ ಸಾಗಿಸುತ್ತಿದ್ದ ಮರಳು ವಶ

10-udupi

Udupi: ಅಕ್ರಮ ಪಟಾಕಿ ದಾಸ್ತಾನು; ಪೊಲೀಸ್‌ ವಶಕ್ಕೆ

mgm

Manipal: ಎಂಜಿಎಂ ಚಿಟ್ಟೆ ಪಾರ್ಕ್‌ನಲ್ಲಿ ಬಣ್ಣ ಬಣ್ಣದ ಚಿಟ್ಟೆಗಳು

10

ಅ.22ರಂದು ಉಡುಪಿ ಪತ್ರಕರ್ತರ ಸಂಘದ ವಾರ್ಷಿಕ ಕ್ರೀಡಾಕೂಟ ‘ರಜತ ಕ್ರೀಡಾ ಸಂಭ್ರಮ’

udupi-BJP

Council By Poll: ಕಾಂಗ್ರೆಸ್‌ ಸರಕಾರದಿಂದ ಕರಾವಳಿ ಜಿಲ್ಲೆಗಳ ಅವಗಣನೆ: ಬಿ.ವೈ.ವಿಜಯೇಂದ್ರ

MUST WATCH

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

udayavani youtube

ಮಕ್ಕಳ ಸ್ಕ್ರೀನ್ ಟೈಮಿಂಗ್ ಕುರಿತು ಎಚ್ಚರಿಕೆ ಅತ್ಯವಶ್ಯಕ.. ಇಲ್ಲಿದೆ ಅಗತ್ಯ ಮಾಹಿತಿ

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

ಹೊಸ ಸೇರ್ಪಡೆ

Kylian Mbappe: ಅತ್ಯಾಚಾರ ಆರೋಪ ಸುಳ್ಳು

Kylian Mbappe: ಅತ್ಯಾಚಾರ ಆರೋಪ ಸುಳ್ಳು

sand 1

Padubidri: ಟಿಪ್ಪರ್‌ನಲ್ಲಿ ಅನಧಿಕೃತವಾಗಿ ಸಾಗಿಸುತ್ತಿದ್ದ ಮರಳು ವಶ

3

Uppala: ಲಾರಿ ತಡೆದು ನಿಲ್ಲಿಸಿ, ಚಾಲಕನಿಗೆ ಬೆದರಿಸಿ 1.64 ಲಕ್ಷ ರೂ. ದರೋಡೆ

Baba Siddique Case: ಯೂಟ್ಯೂಬ್‌ ನೋಡಿ ಗನ್‌ ಬಳಕೆ ಕಲಿತಿದ್ದ ಹಂತಕರು!

Baba Siddique Case: ಯೂಟ್ಯೂಬ್‌ ನೋಡಿ ಗನ್‌ ಬಳಕೆ ಕಲಿತಿದ್ದ ಹಂತಕರು!

2

Sullia: ಅತ್ತಿಗೆಯ ಮೇಲೆ ಪೆಟ್ರೋಲ್‌ ಸುರಿದು ಬೆಂಕಿ; ಆರೋಪಿ ವಶಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.