Baba Siddique Case: ಯೂಟ್ಯೂಬ್ ನೋಡಿ ಗನ್ ಬಳಕೆ ಕಲಿತಿದ್ದ ಹಂತಕರು!
Team Udayavani, Oct 16, 2024, 9:19 PM IST
ಮುಂಬೈ: ಎನ್‌ಸಿಪಿ ನಾಯಕ ಬಾಬಾ ಸಿದ್ದಿಕಿ ಕೊಲೆ ಆರೋಪಿಗಳು ಯೂಟ್ಯೂಬ್ ನೋಡಿ ಗನ್ ಬಳಕೆ ಕಲಿತಿದ್ದರು ಎಂಬುದು ಮುಂಬೈ ಪೊಲೀಸರ ತನಿಖೆಯಿಂದ ತಿಳಿದುಬಂದಿದೆ.
ಪ್ರಮುಖ ಆರೋಪಿ ಶಿವಕುಮಾರ್ ಗೌತಮ್ ಉತ್ತರಪ್ರದೇಶದಲ್ಲಿ ಹಲವು ಶುಭಸಂದರ್ಭಗಳಲ್ಲಿ ಗುಂಡು ಹಾರಿಸುವುದನ್ನು ನೋಡಿ ಗನ್‌ಗಳ ನಿರ್ವಹಣೆ ಕಲಿತಿದ್ದ. ಪ್ರಮುಖ ಶೂಟರ್ ಆಗಿದ್ದ ಗೌತಮ್, ಮತ್ತಿಬ್ಬರು ಆರೋಪಿಗಳಾದ ಗುರ್ಮೈಲ್ ಸಿಂಗ್ ಹಾಗೂ ಧರ್ಮರಾಜ್ ಕಶ್ಯಪ್‌ಗೆ ಗನ್ ಬಳಸಲು ತರಬೇತಿ ನೀಡುತ್ತಿದ್ದ. ಇದಕ್ಕಾಗಿ ಆರೋಪಿಗಳು 20 ದಿನ ಗಳ ಹಿಂದಷ್ಟೇ ಕುರ್ಲಾದ ಬಳಿ ಮನೆಯೊಂದನ್ನು ಬಾಡಿಗೆಗೆ ಪಡೆದಿದ್ದರು.
ಇದಲ್ಲದೇ ಗನ್‌ಗಳನ್ನು ಲೋಡ್ ಹಾಗೂ ಅನ್‌ಲೋಡ್ ಮಾಡುವುದನ್ನು ಅವರು ಯೂಟ್ಯೂಬ್ ನೋಡಿ ಸುಮಾರು 4 ವಾರಗಳು ಅಭ್ಯಾಸ ಮಾಡಿದ್ದರು. ಪಂಜಾಬ್ ನಿಂದ ಇವರಿಗೆ 9 ಎಂಎಂ ವಿದೇಶಿ ನಿರ್ಮಿತ ಪಿಸ್ತೂಲನ್ನು ಕಳುಹಿಸಿಕೊಡಲಾಗಿತ್ತು. ಮನೆ ಶೋಧದ ವೇಳೆ ಪೊಲೀಸರಿಗೆ ಅಲ್ಪಪ್ರಮಾಣದ ಗಾಂಜಾ ದೊರೆತಿದೆ. ಸಿದ್ದಿಕಿ ಪುತ್ರ ಝೀಶಾನ್ ಕಚೇರಿ ಬಳಿ ಆರೋಪಿಗಳು ಪ್ರತಿ ರಾತ್ರಿ ಬೇಹುಗಾರಿಕೆ ನಡೆಸಿ, ಯೋಜನೆ ರೂಪಿಸಿದ್ದರು.
ಕೊಲೆಗೆ ಯೋಜನೆ ರೂಪಿಸಿದ ಶುಭಂ ಲೊಂಕಾರ್ ಎಂಬಾತ ಈ ಹಿಂದೆ ನಟ ಸಲ್ಮಾನ್ ಖಾನ್ ಮನೆ ಬಳಿಯ ಗುಂಡಿನ ದಾಳಿ ಪ್ರಕರಣದಲ್ಲಿ ಭಾಗಿಯಾಗಿದ್ದ. ಈ ಎಲ್ಲ ಆರೋಪಿಗಳು ಸಾಕ್ಷ್ಯ ಉಳಿಯಬಾರದೆಂಬ ಕಾರಣಕ್ಕೆ ಇನ್‌ಸ್ಟಾಗ್ರಾಂ ಹಾಗೂ ಸ್ನ್ಯಾಪ್‌ಚಾಟ್ ಮೂಲಕ ಸಂಪರ್ಕ ಮಾಡುತ್ತಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
ಇಸ್ಪೀಟ್ ಅಡ್ಡೆಯ ಮೇಲೆ ಡಿವೈಎಸ್ಪಿ ದಾಳಿ; ಮಾಜಿ ಅಧ್ಯಕ್ಷ-ಹಾಲಿ ಉಪಾಧ್ಯಕ್ಷ ಸೇರಿ 8 ಜನರ ಬಂಧನ
Anthyarambha: ನ.28ರಂದು ಕೊಂಕಣಿ ಚಲನಚಿತ್ರ “ಅಂತ್ಯಾರಂಭ’ ಪ್ರದರ್ಶನ
Belagavi Session: ರಾಜಕೀಯ ಕಿತ್ತಾಟ ಏನಿದ್ದರೂ ಸದನದ ಹೊರಗೆ ನಡೆಸಿ: ಯು.ಟಿ. ಖಾದರ್
Bharamasagara: 3 ತಿಂಗಳ ಹಿಂದೆ ಮದುವೆಯಾಗಿ ಊರಿಗೆ ವಾಪಸ್ ಆದ ಯುವಕನ ಹತ್ಯೆ
Kiccha Sudeepa: ಕ್ರಿಸ್ಮಸ್ ಗೆ ಬರುತ್ತಿದೆ ʼಮ್ಯಾಕ್ಸ್ʼ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.