Actress: ಖ್ಯಾತ ನಟಿಯ ಮೇಲೆ ಸಾಮೂಹಿಕ ಅ*ತ್ಯಾಚಾರ.. ನಿರ್ದೇಶಕರಿಂದ ಶಾಕಿಂಗ್ ಸಂಗತಿ ರಿವೀಲ್

Team Udayavani, Oct 17, 2024, 5:21 PM IST

12

ಕೊಚ್ಚಿ: ಮಾಲಿವುಡ್‌ (Mollywood) ಸಿನಿಮಾರಂಗದದಲ್ಲಿ ಇತ್ತೀಚೆಗೆ ಹೇಮಾ ಸಮಿತಿ ವರದಿ (Hema Committee Report) ಸಲ್ಲಿಕೆ ಬಳಿಕ ಖ್ಯಾತ ಕಲಾವಿದರ ಮೇಲೆ ಲೈಂಗಿಕ ಕಿರುಕುಳ ಹಾಗೂ ಅತ್ಯಾಚಾರದ ಆರೋಪ ಕೇಳಿ ಬಂದಿದೆ. ʼಮೀಟೂʼ ಪ್ರಕರಣ ಸಿನಿಮಾರಂಗದಲ್ಲಿ ಚರ್ಚೆ ಆಗುತ್ತಿರುವ ಬೆನ್ನಲ್ಲೇ  ಹಿರಿಯ ನಿರ್ದೇಶಕರೊಬ್ಬರು ಶಾಕಿಂಗ್‌ ಸಂಗತಿಯೊಂದನ್ನು ಬಿಚ್ಚಿಟ್ಟಿದ್ದಾರೆ.

ಮಾಲಿವುಡ್ ನಿರ್ದೇಶಕ ಅಲೆಪ್ಪಿ ಅಶ್ರಫ್ (Filmmaker Alleppey Ashraf)‌ ತಮ್ಮ ಯೂಟ್ಯೂಬ್‌ ಚಾನೆಲ್‌ನಲ್ಲಿ 80ರ ದಶಕದಲ್ಲಿ ಖ್ಯಾತ ನಟಿಯೊಬ್ಬರ ಜತೆ ನಡೆದ ಕರಾಳ ಸಂಗತಿ ಬಗ್ಗೆ ಮಾತನಾಡಿದ್ದಾರೆ.

“1980ರ ದಶಕದ (1982ರಲ್ಲಿ) ಆರಂಭದಲ್ಲಿ ತಾರಾ ಆರ್ಟ್ಸ್ ವಿಜಯನ್ ಪ್ರಾಯೋಜಕತ್ವದಲ್ಲಿ ನಾನು, ಬೇಬಿ ಶಾಲಿನಿ ಮತ್ತು ರೋಹಿಣಿ ಅವರನ್ನು ಒಳಗೊಂಡ ತಂಡ ಅಮೆರಿಕಾಕ್ಕೆ ಹೋಗಿ ಮಿಮಿಕ್ರಿ ಕಾರ್ಯಕ್ರಮವನ್ನು ನೀಡಿದ್ದೆವು. ತಾರಾ ಆರ್ಟ್ಸ್ ವಿಜಯನ್ ಪ್ರತಿ ವರ್ಷ ಅಮೆರಿಕಾದಲ್ಲಿ ಈ ರೀತಿಯ ಕಾರ್ಯಕ್ರಮವನ್ನು ಆಯೋಜನೆ ಮಾಡುತ್ತದೆ. ಆ ವರ್ಷ ನಮ್ಮನ್ನು ಕರೆಸಲಾಗಿತ್ತು. ಕಾರ್ಯಕ್ರಮ ಯಶಸ್ವಿಯಾಗಿ ಸಾಗಿತ್ತು. ಇದೇ ಸಂದರ್ಭದಲ್ಲಿ ಅಲ್ಲೊಂದು ಕರಾಳ ಘಟನೆ ನಡೆದಿತ್ತು” ಎಂದು ಅಶ್ರಫ್‌ ಹಳೆಯ ಘಟನೆ ಬಗ್ಗೆ ಹೇಳಿದ್ದಾರೆ.

ಇದನ್ನೂ ಓದಿ: Somy Ali: ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ನಂಬರ್‌ ಕೇಳಿದ ಸಲ್ಮಾನ್‌ ಖಾನ್ ಮಾಜಿ ಗೆಳತಿ

“ಆಕೆ ಮಾಲಿವುಡ್‌ ಸಿನಿಮಾರಂಗದ ಖ್ಯಾತ ನಟಿ. ನಟ ನಝೀರ್‌ ಜತೆಗಿನ ಸಿನಿಮಾದಲ್ಲಿ ಸೇರಿದಂತೆ ಇತರೆ ಭಾಷೆಯ ಸಿನಿಮಾದಲ್ಲೂ ನಟಿಸಿ ಜನಪ್ರಿಯತೆಯನ್ನು ಗಳಿಸಿದ್ದ ನಟಿ. ಆ ಕಾಲದಲ್ಲಿ ಆಕೆಯ ಅಭಿನಯಕ್ಕೆ ಅಪಾರ ಅಭಿಮಾನಿಗಳಿದ್ದರು. ವೃತ್ತಿ ಬದುಕು ಉತ್ತುಂಗದಲ್ಲಿದ್ದಾಗಲೇ ಆಕೆಯ ಜೀವನದಲ್ಲಿ ಒಂದು ಕರಾಳ ಘಟನೆ ನಡೆಯಿತು” ಎಂದು ಅಶ್ರಫ್‌ ಹೇಳಿದ್ದಾರೆ.

ಸಿನಿಮಾ ನೆಪದಲ್ಲಿ ಖ್ಯಾತ ನಟಿ ಮೇಲೆ ಸಾಮೂಹಿಕ ಅತ್ಯಾಚಾರ:

ಅದೊಂದು ದಿನ ಆಕೆಗೆ ಅಮೆರಿಕಾದಿಂದ ಕರೆಯೊಂದು ಬರುತ್ತದೆ. ನೀವು ನಮ್ಮ ಸಿನಿಮಾದಲ್ಲಿ ನಟಿಸಬೇಕು. ಆದಷ್ಟು ಬೇಗ ನ್ಯೂಯಾರ್ಕ್‌ಗೆ ಬನ್ನಿ ಎಂದು ಕರೆ ಮಾಡಿದ ವ್ಯಕ್ತಿ ತಿಳಿಸುತ್ತಾರೆ. ಆ ಸಮಯದಲ್ಲಿ ನಟಿ ಇದು ತನಗೆ ಸಿಕ್ಕ ದೊಡ್ಡ ಅವಕಾಶವೆಂದು ಕೂಡಲೇ ಅಮೆರಿಕಾಕ್ಕೆ ತೆರಳುತ್ತಾಳೆ. ಅಲ್ಲಿಗೆ ಹೋದ ಬಳಿಕ ನಟಿಗೆ ಏರ್‌ಪೋರ್ಟ್‌ ನಲ್ಲಿ ಅದ್ಧೂರಿ ಸ್ವಾಗತ ಸಿಗುತ್ತದೆ. ಆ ಬಳಿಕ ಆಕೆಯ ವಿಶ್ರಾಂತಿಗೆ ಒಂದು ಅಪಾರ್ಟ್‌ಮೆಂಟ್‌ ನೀಡಲಾಗುತ್ತದೆ. ಅದೇ ದಿನ ಸಂಜೆ ಇಬ್ಬರು ಅಪರಿಚಿತರು ನಟಿಯ ಅಪಾರ್ಟ್‌ ಮೆಂಟ್‌ ಬರುತ್ತಾರೆ. ಇದರಿಂದ ನಟಿ ಇದ್ದಕ್ಕಿದ್ದಂತೆ ಗಾಬರಿಗೊಳ್ಳುತ್ತಾಳೆ. ಮನೆಗೆ ಬಂದ ಇಬ್ಬರು ನಟಿಯ ಮೇಲೆ ಸಾಮೂಹಿವಾಗಿ ಅತ್ಯಾಚಾರವೆಸಗುತ್ತಾರೆ. ಅವರು ಅಂಡರ್‌ ವರ್ಲ್ಡ್‌ ಮಾಫಿಯಾ ಗ್ಯಾಂಗ್‌ ವೊಂದರ ಸದಸ್ಯರಾಗಿರುತ್ತಾರೆ. ನಟಿಗೆ ತಾನು ಮೋಸದ ಜಾಲದಲ್ಲಿ ಸಿಲುಕಿದ್ದೇನೆ ಎನ್ನುವ ಅರಿವಾಗುತ್ತದೆ. ನಟಿಯನ್ನು ಕೋಣೆಯಲ್ಲಿ ಬಂಧಿಸಿ ನಿರಂತರವಾಗಿ ಕೆಲ ದಿನಗಳ ಅತ್ಯಾಚಾರವೆಸಯಲಾಗುತ್ತದೆ” ಎಂದು ಅಶ್ರಫ್‌ ತಮ್ಮ ಚಾನೆಲ್‌ ನಲ್ಲಿ ಕರಾಳ ಸಂಗತಿಯನ್ನು ಬಯಲು ಮಾಡಿದ್ದಾರೆ.

 ದುಷ್ಟರ ಕೈಯಿಂದ ಬದುಕಿ ಬಂದದ್ದೇಗೆ ಆ ನಟಿ?:

ಅತ್ಯಾಚಾರಿಗಳ ಕೈಯಲ್ಲಿ ಸಿಲುಕಿಕೊಂಡಿದ್ದ ನಟಿ ಅದೊಂದು ದಿನ ಕಿಡಿಗೇಡಿಗಳು ಇಲ್ಲದಿದ್ದಾಗ ಅಮೆರಿಕಾದಲ್ಲಿದ್ದ ಕೇರಳದ ತಾರಾ ಆರ್ಟ್ಸ್‌ನ ಮುಖ್ಯಸ್ಥ ವಿಜಯಟ್ಟನ್‌ ಅವರಿಗೆ ಕರೆ ಮಾಡಿ ಆದ ಸಂಗತಿಯನ್ನು ಹೇಳುತ್ತಾರೆ. ಆದರೆ ವಿಜಯಟ್ಟನ್‌ ಗೆ ನಟಿ ಇರುವ ಅಪಾರ್ಟ್‌ಮೆಂಟ್‌ ಹುಡುಕಲು ಕಷ್ಟವಾಗುತ್ತದೆ. ಆಗ ನಟಿ ಕಿಟಕಿಯ ಹೊರಗಡೆ ನೋಡಿ ಬಿಲ್ಡಿಂಗ್‌ ಹೊರಗಿದ್ದ ಕೆಲ ಬೋರ್ಡ್‌ಗಳ ಹೆಸರು ಹೇಳಿ ವಿಳಾಸವನ್ನು ಹೇಳುತ್ತಾರೆ. ಇದಾದ ಬಳಿಕ ಕಾರಿನಲ್ಲಿ ಸುರಕ್ಷಿತವಾಗಿ ನಟಿಯನ್ನು ಕರೆ ತರುತ್ತಾರೆ. ನೇರವಾಗಿ ಏರ್‌ ಪೋರ್ಟ್‌ಗೆ ಬಿಟ್ಟು ರಿಟರ್ನ್‌ ಟಿಕೆಟ್‌ ತೆಗೆದು ಆಕೆಯನ್ನು ಭಾರತಕ್ಕೆ ಕಳುಹಿಸಿ ಕೊಟ್ಟರು” ಎಂದು ಅಶ್ರಫ್‌ ಹೇಳಿದ್ದಾರೆ.

“ಈ ಘಟನೆ ನಂಬಲಸಾಧ್ಯ ಎನಿಸಿದರೂ ಇದು ಸತ್ಯ. ಹೊಸ ಪೀಳಿಗೆಗೆ ಇದು ಪಾಠವಾಗಬೇಕು ಎಂಬ ಕಾರಣದಿಂದ ಈ ವಿವರಗಳನ್ನು ಈಗ ಬಹಿರಂಗಪಡಿಸುತ್ತಿದ್ದೇನೆ” ಎಂದು ಅವರು ಹೇಳಿದ್ದಾರೆ.

ಟಾಪ್ ನ್ಯೂಸ್

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ

Expensive wedding: ಭಾರತದ ಅದ್ಧೂರಿ ಮದುವೆ ಮೇಲೆ ಈಗ ಐಟಿ ಕಣ್ಣು!

Expensive wedding: ಭಾರತದ ಅದ್ಧೂರಿ ಮದುವೆ ಮೇಲೆ ಈಗ ಐಟಿ ಕಣ್ಣು!

T20 Asia Cup: ಬಾಂಗ್ಲಾ ವಿರುದ್ದ ಅಂಡರ್‌ 19 ವನಿತಾ ಏಷ್ಯಾಕಪ್‌ ಚಾಂಪಿಯನ್‌ ಆದ ಭಾರತ

T20 Asia Cup: ಬಾಂಗ್ಲಾ ವಿರುದ್ದ ಅಂಡರ್‌ 19 ವನಿತಾ ಏಷ್ಯಾಕಪ್‌ ಚಾಂಪಿಯನ್‌ ಆದ ಭಾರತ

BBK11: ವೀಕ್ಷಕರಿಗೆ ಸರ್ಪ್ರೈಸ್;‌ ಮತ್ತೆ‌ ಬಿಗ್ ಬಾಸ್‌ಗೆ ಗೋಲ್ಡ್‌ ಸುರೇಶ್

BBK11: ವೀಕ್ಷಕರಿಗೆ ಸರ್ಪ್ರೈಸ್;‌ ಮತ್ತೆ‌ ಬಿಗ್ ಬಾಸ್‌ಗೆ ಗೋಲ್ಡ್‌ ಸುರೇಶ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Mollywood: ಸೂಪರ್‌ ಸ್ಟಾರ್ ಮೋಹನ್‌ ಲಾಲ್‌ಗೆ ‘ಆವೇಶಮ್‌ʼ ನಿರ್ದೇಶಕ ಆ್ಯಕ್ಷನ್ ಕಟ್

Mollywood: ಸೂಪರ್‌ ಸ್ಟಾರ್ ಮೋಹನ್‌ ಲಾಲ್‌ಗೆ ‘ಆವೇಶಮ್‌ʼ ನಿರ್ದೇಶಕ ಆ್ಯಕ್ಷನ್ ಕಟ್

Meena Ganesh: ಮಲಯಾಳಂನ ಹಿರಿಯ ನಟಿ ಮೀನಾ ಗಣೇಶ್ ನಿಧನ

Meena Ganesh: ಮಲಯಾಳಂನ ಹಿರಿಯ ನಟಿ ಮೀನಾ ಗಣೇಶ್ ನಿಧನ

Telugu actor: ಸಹ ನಟಿಗೆ ಲೈಂಗಿಕ ಕಿರುಕುಳ; ಖ್ಯಾತ ನಟನ ಬಂಧನ

Telugu actor: ಸಹ ನಟಿಗೆ ಲೈಂಗಿಕ ಕಿರುಕುಳ; ಖ್ಯಾತ ನಟನ ಬಂಧನ

Mogilaiah: ಪದ್ಮಶ್ರೀ ಪುರಸ್ಕೃತ, ಜಾನಪದ ಕಲಾವಿದ ಬಳಗಂ ಚಿತ್ರ ಖ್ಯಾತಿಯ ಮೊಗಿಲಯ್ಯ ನಿಧನ

Mogilaiah: ಪದ್ಮಶ್ರೀ ಪುರಸ್ಕೃತ, ಜಾನಪದ ಕಲಾವಿದ ಬಳಗಂ ಚಿತ್ರ ಖ್ಯಾತಿಯ ಮೊಗಿಲಯ್ಯ ನಿಧನ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ

Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Siddaramaiah

Kalaburagi: ವರದಿ ನಂತರ ತೊಗರಿ ಹಾನಿಗೆ ಪರಿಹಾರ ನಿರ್ಧಾರ: ಸಿಎಂ ಸಿದ್ದರಾಮಯ್ಯ

ಕೊಡುವುದರಿಂದ ಕೊರತೆಯಾಗದು!

ಕೊಡುವುದರಿಂದ ಕೊರತೆಯಾಗದು!

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.