Kulai: ಬೃಹತ್ ಟ್ರಕ್ ಓಡಾಟದಿಂದ ರಸ್ತೆಗೆ ಹಾನಿ
ಕುಳಾಯಿ ದಕ್ಕೆ ಕಾಮಗಾರಿ: ನಾಗರಿಕರಿಂದ ಟ್ರಕ್‌ಗೆ ದಿಗ್ಬಂಧನದ ಎಚ್ಚರಿಕೆ
Team Udayavani, Oct 17, 2024, 4:17 PM IST
ಕುಳಾಯಿ: ಕುಳಾಯಿ ಬಳಿ ಮೀನುಗಾರಿಕೆ ದಕ್ಕೆ ನಿರ್ಮಾಣವಾಗುತ್ತಿದ್ದು, ನೂರಾರು ಟ್ರಕ್‌ಗಳ ಓಡಾಟದಿಂದ ಸ್ಥಳೀಯ ರಸ್ತೆಯ ಡಾಮರು ಎದ್ದು ಹೋಗಿ ರಸ್ತೆಯ ನಡುವೆ ಆಳವಾದ ಹೊಂಡಗಳು ಉಂಟಾದರೆ, ಭಾರೀ ಧೂಳಿನಿಂದ ಸ್ಥಳೀಯ ಗ್ರಾಮ ಸ್ಥರಿಗೆ ಸಮಸ್ಯೆಯಾಗುತ್ತಿದೆ.
ಈ ಬಾರಿ ಮಳೆಗಾಲದ ಸಂದರ್ಭ ದಕ್ಕೆಯ ಬ್ರೇಕ್ ವಾಟರ್ ಕಾಮಗಾರಿ ಯಲ್ಲಿ ಲೋಪವುಂಟಾಗಿ ಮೀನು ಗಾರಿಕೆ ಸಚಿವರು ಕಾಮಗಾರಿ ಸ್ಥಗಿತಕ್ಕೆ ಸೂಚನೆ ನೀಡಿದ್ದರು. ಇದೀಗ ಮತ್ತೆ ಕಾಮಗಾರಿ ಆರಂಭವಾಗಿದ್ದು ನಿತ್ಯ ಓಡಾಟ ನಡೆ ಸುವ ಗ್ರಾಮಸ್ಥರಿಗೆ ಬೃಹತ್ ಟ್ರಕ್‌ಗಳ ಓಡಾಟದಿಂದ ಜೀವ ಭಯ ಆವರಿಸಿದೆ.
ಇಲ್ಲಿನ ರಸ್ತೆ ಅಗಲ ಕಿರಿದಾಗಿ ರುವುದರಿಂದ ಶಾಲೆಗೆ ಹೋಗುವ ಆಟೋರಿಕ್ಷಾ ಬರುವುದಕ್ಕೂ ಹಿಂದೆ ಮುಂದೆ ನೋಡುವಂತಾಗಿದೆ. ಪಾದಚರಿ ಗಳಿಗೂ ನಡೆದಾಡಲೂ ಸಾಧ್ಯವಿಲ್ಲದಂತಾಗಿದೆ.
ಪರ್ಯಾಯ ರಸ್ತೆ ಅಗತ್ಯ
ಸರ್ವ ಋತು ಬಂದರು ಇದಾಗಿರು ವುದರಿಂದ ಭವಿಷ್ಯದಲ್ಲಿ ಸಾವಿರಾರು ಲಾರಿ, ಟೆಂಪೋ, ಗೂಡ್ಸ್ ವಾಹನ ಬರಲಿರುವುದರಿಂದ ಪರ್ಯಾಯ ರಸ್ತೆಯ ಅಗತ್ಯವಿದೆ. ಹೆದ್ದಾರಿಯಿಂದ ನೇರ ಸಂಪರ್ಕ ಕಲ್ಪಿಸುವ ದ್ವಿಪಥ ರಸ್ತೆ ಮಾಡುವ ಕುರಿತಂತೆ ಇದುವರೆಗೂ ಯಾವುದೇ ಪ್ರಗತಿ ಕಂಡಿಲ್ಲ.
ಹೀಗಾಗಿ ಸ್ಥಳೀಯ ಚಿತ್ರಾಪುರ ಕುಳಾಯಿ ಮೀನುಗಾರಿಕೆ ರಸ್ತಯನ್ನೇ ಬಳಕೆ ಮಾಡಿ ಕೊಳ್ಳಲಾಗುತ್ತಿದ್ದು, ಇದು ಘನಭಾರದ ವಾಹನ ಓಡಾಟದ ಸಾಮರ್ಥ್ಯ ಹೊಂದಿಲ್ಲ. ಇದರಿಂದ ಡಾಮರು ಎದ್ದು ಹೋಗಿ ಹೊಂಡಗಳು ಸೃಷ್ಟಿಯಾಗಿವೆ.
ಗ್ರಾಮಸ್ಥರಿಂದ ಪ್ರತಿಭಟನೆ ಎಚ್ಚರಿಕೆ
ಕುಳಾಯಿ ಬಳಿ ನಿರ್ಮಾಣವಾಗುತ್ತಿರುವ ದಕ್ಕೆಯ ಬ್ರೇಕ್ ವಾಟರ್‌ಗೆ ಕಲ್ಲು ಹಾಕುವ ಪ್ರಕ್ರಿಯೆ ನಡೆಯುತ್ತಿದೆ. ಬೃಹತ್ ಲಾರಿಗಳ ಓಡಾಟದಿಂದ ನಮ್ಮ ಗ್ರಾಮದ ರಸ್ತೆಗಳು ಹಾನಿಗೊಂಡಿವೆ. ಶಾಲಾ ಮಕ್ಕಳ, ಜನರ ಓಡಾಟಕ್ಕೆ ಅಡಚಣೆಯಾಗುತ್ತಿದೆ. ರಸ್ತೆಯನ್ನು ದುರಸ್ತಿ ಮಾಡುತ್ತಿಲ್ಲ. ಗ್ರಾಮಸ್ಥರು ಸೇರಿ ರಸ್ತೆ ಬಂದ್ ಮಾಡಿ ಪ್ರತಿಭಟಿಸುತ್ತೇವೆ. ಇದಕ್ಕೆ ಅವಕಾಶ ನೀಡದಂತೆ ಸೂಕ್ತ ಕ್ರಮ ಜರಗಿಸಬೇಕು.
-ಮಾಧವ ಎಲ್. ಸುವರ್ಣ, ಅಧ್ಯಕ್ಷರು ಪಣಂಬೂರು ಮೊಗವೀರ ಮಹಾಸಭಾ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.