Congress: ಸಂವಿಧಾನ ವಿರೋಧಿ ಸಾವರ್ಕರ್‌ ಬಿಜೆಪಿ ಗುರು: ಸಿಎಂ ಸಿದ್ದರಾಮಯ್ಯ ಆಕ್ರೋಶ

ಕರ್ನಾಟಕ ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆಯಾಗಿ ಸೌಮ್ಯಾ ರೆಡ್ಡಿ ಪದಗ್ರಹಣ

Team Udayavani, Oct 18, 2024, 12:27 AM IST

ಸಂವಿಧಾನ ವಿರೋಧಿ ಸಾವರ್ಕರ್‌ ಬಿಜೆಪಿ ಗುರು: ಸಿಎಂ ಸಿದ್ದರಾಮಯ್ಯ ಆಕ್ರೋಶ

ಬೆಂಗಳೂರು: ಸಂವಿಧಾನ ಮಹಿಳೆಯರಿಗೆ ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ಶಕ್ತಿ ನೀಡುತ್ತದೆ. ಆದರೆ, ಆ ಸಂವಿಧಾನ ವಿರೋಧಿಸಿದ್ದ ಸಾವರ್ಕರ್‌ ಬಿಜೆಪಿಯ ಗುರುಗಳು. ಈ ವಾಸ್ತವವನ್ನು ರಾಜ್ಯದ ಪ್ರತಿ ಹೆಣ್ಣು ಮಕ್ಕಳಿಗೆ ಮನದಟ್ಟು ಮಾಡಿಸುವ ಕೆಲಸ ಮಹಿಳಾ ಕಾಂಗ್ರೆಸ್‌ನಿಂದ ಆಗಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಕೆಪಿಸಿಸಿ ಕಚೇರಿಯ ಭಾರತ್‌ ಜೋಡೋ ಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯ ಪ್ರದೇಶ ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆಯಾಗಿ ಮಾಜಿ ಶಾಸಕಿ ಸೌಮ್ಯಾ ರೆಡ್ಡಿ ಅಧಿಕಾರ ಸ್ವೀಕಾರ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿ ಮಾತನಾಡಿದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಮಾತನಾಡಿ, ಮಹಿಳಾ ಕಾಂಗ್ರೆಸ್‌ ಸದಸ್ಯತ್ವ ಅಭಿಯಾನ ಆರಂಭಿಸಲಾಗಿದೆ. ರಾಜ್ಯ, ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಅಧಿಕಾರ ನೀಡುತ್ತಿದ್ದೇವೆ. ಪ್ರತಿ ಮೂವರಲ್ಲಿ ಓರ್ವ ಮಹಿಳೆಗೆ ಅಧಿಕಾರ ನೀಡಲು ತೀರ್ಮಾನಿಸಲಾಗಿದೆ ಎಂದರು.

ಬಳಿಕ ನಿಕಟಪೂರ್ವ ಅಧ್ಯಕ್ಷೆ ಪುಷ್ಪಾ ಅಮರನಾಥ್‌ ಪಕ್ಷದ ಧ್ವಜ ನೀಡಿ ಅಧಿಕಾರ ಹಸ್ತಾಂತರಿಸಿದರು.

ಅಧಿಕಾರ ಸ್ವೀಕರಿಸಿ ಮಾತನಾಡಿದ ಸೌಮ್ಯಾ ರೆಡ್ಡಿ, ಮಹಿಳೆಯರಿಗೆ ರಾಜಕೀಯವಾಗಿ, ಸಾಮಾಜಿಕ ಮತ್ತು ಆರ್ಥಿಕವಾಗಿ ಸಿಗಬೇಕಾದ ಹಕ್ಕು ಸಿಕ್ಕಿಲ್ಲ. ಕಾಟಾಚಾರಕ್ಕೆ ಮಹಿಳಾ ಮೀಸಲಾತಿ ಮಸೂದೆಗೆ ಅನುಮೋದನೆ ನೀಡಲಾಗಿದೆ. ಮುಂಬರುವ ದಿನಗಳಲ್ಲಿ ನಿಮ್ಮೆಲ್ಲರ ಸಹಕಾರದಿಂದ ಮಹಿಳೆಯರ ಹಕ್ಕುಗಳ ರಕ್ಷಣೆ, ಪಕ್ಷ ಸಂಘಟನೆಗೆ ಶ್ರಮಿಸುವುದಾಗಿ ಹೇಳಿದರು.

ನಿಮ್ಮ ಮೇಲೂ ಕೇಸ್‌ ಹಾಕಿದ್ದಾರೆ!
ಸಿಬಿಐ, ಇ.ಡಿ.ಯವರನ್ನು ದುರ್ಬಳಕೆ ಮಾಡಿಕೊಂಡು ಯಾರ್ಯಾರ ಮೇಲೋ ಕೇಸ್‌ ಹಾಕಿದರು ಎಂದು ಸಿಎಂ ಸಿದ್ದರಾಮಯ್ಯ ಭಾಷಣ ವೇಳೆ ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಆಗ ನಿಮ್ಮ ಮೇಲೂ ಕೇಸ್‌ ಹಾಕಿದ್ದಾರೆ ಎಂದು ಸಭೆಯಲ್ಲಿ ಮಹಿಳೆಯೊಬ್ಬರು ಅಸಮಾಧಾನ ವ್ಯಕ್ತಪಡಿಸಿದ ಪ್ರಸಂಗ ನಡೆಯಿತು. ಆಗ ಪ್ರತಿಕ್ರಿಯಿಸಿದ ಸಿಎಂ, ನನ್ನ ಮೇಲೆ ಅಲ್ಲ ಎಂದು ಸಮಜಾಯಿಷಿ ನೀಡಿದರು.

ಟಾಪ್ ನ್ಯೂಸ್

bk-Hari

Jharkhand Election; ಹರಿಪ್ರಸಾದ್‌ ಎಐಸಿಸಿ ಸಮನ್ವಯಕಾರ

sensex-down

Share Market: ಸೆನ್ಸೆಕ್ಸ್‌ ಸತತ ಪತನ: 2 ತಿಂಗಳ ಕನಿಷ್ಠ ಕುಸಿತ ದಾಖಲಿಸಿದ ಷೇರುಪೇಟೆ

rathan-tata

Mumbai: ಅರಬಿ ಸಮುದ್ರದಲ್ಲಿ ರತನ್‌ ಟಾಟಾ ಚಿತಾ ಭಸ್ಮ ವಿಸರ್ಜನೆ

Salmana

Bollywood Actor: ಸಲ್ಮಾನ್‌ ಹತ್ಯೆಗೆ 25 ಲಕ್ಷ ಸುಪಾರಿ ಕೊಟ್ಟ ಬಿಷ್ಣೋಯ್‌: ಪೊಲೀಸ್‌

Priyanka-VA

By Poll: ಪ್ರಿಯಾಂಕಾ ವಾದ್ರಾ ವಿರುದ್ಧ ವಯನಾಡಿನಲ್ಲಿ ಸಿಪಿಐ ಅಭ್ಯರ್ಥಿ ಕಣಕ್ಕೆ

supreme-Court

Citizenship: ವಲಸಿಗರಿಗೆ ಪೌರತ್ವ ನೀಡುವ ಮಾನ್ಯತೆ ಎತ್ತಿಹಿಡಿದ ಸುಪ್ರೀಂಕೋರ್ಟ್‌

Udupi: ಗೀತಾರ್ಥ ಚಿಂತನೆ-67: ಅರ್ಜುನನ ಅಹಂ ನಾಶಕ್ಕೆ ಕೃಷ್ಣತಂತ್ರ

Udupi: ಗೀತಾರ್ಥ ಚಿಂತನೆ-67: ಅರ್ಜುನನ ಅಹಂ ನಾಶಕ್ಕೆ ಕೃಷ್ಣತಂತ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

HMT, KIOCL: ಚರ್ಚೆಗೆ ಬನ್ನಿ: ಸಚಿವ ಎಚ್‌.ಡಿ. ಕುಮಾರಸ್ವಾಮಿ

HMT, KIOCL: ಚರ್ಚೆಗೆ ಬನ್ನಿ: ಸಚಿವ ಎಚ್‌.ಡಿ. ಕುಮಾರಸ್ವಾಮಿ

BY Election: ಶಿಗ್ಗಾವಿ ಕ್ಷೇತ್ರ ಗೆಲುವಿಗೆ ಪ್ರಯತ್ನ: ಬಸವರಾಜ ಬೊಮ್ಮಾಯಿ

BY Election: ಶಿಗ್ಗಾವಿ ಕ್ಷೇತ್ರ ಗೆಲುವಿಗೆ ಪ್ರಯತ್ನ: ಬಸವರಾಜ ಬೊಮ್ಮಾಯಿ

SIddaramaih 2

Valmiki; ರಾಯಚೂರು ವಿಶ್ವವಿದ್ಯಾನಿಲಯಕ್ಕೆ ವಾಲ್ಮೀಕಿ ಹೆಸರು: ಸಿಎಂ ಸಿದ್ದರಾಮಯ್ಯ

ಜೈಲಿನಲ್ಲಿ ಮೊಬೈಲ್‌ ರಿಂಗಣ : ಅಧೀಕ್ಷಕರ ವಿರುದ್ಧ ತನಿಖೆಗೆ ಕೋರ್ಟ್‌ ಆದೇಶ

ಜೈಲಿನಲ್ಲಿ ಮೊಬೈಲ್‌ ರಿಂಗಣ : ಅಧೀಕ್ಷಕರ ವಿರುದ್ಧ ತನಿಖೆಗೆ ಕೋರ್ಟ್‌ ಆದೇಶ

ವರ್ಷಾಂತ್ಯಕ್ಕೆ ಕಾಂಗ್ರೆಸ್‌ ಸಂಘಟನೆಗೆ 10 ಲಕ್ಷ ಮಹಿಳೆಯರು: ಅಲ್ಕಾ ಲಂಬಾ

Congress: ವರ್ಷಾಂತ್ಯಕ್ಕೆ ಕಾಂಗ್ರೆಸ್‌ ಸಂಘಟನೆಗೆ 10 ಲಕ್ಷ ಮಹಿಳೆಯರು: ಅಲ್ಕಾ ಲಂಬಾ

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

udayavani youtube

ಮಕ್ಕಳ ಸ್ಕ್ರೀನ್ ಟೈಮಿಂಗ್ ಕುರಿತು ಎಚ್ಚರಿಕೆ ಅತ್ಯವಶ್ಯಕ.. ಇಲ್ಲಿದೆ ಅಗತ್ಯ ಮಾಹಿತಿ

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

ಹೊಸ ಸೇರ್ಪಡೆ

bk-Hari

Jharkhand Election; ಹರಿಪ್ರಸಾದ್‌ ಎಐಸಿಸಿ ಸಮನ್ವಯಕಾರ

1-mahe

MAHE-Mangalore University ಒಡಂಬಡಿಕೆ : ಮೂಳೆ ಅಲೋಗ್ರಾಫ್ಟ್‌ಗಳ ಗಾಮಾ ವಿಕಿರಣ

sensex-down

Share Market: ಸೆನ್ಸೆಕ್ಸ್‌ ಸತತ ಪತನ: 2 ತಿಂಗಳ ಕನಿಷ್ಠ ಕುಸಿತ ದಾಖಲಿಸಿದ ಷೇರುಪೇಟೆ

rathan-tata

Mumbai: ಅರಬಿ ಸಮುದ್ರದಲ್ಲಿ ರತನ್‌ ಟಾಟಾ ಚಿತಾ ಭಸ್ಮ ವಿಸರ್ಜನೆ

Salmana

Bollywood Actor: ಸಲ್ಮಾನ್‌ ಹತ್ಯೆಗೆ 25 ಲಕ್ಷ ಸುಪಾರಿ ಕೊಟ್ಟ ಬಿಷ್ಣೋಯ್‌: ಪೊಲೀಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.