Udupi Shri Krishna Matha; 100 ಕಲಾವಿದರಿಂದ ನಿರಂತರ 14 ತಾಸು ನೃತ್ಯ ಪ್ರದರ್ಶನ
Team Udayavani, Oct 18, 2024, 1:21 AM IST
ಉಡುಪಿ: ಅಭಿಜ್ಞಾ ನೃತ್ಯ ತಂಡದ ವತಿಯಿಂದ ಶ್ರೀ ಕೃಷ್ಣ ಮಠ, ಪರ್ಯಾಯ ಶ್ರೀ ಪುತ್ತಿಗೆ ಮಠದ ಆಶ್ರಯದಲ್ಲಿ ಕರ್ನಾಟಕ ಎಚೀವರ್ ಬುಕ್ ಆಫ್ ರೆಕರ್ಡ್‌ಗಾಗಿ 100 ಮಂದಿ ನೃತ್ಯ ಕಲಾವಿದರಿಂದ ನಿರಂತರ 14 ಗಂಟೆಗಳ ನೃತ್ಯ ಪ್ರದರ್ಶನ “ಉಡುಪಿ ಫೆಸ್ಟ್-2024′ ಮಧ್ವಾಂಗಣದಲ್ಲಿ ಗುರುವಾರ ಜರಗಿತು. ಸಂಜೆ ರಾಜಾಂಗಣದಲ್ಲೂ ನೃತ್ಯ ಪ್ರದರ್ಶನವಾಗಿದೆ. ನೃತ್ಯದ ಜತೆಗೆ ಹಾಡುಗಾರಿಕೆಯೂ ಗಮನ ಸೆಳೆದಿದೆ.
ಪರ್ಯಾಯ ಶ್ರೀ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಆಶೀರ್ವದಿಸಿದರು.
ಮಕ್ಕಳು, ಮಹಿಳೆಯರಿಂದ ಹಿಡಿದು 60 ವರ್ಷ ಒಳಗಿನ 100 ನೃತ್ಯ ಕಲಾವಿದರಿಂದ ಭರತನಾಟ್ಯ, ಕುಚುಪುಡಿ, ಪ್ರೇರಣಿ ನೃತ್ಯ ಪ್ರಕಾರಗಳು ಸಂಪನ್ನಗೊಂಡವು. ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶದಿಂದ ನೃತ್ಯ ಗುರುಗಳು, ನೃತ್ಯ ಕಲಾವಿದರು ಹಾಗೂ ಅವರ ಪೋಷಕರು ಭಾಗವಹಿಸಿದ್ದರು. ಕಾರ್ಯಕ್ರಮದ ಸಂಚಾಲಕಿ ಚಂದ್ರಬಾನು ಚತುರ್ವೇದಿ ಉಪಸ್ಥಿತರಿದ್ದರು. ಶ್ರೀಮಠದ ಸಾಂಸ್ಕೃತಿಕ ಕಾರ್ಯದರ್ಶಿ ರವೀಂದ್ರ ಆಚಾರ್ಯ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
One Nation, One Election;ಹಣ, ಸಮಯ ಉಳಿಯಬಹುದು…ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಇದೆಯಾ?
Bollywood: ಬಾಲಿವುಡ್ ನಟ ಶಾಹಿದ್ ಕಪೂರ್ ಜತೆ ರಶ್ಮಿಕಾ ರೊಮ್ಯಾನ್ಸ್: ಯಾವ ಸಿನಿಮಾ?
Water: ನಾನು ನೀರು ನಾನಿಲ್ಲದೇ ಜಗತ್ತಿಲ್ಲ
Mumbai: ಗೇಟ್‌ವೇ ಆಫ್ ಇಂಡಿಯಾ ಬಳಿ ಮುಳುಗಿದ 67 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು
Order: ಗ್ಯಾಸ್ ಸೋರಿಕೆ ಅವಘಡ: ಪೋಷಕರ ಕಳೆದುಕೊಂಡ ಪುತ್ರಿಗೆ 28 ಲಕ್ಷ ರೂ.ಪರಿಹಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.