Udupi: ಗೀತಾರ್ಥ ಚಿಂತನೆ-67: ಅರ್ಜುನನ ಅಹಂ ನಾಶಕ್ಕೆ ಕೃಷ್ಣತಂತ್ರ
Team Udayavani, Oct 18, 2024, 1:36 AM IST
ಸೇನಯೋರುಭಯೋರ್ಮಧ್ಯೇ ರಥಂ ಸ್ಥಾಪಯ ಮೇ ಚ್ಯುತ| (ಗೀತೆ 1-21) ಯಾರ್ಯಾರು ಬಂದಿದ್ದಾರೆಂದು ನೋಡಲೋಸುಗ ನನ್ನ ರಥವನ್ನು ಮಧ್ಯದಲ್ಲಿ ನಿಲ್ಲಿಸು ಎಂದು ಅರ್ಜುನ ಹೇಳುತ್ತಾನೆ. “ನನ್ನ ಸೇನೆಯ ಮುಂದೆ ನಿಲ್ಲಿಸು’ ಎಂದು ಹೇಳುವ ಬದಲು “ಎರಡು ಸೇನೆಗಳ ಮಧ್ಯೆ ನಿಲ್ಲಿಸು’ ಎಂದು ಹೇಳುತ್ತಾನೆ. ಎಲ್ಲರನ್ನೂ ನೋಡಬೇಕು,
ದುರ್ಯೋಧನನ ಸೈನ್ಯದಲ್ಲಿದ್ದವರನ್ನು ನೋಡಬೇಕು ಎಂಬ ಹಂಬಲವನ್ನು ವ್ಯಕ್ತಪಡಿಸುತ್ತಾನೆ. ಇಲ್ಲಿ ಅರ್ಜುನನಲ್ಲಿ ಅಹಂಕಾರ ಮನಃಸ್ಥಿತಿ ಕಂಡುಬರುತ್ತದೆ. ಯುದ್ಧದಲ್ಲಿ ಎರಡು ರೀತಿ. ಆಯ್ಕೆ ಮಾಡಿದವರೊಂದಿಗೆ ಯುದ್ಧ, ಇನ್ನೊಂದು ಎದುರಾದವರೊಂದಿಗೆಲ್ಲ ಯುದ್ಧ. ಅರ್ಜುನ ನನ್ನ ಹತ್ತಿರ ಯುದ್ಧ ಮಾಡಲು ಯಾರು ಬಂದಿದ್ದಾರೆಂದು ನೋಡಬೇಕೆನ್ನುತ್ತಾನೆ. ಅಂದರೆ ತನ್ನ ಹತ್ತಿರ ಯುದ್ಧ ಮಾಡುವ ಧೀರರು ಯಾರು ಎಂಬ ಅಹಂಭಾವವಿತ್ತು. ಅರ್ಜುನನೆಂದರೆ ಇಂದ್ರ. ಇಂದ್ರನೆಂದರೆ ಐಶ್ವರ್ಯದ ಪ್ರತೀಕ. ಇದರಿಂದ ಅಹಂಕಾರ ಬಂದದ್ದು. ಅರ್ಜುನ ಎರಡು ಸೇನೆಗಳ ಮಧ್ಯೆ ನಿಲ್ಲಿಸು ಎಂದು ಹೇಳಿದ್ದೇ ವಿನಾ ಭೀಷ್ಮದ್ರೋಣರ ಎದುರು ನಿಲ್ಲಿಸು ಎಂದು ಹೇಳಿರಲಿಲ್ಲ. ಭೀಷ್ಮದ್ರೋಣರ ಎದುರು ನಿಲ್ಲಿಸಿದರೆ ಮಾತ್ರ ಅರ್ಜುನನಿಗೆ ವಿಷಾದ ಯೋಗ ಬರುತ್ತದೆ ಎಂದು ತಿಳಿದಿದ್ದ ಶ್ರೀಕೃಷ್ಣ ಅರ್ಜುನನ ಅಹಂಕಾರಕ್ಕೆ ತಕ್ಕುದಾಗಿ ಭೀಷ್ಮದ್ರೋಣರ ಎದುರು ನಿಲ್ಲಿಸಿದ್ದು. ಆತನ ಅಹಂಕಾರ ನೀರಾದದ್ದೂ ಅಲ್ಲಿಯೇ.
-ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು,
ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠ,
-ಕೋಟಿ ಗೀತಾ ಲೇಖನ ಯಜ್ಞದಲ್ಲಿ ಪಾಲೊಳ್ಳಿ
ಗೀತಾ ಮಂದಿರ,ಉಡುಪಿ
ಸಂಪರ್ಕ ಸಂಖ್ಯೆ: 8055338811
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಗಾಂಜಾ ಸೇವಿಸಿದ ವ್ಯಕ್ತಿ ಪೊಲೀಸ್ ವಶ
Manipal: ಅಪಾಯಕಾರಿ ರೀತಿಯಲ್ಲಿ ಬೈಕ್ ಚಾಲನೆ; ಪ್ರಕರಣ ದಾಖಲು
Karkala: ಬಾವಿಗೆ ಬಿದ್ದ ದಂಪತಿಯ ರಕ್ಷಣೆ ಮಾಡಿದ ಅಗ್ನಿಶಾಮಕ ದಳ
Journalist:ಅಭಿವೃದ್ಧಿಪತ್ರಿಕೋದ್ಯಮ ಪ್ರಶಸ್ತಿ:ಗಿರೀಶ್ ಲಿಂಗಣ್ಣಗೆ ಸ್ವಾಮೀಜಿಗಳಿಂದ ಶ್ಲಾಘನೆ
Katpadi: ನಕಲಿ ದಾಖಲೆ ಸೃಷ್ಟಿಸಿ 45 ಲಕ್ಷ ರೂ. ಸಾಲ ಪಡೆದು ವಂಚನೆ ; ಪ್ರಕರಣ ದಾಖಲು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.