Manipal ಪರಿಸರದ 15-20 ಪಕ್ಷಿ ಪ್ರಭೇದ ಕಣ್ಮರೆ; ಇ ಬರ್ಡ್ ಪೋರ್ಟಲ್‌ನಲ್ಲಿ ದಾಖಲಾತಿ
ಅಭಿವೃದ್ಧಿಯ ವೇಗ, ಮಾನವ ಹಸ್ತಕ್ಷೇಪದಿಂದ ಸಮಸ್ಯೆ
Team Udayavani, Oct 18, 2024, 4:09 PM IST
ಮಣಿಪಾಲ: ಅಭಿವೃದ್ಧಿಯ ಹೆಸರಿನಲ್ಲಿ ಪ್ರಕೃತಿಯಲ್ಲಿ ಮಾನವನ ಹಸ್ತಕ್ಷೇಪದಿಂದ ಪ್ರಾಣಿ ಮತ್ತು ಪಕ್ಷಿ ಸಂಕುಲಕ್ಕೆ ಕುತ್ತು ಬರುತ್ತಿರುವುದು ಹೊಸ ಸಂಗತಿಯೇನಲ್ಲ. ಅದೇ ರೀತಿ ಮಣಿಪಾಲ ನಗರದಲ್ಲಿಯೂ ಅಭಿವೃದ್ಧಿ ಚಟುವಟಿಕೆಗಳಿಂದ ಪಕ್ಷಿ ಪ್ರಭೇದಗಳ ಸಂಖ್ಯೆ ಕ್ಷೀಣಿಸುತ್ತಿರುವುದು ಬೆಳಕಿಗೆ ಬಂದಿದೆ.
ಹಿಂದೆ ಪ್ರತೀ ವಾರ 60ರಿಂದ 70 ಪ್ರಭೇದಗಳು ಕಾಣಸಿಗುತ್ತಿದ್ದವು. ಇದೀಗ 40ರಿಂದ 50 ಪ್ರಭೇದಗಳು ಮಾತ್ರ ಕಾಣಸಿಗುತ್ತಿವೆ ಎನ್ನುತ್ತಾರೆ ಮಣಿಪಾಲ ಬರ್ಡಿಂಗ್ ಆ್ಯಂಡ್ ಕನ್ಸರ್ವೇಶನ್ ಟ್ರಸ್ಟ್‌ನ ಮ್ಯಾನೇಜಿಂಗ್ ಟ್ರಸ್ಟಿ ತೇಜಸ್ವಿ ಎಸ್ ಆಚಾರ್ಯ. ಸುಮಾರು 500 ಸದಸ್ಯರಿರುವ ಮಣಿಪಾಲ ಬರ್ಡ್‌ರ್ ಕ್ಲಬ್ ಹಲವು ತಂಡಗಳಾಗಿ ಕಳೆದ 12 ವರ್ಷಗಳಿಂದ ಪಕ್ಷಿ ಪ್ರಭೇದಗಳ ವೀಕ್ಷಣೆ ಹಾಗೂ ಅವುಗಳ ಅಧ್ಯಯನ ನಡೆಯುತ್ತಿದೆ. ಪ್ರತಿ ರವಿವಾರ ಮಣಿಪಾಲ ನಗರದ ಈಶ್ವರ ನಗರ, ಹೆರ್ಗ, ಸರಳಬೆಟ್ಟು ಸೇರಿದಂತೆ ಒಟ್ಟು 7 ಸ್ಥಳಗಳಿಗೆ ಬೆಳಗ್ಗೆ 6.30ರಿಂದ 8.30ರ ವರೆಗೆ ಪಕ್ಷಿ ವೀಕ್ಷಣೆ ಮಾಡುತ್ತಿದೆ.
ಮಣಿಪಾಲ ಬರ್ಡಿಂಗ್ ಆ್ಯಂಡ್ ಕನ್ಸರ್ವೇಶನ್ ಟ್ರಸ್ಟ್ ಕಳೆದ 12 ವರ್ಷಗಳಲ್ಲಿ ಮಣಿಪಾಲ ನಗರದಲ್ಲಿ ವಿದೇಶಗಳಿಂದ ವಲಸೆ ಬರುವ ಟಫ್ಡ್ ಡಕ್, ವೈಟ್ ಸ್ಟಾರ್ಕ್ ಸೇರಿದಂತೆ ಒಟ್ಟು 404 ಪಕ್ಷಿ ವೈವಿಧ್ಯಗಳನ್ನು ಗುರುತಿಸಿದೆ.
ಇ ಬರ್ಡ್ ಪೋರ್ಟಲ್‌ನಲ್ಲಿ ದಾಖಲೀಕರಣ
ಯಾವ ಪಕ್ಷಿ ಪ್ರಭೇದವನ್ನು ಎಲ್ಲಿ ಯಾವಾಗ ಕಂಡಿತು ಎಂಬುದರ ಪೂರ್ಣ ಮಾಹಿತಿಯನ್ನು ‘ಇ ಬರ್ಡ್ ಪೋರ್ಟಲ್’ ನಲ್ಲಿ ದಾಖಲೀಕರಿಸಲಾಗುತ್ತಿದೆ. ಈ ಹಿಂದೆ ಪ್ರತೀ ರವಿವಾರ 60ರಿಂದ 70 ಪ್ರಭೇದಗಳು ಕಾಣುತ್ತಿದ್ದವು ಆದರೆ ಈಗ ಕೇವಲ 40ರಿಂದ 50 ಮಾತ್ರ ಕಂಡು ಬರುತ್ತಿವೆ.
ನಗರಕ್ಕೆ ಪಶುವೈದ್ಯಾಧಿಕಾರಿ ಬೇಕು
ಈಗಾಗಲೇ ಆಕಳು, ನಾಯಿ, ಬೆಕ್ಕು ಪ್ರಾಣಿಗಳಿಗೆ ಚಿಕಿತ್ಸೆ ನೀಡುವ ಪಶುವೈದ್ಯಾಧಿಕಾರಿ ಉಡುಪಿ-ಮಣಿಪಾಲದಲ್ಲಿ ಲಭ್ಯವಿದ್ದಾರೆ. ಆದರೆ ಮುಖ್ಯವಾಗಿ ಪಕ್ಷಿಗಳಿಗೆ ಚಿಕಿತ್ಸೆ ನೀಡಲು ವೈದ್ಯರ ಅವಶ್ಯಕತೆಯಿದೆ. ಪಕ್ಷಿಗಳಿಗೆ ಸಣ್ಣಪುಟ್ಟ ಚಿಕಿತ್ಸೆಗೂ ಮಂಗಳೂರು, ಬೆಂಗಳೂರಿಗೆ ಹೋಗಬೇಕಾದ ಪರಿಸ್ಥಿತಿ ಇದೆ.
– ತೇಜಸ್ವಿ ಎಸ್ ಆಚಾರ್ಯ, ಮ್ಯಾನೇಜಿಂಗ್ ಟ್ರಸ್ಟಿ ., ಮಣಿಪಾಲ ಬರ್ಡಿಂಗ್ ಆ್ಯಂಡ್ ಕನ್ಸರ್ವೇಶನ್ ಟ್ರಸ್ಟ್
ಕಣ್ಮರೆಯಾಗಲು ಕಾರಣಗಳು
- ಮರಗಳ ತೆರವು, ಆ ಜಾಗದಲ್ಲಿ ಕಾಂಕ್ರೀಟ್ ಕಟ್ಟಡ ನಿರ್ಮಾಣ
- ಉಡುಪಿ-ಮಣಿಪಾಲ ರಸ್ತೆ ಅಗಲೀ ಕರಣದ ವೇಳೆ ಹಲವಾರು ಮರಗಳು ಉರುಳಿ, ನೂರಾರು ಹಕ್ಕಿಗಳು ಸತ್ತಿದ್ದವು.
- ಹೆಚ್ಚುತ್ತಿರುವ ಮಾನವ ಹಸ್ತಕ್ಷೇಪ ದಿಂದ ಹೆಚ್ಚಿನ ಪಕ್ಷಿಗಳು ಅಸುರಕ್ಷಿತ ಭಾವನೆ ತಳೆಯುತ್ತವೆ.
-ವಿಜಯ ಕುಮಾರ್ ಹಿರೇಮಠ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Maharashtra: ಒಂದೇ ವಾರದಲ್ಲಿ ತಲೆ ಬೋಳು.. 3 ಗ್ರಾಮಗಳ ಜನರಿಗೆ ತಲೆ ಕೂದಲು ಉದುರುವ ಸಮಸ್ಯೆ!
Bengaluru: ಶಸ್ತ್ರಾಸ್ತ್ರ ತ್ಯಜಿಸಿ ಸಿಎಂ ಮುಂದೆ ಶರಣಾದ 6 ನಕ್ಸಲರು…
Cricket; ಮಹಿಳಾ ಅಂಡರ್-19 ಏಕದಿನ ಟ್ರೋಫಿ: ಅಸ್ಸಾಂ ವಿರುದ್ಧ ಕರ್ನಾಟಕಕ್ಕೆ ಜಯ
Kollywood: ಸೂರ್ಯ – ಕಾರ್ತಿಕ್ ಸುಬ್ಬರಾಜ್ ʼರೆಟ್ರೋʼ ರಿಲೀಸ್‌ಗೆ ಡೇಟ್ ಫಿಕ್ಸ್
Naxal Movement End:1990 To 2025:ಕರ್ನಾಟಕ ನಕ್ಸಲೀಯರ ಶಸ್ತ್ರಾಸ್ತ್ರ ಹೋರಾಟದ ಯುಗಾಂತ್ಯ…
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.