ಹಾನಗಲ್ಲ: ಮನುಕುಲಕ್ಕೆ ಶ್ರೇಷ್ಠ ಸಾಹಿತ್ಯ ನೀಡಿದ ಮಹರ್ಷಿ ವಾಲ್ಮೀಕಿ
Team Udayavani, Oct 18, 2024, 4:42 PM IST
ಉದಯವಾಣಿ ಸಮಾಚಾರ
ಹಾನಗಲ್ಲ: ಸಾಂಸ್ಕೃತಿಕ ಪರಿಸರಕ್ಕೆ ವ್ಯಕ್ತಿತ್ವದ ಅನಾವರಣ ಮಾಡುವಂತಹ ಶ್ರೇಷ್ಠ ಸಾಹಿತ್ಯ ನೀಡಿದ ಮಹರ್ಷಿ ವಾಲ್ಮೀಕಿ ಮಾನವ ಕುಲಕೋಟಿಗೆ ಆದರ್ಶವಾಗಿರುವುದಲ್ಲದೇ ಅನುಕರಣೀಯರು ಎಂದು ತಹಶೀಲ್ದಾರ್ ಎಸ್. ರೇಣುಕಮ್ಮ ತಿಳಿಸಿದರು.
ಗುರುವಾರ ಇಲ್ಲಿನ ತಹಶೀಲ್ದಾರ್ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ
ಮಾತನಾಡಿದ ಅವರು, ಮಹಾಪುರುಷರ ದಿನಾಚರಣೆಗಳು ಅವರ ವಕ್ತಿತ್ವವನ್ನು ಯುವ ಪೀಳಿಗೆಗೆ ಪರಿಚಯಿಸುವ, ಅವರ ಆದರ್ಶಗಳನ್ನು ಜ್ಞಾಪಿಸಿಕೊಂಡು ಆಚರಿಸುವ ಕಾರ್ಯಕ್ಕೆ ಪ್ರೇರಣೆಗಾಗಿ ಇವೆ. ಸರಕಾರ ಮಹಾಪುರುಷರ ಜಯಂತಿ ಆಚರಿಸುವ ಮೂಲಕ ಸಾಮಾಜಿಕ ರೀತಿ ನೀತಿಗಳನ್ನು ಮಹಾಪುರುಷರ ನಡೆಯಲ್ಲಿ ಪರಿಚಯಿಸುವ ಕಾರ್ಯ ಕೈಗೊಂಡಿದೆ. ಇದು ಆದರ್ಶ ಹಾಗೂ ಮಾರ್ಗದರ್ಶಿ ಕಾರ್ಯ ಎಂದರು.
ವಾಲ್ಮೀಕಿ ಸಮಾಜದ ಮುಖಂಡ ಫಕ್ಕೀರಪ್ಪ ಓಲೆಕಾರ, ಸಾಹಿತಿ ಪ್ರೊ| ಮಾರುತಿ ಶಿಡ್ಲಾಪುರ ಮಾತನಾಡಿದರು. ಪರಸಪ್ಪ ಮುನಿಯಣ್ಣನವರ, ಹೊನ್ನಪ್ಪ ಅಕ್ಕಿವಳ್ಳಿ, ಸುಭಾಸ ತಳವಾರ, ಸತೀಶ ಅಂಕೋಲ, ಪ್ರಕಾಶ ನಂದಿಕೊಪ್ಪ, ಶಿವಕುಮಾರ ತಳವಾರ, ಮುಂಜುನಾಥ ಗುರಣ್ಣನವರ, ಬಸವರಾಜ ಓಲೇಕಾರ, ವಸಂತ ವೆಂಕಟಾಪುರ, ರೇಖಾ ಕರಿಭೀಮಣ್ಣನವರ, ಶಿವಕುಮಾರ ಭದ್ರಾವತಿ, ರಮೇಶ ಕರಿಭೀಮಣ್ಣನವರ, ಶ್ರೀಕಾಂತ ಬೈಚವಳ್ಳಿ, ಹೊನ್ನಪ್ಪ ದೊಡ್ಡಮನಿ, ರವಿಕುಮಾರ ಕೊರವರ, ತಾಪಂ ಇಒ ಪರಶುರಾಮ ಪೂಜಾರ, ಗಂಗಾ ಹಿರೇಮಠ, ಅರವಿಂದ ಸುಗಂ , ಡಾ| ಗಿರೀಶ ರಡ್ಡೇರ, ವೈ.ಕೆ. ಜಗದೀಶ, ಬಿ.ಎನ್. ಸಂಗೂರ, ರವಿ ಅರ್ಕಸಾಲಿ ಮೊದಲಾದವರು ಇದ್ದರು.
ಕಾರಣ ಕೇಳಿ ನೋಟೀಸ್: ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮಕ್ಕೆ ಹಾಜರಾಗದ ಅಧಿಕಾರಿಗಳಿಗೆ ಕಾರಣ ಕೇಳಿ ನೋಟಿಸ್ ನೀಡಿ ಕ್ರಮ ಜರುಗಿಸಬೇಕು ಎಂದು ವಾಲ್ಮೀಕಿ ಸಮಾಜ ಮುಖಂಡರು ತಹಶೀಲ್ದಾರ್‌ರನ್ನು ಒತ್ತಾಯಿಸಿದರು. ಕೂಡಲೇ ಗೈರು ಹಾಜರಾದ ಅಧಿ ಕಾರಿಗಳಿಗೆ ನೋಟಿಸ್ ನೀಡಲು ಸ್ಥಳದಲ್ಲೇ ತಾಲೂಕು ತಹಶೀಲ್ದಾರ್ ಎಸ್. ರೇಣುಕಮ್ಮ ಸೂಚಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Jammu and Kashmir; ಉಗ್ರವಾದ ಪರಿಸರ ವ್ಯವಸ್ಥೆ ಬಹುತೇಕ ಕೊನೆಗೊಂಡಿದೆ: ಶಾ
Bhadravathi:ಬಾಯ್ಲರ್ ಸ್ಫೋ*ಟದಿಂದ ರೈಸ್‌ಮಿಲ್ ಕುಸಿತ:7 ಮಂದಿಗೆ ಗಾಯ
Sringeri; ಅಸ್ಸಾಂ ಕಾರ್ಮಿಕನಿಂದ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿ*ಕ ದೌರ್ಜನ್ಯ
BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು
Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.