BBK11: ಬಿಗ್ ಬಾಸ್ ‌ಮನೆಯಿಂದ ಹೊರ ಹೋದ ಕೂಡಲೇ ಆಡಿಯೋ ಹರಿಬಿಟ್ಟ ಜಗದೀಶ್ ; ವೈರಲ್

ಬಿಗ್ ಬಾಸ್ ಮನೆಯಲ್ಲೂ ಜೈಲು ಸೇರಿದ ಚೈತ್ರಾ

Team Udayavani, Oct 18, 2024, 11:25 PM IST

BBK11: ಬಿಗ್ ಬಾಸ್ ‌ಮನೆಯಿಂದ ಹೊರ ಹೋದ ಕೂಡಲೇ ಆಡಿಯೋ ಹರಿಬಿಟ್ಟ ಜಗದೀಶ್ ; ವೈರಲ್

ಬೆಂಗಳೂರು: ಬಿಗ್ ಬಾಸ್ (bigg Boss kannada season 11) ಮನೆ ರಣರಂಗದಂತೆ ಕಾವೇರಿದೆ. ಆರೋಪ, ಪ್ರತ್ಯಾರೋಪ ‌ಮಾಡುತ್ತಾ ಸ್ಪರ್ಧಿಗಳು ಕಿತ್ತಾಡಿಕೊಳ್ಳುತ್ತಿದ್ದಾರೆ.

ಹಂಸಾ ಅವರ ಬಗ್ಗೆ ‌ಅವಹೇಳನಕಾರಿಯಾಗಿ ಜಗದೀಶ್ ಮಾತನಾಡಿದರು ಎನ್ನುವ ಕಾರಣಕ್ಕೆ ಚೈತ್ರಾ ಹಾಗೂ ಜಗದೀಶ್ ನಡುವೆ ವೈಯಕ್ತಿಕ ವಿಚಾರಕ್ಕೆ ಜಗಳವೇ ನಡೆದಿದೆ. ಜಗದೀಶ್ ವಿರುದ್ಧ ‌ಮನೆಯ ಸದಸ್ಯರು ತಿರುಗಿ ಬಿದ್ದಿದ್ದಾರೆ.

ನಿಯಮ ಉಲ್ಲಂಘನೆ ಆಗಿರುವ ಕಾರಣಕ್ಕೆ ಬಿಗ್ ಬಾಸ್ ಜಗದೀಶ್, ರಂಜಿತ್ ಮೇಲೆ ಶಿಸ್ತು ಕ್ರಮ ಕೈಗೊಂಡಿದ್ದಯ ಮನೆಯಿಂದ ಹೊರಗೆ ಹೋಗಲು ಹೇಳಿದ್ದಾರೆ.

ಜಗದೀಶ್ ಔಟ್ ಆದದಕ್ಕೆ ಸಂಭ್ರಮ ಪಟ್ಟ ಮನೆಮಂದಿ:
ಜಗದೀಶ್ ಅವರನ್ನು ಹೊರಗೆ ಕಳುಹಿಸಿದ ಬಳಿಕ ಎಲ್ಲಾ ಸ್ಪರ್ಧಿಗಳು ಹರ್ಷ ವ್ಯಕ್ತಪಡಿಸಿ ಥ್ಯಾಂಕ್ಯೂ ಎಂದು ಹೇಳಿದ್ದಾರೆ. ಮನೆಯಿಂದ ಒಂದು ತೂಕ ಹೋಯಿತು ಎಂದು ಕೆಲವರು ಹೇಳಿದ್ದಾರೆ.

ಹೆಣ್ಮಕ್ಕಳಿಗೆ ಯಾರು ಗೌರವ ಕೊಡಲ್ವೋ ಅವರಿಗೆಲ್ಲ ಇದೆ ರೀತಿ ಆಗೋದು ಎಂದು ಗೌತಮಿ, ಜಗದೀಶ್ ಅವರ ಬಗ್ಗೆ ಹೇಳಿದ್ದಾರೆ.

ರಂಜಿತ್ ಔಟ್ ಕಣ್ಣೀರಿಟ್ಟ ಸಹ ಸ್ಪರ್ಧಿಗಳು:
ರಂಜಿತ್ ಅವರನ್ನು ಹೊರಗೆ ಹೋಗಲು ಹೇಳಿದಾಗ ಸಹ ಸ್ಪರ್ಧಿಗಳು, ಒಂದು ಅವಕಾಶ ಕೊಡಿ ಎಂದು ಮನವಿ ಮಾಡಿದ್ದಾರೆ. ಅವರು ಉದ್ದೇಶಪೂರ್ವಕವಾಗಿ ಮಾಡಿದಲ್ಲ. ದಯವಿಟ್ಟು ಒಂದು ಅವಕಾಶ ‌ನೀಡಿ ಎಂದು ಸಹ ಸ್ಪರ್ಧಿಗಳು ಮನವಿ ಮಾಡಿ ರಂಜಿತ್ ಅವರನ್ನು ತಬ್ಬಿಕೊಂಡು ಕಣ್ಣೀರಿಟ್ಟಿದ್ದಾರೆ.

ಬಿಗ್ ನಿಮ್ಮ ಒಂದು ನಿರ್ಧಾರ ಸರಿ ಇರುತ್ತದೆ ಮತ್ತೊಂದು ‌ನಿರ್ಧಾರ ತಪ್ಪಾಗಿರುತ್ತದೆ ಎಂದ ಮಾನಸ, ಬಿಗ್ ಬಾಸ್ ನಿರ್ಧಾರಕ್ಕೆ  ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇಬ್ಬರು ಮನೆಯಿಂದ ಹೊರಹೋದ ನಂತರ ಮನೆಮಂದಿ ಜಗದೀಶ್, ರಂಜಿತ್ ಅವರ ಬಟ್ಟೆಗಳನ್ನು ಪ್ಯಾಕ್ ಮಾಡಿ, ಲಗೇಜ್ ಕಳುಹಿಸಿ ಕೊಟ್ಟಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ಯಾರು ಕುತಂತ್ರಿ, ಅಪ್ರಾಮಾಣಿಕ?:
ಇನ್ನು ಬಿಗ್ ಬಾಸ್ ಮನೆಯ ಮೂರು ವಾರದ ಆಟವನ್ನು ಯಾರು ಪ್ರಾಮಾಣಿಕವಾಗಿ ಆಡಿದ್ದಾರೆ. ಯಾರು ಕುತಂತ್ರದಿಂದ ಇರುವುದು ಎನ್ನುವುದು ಸ್ಪರ್ಧಿಗಳು ಒಬ್ಬೊಬ್ಬರ ತಲೆಗೆ ಆಯಾ ನಾಮದ ಟೇಪ್ ಹಚ್ಚಿ ಕಾರಣವನ್ನು ನೀಡಿದ್ದಾರೆ.

ಅಪ್ರಾಮಾಣಿಕ: ಚೈತ್ರಾ, ತಿವಿಕ್ರಮ್, ಧನರಾಜ್, ಶಿಶಿರ್, ಮಾನಸ, ಐಶ್ವರ್ಯಾ

ಕುತಂತ್ರಿ: ಭವ್ಯಾ ಗೌಡ, ಗೋಲ್ಡ್ ಸುರೇಶ್, ಚೈತ್ರಾ, ಮೋಕ್ಷಿತಾ, ಮಂಜು

ಶಿಶಿರ್ ಅವರು ಅತೀ ಹೆಚ್ಚು ಹಣೆಪಟ್ಟಿ ಪಡೆದ ಸ್ಪರ್ಧಿಗಳನ್ನು ಜೈಲು ವಾಸಕ್ಕೆ ಕಳುಹಿಸಿದ್ದಾರೆ. ಇದರ ಅನುಸಾರ ಚೈತ್ರಾ ಅವರು ಜೈಲುವಾಸಕ್ಕೆ ಹೋಗಿದ್ದಾರೆ.

ಫೈನಲ್ ನಾಮಿನೇಷನ್ ನಲ್ಲಿರುವವರು:
ಗೋಲ್ಡ್ ಸುರೇಶ್, ಉಗ್ರಂ ಮಂಜು , ಐಶ್ವರ್ಯಾ, ಧನರಾಜ್, ಮಾನಸ, ಮೋಕ್ಷಿತಾ, ಅನುಷಾ ಅವರು ಅಂತಿಮ ನಾಮಿನೇಟ್ ನಲ್ಲಿದ್ದಾರೆ.

ಬಿಗ್ ಬಾಸ್ ಜಗದೀಶ್ ಹೋಗಿರುವುದು ಕನ್ಫರ್ಮ್:
ಬಿಗ್ ಬಾಸ್ ಜಗದೀಶ್ ಹೋಗಿದ್ದಾರಾ ಇಲ್ವೋ ಎನ್ನುವ ಪ್ರಶ್ನೆ ಹಲವರನ್ನು ಈಗಲೂ ಕಾಡುತ್ತಿದೆ. ಜಗದೀಶ್ ಅವರು ಹೊರಗೆ ಹೋಗಿರುವುದು ಕನ್ಪರ್ಮ್ ಆಗಿದೆ. ಅವರು ಕಳುಹಿಸಿದ್ದಾರೆ ಎನ್ನಲಾದ ಆಡಿಯೊವೊಂದು ಸಾಮಾಜಿಕ ಜಾಲತಾಣದ ವೈರಲ್ ಆಗಿದೆ.

ಜಗದೀಶ್ ಆಡಿಯೋ ವೈರಲ್:
“ಬಿಗ್‌ಬಾಸ್ ಒಬ್ಬ ವ್ಯಕ್ತಿಯ ಜೀವನವನ್ನು ತೋರಿಸುವಂತಹ ನಾನು ಸಹ ಅಲ್ಲಿ ಸ್ಪರ್ಧಿಸಿದಾಗ ನನ್ನ ನಿಜವಾದ ಮುಖ ನೋಡಿ ನನಗೆ ಆಶ್ವರ್ಯ ಆಯ್ತು. ನನ್ನಲ್ಲಿ ಅಡಗಿದಂತಹ ಪ್ರತಿಭೆ ಆಗಿರಬಹುದು, ಕೋಪ ಆಗಿರಬಹುದು ಎಲ್ಲವೂ ನೋಡಿದ್ದೇನೆ. ನಿಜವಾಗಲೂ ನಾವು ಅದೃಷ್ಟವಂತರು. ಎಷ್ಟೋ ಕೋಟಿಗಳ ಮಧ್ಯೆ ಬಿಗ್‌ಬಾಸ್‌ನಲ್ಲಿ ಭಾಗವಹಿಸುವುದಕ್ಕೆ ನನಗೆ ಅವಕಾಶ ಸಿಕ್ಕಿದ್ದು ನನ್ನ ಭಾಗ್ಯ ಅಂದುಕೊಳ್ಳಬಹುದು. ಅದನ್ನು ವಿಭಿನ್ನವಾಗಿ ತೋರಿಸವಂತಹ ಮೀಡಿಯಾ. ಎಂಜಾಯ್ ಮಾಡುವಂತಹ ನಮ್ಮ ವೀಕ್ಷಕರು, ನಮ್ಮ ಅಭಿಮಾನಿ ದೇವರುಗಳು ಕೋಟಿ ಕೋಟಿ ನಮನಗಳು. ನಾನು ಬಿಗ್ ಬಾಸ್ ಮಿಸ್ ಮಾಡಿಕೊಳ್ತೇನೆ”ಎಂದು ಆಡಿಯೋದಲ್ಲಿ ಹೇಳಿದ್ದಾರೆ.

ನನ್ನ ಹೀರೋ ಸುದೀಪ್. ಬಿಗ್‌ಬಾಸ್ ಮನೆಯಲ್ಲಿ ಕೊನೆಯ ದಿನ ನಡೆದ ಘಟನೆ ಬಗ್ಗೆ ರಂಜಿತ್, ಮಾನಸ ಸೇರಿದಂತೆ ಎಲ್ಲರ ಬಳಿ ಜಗದೀಶ್ ಅವರು ಕ್ಷಮೆ ಕೇಳಿರುವುದು ಆಡಿಯೋದಲ್ಲಿದೆ.

ನೀವೆಲ್ಲ ಚಿಕ್ಕ ವಯಸ್ಸಿನಲ್ಲೇ ಅದ್ಭುತ ಕಲಾವಿದರು. ನಿಮ್ಮ ಜೊತೆ ಒಬ್ಬನಾಗಿ ನಗಲು ಪ್ರಯತ್ನ ಪಟ್ಟಿದ್ದೇನೆ. ಈ‌ ನಿಟ್ಟಿನಲ್ಲಿ ನನ್ನಿಂದ ಕೆಲ ತಪ್ಪುಗಳು ಆಗಿವೆ. ಅದು ಮನರಂಜನೆಯ ಒಂದು ಭಾಗ ಅಷ್ಟೇ. ವೈಯಕ್ತಿಕ ದ್ವೇಷ ಯಾವುದೂ ಇಲ್ಲ ಎಂದು ಅವರು ಹೇಳಿದ್ದಾರೆ.

ನೂರಾರು ಕ್ಯಾಮರಾ, ಸಾವಿರಾರು ಬಿಗ್ ಬಾಸ್ ಸಿಬ್ಬಂದಿಗಳು, ಆ ನಿರ್ದೇಶಕ, ಮಾಂತ್ರಿಕ ತಂತ್ರಜ್ಞರು ಅವರ 24/7 ಡೆಡಿಕೇಷನ್ ಹಾಗೂ 20 ಕೋಟಿಗೂ ಹೆಚ್ಚಿನ ಬಿಗ್ ಬಾಸ್ ಅಭಿಮಾನಿ ದೇವರಗಳ ಆಶೀರ್ವಾದ ಈ ಹೊಸ ಕರ್ನಾಟಕ ಕ್ರಶ್ ಲಾಯರ್ ಜಗದೀಶ್ ಆಗಿದ್ದಾನೆ. ‌ನಿಮ್ಮ ಪ್ರತಿಯೊಂದು ಚಪ್ಪಾಳೆ, ಸಂದೇಶ, ನಿಮ್ಮ ಆಶೀರ್ವಾದ ನನ್ನ ಬಿಗ್ ಬಾಸ್ ಪಯಣ ಯಶಸ್ಸು ಅದು ನೀವು ಇಟ್ಟ ನಂಬಿಕೆ. ಮತ್ತೊಮ್ಮೆ ಕೋಟಿ ಕೋಟಿ ನಮನ. ಸಾರ್ಥಕ ಆಯಿತು. ನನ್ನ ಈ ಹುಟ್ಟು, ಈ ಪ್ರೀತಿ, ನನ್ನ ಗೆಲುವಿಗೆ ನೀವು ಕೊಟ್ಟ ಆ ಒಡನಾಟ, ನನ್ನ ಬಳಿ ಪದಗಳು ಕಡಿಮೆ, ವಿಶ್ಲೇಷಣೆ ಮಾಡಲು ಎಂದಿದ್ದಾರೆ.

ಇದಲ್ಲದೆ ಅವರು ತಮ್ಮ ಸಾಮಾಜಿಕ ಜಾಲತಾಣಲ್ಲಿ ಲೇಟೆಸ್ಟ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಟಾಪ್ ನ್ಯೂಸ್

Chikkamagaluru: ಎಮ್ಮೆ ಹುಡುಕಲು ಹೋದವರ ಮೇಲೆ ಕಾಡಾನೆ ದಾಳಿ; ಮಗ ಪರಾರಿ, ತಂದೆ ಸಾವು

Chikkamagaluru: ಎಮ್ಮೆ ಹುಡುಕಲು ಹೋದವರ ಮೇಲೆ ಕಾಡಾನೆ ದಾಳಿ; ಮಗ ಪರಾರಿ, ತಂದೆ ಸಾವು

‌UP: ಫಸ್ಟ್‌ ನೈಟ್‌ ದಿನ ಬಿಯರ್‌, ಗಾಂಜಾ ತಂದು ಕೊಡಲು ಬೇಡಿಕೆ ಇಟ್ಟ ಪತ್ನಿ; ಪತಿ ಶಾಕ್.!

‌UP: ಫಸ್ಟ್‌ ನೈಟ್‌ ದಿನ ಬಿಯರ್‌, ಗಾಂಜಾ ತಂದು ಕೊಡಲು ಬೇಡಿಕೆ ಇಟ್ಟ ಪತ್ನಿ; ಪತಿ ಶಾಕ್.!

ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ

Bidar: ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ

7-lokayuktha

Surathkal: ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದ ಮುಲ್ಕಿ ಕಂದಾಯ ನಿರೀಕ್ಷಕ

Davanagere; ಉಸ್ತುವಾರಿ ಸಚಿವರ ಬದಲಾವಣೆಗೆ ಸಿಎಂಗೆ ಪತ್ರ ಬರೆದ ಚನ್ನಗಿರಿ‌ ಕಾಂಗ್ರೆಸ್ ಶಾಸಕ

Davanagere; ಉಸ್ತುವಾರಿ ಸಚಿವರ ಬದಲಾವಣೆಗೆ ಸಿಎಂಗೆ ಪತ್ರ ಬರೆದ ಚನ್ನಗಿರಿ‌ ಕಾಂಗ್ರೆಸ್ ಶಾಸಕ

6-ptr

Puttur: ಬಸ್ – ಬೈಕ್‌ ಅಪಘಾತ; ಸವಾರ ಸಾವು

Parliament; Pushing in front of Parliament House; Two MPs injured, allegations against Rahul Gandhi

Parliament; ಸಂಸತ್‌ ಭವನ ಎದುರು ತಳ್ಳಾಟ; ಇಬ್ಬರು ಸಂಸದರಿಗೆ ಗಾಯ, ರಾಹುಲ್‌ ವಿರುದ್ದ ಆರೋಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ʼಯುಐʼಗೆ ಸ್ಯಾಂಡಲ್‌ವುಡ್‌ ಸಾಥ್‌; ಉಪೇಂದ್ರ ಚಿತ್ರ ನೋಡಲು ಕಾತುರ

Upendra: ʼಯುಐʼಗೆ ಸ್ಯಾಂಡಲ್‌ವುಡ್‌ ಸಾಥ್‌; ಉಪೇಂದ್ರ ಚಿತ್ರ ನೋಡಲು ಕಾತುರ

Shiva Rajkumar: ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ

Shiva Rajkumar: ಚಿಕಿತ್ಸೆಗಾಗಿ ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ

BBK11: ಟಾಸ್ಕ್ ವಿಚಾರದಲ್ಲಿ ಫೈಯರ್ ಚೈತ್ರಾ ಠುಸ್.. ಮನೆಮಂದಿ ಸುಸ್ತು

BBK11: ಟಾಸ್ಕ್ ವಿಚಾರದಲ್ಲಿ ಫೈಯರ್ ಚೈತ್ರಾ ಠುಸ್.. ಮನೆಮಂದಿ ಸುಸ್ತು

BBK11: ಮತ್ತೆ ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್.. ವಿಡಿಯೋದಲ್ಲಿ ಸುಳಿವು

BBK11: ಮತ್ತೆ ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್..? ವಿಡಿಯೋದಲ್ಲಿ ಸುಳಿವು

Sandalwood: ಕಣ್ಣಾ ಮುಚ್ಚೆ ಕಾಡೇ ಗೂಡೇ ತೆರೆಗೆ ಸಿದ್ಧ

Sandalwood: ಕಣ್ಣಾ ಮುಚ್ಚೆ ಕಾಡೇ ಗೂಡೇ ತೆರೆಗೆ ಸಿದ್ಧ

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

Chikkamagaluru: ಎಮ್ಮೆ ಹುಡುಕಲು ಹೋದವರ ಮೇಲೆ ಕಾಡಾನೆ ದಾಳಿ; ಮಗ ಪರಾರಿ, ತಂದೆ ಸಾವು

Chikkamagaluru: ಎಮ್ಮೆ ಹುಡುಕಲು ಹೋದವರ ಮೇಲೆ ಕಾಡಾನೆ ದಾಳಿ; ಮಗ ಪರಾರಿ, ತಂದೆ ಸಾವು

4

Karkala: ಈ ರಸ್ತೆಯಲ್ಲಿ ಬಸ್‌ ತಂಗುದಾಣಗಳೇ ಇಲ್ಲ!

‌UP: ಫಸ್ಟ್‌ ನೈಟ್‌ ದಿನ ಬಿಯರ್‌, ಗಾಂಜಾ ತಂದು ಕೊಡಲು ಬೇಡಿಕೆ ಇಟ್ಟ ಪತ್ನಿ; ಪತಿ ಶಾಕ್.!

‌UP: ಫಸ್ಟ್‌ ನೈಟ್‌ ದಿನ ಬಿಯರ್‌, ಗಾಂಜಾ ತಂದು ಕೊಡಲು ಬೇಡಿಕೆ ಇಟ್ಟ ಪತ್ನಿ; ಪತಿ ಶಾಕ್.!

3

Belma: ಕುಸಿತ ಭೀತಿಯಲ್ಲಿರುವ ಮನೆ; ಕಾಂಕ್ರೀಟ್‌ ತಡೆಗೋಡೆಗೆ ಪಿಡಬ್ಲ್ಯುಡಿ ಪ್ರಸ್ತಾವ

ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ

Bidar: ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.