kulai; ಮೀನುಗಾರಿಕೆ ಜೆಟ್ಟಿ ಕೆಲಸ ಪ್ರಗತಿಯಲ್ಲಿ
ಕಾಮಗಾರಿ ತಡೆಯಿಂದ ಉತ್ತರ ಬ್ರೇಕ್ ವಾಟರ್‌ಗೆ ಹಾನಿ ಸಾಧ್ಯತೆ: ಎನ್‌ಐಟಿಕೆ ವರದಿ
Team Udayavani, Oct 19, 2024, 1:28 AM IST
ಪಣಂಬೂರು: ಕುಳಾಯಿ ಮೀನುಗಾರಿಕೆ ಜೆಟ್ಟಿ ಕಾಮಗಾರಿ ಪ್ರಗತಿಯಲ್ಲಿದೆ. ದಕ್ಷಿಣ ಬ್ರೇಕ್‌ವಾಟರ್ ಮತ್ತು ಉತ್ತರ ಬ್ರೇಕ್‌ವಾಟರ್ ನಿರ್ಮಾಣ ನಡೆಯುತ್ತಿದ್ದು ದಕ್ಷಿಣ ಬ್ರೇಕ್‌ವಾಟರ್‌ನ ಉದ್ದ 262 ಮೀ. ಪೂರ್ಣಗೊಂಡಿದೆ. ಉತ್ತರದ 831 ಮೀ. ಉದ್ದದಲ್ಲಿ 560 ಮೀ. ವರೆಗೆ ಭಾಗಶಃ ಪೂರ್ಣಗೊಂಡಿದೆ.
ದಕ್ಷಿಣದ ಬ್ರೇಕ್‌ವಾಟರ್‌ನಲ್ಲಿ ಟೆಟ್ರಾಪಾಡ್‌ಗಳನ್ನು ಇಡುವುದು ಗಣನೀಯವಾಗಿ ಪೂರ್ಣಗೊಂಡಿದೆ ಮತ್ತು ಉತ್ತರದ ಬ್ರೇಕ್‌ವಾಟರ್‌ನಲ್ಲಿ ಟೆಟ್ರಾಪಾಡ್‌ಗಳನ್ನು ಹಾಕಿ ಸುರಕ್ಷಿತಗೊಳಿಸಲಾಗಿದೆ. ಉತ್ತರದ ಬ್ರೇಕ್ ವಾಟರ್ ನಾಡದೋಣಿ ಮೀನುಗಾರಿಕೆಗೆ ಅನುಕೂಲಕರವಾಗಿಲ್ಲ. ಈ ನಿಟ್ಟಿನಲ್ಲಿ ವಿಸ್ತರಿಸುವಂತೆ ಮೀನುಗಾರರು ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಸೂಕ್ತವಾಗಿ ಚರ್ಚಿಸಲು ಸಂಸದ ಕ್ಯಾ| ಬ್ರಿಜೇಶ್ ಚೌಟ ಅವರ ನಿರ್ದೇಶನದಂತೆ, ಎನ್‌ಎಂಪಿಎ ಅಧ್ಯಕ್ಷ ಡಾ| ಎ.ವಿ.ರಮಣ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.
ಸ್ಥಳೀಯ ಮೀನುಗಾರರ ಕುಂದು ಕೊರತೆಗಳಿಗೆ ಸಂಬಂಧಿಸಿ ಶಾಸಕರಾದ ಡಾ|ಭರತ್ ವೈ. ಶೆಟ್ಟಿ, ಯಶಪಾಲ್ ಸುವರ್ಣ, ಸ್ಥಳೀಯ ಮೀನುಗಾರ ಸಮುದಾಯ, ತಾಂತ್ರಿಕ ತಜ್ಞ ಏಜನ್ಸಿಯ ಪ್ರಮುಖರು, ಎನ್‌ಐಟಿಕೆ ಪರಿಣಿತರು ಉಪಸ್ಥಿತರಿದ್ದರು.
ತಮ್ಮ ಬೇಡಿಕೆಯನ್ನು ಈಡೇರಿಸು ವವರೆಗೆ ಕಾಮಗಾರಿಯನ್ನು ನಿಲ್ಲಿಸಬೇಕು ಎಂದು ಮೀನುಗಾರ ಮುಖಂಡರ ಆಗ್ರಹಿಸಿದ್ದಾರೆ. ಉತ್ತರದ 560 ಮೀಟರ್ ಬ್ರೇಕ್ ವಾಟರ್‌ಗೆ ಸೂಕ್ತ ರಕ್ಷಣೆ ಇಲ್ಲದೆ ಹೋದರೆ ಸಮುದ್ರದ ಅಲೆಗೆ ಕೊಚ್ಚಿಹೋಗುವ ಆತಂಕವಿದೆ ಎಂದು ಎನ್‌ಐಟಿಕೆ ಪರಿಣಿತರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕಾಮಗಾರಿ ನಡೆದಿರುವ ಬ್ರೇಕ್ ವಾಟರ್ ಭಾಗವನ್ನು ಟೆಟ್ರಾಪಾಡ್ ಹಾಕಿ ಸುರಕ್ಷಿತಗೊಳಿಸುವ ಅಗತ್ಯವಿದೆ ಎಂಬುದು ಪರಿಣಿತರು ವರದಿ ಮಂಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru AirPort: ಬಜಪೆ ವಿಮಾನ ನಿಲ್ದಾಣ ರನ್‌ವೇಗಿಲ್ಲ ರೇಸಾ ಸುರಕ್ಷೆ
Mangaluru: ಆನ್‌ಲೈನ್ ಗೇಮ್‌ನಲ್ಲಿ ವಂಚಕರ ಪರಿಚಯ; ಜಾಲ ಸೇರಿದ್ದ ಯುವಕ
Mangaluru: ಸಾಲಗಾರನ ಆತ್ಮಹ*ತ್ಯೆಗೆ ಪ್ರಚೋದನೆ ಆರೋಪ: ಎಂಸಿಸಿ ಬ್ಯಾಂಕ್ ಅಧ್ಯಕ್ಷನ ಬಂಧನ
Surathkal: ತಡಂಬೈಲ್‌ನಲ್ಲಿ ಅಡುಗೆ ಅನಿಲ ದುರಂತ; ಇಬ್ಬರು ಮಹಿಳೆಯರಿಗೆ ಗಂಭೀರ ಗಾಯ
Mangaluru: ಇನ್ನು ಯುಪಿಐ ಮೂಲಕವೂ ಟ್ರಾಫಿಕ್ ದಂಡ ಪಾವತಿ
MUST WATCH
ಹೊಸ ಸೇರ್ಪಡೆ
Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ
K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
Shiva Rajkumar: ಚಿಕಿತ್ಸೆಗಾಗಿ ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ
Alert…! ವಿಮಾನಕ್ಕೆ ಬೆದರಿಕೆ ಹಾಕಿದ್ರೆ 1 ಕೋಟಿವರೆಗೆ ದಂಡ ತೆರಲು ಸಿದ್ಧರಾಗಿ!
Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್ ಎಚ್ಚರಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.