ಮಣಿಕಲ್ಲು ದೇಗುಲದ ಆಡಳಿತ ಮಂಡಳಿ ವಿಚಾರ: ಗಲಾಟೆ
Team Udayavani, Oct 19, 2024, 1:49 AM IST
![police](https://www.udayavani.com/wp-content/uploads/2024/10/police-34-620x380.jpg)
![police](https://www.udayavani.com/wp-content/uploads/2024/10/police-34-620x380.jpg)
ಕೋಟ: ಮಣಿಕಲ್ಲು ಅರ್ಭಕಧಾರಕೇಶ್ವರಿ ದೇವಸ್ಥಾನದ ಆಡಳಿತ ಮಂಡಳಿಯ ವಿಚಾರ ದಲ್ಲಿ ವೈಮನಸ್ಸಿನಿಂದ ಇತ್ತಂಡಗಳ ನಡುವೆ ಗಲಾಟೆ ನಡೆದು ದೂರು- ಪ್ರತಿದೂರು ದಾಖಲಾದ ಘಟನೆ ಅ. 17ರಂದು ಸಂಭವಿಸಿದೆ. ಸಂಕ್ರಾಂತಿ ಪೂಜೆಗೆಂದು ದೇವ ಸ್ಥಾನಕ್ಕೆ ಹೋಗಿ ದೇವಸ್ಥಾನದ ಆಫೀಸಿನೊಳಗೆ ಕುಳಿತುಕೊಂಡಿರು ವಾಗ ಪರಸ್ಪರ ಗಲಾಟೆ ನಡೆದಿದ್ದು, ಹಲ್ಲೆಯಾಗಿದೆ ಎಂದು ಕೋಟ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.