Success: ಯಶಸ್ಸಿನ ಮೆಟ್ಟಿಲೇರಲು ಮಾರ್ಗದರ್ಶಕರು ಬೇಕು!

ಕಲಿತುಕೊಳ್ಳುವ ಮನೋಭಾವ ನಿಧಾನವಾಗಿ ನಮ್ಮ ಮನದಿಂದ ಹೊರಟು ಹೋಗುತ್ತದೆ.

Team Udayavani, Oct 19, 2024, 11:46 AM IST

Success: ಯಶಸ್ಸಿನ ಮೆಟ್ಟಿಲೇರಲು ಮಾರ್ಗದರ್ಶಕರು ಬೇಕು!

ಪ್ರತಿಯೊಂದು ಕ್ರೀಡಾತಂಡಕ್ಕೂ ಮೆಂಟರ್‌ ಇರುತ್ತಾರೆ. ಅವರ ಮುಖ್ಯ ಪಾತ್ರ, ತಂಡಕ್ಕೆ ಮಾರ್ಗದರ್ಶನ ಮತ್ತು ಸಲಹೆಯನ್ನು ನೀಡುವುದು, ತಮ್ಮ ಅನುಭವ ಮತ್ತು ನೈಪುಣ್ಯತೆಯನ್ನ ತಂಡದ ಕ್ರೀಡಾಳುಗಳಿಗೆ ನೀಡುತ್ತ ತಂಡವನ್ನ ಗೆಲುವಿನ ಹಂತಕ್ಕೆ ಕೊಂಡೊಯ್ಯುವುದು. ಅವರು ಕ್ರೀಡಾಳುಗಳಿಗೆ ಸ್ಫೂರ್ತಿ ತುಂಬುವ ಪರಿ, ತಂಡವನ್ನು ಮುನ್ನೆಡೆಸುವ ರೀತಿ, ಮಾರ್ಗದರ್ಶನ ನೀಡುವ ವಿಧಾನ, ಇವರ ವಿವಿಧ ರೀತಿಯ ಪ್ರಯತ್ನಗಳು ತಂಡದ ಗೆಲುವಿನಲ್ಲಿ ಬಹಳ ಪ್ರಮುಖ ಪಾತ್ರ ವಹಿಸುತ್ತದೆ.

ಇದೇ ರೀತಿಯ ಕಾರ್ಯತಂತ್ರಗಳನ್ನ ಕಾರ್ಪೋರೇಟ್‌ ಕಂಪೆನಿಗಳಲ್ಲಿ ಉದ್ಯೋಗಿಗಳ ಸಾಮರ್ಥ್ಯ ಹೆಚ್ಚಿಸಲು ಮತ್ತು ಉದ್ಯೋಗಿಗಳು ಇನ್ನೂ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು, ಕೆಲವು ತರಬೇತಿ ಕಾರ್ಯಾಗಾರಗಳನ್ನ ಹಮ್ಮಿಕೊಳ್ಳುತ್ತಾರೆ. ಇಲ್ಲಿ ನೀಡುವ ತರಬೇತಿಗಳಿಂದ ಕಂಪೆನಿಯ ಉತ್ಪಾದಕತೆಯೂ ಹೆಚ್ಚಾಗುತ್ತದೆ ಮತ್ತು ಉದ್ಯೋಗಿಗಳಲ್ಲಿ ಹೊಸ ಉತ್ಸಾಹವನ್ನು ಮೂಡಿಸುತ್ತದೆ. ಉದ್ಯೋಗಿಗಳ ವೈಯುಕ್ತಿಕ ಮಟ್ಟದಲ್ಲಿ ನೋಡುವುದಾದರೆ, ಈ ತರಬೇತಿ ಕಾರ್ಯಾಗಾರಗಳು ಸಂವಹನ ಕೌಶಲವನ್ನು ಹೆಚ್ಚಿಸುತ್ತದೆ, ಆತ್ಮವಿಶ್ವಾಸವನ್ನು ಇಮ್ಮಡಿಗೊಳಿಸುತ್ತದೆ, ಕಠಿನ ಸಮಯದಲ್ಲಿ ಪರಿಸ್ಥಿತಿ ನಿಭಾಯಿಸುವಂತಹ ಸಾಮರ್ಥ್ಯವನ್ನು ನೀಡುತ್ತದೆ. ಉದ್ಯೋಗಿಗಳ ಪರಸ್ಪರ ಸಾಮರ್ಥ್ಯ ಮತ್ತು ದೌರ್ಬಲ್ಯಗಳನ್ನು ಅರಿತುಕೊಂಡು ಸಹಕರಿಸಲು ಅನುವು ಮಾಡಿಕೊಡುತ್ತದೆ.

ನಿರ್ಧಾರ ತೆಗೆದುಕೊಳ್ಳುವ ಕೌಶಲಗಳು, ತನ್ನ ತಂಡವನ್ನು ಸೂಕ್ತ ರೀತಿಯಲ್ಲಿ ನಿಭಾಯಿಸುವುದು, ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಅನುಸರಿಸುವ ಮಾರ್ಗೋಪಾಯಗಳು ಹೀಗೆ ವಿವಿಧ ರೀತಿಯ ತರಬೇತಿಗಳನ್ನ ಇಂತಹ ಕಾರ್ಯಾಗಾರಗಳಿಂದ ಪಡೆದುಕೊಳ್ಳಬಹುದು. ಇದು ಕಂಪೆನಿಗಳಲ್ಲಿ ನಡೆಸಿಕೊಡಲ್ಪಡುವ ಕಾರ್ಯಾಗಾರಗಳು. ಆದರೆ ಸಾಮಾನ್ಯ ಮನುಷ್ಯರಿಗೆ ತನ್ನ ಉತ್ತಮ ಜೀವನ ರೂಪಿಸಿಕೊಳ್ಳಲು, ತಮ್ಮ ಪ್ರಯತ್ನದಲ್ಲಿ ಯಶಸ್ಸು ಪಡೆಯಲು, ಇಂತಹ ಕಾರ್ಯಗಾರಗಳ ಅವಕಾಶ ಬಹಳ ಕಡಿಮೆ.

ಇಂತಹ ಕಾರ್ಯಾಗಾರಗಳನ್ನು ನಡೆಸುವ ಸಂಸ್ಥೆಗಳು ಮತ್ತು ತರಬೇತಿ ನೀಡುವ ಜನರನ್ನ ಹುಡುಕಿ ಅವರಿಗೆ ಹಣ ಕೊಟ್ಟು ಇಂತಹ ಕಾರ್ಯಾಗಾರಗಳಿಗೆ ಸೇರಿಕೊಳ್ಳಬೇಕು ಇಲ್ಲವೇ ಸಂಬಧಿಸಿದ ಮಾಹಿತಿ ಪಡೆಯಲು ಪುಸ್ತಕಗಳನ್ನ ಓದಬೇಕು, ವೀಡಿಯೋಗಳನ್ನ ನೋಡಬೇಕು, ಜತೆಗೆ ನಮ್ಮಲ್ಲಿರುವ ಹೆಚ್ಚುಗಾರಿಕೆ ಮತ್ತು ಕೊರತೆಗಳ ಅರಿತುಕೊಳ್ಳಲು ಆತ್ಮ ವಿಮರ್ಶೆಗೆ ಒಳಪಡಿಸಿಕೊಂಡು, ತೆರೆದ ಮನಸ್ಸಿನಿಂದ ಬದಲಾವಣೆಗೆ ನಮ್ಮನ್ನ ಒಡ್ಡಿಕೊಳ್ಳಬೇಕು. ಯಶಸ್ಸಿಗೆ ಬೇಕಾದ ಅಂಶಗಳನ್ನು ಶ್ರದ್ಧೆಯಿಂದ ಮತ್ತು ಶಿಸ್ತಿನಿಂದ ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಮುನ್ನೆಡೆದರೆ ಯಶಸ್ಸು ಕಟ್ಟಿಟ್ಟ ಬುತ್ತಿ. ಜತೆಗೆ ಮಾರ್ಗದರ್ಶಕರ ನೆರವು ಇದ್ದರೆ, ಇನ್ನೂ ಒಂದು ಹಂತ ಮೇಲೇರುವುದು ಅನುಮಾನವಿಲ್ಲ.

ಚಿಕ್ಕವರಿಂದ ದೊಡ್ಡವರಾಗುವ ವರೆಗೂ ನಮ್ಮ ಬೆಳವಣಿಗೆಯಲ್ಲಿ ಒಬ್ಬರಲ್ಲ ಒಬ್ಬ ಗುರುಗಳು ನಮಗೆ ದೊರಕುತ್ತಾರೆ. ಮನೆಯೇ ಮೊದಲ ಪಾಠ ಶಾಲೆ, ತಾಯಿಯೇ ಮೊದಲ ಗುರು. ‌ುನೆಯಲ್ಲಿ ತಂದೆ-ತಾಯಿ ಮತ್ತು ಮನೆಯ ಹಿರಿಯರ ಅನಂತರ ಶಾಲಾ-àಜುಗಳಲ್ಲಿ ಪಠ್ಯ ಬೋಧಿಸುವ ಗುರುಗಳು ಮತ್ತು ಕಚೇರಿಯಲ್ಲಿ ಹಿರಿಯ ಸಹದ್ಯೋಗಿಗಳು ಹೀಗೆ ವಿವಿಧ ಹಂತದಲ್ಲಿ ನಮ್ಮ ಬೆಳವಣಿಗೆಗೆ ಇವರೆಲ್ಲ ಗಣನೀಯವಾದ ಕೊಡುಗೆಯನ್ನು ನೀಡುತ್ತಾರೆ. ನಮ್ಮ ಏಳಿಗೆಗೆ ಮತ್ತು ಜೀವನದ ಹಲವಾರು ಘಟ್ಟಗಳಲ್ಲಿ ಮಾರ್ಗದರ್ಶಕರ ಮಾತುಗಳು ಬಹಳ ಮುಖ್ಯವಾಗುತ್ತದೆ. ಆದರೆ ದೊಡ್ಡವರಾದಂತೆ, ನಮ್ಮ ಮನದಲ್ಲಿ ಅಹಂ ಬೆಳೆಯುತ್ತದೆ.

ಚಿಕ್ಕವಯಸ್ಸಿನಲ್ಲಿ ಗುರು ಹಿರಿಯರ ಮಾರ್ಗದರ್ಶನದಲ್ಲಿ ಬೆಳೆದ ನಾವು ಒಂದು ಹಂತಕ್ಕೆ ಬೆಳೆದ ಮೇಲೆ ಇನ್ನೊಬ್ಬರ ಮಾತು ಯಾಕೆ ಕೇಳಬೇಕು ಎನ್ನುವ ಭಾವನೆಯೂ ನಮ್ಮ ಮನಸ್ಸಿನಲ್ಲಿ ಮೂಡುತ್ತ ಹೋಗುತ್ತದೆ. ಈ ಅಹಂ (ಈಗೋ)ನಿಂದ ನಮಗೆ ಬಹಳ ನಷ್ಟವಿದೆ, ಜತೆಗೆ ನಮ್ಮ ಬೆಳವಣಿಗೆ ವಿಚಾರಕ್ಕೆ ಅಡ್ಡಿಯನ್ನುಂಟು ಮಾಡುತ್ತದೆ ಎನ್ನುವುದು ಬಹಳಷ್ಟು ಜನರಿಗೆ ಗೊತ್ತಿಲ್ಲ. ಈ ಅಹಂನಿಂದ ಹೊಸ ವಿಷಯ ತಿಳಿದುಕೊಳ್ಳುವ ಮತ್ತು ಕಲಿತುಕೊಳ್ಳುವ ಮನೋಭಾವ ನಿಧಾನವಾಗಿ ನಮ್ಮ ಮನದಿಂದ ಹೊರಟು ಹೋಗುತ್ತದೆ.

ಚಿಕ್ಕವರಿದ್ದಾಗ ನಮಗೆ ಬುದ್ಧಿ ಹೇಳಲು ಗುರುಹಿರಿಯರಿದ್ದರು, ಆದರೆ ದೊಡ್ಡವರಾದಾಗ ನಮ್ಮಲ್ಲಿರುವ ಈಗೋದಿಂದ ಎಲ್ಲರನ್ನ ದೂರ ಮಾಡಿಕೊಂಡು ಒಂಟಿಯಾಗಿ ಬದುಕಲು ಪ್ರಾರಂಭಿಸುತ್ತೇವೆ. ಆದರೆ ಸಂಕಷ್ಟ ಎನ್ನುವ ಪರಿಸ್ಥಿತಿ ಬಂದಾಗ ಒಂಟಿಯಾಗಿದ್ದರೆ ಬಹಳ ಒದ್ದಾಡುತ್ತೇವೆ, ಇಂತಹ ಸಂದರ್ಭ ನಿಭಾಯಿಸಲು ಸಾಧ್ಯವಾಗದಿದ್ದಾಗ, ಕೆಲವು ದುರ್ಬಲ ಮನಸ್ಸಿನವರು ಆತ್ಮಹತ್ಯೆಯ ದಾರಿಹಿಡಿಯುತ್ತಾರೆ. ಹೀಗಾಗಿ ಆ ಸಮಯದಲ್ಲಿ ಪರಿಸ್ಥಿತಿ ನಿಭಾಯಿಸಲು ಮತ್ತು ನಮಗೆ ಮಾನಸಿಕ ಸ್ಥೈರ್ಯ ತುಂಬಲು ಒಬ್ಬ ಸ್ನೇಹಿತ, ಒಬ್ಬ ಗುರು ಮತ್ತು ಒಬ್ಬ ಮಾರ್ಗದರ್ಶಕ ಖಂಡಿತ ಬೇಕು.

ಕೇವಲ ಸಂಕಷ್ಟ ಪರಿಸ್ಥಿತಿ ನಿಭಾಯಿಸಲು ಮಾತ್ರವಲ್ಲ, ನಮ್ಮ ಜೀವನ ರೂಪಿಸಿಕೊಳ್ಳಲು ಸಹ ಇಂತಹವರ ನೆರವು ಬೇಕೇಬೇಕು. ನಮ್ಮ ಏಳಿಗೆಗೂ ಗುರುಗಳು ಮತ್ತು ಮಾರ್ಗದರ್ಶಕರು ಬೇಕು. ಇವರ ಸೂಕ್ತ ಮಾರ್ಗದರ್ಶನ ನಮ್ಮ ಬೆಳವಣಿಗೆಗೆ ಬಹಳಷ್ಟು ಪರಿಣಾಮ ಬೀರುತ್ತದೆ. ಇಂದು ಬಹಳಷ್ಟು ಪ್ರಮುಖ ವ್ಯಕ್ತಿಗಳು, ಸೂಕ್ತ ಸಲಹೆ ಮತ್ತು ಮಾರ್ಗದರ್ಶನ ಪಡೆಯಲು ಯಾರಾದರೊಬ್ಬ ಅನುಭವಸ್ಥರನ್ನ ತಮ್ಮ ಮಾರ್ಗದರ್ಶಕರನ್ನಾಗಿ ಗುರುತಿಸಿಕೊಂಡಿರುತ್ತಾರೆ.

ನಮ್ಮ ಸುತ್ತಮುತ್ತಲಿನ ಜನರು, ನಮ್ಮ ಬಂಧು ಬಳಗದಲ್ಲಿ, ನಮ್ಮ ಸ್ನೇಹಿತರ ವಲಯದಲ್ಲಿ ಪ್ರತಿಯೊಂದು ವಿಷಯದಲ್ಲಿ ಒಬ್ಬರಲ್ಲ ಒಬ್ಬರು ಪರಿಣಿತರಿರುತ್ತಾರೆ, ಜ್ಞಾನವನ್ನು ಹೊಂದಿರುತ್ತಾರೆ, ಸಾಧಕ-ಬಾಧಕಗಳ ಅರಿವಿಟ್ಟುಕೊಂಡಿರುತ್ತಾರೆ. ಕೆಲವರು ತಮ್ಮ ಪ್ರಯತ್ನಗಳಿಂದ ಲಾಭ ನಷ್ಟಗಳ ಅನುಭವ ಪಡೆದಿರುತ್ತಾರೆ. ಇವರ ಅರಿವಿನ ಉಪಯೋಗವನ್ನ ನಾವು ಪಡೆದುಕೊಳ್ಳಬೇಕು.

ವಿವಿಧ ವಲಯದಲ್ಲಿ ಕೆಲಸ ಮಾಡುವವರ ಜತೆಗಿನ ಸ್ನೇಹ, ಒಂದಲ್ಲ ಒಂದು ಸಮಯದಲ್ಲಿ ನಮ್ಮ ಅನುಕೂಲಕ್ಕೆ ಬರುತ್ತದೆ. ಇಂದು ಹಲವಾರು ವಿಷಯಗಳು ಬಹಳ ಸಂಕೀರ್ಣ ರೂಪ ಪಡೆದುಕೊಳ್ಳುತ್ತಿವೆ, ಆ ವಿಷಯಗಳ ಬಗೆಗಿನ ಜ್ಞಾನ ನಮಗೆ ಕಡಿಮೆಯಿರುವುದರಿಂದ ಮೋಸ ಹೋಗುವ ಸಂಭವ ಜಾಸ್ತಿಯಿರುತ್ತದೆ. ಇಂತಹವರ ಜತೆ ಸ್ನೇಹ ಬೆಳೆಸುವುದರಿಂದ ಸ್ವಲ್ಪನಾದರೂ ಲಾಭವಾಗುವುದರಲ್ಲಿ ಅನುಮಾನವಿಲ್ಲ. ನಮ್ಮ ಜೀವನ ರೂಪಿಸಿಕೊಳ್ಳುವುದಕ್ಕೆ, ನಮ್ಮ ಪ್ರಯತ್ನದ ಯಶಸ್ಸಿಗೆ, ನಮ್ಮ ಉನ್ನತಿಗೆ ಮತ್ತು ಇತ್ಯಾದಿಗಳ ಅಗತ್ಯತೆಗೆ ಬೇರೆಯವರ ಮಾರ್ಗದರ್ಶನ ಪಡೆಯುವುದು ತಪ್ಪಿಲ್ಲ. ನಮ್ಮ ಈಗೋ ಬಿಟ್ಟು ಕೇಳುವುದರಿಂದ ನಮಗೆ ಲಾಭವೇ ಹೊರತು ನಷ್ಟವೇನಿಲ್ಲ.

ಪ್ರತೀ ವಿಷಯದಲ್ಲಿ ಮಾರ್ಗದರ್ಶಕರ ಅವಲಂಬನೆಯಿಂದ ನಮ್ಮ ಸ್ವಂತ ಬುದ್ಧಿ ಕಳೆತುಕೊಳ್ಳುತ್ತೇವೆಯೋ ಎನ್ನುವ ವಾದವೂ ಇದೆ. ಅದೇನೇ ಇರಲಿ ಒಬ್ಬರ ಅನುಭವ ಅದು ಕೆಟ್ಟದ್ದಾಗಿರಬಹುದು ಅಥವಾ ಒಳ್ಳೆಯದಾಗಿರಬಹುದು, ಕೇಳಿ ತಿಳಿದುಕೊಳ್ಳುವುದರಲ್ಲಿ ನಷ್ಟ ವೇನಿದೆ? ಇನ್ನೊಬ್ಬರ ನೆರವಿಲ್ಲದೆ ನಮ್ಮ ಸ್ವಂತ ಪ್ರಯತ್ನದಿಂದ ನಾವು ಸಹ ಲಾಭ-ನಷ್ಟ ಅಥವ ಒಳ್ಳೆಯ ಮತ್ತು ಕೆಟ್ಟ ಅನುಭವವನ್ನು ನಾವೇ ಸ್ವತಃ ಅನುಭವಿಸಬಹುದು ಅಥವಾ ಅನುಭವಸ್ಥರಿಂದ ಕೇಳಿ ತಿಳಿದುಕೊಳ್ಳಬಹುದು. ಕೆಲವರು ತಮ್ಮ ಹಲವು ಮತ್ತು ವಿವಿಧ ಪ್ರಯತ್ನಗಳಿಂದ ಸೋತು, ನಿರಾಶರಾಗಿರುತ್ತಾರೆ.

ಅಂತಹವರ ಮಾರ್ಗದರ್ಶನ ನಮ್ಮ ಆತ್ಮವಿಶ್ವಾಸವನ್ನ ಕುಗ್ಗಿಸಬಹುದು. ಆದರೆ ಅವರ ಪ್ರಯತ್ನಗಳ ಕುರಿತು ವಿಶ್ಲೇಷಿಸಿ ಲಾಭ ಮತ್ತು ನಷ್ಟದ ರಿಸ್ಕ್ ಇಟ್ಟುಕೊಂಡು ಧೃಡ ಮನಸ್ಸಿನಿಂದ ಮುನ್ನೆಡೆಯುವುದು ಸಹ ಒಂದು ಅನುಭವಕ್ಕೆ ನಾವು ಸಾಕ್ಷಿಯಾಗಬಹುದು. ಅದರ ಫಲಿತಾಂಶ ಕೆಟ್ಟದಾಗಿರಬಹುದು, ಒಳ್ಳೆಯದಾಗಿರಬಹುದು, ಏನೇ ಆದರೂ ಒಂದು ಅನುಭವ ಖಂಡಿತ ನಾವು ಪಡೆಯುತ್ತೇವೆ. ಇದನ್ನು ಮನದಲ್ಲಿಟ್ಟುಕೊಂಡು ನಿಂತ ನೀರಾಗದೆ ಮುನ್ನೆಡೆಯಬೇಕು.

ಈ ರೀತಿ ಬೇರೆಯವರಿಂದ ಮಾರ್ಗದರ್ಶನ ಪಡೆದು ಯಶಸ್ಸುಗಳಿಸಿದ ಮೇಲೆ, ನಾವು ಗಳಿಸಿದ ಅನುಭವವನ್ನ ಇನ್ನೊಬ್ಬರಿಗೆ ಧಾರೆಯೆರೆಯುವುದು ಸಹ ಒಂದು ಸಮಾಜಸೇವೆ. ನಾವು ಬೆಳೆದರೆ ಮಾತ್ರ ಸಾಲದು, ಬೇರೆಯವರನ್ನ ಬೆಳೆಸುವ ಔದಾರ್ಯ ಗುಣವನ್ನ ನಾವು ಹೊಂದಬೇಕು. ಬರೀ ಪಡೆದುಕೊಳ್ಳುವುದರಿಂದ ನಾವು ಸ್ವಾರ್ಥಿಗಳಾಗುತ್ತೇವೆ, ನಮಗೆ ಗೊತ್ತಿರುವ ವಿದ್ಯೆ, ಅನುಭವವನ್ನು ಇನ್ನೊಬ್ಬರಿಗೆ ತಿಳಿಸಿಕೊಡುವುದರಿಂದ ನಮ್ಮ ಬಗ್ಗೆ ಉತ್ತಮ ಅಭಿಪ್ರಾಯ ನಮ್ಮ ಬಂಧು ಮಿತ್ರರು, ಸಹದ್ಯೋಗಿಗಳಲ್ಲಿ ಮೂಡಿ ನಮ್ಮ ಮೇಲಿನ ಗೌರವ ಭಾವನೆ ಹೆಚ್ಚಾಗುವುದರಲ್ಲಿ ಸಂಶಯವಿಲ್ಲ.

*ಪಿ.ಎಸ್‌.ರಂಗನಾಥ, ಮಸ್ಕತ್‌

ಟಾಪ್ ನ್ಯೂಸ್

Champions Trophy: Pakistan has made a new offer to India

Champions Trophy: ಪಾಕ್‌ ಗೆ ಬನ್ನಿ ಆದರೆ….; ಭಾರತಕ್ಕೆ ಹೊಸ ಆಫರ್‌ ನೀಡಿದ ಪಾಕಿಸ್ತಾನ

Life Style: ಧಾವಂತ ಓಡಾಟ- ಒಂದಷ್ಟು ಘನಂಧಾರಿ ಆಲೋಚನೆಗಳು

Life Style: ಧಾವಂತ ಓಡಾಟ- ಒಂದಷ್ಟು ಘನಂಧಾರಿ ಆಲೋಚನೆಗಳು

1-a-japan

Japan: ಪ್ರಧಾನಿ ಕಚೇರಿಗೆ ವ್ಯಾನ್ ನುಗ್ಗಿಸಲು ಯತ್ನಿಸಿದ ದುಷ್ಕರ್ಮಿ!

chattsghar

Chhattisgarh: ನಕ್ಸಲರಿಂದ ಬಾಂಬ್ ಸ್ಫೋಟ… ಇಬ್ಬರು ಅರೆಸೇನಾ ಪಡೆ ಯೋಧರಿಗೆ ಗಾಯ

Channapatna ByPoll: NDA ticket to Yogeshwar: Aswath Narayan Gowda confident

Channapatna ByPoll: ಎನ್ ಡಿಎ ಟಿಕೆಟ್ ಯೋಗೇಶ್ವರ್ ಗೆ: ಅಶ್ವಥ್ ನಾರಾಯಣ ಗೌಡ ವಿಶ್ವಾಸ

ನಾಡಿಗೆ ಬಂದ ಕಾಡಾನೆ… ಸಿಡಿಮದ್ದಿಗೂ ಜಗ್ಗದೆ ಅರಣ್ಯ ಸಿಬ್ಬಂದಿಗಳನ್ನು ಕಾಡಿದ ಆನೆ ಹಿಂಡು

ನಾಡಿಗೆ ಬಂದ ಕಾಡಾನೆ… ಸಿಡಿಮದ್ದಿಗೂ ಜಗ್ಗದೆ ಅರಣ್ಯ ಸಿಬ್ಬಂದಿಗಳನ್ನು ಕಾಡಿದ ಆನೆ ಹಿಂಡು

13-

Gudibanda: ದೇವಸ್ಥಾನದಲ್ಲಿ ಕಳವು; ಆರೋಪಿಗಳು ಪೊಲೀಸ್ ವಶಕ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Life Style: ಧಾವಂತ ಓಡಾಟ- ಒಂದಷ್ಟು ಘನಂಧಾರಿ ಆಲೋಚನೆಗಳು

Life Style: ಧಾವಂತ ಓಡಾಟ- ಒಂದಷ್ಟು ಘನಂಧಾರಿ ಆಲೋಚನೆಗಳು

ಬಸವಣ್ಣರ ಬೋಧನೆಗಳು ಜೀವನಕ್ಕೆ ಪ್ರೇರಣೆ: ಪೂಜಾ ಗಾಂಧಿ

ಬಸವಣ್ಣರ ಬೋಧನೆಗಳು ಜೀವನಕ್ಕೆ ಪ್ರೇರಣೆ: ಪೂಜಾ ಗಾಂಧಿ

ಮಸ್ಕತ್‌: ಒಮನ್‌ ಬಿಲ್ಲವಾಸ್‌ ಸಾಮರಸ್ಯ ಸಭೆ

ಮಸ್ಕತ್‌: ಒಮನ್‌ ಬಿಲ್ಲವಾಸ್‌ ಸಾಮರಸ್ಯ ಸಭೆ

ವಿಶ್ವಬ್ರಾಹ್ಮಣ ಒಕ್ಕೂಟ ಮಸ್ಕತ್‌: ಸ್ವಯಂ ಪ್ರೇರಿತ ರಕ್ತದಾನ ಶಿಬಿರ

Desi Swara: ಪಂಪ ಕನ್ನಡ ಕೂಟ: ಅದ್ದೂರಿ ಗಣೇಶೋತ್ಸವ, ಸಾಂಸ್ಕೃತಿಕ ಕಾರ್ಯಕ್ರಮ

Desi Swara: ಪಂಪ ಕನ್ನಡ ಕೂಟ: ಅದ್ದೂರಿ ಗಣೇಶೋತ್ಸವ, ಸಾಂಸ್ಕೃತಿಕ ಕಾರ್ಯಕ್ರಮ

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

ಹೊಸ ಸೇರ್ಪಡೆ

Champions Trophy: Pakistan has made a new offer to India

Champions Trophy: ಪಾಕ್‌ ಗೆ ಬನ್ನಿ ಆದರೆ….; ಭಾರತಕ್ಕೆ ಹೊಸ ಆಫರ್‌ ನೀಡಿದ ಪಾಕಿಸ್ತಾನ

Life Style: ಧಾವಂತ ಓಡಾಟ- ಒಂದಷ್ಟು ಘನಂಧಾರಿ ಆಲೋಚನೆಗಳು

Life Style: ಧಾವಂತ ಓಡಾಟ- ಒಂದಷ್ಟು ಘನಂಧಾರಿ ಆಲೋಚನೆಗಳು

1-a-japan

Japan: ಪ್ರಧಾನಿ ಕಚೇರಿಗೆ ವ್ಯಾನ್ ನುಗ್ಗಿಸಲು ಯತ್ನಿಸಿದ ದುಷ್ಕರ್ಮಿ!

18-bng

Patna Biological Park: ಬನ್ನೇರುಘಟ್ಟಕ್ಕೆ ಬಿಹಾರದಿಂದ ಅತಿಥಿಗಳು!

chattsghar

Chhattisgarh: ನಕ್ಸಲರಿಂದ ಬಾಂಬ್ ಸ್ಫೋಟ… ಇಬ್ಬರು ಅರೆಸೇನಾ ಪಡೆ ಯೋಧರಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.