Caste Census: ಜಾತಿಗಣತಿ ವರದಿ ವಿಚಾರದಲ್ಲಿ ಸಿದ್ದರಾಮಯ್ಯ ಉತ್ತರಕುಮಾರ ರೀತಿ..: ಈಶ್ವರಪ್ಪ

ರೈತರಿಗೆ ತಾತ್ಕಾಲಿಕ ಪರಿಹಾರ, ಚರಂಡಿ, ರಸ್ತೆಗಳ ಸರಿಪಡಿಸುವ ಕೆಲಸವನ್ನಾದರೂ ರಾಜ್ಯ ಸರಕಾರ ಮಾಡಲಿ: ಮಾಜಿ ಡಿಸಿಎಂ

Team Udayavani, Oct 19, 2024, 6:11 PM IST

Eshwar1

ವಿಜಯಪುರ: ರಾಜ್ಯದಲ್ಲಿ ಜಾತಿಗಣತಿ ವರದಿ ‘ನಾಳೆ ಬಾ’ ಎಂಬ ಸ್ಥಿತಿಯಲ್ಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ವರದಿ ಜಾರಿ ಮಾಡುತ್ತೇವೆ ಎಂದು ಹೇಳುತ್ತಲೇ ಇದ್ದಾರೆ ವಿನಾ ಇದುವರೆಗೂ ಆ ನಿಟ್ಟಿನಲ್ಲಿ ಕ್ರಮ ವಹಿಸಿಲ್ಲ. ಒಂದರ್ಥದಲ್ಲಿ ಉತ್ತರಕುಮಾರನ ಥರ ಸಿದ್ದರಾಮಯ್ಯನವರೂ ಆಗಿದ್ದಾರೆ ಎಂದು ಮಾಜಿ ಡಿಸಿಎಂ  ಕೆ.ಎಸ್.ಈಶ್ವರಪ್ಪ ವ್ಯಂಗ್ಯವಾಡಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಜಾತಿಗಣತಿ ವರದಿ ತಯಾರಿಸಲು ನೂರಾರು ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ. ಈ ಹಣ ವ್ಯರ್ಥವಾಗಬಾರದು. ಕೂಡಲೇ, ಅದನ್ನು ಸಚಿವ ಸಂಪುಟದ ಮುಂದೆ ತಂದು ಚರ್ಚಿಸಲಿ. ಸಂಪುಟದಲ್ಲಿ ಮುಂದೆ ಮಂಡಿಸುತ್ತೇವೆ ಎಂದು ಹೇಳುತ್ತಲೇ ಇದ್ದು, ಇದೀಗ ಹೊಸ ದಿನಾಂಕವೂ ಪ್ರಕಟಿಸಿದ್ದಾರೆ. ಅದನ್ನೂ ಕಾದು ನೋಡೋಣ ಎಂದರು.

ಅಭಿವೃದ್ಧಿ ಕಡೆ ಗಮನ ಕೊಡಿ: 

ಕಾಂಗ್ರೆಸ್ ಸರ್ಕಾರದಲ್ಲಿ ಹಿಂದುಳಿದವರು, ದಲಿತರಿಗೆ ತೊಂದರೆ ಹೆಚ್ಚಾಗಿದೆ. ಎಲ್ಲರ ಅಭಿವೃದ್ಧಿ ಮಾಡುತ್ತೇವೆ ಎಂಬ ಕೊಟ್ಟ ಮಾತು ಮರೆತಿದ್ದಾರೆ. ಈ ಹಿಂದೆ ಬಿಜೆಪಿ ಸರ್ಕಾರ ಘೋಷಿಸಿದ್ದ ಹಿಂದುಳಿದ ವರ್ಗದ 1,073 ಯೋಜನೆಗಳನ್ನೂ ಈ ಸರ್ಕಾರ ರದ್ದು ಮಾಡಿದೆ. ವಾಲ್ಮೀಕಿ ನಿಗಮದಲ್ಲಿನ ಹಣ ನುಂಗಿ ನೀರು ಕುಡಿದಿದ್ದಾರೆ. ಸರ್ಕಾರದ ಹಲವರು ಕೇಸ್‌ಗಳಲ್ಲಿ ಸಿಲುಕಿಸಿದ್ದಾರೆ ಎಂದು ನೀವೂ ವಿರೋಧಿಗಳ ಸಿಲುಕಿಸುವ ಕೆಲಸ ಮಾಡುತ್ತಿದ್ದೀರಿ. ಆ ಕಡೆ ಕೊಡುವಷ್ಟೇ ಗಮನ ರಾಜ್ಯದ ಅಭಿವೃದ್ಧಿ ಕಡೆಯೂ ಕೊಡಿ. ಮಳೆಯಿಂದ ರೈತರು ಸಮಸ್ಯೆಗೆ ಸಿಲುಕಿದ್ದಾರೆ. ಆದರೆ, ಯಾವ ಸಚಿವರು ಹೊಲ, ಗದ್ದೆಗೆ ಹೋಗಿಲ್ಲ. ರೈತರಿಗೆ ತಾತ್ಕಾಲಿಕ ಪರಿಹಾರ ಕೊಡಿ ಮತ್ತು ಚರಂಡಿ, ರಸ್ತೆಗಳ ಸರಿಪಡಿಸುವ ಕೆಲಸವನ್ನಾದರೂ ಮಾಡಿ ಎಂದು ಆಗ್ರಹಿಸಿದರು.

ಇದ್ದಕ್ಕಿದ್ದಂತೆ ಯಲ್ಲಮ್ಮ, ಚಾಮುಂಡೇಶ್ವರಿ ನೆನಪು:
ಯಾವ ವ್ಯಕ್ತಿ ಕುಂಕುಮ, ಕೇಸರಿ ಕಂಡರೆ ಮೈಮೇಲೆ ಭೂತ ಬಂದವರಂತೆ ಆಡುತ್ತಿದ್ದರೋ, ಅದೇ ವ್ಯಕ್ತಿ ತಾನು ಜೈಲಿಗೆ ಹೋಗಬೇಕಾಗುತ್ತದೆ ಎಂಬ ಸಂದರ್ಭ ಬಂದಾಗ ಇದಕ್ಕಿದಂತೆ ಸವದತ್ತಿ ಯಲ್ಲಮ್ಮ, ಮೈಸೂರಿನ ಚಾಮುಂಡೇಶ್ವರಿ ನೆನಪಾಗುತ್ತಾಳೆ. ನೆನಪಾಗಿದ್ದಕ್ಕೆ ನನಗೆ ತುಂಬಾ ಸಂತೋಷ. ನೀವು ಹಿಂದುತ್ವ ಉಳಿಸಿದರೆ, ಆ ಚಾಮುಂಡೇಶ್ವರಿ ನಿಮ್ಮನ್ನು ಕಾಪಾಡಲಿ ಎಂದು ಪ್ರಾರ್ಥಿಸುತ್ತೇನೆ. ಇದು ನಾಟಕೀಯವಾಗಿದ್ದರೆ ಯಲ್ಲಮ್ಮ, ಚಾಮುಂಡೇಶ್ವರಿಯೇ ನಿಮ್ಮನ್ನು ತೆಗೆದುಕೊಂಡು ಹೋಗಿ ಜೈಲಿಗೆ ಹಾಕುತ್ತಾಳೆ ಎಂದು ಕೆ.ಎಸ್.ಈಶ್ವರಪ್ಪ ಸಿಎಂ ಸಿದ್ದರಾಮಯ್ಯ ಉದ್ದೇಶಿಸಿ ಹೇಳಿದರು.

ಹಿಂದುತ್ವ ಉಳಿಸುವವರಿಗೂ ತೊಂದರೆ: 
ನಾನು ಕೇವಲ ಸಿದ್ದರಾಮಯ್ಯ  ಒಬ್ಬರಿಗೆ ಹೇಳುತ್ತಿಲ್ಲ. ಎಲ್ಲರ ಮನಸ್ಸಿನಲ್ಲೂ ಹಿಂದುತ್ವ ಇದೆ. ರಾಜಕಾರಣಕ್ಕೋಸ್ಕರ ಮುಸ್ಲಿಮರ ತೃಪ್ತಿ ಪಡಿಸುವುದು ಆಗುತ್ತಿದೆ. ಮೊನ್ನೆ ಸಿದ್ದರಾಮಯ್ಯ ಪತ್ನಿ ಪಾರ್ವತಿ ಹೆಸರಲ್ಲಿ ಅರ್ಚನೆ ಮಾಡಿಸಿ ಕುಂಕುಮ ಇಟ್ಟುಕೊಂಡು ಬರುತ್ತಾರೆ. ಎಲ್ಲ ರಾಜಕಾರಣಿಗಳಿಗೂ ಭಕ್ತಿ ಬರಬೇಕು. ಆದರೆ, ಸಂಕಟ ಬಂದಾಗ ವೆಂಕಟರಮಣ ಅನ್ನೋದು ಸರಿಯಲ್ಲ. ಆ ಹಿಂದುತ್ವದ ಮುಖಾಂತರವೇ ನೀವು ಅಧಿಕಾರಕ್ಕೆ ಬಂದವರು. ಆದರೆ, ಹಿಂದುಳಿದವರು, ದಲಿತರ, ಹಿಂದುತ್ವಕ್ಕೂ ಮೋಸ ಮಾಡುತ್ತೀರಿ. ಹಿಂದುತ್ವವನ್ನು ಯಾರು ಉಳಿಸುತ್ತೇನೆ ಎಂದು ಹೊರಟಿದ್ದರೋ, ಅವರಿಗೂ ತೊಂದರೆ ಕೊಡುತ್ತಿದ್ದೀರಿ. ಇದು ಯಾವ ನ್ಯಾಯ? ಎಂದು ಪ್ರಶ್ನಿಸಿದರು.

ಟಾಪ್ ನ್ಯೂಸ್

JK-Gov–omer

Jammu-Kashmir: ಮತ್ತೆ ರಾಜ್ಯ ಸ್ಥಾನಮಾನ ನಿರ್ಣಯಕ್ಕೆ ಲೆಫ್ಟಿನೆಂಟ್‌ ಗೌರ್ನರ್‌ ಅಸ್ತು

1-navyaa

BJP; ವಯನಾಡ್ ನಲ್ಲಿ ಪ್ರಿಯಾಂಕಾ ಗಾಂಧಿ ವಿರುದ್ಧ ನವ್ಯಾ ಹರಿದಾಸ್ ಕಣಕ್ಕೆ

13

Job Fair : ಶಿರೂರು ಗುಡ್ಡ ಕುಸಿತದಲ್ಲಿ ಪಾಲಕರನ್ನು ಕಳೆದುಕೊಂಡಿದ್ದ ಯುವತಿಗೆ ಉದ್ಯೋಗ

cOurt

Mangaluru: ಅಪ್ರಾಪ್ತೆಗೆ ಶಿಕ್ಷಕನಿಂದ ಲೈಂಗಿಕ ಕಿರುಕುಳ: ಆರೋಪ ಸಾಬೀತು, ಶಿಕ್ಷೆ ಪ್ರಕಟ

BJP 2

By-Election; ಶಿಗ್ಗಾವಿಗೆ ಭರತ್, ಸಂಡೂರಿಗೆ ಬಂಗಾರು ಹನುಮಂತು: ಬಿಜೆಪಿ ಘೋಷಣೆ

JMM-Congress

Jharkhand Polls: ಜಾರ್ಖಂಡ್‌ನಲ್ಲಿ ಜೆಎಂಎಂ-ಕಾಂಗ್ರೆಸ್‌ 70 ಸ್ಥಾನಗಳಲ್ಲಿ ಮೈತ್ರಿ ಅಂತಿಮ

1-a-vasu

Vasundhra Oswal; ಭಾರತೀಯ ಬಿಲಿಯನೇರ್ ನ ಪುತ್ರಿ ಉಗಾಂಡಾದಲ್ಲಿ ವಶಕ್ಕೆ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2-vijayapura

Vijayapura: ಬಿಜೆಪಿ ಶಾಸಕ ಯತ್ನಾಳ್ ವಿರುದ್ಧ ಕೇಸ್ ದಾಖಲು

2-vijayapura

Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ

Vijayapura: 2-year-old child passed away after falling into Raj canal

Vijayapura: ರಾಜಕಾಲುವೆಗೆ ಬಿದ್ದು 2 ವರ್ಷದ ಮಗು ಸಾವು

Vijayapura: ವಕ್ಫ್ ಕಾಯ್ದೆ ರದ್ದತಿಗೆ ಆಗ್ರಹಿಸಿ ಯತ್ನಾಳ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ

Vijayapura: ವಕ್ಫ್ ಕಾಯ್ದೆ ರದ್ದತಿಗೆ ಆಗ್ರಹಿಸಿ ಯತ್ನಾಳ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ

Basangouda Patil Yatnal: ಫಸ್ಟ್‌ ಲೈನ್‌ ನಾಯಕರ ಆಸ್ತಿ ಬಗ್ಗೆ ತನಿಖೆ ಆಗಲಿ

Basangouda Patil Yatnal: ಫಸ್ಟ್‌ ಲೈನ್‌ ನಾಯಕರ ಆಸ್ತಿ ಬಗ್ಗೆ ತನಿಖೆ ಆಗಲಿ

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

ಹೊಸ ಸೇರ್ಪಡೆ

ಎಂಎಸ್‌ಇಝಡ್‌: ಕಾಣೆಯಾಗಿದ್ದ ಭದ್ರತಾ ಸಿಬಂದಿ ಆತ್ಮಹತ್ಯೆ

ಎಂಎಸ್‌ಇಝಡ್‌: ಕಾಣೆಯಾಗಿದ್ದ ಭದ್ರತಾ ಸಿಬಂದಿ ಆತ್ಮಹತ್ಯೆ

JK-Gov–omer

Jammu-Kashmir: ಮತ್ತೆ ರಾಜ್ಯ ಸ್ಥಾನಮಾನ ನಿರ್ಣಯಕ್ಕೆ ಲೆಫ್ಟಿನೆಂಟ್‌ ಗೌರ್ನರ್‌ ಅಸ್ತು

ಮಂಗಳೂರಿನಲ್ಲಿ ರಕ್ಷಿಸಲ್ಪಟ್ಟಿದ್ದ ಮದ್ದೂರಿನ ಮಹಿಳೆ 15 ವರ್ಷ ಬಳಿಕ ಕುಟುಂಬ ಸೇರಿದರು! 

ಮಂಗಳೂರಿನಲ್ಲಿ ರಕ್ಷಿಸಲ್ಪಟ್ಟಿದ್ದ ಮದ್ದೂರಿನ ಮಹಿಳೆ 15 ವರ್ಷ ಬಳಿಕ ಕುಟುಂಬ ಸೇರಿದರು! 

16

Ayanur Manjunath: ಕೇಂದ್ರ ಸಚಿವ ಸ್ಥಾನಕ್ಕೆ ಜೋಶಿ ರಾಜೀನಾಮೆ ನೀಡಲಿ: ಆಯನೂರು

1-navyaa

BJP; ವಯನಾಡ್ ನಲ್ಲಿ ಪ್ರಿಯಾಂಕಾ ಗಾಂಧಿ ವಿರುದ್ಧ ನವ್ಯಾ ಹರಿದಾಸ್ ಕಣಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.