BBK11: ಅಪ್ಪನಿಗೆ ಹುಟ್ಟಿದರೆ ಎನ್ನುವ ಮಾತು.. ಮಾನಸ, ಚೈತ್ರಾಗೆ ಕಿಚ್ಚನಿಂದ ತರಾಟೆ
ನಿಮ್ಮನ್ನು ಯಾಕೆ ಮನೆಯಲ್ಲಿಟ್ಟುಕೊಂಡಿದ್ದೇವೆ..
Team Udayavani, Oct 19, 2024, 5:43 PM IST
ಬೆಂಗಳೂರು: ಬಿಗ್‌ಬಾಸ್ ಕನ್ನಡ -11 (Bigg Boss Kannada-11) ನಲ್ಲಿಂದು (ಅ.19 ರಂದು) ವಾರದ ಕಿಚ್ಚನ ಪಂಚಾಯ್ತಿ ನಡೆಯಲಿದೆ.
ಕನ್ನಡ ಬಿಗ್ ಬಾಸ್ ಇತಿಹಾಸದಲ್ಲೇ ಮೊದಲ ಬಾರಿಗೆ ವಾಗ್ವಾದವೊಂದು ವಿಕೋಪಕ್ಕೆ ತಿರುಗಿ ಒಬ್ಬರಲ್ಲ, ಇಬ್ಬರು ಸ್ಪರ್ಧಿಗಳು ಒಂದೇ ದಿನ ಮನೆಯಿಂದ ಆಚೆ ಹೋಗಿದ್ದಾರೆ. ಜಗದೀಶ್ ಹಾಗೂ ರಂಜಿತ್ ದೊಡ್ಮನೆಯಿಂದ ವಾರದ ಮಧ್ಯದಲ್ಲೇ ಆಚೆ ಹೋಗಿದ್ದಾರೆ.
ಹೆಣ್ಮಕ್ಕಳ ಬಗ್ಗೆ ಅವಹೇಳನಕಾರಿ ಹಾಗೂ ನಿಂದನೆಯ ಪದಗಳನ್ನು ಬಳಸಿದ್ದರು ಎನ್ನುವ ಕಾರಣಕ್ಕೆ ಜಗದೀಶ್ ಅವರ ಮೇಲೆ ಇಡೀ ಮನೆಯೇ ಗರಂ ಆಗಿತ್ತು.
ಇದನ್ನೂ ಓದಿ: BBK11: ಜಗದೀಶ್ ಗೆ ನ್ಯಾಯ ಸಿಗಬೇಕು.. ವಕೀಲ್ ಸಾಬ್ ಪರ ನಿಂತ ಜನ
ಜಗದೀಶ್ ವಿಚಾರ ಆಗಿದ್ದೇನು?: ಹೆಣ್ಮಕ್ಕಳ ಬಗ್ಗೆ ಮಾತನಾಡುವಾಗ ಎಚ್ಚರವೆಂದು ಗೋಲ್ಡ್ ಸುರೇಶ್ ಅವರು ಹೇಳಿದಾಗ, ಜಗದೀಶ್ ಮಾತನಾಡ್ತೀನಿ ನೀನ್ಯಾರೋ ಕೇಳೋಕೆ ಎಂದಿದ್ದರು. ಈ ವೇಳೆ ಚೈತ್ರಾ ಅವರೊಂದಿಗೂ ಜಗದೀಶ್ ವಾಗ್ವಾದಕ್ಕೆ ಇಳಿದಿದ್ದರು. ಇತ್ತ ಹಂಸಾ ಅವರು ಇಲ್ಲಿ ಏನೆಲ್ಲ ಹೇಳಿಸಿಕೊಳ್ಳೋಕ್ಕೆ ನಾವು ರೆಡಿಯಿಲ್ಲ. ನಿನ್ನ ಅಪ್ಪನಿಗೆ ಹುಟ್ಟಿದರೆ ಬಾ ಎಂದು ಚೈತ್ರಾ ಸವಾಲು ಎಸೆದಿದ್ದರು.
ಆ ಪದ ಉಪಯೋಗಿಸಿದ್ದೀರಾ ಇಲ್ವಾ? ಎಂದು ಚೈತ್ರಾ ಜಗದೀಶ್ ಗೆ ಪ್ರಶ್ನೆ ಮಾಡಿದ್ದರು. ತಾಕತ್ತಿದ್ರೆ ಏನೂ ಬೇಕೋ ಅದನ್ನು ಮಾಡ್ಕೋ ಹೋಗು ಎಂದು ಮರು ಪ್ರಶ್ನೆ ಹಾಕಿದ್ದರು.
ಸೀರೆ ಕೊಡ್ತೀನಿ ಹಾಕ್ಕೋ ಎಂದು ಮಾನಸ ಜಗದೀಶ್ ಗೆ ಹೇಳಿದ್ದರು. ಸೀರೆ ಏನಕ್ಕೆ ಹೆಣ್ಣು ಆಗೋಕ್ಕೂ ಈತನಿಗೆ ಯೋಗ್ಯತೆ ಇಲ್ಲ ಎಂದು ಹಂಸಾ ಗರಂ ಆಗಿದ್ದರು. ಇದೇ ವೇಳೆ ರಂಜಿತ್ ಅವರ ಜಗದೀಶ್ ಅವರನ್ನು ದೂಡಿದ್ದರು.
ಪಂಚಾಯ್ತಿ ಕಟ್ಟೇಲಿ ನ್ಯಾಯ ಎತ್ತಿ ಹಿಡಿದ ಕಿಚ್ಚ!
ವಾರದ ಕತೆ ಕಿಚ್ಚನ ಜೊತೆ | ಇಂದು ರಾತ್ರಿ 9
#BiggBossKannada11 #BBK11 #HosaAdhyaya #ColorsKannada #BannaHosadaagideBandhaBigiyaagide #ಕಲರ್ಫುಲ್ಕತೆ #colorfulstory #Kicchasudeepa pic.twitter.com/hlpGSm2BvY— Colors Kannada (@ColorsKannada) October 19, 2024
ಇಡೀ ವಾರ ಮನೆಯಲ್ಲಿ ನಡೆದ ಬೆಳವಣಿಗೆಗಳ ಬಗ್ಗೆ ಸುದೀಪ್ ಅವರು ಮಾತನಾಡಿದ್ದು, ಮನೆಯಲ್ಲಿರುವ ಸ್ಪರ್ಧಿಗಳ ಮೇಲೆ ಗರಂ ಆಗಿದ್ದಾರೆ.
ಸುದೀಪ್ ಹೇಳಿರುವುದೇನು?: ಕಿಚ್ಚ ಸುದೀಪ್ (Kiccha Sudeep) ಜಗದೀಶ್ ಅವರ ವರ್ತನೆ ಬಗ್ಗೆ ಮಾತನಾಡುತ್ತಾ, ಅವರೊಂದಿಗೆ ಉಡಾಫೆಯಾಗಿ ವರ್ತಿಸಿದ ಇತರೆ ಸ್ಪರ್ಧಿಗಳಿಗೆ ಕ್ಲಾಸ್ ತೆಗದುಕೊಂಡಿದ್ದಾರೆ.
ತಪ್ಪು ಮಾಡಿರುವವರು ಹೊರಗಡೆ ಹೋದರು. ನಿಮ್ ಗಳಲ್ಲಿಎಷ್ಟು ಜನ ಸರಿಯಿದ್ದೀರಿ. ಒಬ್ಬ ಚಪ್ಪಲಿ ಎತ್ತಿ ಬಿಸಾಡುತ್ತಿದ್ದಾರೆ ಅಂದ್ರೆ ಅದು ಓಕೆನಾ? ಎಂದಾಗ ಹಂಸಾ ಅವರು ಪ್ರಾಮಾಣಿಕವಾಗಿ ಎಂದು ಮಾತು ಆರಂಭಿಸುವಾಗಲೇ ಅವರ ಮಾತನ್ನು ಅರ್ಧಕ್ಕೇ ತಡೆದ ಕಿಚ್ಚ ಪ್ರಾಮಾಣಿಕ ಎನ್ನುವ ಪದವೇ ಈ ಮನೆಗೆ ಸೂಕ್ತವಾಗಲ್ಲ. ಮಾನಸ ಮೇಡಂ ಮಾತುಗಳಿಂದಲೇ ಈ ಮನೆಯಿಂದ ಒಬ್ಬ ವ್ಯಕ್ತಿ ಹೊರಗಡೆ ಹೋದರು ಅಂದರೆ ನೀವು ಮಾತನಾಡಿದ ಕೆಲ ತಪ್ಪು ಮಾತುಗಳಿಂದ ನಿಮ್ಮನ್ನು ಯಾಕೆ ಒಳಗಡೆ ಇಟ್ಟುಕೊಳ್ಳಬೇಕು. ಚೈತ್ರಾ ಅವರೇ ಹೆಣ್ಮಕ್ಕಳ ಬಗ್ಗೆ ಮಾತನಾಬೇಡಿ ಅಂತೀರಿ ಒಬ್ಬ ಅಪ್ಪನಿಗೆ ಹುಟ್ಟಿದರೆ ಅಂದರೆ ಯಾವ ನನ್ಮಗ ಕೂಡ ಅಪ್ಪನಿಗೆ ಬೈಯ್ತಾ ಇಲ್ಲ ಮೇಡಮ್ ತಾಯಿಗೆ ಬೈಯುತ್ತಿರುವುದು ಎಂದು ಕಿಚ್ಚ ಗರಂ ಆಗಿರುವುದನ್ನು ಪ್ರೋಮೊದಲ್ಲಿ ತೋರಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BBK11: ಮಂಜು ಅವರದ್ದು ಚೀಪ್ ಮೆಂಟಲಿಟಿ ಎಂದ ರಜತ್; ಭವ್ಯ – ಮೋಕ್ಷಿತಾ ವಾಗ್ವಾದ
BBK11: ಕೊನೆಗೂ ಬಿಗ್ ಬಾಸ್ ಬಿಟ್ಟು ಬಂದಿದ್ದಕ್ಕೆ ಕಾರಣ ಬಹಿರಂಗಪಡಿಸಿದ ಗೋಲ್ಡ್ ಸುರೇಶ್
BBK11: ಟಾಸ್ಕ್ ವಿಚಾರದಲ್ಲಿ ಫೈಯರ್ ಚೈತ್ರಾ ಠುಸ್.. ಮನೆಮಂದಿ ಸುಸ್ತು
BBK11: ಮತ್ತೆ ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್..? ವಿಡಿಯೋದಲ್ಲಿ ಸುಳಿವು
BBK11: ಗೆಲ್ಲಲೇ ಬೇಕಾದ ಟಾಸ್ಕ್ನಲ್ಲಿ ಎಡವಿದ ಚೈತ್ರಾ.. ನನ್ನಿಂದ ಆಗಲ್ಲವೆಂದು ಕಣ್ಣೀರು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kundapura: ಕಾರು ಢಿಕ್ಕಿ; ಸ್ಕೂಟರ್ ಸವಾರನಿಗೆ ಗಾಯ
Jammu and Kashmir; ಉಗ್ರವಾದ ಪರಿಸರ ವ್ಯವಸ್ಥೆ ಬಹುತೇಕ ಕೊನೆಗೊಂಡಿದೆ: ಶಾ
Bhadravathi:ಬಾಯ್ಲರ್ ಸ್ಫೋ*ಟದಿಂದ ರೈಸ್ಮಿಲ್ ಕುಸಿತ:7 ಮಂದಿಗೆ ಗಾಯ
Sringeri; ಅಸ್ಸಾಂ ಕಾರ್ಮಿಕನಿಂದ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿ*ಕ ದೌರ್ಜನ್ಯ
BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.