BJP; ಜಾರ್ಖಂಡ್ ಮೊದಲ ಪಟ್ಟಿ ಬಿಡುಗಡೆ: ಮಾಜಿ ಸಿಎಂ ಚಂಪೈ ಸೊರೇನ್ ಗೆ ಟಿಕೆಟ್

ಸೀಟು ಹಂಚಿಕೆ ಘೋಷಣೆ ಮಾಡಿದ ಬೆನ್ನಲ್ಲೇ 66 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರು ಪ್ರಕಟ

Team Udayavani, Oct 19, 2024, 7:30 PM IST

CHampai Soren

ಹೊಸದಿಲ್ಲಿ: ಜಾರ್ಖಂಡ್ ವಿಧಾನಸಭಾ ಚುನಾವಣೆಗೆ ಮಿತ್ರ ಪಕ್ಷಗಳೊಂದಿಗೆ ಸೀಟು ಹಂಚಿಕೆ ಘೋಷಣೆ ಮಾಡಿದ ಬೆನ್ನಲ್ಲೇ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಶನಿವಾರ(ಅ19) ಬಿಡುಗಡೆ ಮಾಡಿದೆ.  ಜಾರ್ಖಂಡ್ ಬಿಜೆಪಿ ಅಧ್ಯಕ್ಷ, ಮಾಜಿ ಸಿಎಂ ಬಾಬುಲಾಲ್ ಮರಾಂಡಿ ಧನ್ವಾರ್ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದು, ಜೆಎಂಎಂ ತೊರೆದು ಬಿಜೆಪಿ ಸೇರಿದ್ದ ಮಾಜಿ ಸಿಎಂ ಚಂಪೈ ಸೊರೆನ್ ಸಾರಿಕೆಲ್ಲಾ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ.

ಒಟ್ಟು 81 ಸ್ಥಾನಗಳ ಪೈಕಿ ಎನ್ ಡಿಎ ಮೈತ್ರಿಕೂಟದಡಿ ಬಿಜೆಪಿ 68 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ.ಈ ಪೈಕಿ 66 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಏಕಕಾಲದಲ್ಲಿ ಪ್ರಕಟಿಸಿದೆ.

ಮಿತ್ರ ಪಕ್ಷಗಳಾದ ಎಜೆಎಸ್‌ಯು 10 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ. ಜೆಡಿಯು ಎರಡು ಸ್ಥಾನಗಳಲ್ಲಿ ಮತ್ತು ಎಲ್‌ಜೆಪಿ ಒಂದು ಸ್ಥಾನದಲ್ಲಿ ಸ್ಪರ್ಧಿಸಲಿದೆ.

ಸೀತಾ ಸೊರೇನ್ ಗೆ ಟಿಕೆಟ್

ಪ್ರಮುಖ ಅಭ್ಯರ್ಥಿಗಳ ಪೈಕಿ ಸೀತಾ ಸೊರೆನ್ ಜಮ್ತಾರಾದಿಂದ ಕಣಕ್ಕಿಳಿಯಲಿದ್ದಾರೆ. ಜಾರ್ಖಂಡ್ ಸಿಎಂ ಹೇಮಂತ್ ಸೊರೇನ್ ಅವರ ಅತ್ತಿಗೆ ಸೀತಾ ಸೊರೇನ್ ಅವರನ್ನು ಈ ವರ್ಷದ ಮೇ ತಿಂಗಳಲ್ಲಿ “ಪಕ್ಷ ವಿರೋಧಿ ಚಟುವಟಿಕೆ” ಗಾಗಿ ಜೆಎಂಎಂನಿಂದ ಉಚ್ಚಾಟಿಸಲಾಗಿತ್ತು. ಮೂರು ಬಾರಿ ಶಾಸಕಿಯಾಗಿರುವ ಸೀತಾ ಸೊರೇನ್ ಅವರು 2009 ರಲ್ಲಿ ಪತಿ ದುರ್ಗಾ ಸೊರೇನ್ ನಿಧನ ಹೊಂದಿದ್ದರು. ಜೆಎಂಎಂ ನಲ್ಲಿ ಪ್ರತ್ಯೇಕತೆ ಮತ್ತು ನಿರ್ಲಕ್ಷ್ಯವನ್ನು ಉಲ್ಲೇಖಿಸಿದ್ದರು.

ನೀರಾ ಯಾದವ್ ಕೊಡರ್ಮಾದಿಂದ ಸ್ಪರ್ಧಿಸಲಿದ್ದಾರೆ. ಗಂಡೆಯಲ್ಲಿ ಮುನಿಯಾ ದೇವಿ ಅಭ್ಯರ್ಥಿಯಾಗಲಿದ್ದು, ಸಿಂದ್ರಿಯಲ್ಲಿ ತಾರಾದೇವಿ ಹಾಗೂ ನಿರ್ಸಾದಲ್ಲಿ ಅಪ್ನರ್ನಾ ಸೇನ್‌ಗುಪ್ತಾ ಕಣಕ್ಕಿಳಿಯಲಿದ್ದಾರೆ. ರಾಗಿಣಿ ಸಿಂಗ್ ಝರಿಯಾದಲ್ಲಿ, ಗೀತಾ ಬಲ್ಮುಚು ಚೈಬಾಸಾದಲ್ಲಿ ಮತ್ತು ಪುಷ್ಪಾ ದೇವಿ ಭೂಯಿಯಾನ್ ಛತ್ತರ್‌ಪುರದಿಂದ ಸ್ಪರ್ಧಿಸಲಿದ್ದಾರೆ.

ಜಾರ್ಖಂಡ್‌ನಲ್ಲಿ ನವೆಂಬರ್ 13 ಮತ್ತು ನವೆಂಬರ್ 20 ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ಮತಗಳ ಎಣಿಕೆ ನವೆಂಬರ್ 23 ರಂದು ನಡೆಯಲಿದೆ.

ಟಾಪ್ ನ್ಯೂಸ್

1-a-ola

Delegation appeal; ಒಳಮೀಸಲಾತಿ ಜಾರಿ ತನಕ ನೇಮಕಾತಿ ಬೇಡ

1-a-ek

ಶೀಘ್ರ ಇ-ಖಾತಾ ಸಮಸ್ಯೆ ಬಗೆಹರಿಸಿ

police crime

Kalaburagi Honeytrap; ಇಬ್ಬರು ಜೈಲು ಅಧಿಕಾರಿಗಳ ಅಮಾನತು

Akhilesh

Maharashtra Election: ಎಂವಿಎ ಮುಂದೆ 12 ಕ್ಷೇತ್ರಕ್ಕೆ ಬೇಡಿಕೆ ಇಟ್ಟ ಅಖಿಲೇಶ್‌ ಯಾದವ್‌

Rain-12

Rain Alert: ರಾಜ್ಯದ 13 ಜಿಲ್ಲೆಗಳಲ್ಲಿ ಅ.21ರವರೆಗೆ ಭಾರೀ ಮಳೆ?

01

BBK11: ಸಾಧ್ಯವಾದರೆ ನನ್ನನ್ನು ವಾಪಸ್‌ ಕರೆಸಿಕೊಳ್ಳಿ.. ಬಿಗ್‌ ಬಾಸ್‌ಗೆ ಜಗದೀಶ್‌ ಮನವಿ..

JK-Gov–omer

Jammu-Kashmir: ಮತ್ತೆ ರಾಜ್ಯ ಸ್ಥಾನಮಾನ ನಿರ್ಣಯಕ್ಕೆ ಲೆಫ್ಟಿನೆಂಟ್‌ ಗೌರ್ನರ್‌ ಅಸ್ತು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Akhilesh

Maharashtra Election: ಎಂವಿಎ ಮುಂದೆ 12 ಕ್ಷೇತ್ರಕ್ಕೆ ಬೇಡಿಕೆ ಇಟ್ಟ ಅಖಿಲೇಶ್‌ ಯಾದವ್‌

JK-Gov–omer

Jammu-Kashmir: ಮತ್ತೆ ರಾಜ್ಯ ಸ್ಥಾನಮಾನ ನಿರ್ಣಯಕ್ಕೆ ಲೆಫ್ಟಿನೆಂಟ್‌ ಗೌರ್ನರ್‌ ಅಸ್ತು

1-navyaa

BJP; ವಯನಾಡ್ ನಲ್ಲಿ ಪ್ರಿಯಾಂಕಾ ಗಾಂಧಿ ವಿರುದ್ಧ ನವ್ಯಾ ಹರಿದಾಸ್ ಕಣಕ್ಕೆ

pub

Pub ನಲ್ಲಿ ಅಶ್ಲೀ*ಲ ನೃತ್ಯ; 42 ಮಹಿಳೆಯರು ಸೇರಿದಂತೆ 100 ಕ್ಕೂ ಹೆಚ್ಚು ಜನರ ಬಂಧನ

JMM-Congress

Jharkhand Polls: ಜಾರ್ಖಂಡ್‌ನಲ್ಲಿ ಜೆಎಂಎಂ-ಕಾಂಗ್ರೆಸ್‌ 70 ಸ್ಥಾನಗಳಲ್ಲಿ ಮೈತ್ರಿ ಅಂತಿಮ

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

ಹೊಸ ಸೇರ್ಪಡೆ

Electric

Belthangady: ವಿದ್ಯುತ್‌ ಸ್ಪರ್ಶ: ನಾರಾವಿಯ ವ್ಯಕ್ತಿ ಸಾವು

1-a-ola

Delegation appeal; ಒಳಮೀಸಲಾತಿ ಜಾರಿ ತನಕ ನೇಮಕಾತಿ ಬೇಡ

bk-Hari

Reservation ಪ್ರಮಾಣ ಶೇ. 75ಕ್ಕೆ ಏರಿಸುವ ಚರ್ಚೆ ಇದೆ: ಬಿ.ಕೆ. ಹರಿಪ್ರಸಾದ್‌

1-a-ek

ಶೀಘ್ರ ಇ-ಖಾತಾ ಸಮಸ್ಯೆ ಬಗೆಹರಿಸಿ

police crime

Kalaburagi Honeytrap; ಇಬ್ಬರು ಜೈಲು ಅಧಿಕಾರಿಗಳ ಅಮಾನತು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.