Ranji Trophy: ಕರ್ನಾಟಕ-ಕೇರಳ ರಣಜಿ; ಮುಂದುವರಿದ ಮಳೆ ಕಾಟ
Team Udayavani, Oct 19, 2024, 8:30 PM IST
ಆಲೂರು: ಕರ್ನಾಟಕ-ಕೇರಳ ನಡುವಿನ ರಣಜಿ ಟ್ರೋಫಿ ಎಲೈಟ್ ಗ್ರೂಪ್ “ಸಿ’ ಪಂದ್ಯಕ್ಕೆ ದ್ವಿತೀಯ ದಿನವೂ ಮಳೆಯಿಂದ ಅಡಚಣೆ ಆಗಿದೆ. ಶನಿವಾರ ಕೇವಲ 27 ಓವರ್‌ಗಳ ಆಟ ನಡೆದಿದ್ದು, ಕೇರಳ 3 ವಿಕೆಟ್ ನಷ್ಟಕ್ಕೆ 161 ರನ್ ಗಳಿಸಿದೆ. ಮೊದಲನೇ ದಿನ 23 ಓವರ್‌ಗಳ ಆಟವಷ್ಟೇ ನಡೆದಿತ್ತು.
ಬ್ಯಾಟಿಂಗ್‌ಗೆ ಇಳಿಸಲ್ಪಟ್ಟಿರುವ ಕೇರಳ ವಿಕೆಟ್ ನಷ್ಟವಿಲ್ಲದೆ 88 ರನ್ ಮಾಡಿಲ್ಲಿಂದ ದಿನದಾಟ ಮುಂದುವರಿಸಿತು. ಆರಂಭಿಕರಾದ ವತ್ಸಲ್ ಗೋವಿಂದ್ 31, ರೋಹನ್ ಕನ್ನುಮ್ಮಾಳ್ 63, ಬಾಬಾ ಅಪರಾಜಿತ್ 19 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ನಾಯಕ ಸಚಿನ್ ಬೇಬಿ (23), ಸಂಜು ಸ್ಯಾಮ್ಸನ್ (15) ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ವಾಸುಕಿ ಕೌಶಿಕ್, ವಿಜಯ್‌ಕುಮಾರ್ ವೈಶಾಖ್ ಮತ್ತು ಶ್ರೇಯಸ್ ಗೋಪಾಲ್ ತಲಾ ಒಂದು ವಿಕೆಟ್ ಪಡೆದರು.
ಶ್ರೇಯಸ್ ಅಯ್ಯರ್ ಶತಕ
ಮುಂಬಯಿ: ಮಹಾರಾಷ್ಟ್ರ ವಿರುದ್ಧ ಮುಂಬಯಿ ಬ್ಯಾಟರ್ ಶ್ರೇಯಸ್ ಅಯ್ಯರ್ ಶತಕ (142) ಬಾರಿಸಿದ್ದಾರೆ. ಇದು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 3 ವರ್ಷಗಳ ಬಳಿಕ ಅಯ್ಯರ್ ಬಾರಿಸಿದ ಮೊದಲನೇ ಶತಕ. ಆರಂಭಕಾರ ಆಯುಷ್ ಮ್ಹಾತ್ರೆ 176 ರನ್ ಮಾಡಿದರು.
ಮುಂಬಯಿ ಮೊದಲ ಇನ್ನಿಂಗ್ಸ್‌ನಲ್ಲಿ 441 ಬಾರಿಸಿ 315 ರನ್ನುಗಳ ಬೃಹತ್ ಲೀಡ್ ಗಳಿಸಿತು. ದ್ವಿತೀಯ ಇನ್ನಿಂಗ್ಸ್‌ನಲ್ಲಿ ಮಹಾರಾಷ್ಟ್ರ ಒಂದು ವಿಕೆಟಿಗೆ 142 ರನ್ ಮಾಡಿದೆ. ಮೊದಲ ಸರದಿಯಲ್ಲಿ 126ಕ್ಕೆ ಕುಸಿದಿತ್ತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.