Highway Problem: ಕುಂದಾಪುರ -ತಲಪಾಡಿ ಹೆದ್ದಾರಿಯಲ್ಲಿ ನೀರು ನಿಲ್ಲುವ 40 ಸ್ಥಳಗಳ ಗುರುತು
ಗುತ್ತಿಗೆ ಕಂಪೆನಿಯಿಂದ ಸರ್ವೆ ಕಾರ್ಯ ಆರಂಭ
Team Udayavani, Oct 20, 2024, 7:03 AM IST
ಕಾಪು: ರಾಷ್ಟ್ರೀಯ ಹೆದ್ದಾರಿ 66ರ ಕುಂದಾಪುರದಿಂದ ಸುರತ್ಕಲ್ (ಎನ್‌ಐಟಿಕೆ) ವರೆಗಿನ ಮತ್ತು ನಂತೂರು ಜಂಕ್ಷನ್‌ನಿಂದ ತಲಪಾಡಿಯವರೆಗಿನ ಚತುಷ್ಪಥ ಹೆದ್ದಾರಿ ರಸ್ತೆಯಲ್ಲಿ ನೀರು ನಿಂತು ಸಂಚಾರಕ್ಕೆ ತೊಂದರೆ ಉಂಟಾಗುತ್ತಿರುವ ಸ್ಥಳಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ಕಾಮಗಾರಿಯ ಗುತ್ತಿಗೆ ಕಂಪೆನಿಯಿಂದ ಸರ್ವೆ ಆರಂಭಗೊಂಡಿದೆ.
ಕುಂದಾಪುರದಿಂದ ಸುರತ್ಕಲ್ (ಎನ್‌ಐಟಿಕೆ) ನಡುವಿನ ತಲಾ 80 ಕಿ.ಮೀ., ನಂತೂರು ಜಂಕ್ಷನ್‌ನಿಂದ ತಲಪಾಡಿ ನಡುವಣ 15 ಕಿ.ಮೀ. ರಾಷ್ಟ್ರೀಯ ಹೆದ್ದಾರಿ 66ರ ಇಕ್ಕೆಲಗಳಲ್ಲಿ, ಡಿವೈಡರ್ ಬಳಿ ಅಲ್ಲಲ್ಲಿ ಮಳೆ ನೀರು ನಿಂತು ಸಂಚಾರಕ್ಕೆ ತೊಂದರೆಯುಂಟಾಗುತ್ತದೆ ಮಾತ್ರವಲ್ಲದೆ ಆಗಾಗ ಅಪಘಾತಗಳು ಉಂಟಾಗಿ ಹಲವಾರು ಸಾವುನೋವು ಸಂಭವಿಸಿದೆ.
40 ಸ್ಥಳ ಗುರುತು
ರಾ.ಹೆ. 66ರ ಕುಂದಾಪುರ – ಸುರತ್ಕಲ್ ನಡುವೆ ಮತ್ತು ನಂತೂರು – ತಲಪಾಡಿ ನಡುವಿನ ಚತುಷ್ಪಥ ಹೆದ್ದಾರಿಯ ಎರಡು ಬದಿಯ ಒಟ್ಟು 190 ಕಿ.ಮೀ. ರಸ್ತೆಯಲ್ಲಿ ನೀರು ನಿಲ್ಲುವ 40 ಸ್ಥಳಗಳನ್ನು ಗುರುತಿಸಲಾಗಿದೆ. ಇಲ್ಲಿ ನೀರು ನಿಲ್ಲಲು ಕಾರಣಗಳೇನು, ಸಮತಟ್ಟುಗೊಳಿಸಬೇಕಾದ ಅಗತ್ಯ ಇತ್ಯಾದಿ ಅಂಶಗಳನ್ನು ಸರ್ವೆಯಲ್ಲಿ ಗೊತ್ತುಪಡಿಸಲಾಗುತ್ತಿದೆ.
ಎಲ್ಲೆಲ್ಲಿ ಸರ್ವೆ?
ಕುಂದಾಪುರ – ಸುರತ್ಕಲ್ ನಡುವಿನ ಕುಂದಾಪುರ, ಕೋಟ, ಸಾಸ್ತಾನ, ಬ್ರಹ್ಮಾವರ, ಉಚ್ಚಿಲ, ಉಡುಪಿ, ಅಂಬಲಪಾಡಿ, ಕಿನ್ನಿಮೂಲ್ಕಿ, ಪಾಂಗಾಳ, ಕೋತಲಕಟ್ಟೆ, ಕಾಪು, ಕೊಪ್ಪಲಂಗಡಿ, ಮೂಳೂರು, ಉಚ್ಚಿಲ, ಎರ್ಮಾಳು, ಹೆಜಮಾಡಿ, ಕೊಲಾ°ಡು, ಪಾವಂಜೆ ಹಾಗೂ ನಂತೂರು – ತಲಪಾಡಿ ನಡುವಿನ ಕಲ್ಲಾಪು, ಕೆ.ಸಿ. ರೋಡ್ ಸಹಿತ 40 ಸ್ಪಾಟ್‌ಗಳಲ್ಲಿ ಸರ್ವೆ ನಡೆಯುತ್ತಿದೆ.
ಉಡುಪಿ ಜಿಲ್ಲೆಯಿಂದ ಸರ್ವೆ ಆರಂಭ
ಹೆದ್ದಾರಿ ಕಾಮಗಾರಿಯ ನಿರ್ವಹಣ ಉಸ್ತುವಾರಿ ವಹಿಸಿಕೊಂಡಿರುವ ಹೈವೇ ಕನ್ಸೇಷನ್ಸ್ ವನ್ ಕಂಪೆನಿಯ ಸರ್ವೆ ತಂಡ ಪ್ರಥಮ ಹಂತದಲ್ಲಿ ಉಡುಪಿ ಜಿಲ್ಲೆಯ ಹೆದ್ದಾರಿಯಲ್ಲಿ ಸರ್ವೆ ನಡೆಸುತ್ತಿದ್ದು, ಇದು ಮುಗಿದ ಬಳಿಕ ದ.ಕ.ದಲ್ಲಿ ಮುಂದುವರಿಸಲಿದೆ.
6 ತಿಂಗಳಲ್ಲಿ ಕಾಮಗಾರಿ ಪೂರ್ಣ
ಸರ್ವೆ ಬಳಿಕ ಅದರ ವರದಿಯನ್ನು ಕಂಪೆನಿ ಮತ್ತು ರಾ.ಹೆ. ಪ್ರಾಧಿಕಾರಕ್ಕೆ ನೀಡಲಿದ್ದು, ಅವರಿಂದ ಕಾಮಗಾರಿಗೆ ಮಂಜೂರಾತಿ ಪಡೆದು 4ರಿಂದ 6 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸುವ ವಿಶ್ವಾಸವಿದೆ ಎಂದು ಸರ್ವೆ ತಂಡದ ಪ್ರತಿನಿಧಿ “ಉದಯವಾಣಿ’ಗೆ ತಿಳಿಸಿದ್ದಾರೆ.
ಉದಯವಾಣಿ ನಿರಂತರ ವರದಿ
ರಾಷ್ಟ್ರೀಯ ಹೆದ್ದಾರಿಯಲ್ಲಿ ನೀರು ನಿಂತು ಅಪಾಯಕಾರಿ ಎನಿಸುವ ಪ್ರದೇಶಗಳನ್ನು ಗುರುತಿಸಿ, “ಉದಯವಾಣಿ’ಯು ನಿರಂತರ ವರದಿ ಪ್ರಕಟಿಸುವ ಮೂಲಕ ಜನಪ್ರತಿನಿಧಿಗಳು, ಸರಕಾರ, ಜಿಲ್ಲಾಡಳಿತ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಹೆದ್ದಾರಿ ಇಲಾಖೆ ಮತ್ತು ಗುತ್ತಿಗೆದಾರರ ಗಮನ ಸೆಳೆಯುವ ಪ್ರಯತ್ನ ನಡೆಸಿತ್ತು. ಸತತ ವರದಿಗಳು ಮತ್ತು ಜನಪ್ರತಿನಿಧಿಗಳ ವಿಶೇಷ ಒತ್ತಡದ ಬಳಿಕ ಕೊನೆಗೂ ಎಚ್ಚೆತ್ತುಕೊಂಡಿರುವ ಜಿಲ್ಲಾಡಳಿತವು ಸಮಸ್ಯೆ ಬಗೆಹರಿಸುವಂತೆ ಹೆದ್ದಾರಿ ಇಲಾಖೆಯ ಮೂಲಕ ಗುತ್ತಿಗೆದಾರರಿಗೆ ಸೂಚನೆ ನೀಡಿದೆ.
– ರಾಕೇಶ್ ಕುಂಜೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
UI Movie Review: ಫೋಕಸ್ ಸಿಗೋವರೆಗೆ ಸಿನ್ಮಾ ನೋಡ್ತಾನೇ ಇರಿ!
Bantwal; ನಿಷೇಧವಿದ್ದರೂ ಹಳೇಯ ಸೇತುವೆಯಲ್ಲಿ ಸಂಚಾರ; ಸಿಲುಕಿಕೊಂಡ ಗೂಡ್ಸ್ ವಾಹನ
ರಬಕವಿ-ಬನಹಟ್ಟಿ: ಸಚಿವರಿಂದ ಬೇಡಿಕೆ ಈಡೇರಿಸುವ ಭರವಸೆ… ತಿಂಗಳ ಬಳಿಕ ನೇಕಾರರ ಹೋರಾಟ ಅಂತ್ಯ
German: ಮಾರುಕಟ್ಟೆಗೆ ನುಗ್ಗಿದ ಕಾರು, ಇಬ್ಬರು ಸಾವು, 60ಕ್ಕೂ ಹೆಚ್ಚು ಗಾಯ, ವೈದ್ಯನ ಬಂಧನ
Prithvi Shaw: ಮುಂಬೈ-ಶಾ ನಡುವೆ ಆರೋಪ ಸಮರ; ಅರ್ಧ ಗೊತ್ತಿದ್ದು ಮಾತಾಡಬೇಡಿ ಎಂದ ಶಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.