Bengaluru: ಕುಡಿದು ಗಲಾಟೆ ಮಾಡುತ್ತಿದ್ದ ಮಗನ ಕೊಂದ ಅಪ್ಪ!


Team Udayavani, Oct 20, 2024, 11:51 AM IST

5

ಬೆಂಗಳೂರು: ಪ್ರತಿದಿನ ಮದ್ಯ ಸೇವಿಸಿ ಮನೆಗೆ ಬಂದು ಗಲಾಟೆ ಮಾಡುತ್ತಿದ್ದ ಪುತ್ರನನ್ನು ಕುತ್ತಿಗೆ ಬಿಗಿದು ತಂದೆಯೇ ಹತ್ಯೆಗೈದಿರುವ ಘಟನೆ ಕೆಂಗೇರಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ನಾಗದೇವನಹಳ್ಳಿ ನಿವಾಸಿ ರಾಜೇಶ್‌(35) ಕೊಲೆ ಯಾದವ. ಕೃತ್ಯ ಎಸಗಿದ ಈತನ ತಂದೆ ಲಿಂಗಪ್ಪ(58) ಎಂಬುವರನ್ನು ಬಂಧಿಸ ಲಾಗಿದೆ. ಆರೋಪಿ ಅ.19 ರಂದು ನಸುಕಿನ 2 ಗಂಟೆ ಸುಮಾರಿಗೆ ಪುತ್ರ ರಾಜೇಶ್‌ನ ತಲೆಗೆ ಮರದ ಪಟ್ಟಿಯಿಂದ ಹೊಡೆದು, ಬಳಿಕ ಹಗ್ಗದಿಂದ ಕುತ್ತಿಗೆ ಬಿಗಿದು ಹತ್ಯೆಗೈದಿದ್ದ. ಈ ಸಂಬಂಧ ಮೃತನ ಚಿಕ್ಕಮ್ಮನ ಪುತ್ರ ಲೋಕೇಶ್‌ ಎಂಬುವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಆರೋಪಿ ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.

ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ನವುಲೆ ಗ್ರಾಮದ ಲಿಂಗಪ್ಪ ಹಲವು ವರ್ಷಗಳ ಹಿಂದೆಯೆ ಬೆಂಗಳೂರಿಗೆ ಬಂದಿದ್ದು, ಕೆಂಗೇರಿ ಸಮೀಪದ ನಾಗದೇವನಹಳ್ಳಿಯಲ್ಲಿ ಕುಟುಂಬ ಸಮೇತ ವಾಸವಾಗಿದ್ದಾರೆ. ಲಿಂಗಪ್ಪ ಅಡುಗೆ ಕೆಲಸ ಮಾಡಿಕೊಂಡಿದ್ದರು. ಪುತ್ರ ರಾಜೇಶ್‌ ಕ್ಯಾಬ್‌ ಚಾಲಕನಾಗಿದ್ದ. 6 ವರ್ಷಗಳ ಹಿಂದೆಯೇ ಆತನಿಗೆ ಮದುವೆಯಾಗಿದ್ದು, ದಂಪತಿಗೆ 1 ಮಗು ಇದೆ. ಈ ಮಧ್ಯೆ ಪ್ರತಿದಿನ ಮದ್ಯ ಸೇವಿಸಿ ಗಲಾಟೆ ಮಾಡುತ್ತಿದ್ದರಿಂದ ಬೇಸತ್ತ ಪತ್ನಿ, ರಾಜೇಶ್‌ ಬಿಟ್ಟು ತವರು ಮನೆಗೆ ಹೋಗಿದ್ದಾರೆ. ಹೀಗಾಗಿ ತಂದೆ-ತಾಯಿ ಜತೆ ರಾಜೇಶ್‌ ವಾಸವಾಗಿದ್ದು, ಈಗಲೂ ಪ್ರತಿದಿನ ಕುಡಿದು ಬಂದು ತಂದೆ-ತಾಯಿ ಜತೆ ಗಲಾಟೆ ಮಾಡುತ್ತಿದ್ದ. ಕೆಲವೊಮ್ಮೆ ತಂದೆ ಮೇಲೆ ಹಲ್ಲೆಗೂ ಮುಂದಾಗಿದ್ದನು. ಹೀಗಾಗಿ ಮಗನ ಕುಡಿತ, ದುರ್ನಡತೆಯಿಂದ ತಂದೆ ರೋಸಿ ಹೋಗಿದ್ದರು. ಈ ಮಧ್ಯೆ, ಅ.19 ರಂದು ಕುಡಿದು ದಾಂಧಲೆ ಮಾಡಿದ ಪುತ್ರನನ್ನು ತಂದೆ ಕೊಲೆ ಮಾಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದರು.

ಇದೇ ವೇಳೆ ವಿಚಾರ ತಿಳಿದು ಸ್ಥಳಕ್ಕೆ ಬಂದ ದೂರುದಾರ ಲೋಕೇಶ್‌, ಪೊಲೀಸ್‌ ಸಹಾಯವಾಣಿ 112ಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಸಮೀಪದ ಆಸ್ಪತ್ರೆ ರವಾನಿಸಿದ್ದಾರೆ. ಬಳಿಕ ಲಿಂಗಪ್ಪರನ್ನು ಬಂಧಿಸಿದ್ದಾರೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಮರದ ಪಟ್ಟಿಯಿಂದ ಹೊಡೆದು, ಹಗ್ಗದಿಂದ ಕುತ್ತಿಗೆ ಬಿಗಿದು ಹತ್ಯೆ:

ಅ.19ರಂದು ತಡರಾತ್ರಿ ಕುಡಿದು ಬಂದಿದ್ದ ರಾಜೇಶ್‌, ಮನೆಯ ಕಿಟಕಿ ಗಾಜು ಹೊಡೆದು, ಮನೆಯ ಗೇಟ್‌ ಅನ್ನು ಕಾಲಿನಿಂದ ಒದ್ದು ಗಲಾಟೆ ಮಾಡಿದ್ದಾನೆ. ತಂದೆ ಲಿಂಗಪ್ಪ ಜತೆ ವಾಗ್ವಾದ ಮಾಡಿದ್ದಾನೆ. ಈ ವಿಚಾರವನ್ನು ರಾಜೇಶ್‌ ತಾಯಿ ಪುಟ್ಟಮ್ಮ, ತನ್ನ ಸಹೋದರಿಯ ಪುತ್ರ ಲೋಕೇಶ್‌ಗೆ ತಿಳಿಸಿದ್ದಾರೆ. ಮತ್ತೂಂದೆಡೆ ಪುತ್ರನ ವರ್ತನೆಗೆ ಕೋಪಗೊಂಡ ಲಿಂಗಪ್ಪ, ಪುತ್ರನಿಗೆ ಕೈಯಿಂದ ಹೊಡೆದು, ಕಾಲಿನಿಂದ ಒದಿದ್ದಾರೆ. ಕೆಳಗೆ ಬಿದ್ದ ರಾಜೇಶ್‌ನ ಕೈಗಳನ್ನು ಹಿಂದಕ್ಕೆ ಕಟ್ಟಿ, ಮರದ ಪಟ್ಟಿಯಿಂದ ತಲೆಗೆ ಹೊಡೆದಿದ್ದಾರೆ. ಬಳಿಕ ಕುತ್ತಿಗೆಗೆ ಹಗ್ಗ ಬಿಗಿದು ಹತ್ಯೆಗೈದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

 

ಟಾಪ್ ನ್ಯೂಸ್

RJD

Election: ಝಾರ್ಖಂಡ್‌ನ‌ಲ್ಲಿ ಏಕಾಂಗಿಯಾಗಿ ಸ್ಪರ್ಧಿಸಿದರೂ ವಿಪಕ್ಷಕ್ಕೆ ಬೆಂಬಲ: ಆರ್‌ಜೆಡಿ

Panaji

Panaji: ಮುಟ್ಟಾದ ಮಹಿಳೆ ಮನೆಯಿಂದ ಹೊರಗೆ: ಸುಪ್ರೀಂ ನ್ಯಾಯಮೂರ್ತಿ ಕಳವಳ

Raja-Acci

Accident: ರಾಜಸ್ಥಾನದಲ್ಲಿ ಟೆಂಪೋ-ಬಸ್‌ ಡಿಕ್ಕಿ: 12 ಮಂದಿ ದುರ್ಮರಣ

Bihar-tragey

Bihar: ಕಳ್ಳಭಟ್ಟಿ ದುರಂತ; ಇಬ್ಬರ ಅಮಾನತು, 21 ಮಂದಿ ಬಂಧನ

Isha-Found

Compliant: ಈಶಾ ಸಂಸ್ಥೆಯಲ್ಲಿ ಮಗನಿಗೆ ಲೈಂಗಿಕ ದೌರ್ಜನ್ಯ: ದಂಪತಿ ಆರೋಪ

ODISHA-GIRL

Odisha: ಕುಟುಂಬಸ್ಥರ ಕಣ್ತಪ್ಪಿಸಲು ಟ್ರಂಕ್‌ನಲ್ಲಿ ಪ್ರಿಯಕರನ ಬಚ್ಚಿಟ್ಟ ಯುವತಿ!

Newz-Air

Policy: ವಿಮಾನ ನಿಲ್ದಾಣದಲ್ಲಿ ಅಪ್ಪುಗೆಗೆ ಸಮಯ ಮಿತಿ ಹೇರಿದ ನ್ಯೂಜಿಲೆಂಡ್‌ ಸರಕಾರ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4

Crime: ಹೆಂಡತಿಯನ್ನು ಮಾಂಸ ಕತ್ತರಿಸುವ  ಮಚ್ಚಿನಿಂದ ಕೊಂದ ಕೋಳಿ ವ್ಯಾಪಾರಿ

Bengaluru: ತಂದೆ ಬೈದಿದ್ದಕ್ಕೆ ಬಿಬಿಎ ವಿದ್ಯಾರ್ಥಿನಿ ಆತ್ಮಹತ್ಯೆ

Bengaluru: ತಂದೆ ಬೈದಿದ್ದಕ್ಕೆ ಬಿಬಿಎ ವಿದ್ಯಾರ್ಥಿನಿ ಆತ್ಮಹತ್ಯೆ

ಮುನಿರತ್ನ ವಿರುದ್ಧ ವೋಟರ್‌ ಐಡಿ ಪ್ರಕರಣ: ಲೋಪ ಎಸಗಿದ ಅಧಿಕಾರಿಗಳ ವಿರುದ್ಧ ದೂರು

ಮುನಿರತ್ನ ವಿರುದ್ಧ ವೋಟರ್‌ ಐಡಿ ಪ್ರಕರಣ: ಲೋಪ ಎಸಗಿದ ಅಧಿಕಾರಿಗಳ ವಿರುದ್ಧ ದೂರು

Mayur Patel: ಭೂಮಿ ಅತಿಕ್ರಮಣ ಆರೋಪ; ನಟ ಮಯೂರ್‌ ವಿರುದ್ಧ ಎಫ್ಐಆರ್‌

Mayur Patel: ಭೂಮಿ ಅತಿಕ್ರಮಣ ಆರೋಪ; ನಟ ಮಯೂರ್‌ ವಿರುದ್ಧ ಎಫ್ಐಆರ್‌

18-bng

Patna Biological Park: ಬನ್ನೇರುಘಟ್ಟಕ್ಕೆ ಬಿಹಾರದಿಂದ ಅತಿಥಿಗಳು!

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

ಹೊಸ ಸೇರ್ಪಡೆ

RJD

Election: ಝಾರ್ಖಂಡ್‌ನ‌ಲ್ಲಿ ಏಕಾಂಗಿಯಾಗಿ ಸ್ಪರ್ಧಿಸಿದರೂ ವಿಪಕ್ಷಕ್ಕೆ ಬೆಂಬಲ: ಆರ್‌ಜೆಡಿ

Panaji

Panaji: ಮುಟ್ಟಾದ ಮಹಿಳೆ ಮನೆಯಿಂದ ಹೊರಗೆ: ಸುಪ್ರೀಂ ನ್ಯಾಯಮೂರ್ತಿ ಕಳವಳ

Raja-Acci

Accident: ರಾಜಸ್ಥಾನದಲ್ಲಿ ಟೆಂಪೋ-ಬಸ್‌ ಡಿಕ್ಕಿ: 12 ಮಂದಿ ದುರ್ಮರಣ

Chattsi-Blood

Chhattisgarh: ಅಜ್ಜಿಯ ನರಬಲಿ ನಡೆಸಿ ಶಿವಲಿಂಗಕ್ಕೆ ರಕ್ತ ಅರ್ಪಣೆ!

Bihar-tragey

Bihar: ಕಳ್ಳಭಟ್ಟಿ ದುರಂತ; ಇಬ್ಬರ ಅಮಾನತು, 21 ಮಂದಿ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.