iPhone 16 Pro Max ಕಾರ್ಯಾಚರಣೆ ಹೇಗಿದೆ? ಸವಿವರ ಮಾಹಿತಿ ಮಾಹಿತಿ ಇಲ್ಲಿದೆ


Team Udayavani, Oct 20, 2024, 2:52 PM IST

How is the iPhone 16 Pro Max operating? Detailed information is here

ಐಫೋನ್ (iPhone) ಎಂಬುದು ಬಹಳಷ್ಟು ಜನರ ಕನಸು. ಐಫೋನ್ ಬಳಕೆಗೆ ಹೊಂದಿಕೊಂಡವರಿಗೆ ಅದನ್ನು ಬಿಟ್ಟು ಆಂಡ್ರಾಯ್ಡ್‌ ಫೋನ್ ಬಳಸುವುದು ಇಷ್ಟವಿಲ್ಲದ ವಿಷಯ. ಐಫೋನ್‌ನ ತಡೆರಹಿತ ವೇಗದ ಕಾರ್ಯಾಚರಣೆ, ಅದರ ವಿನ್ಯಾಸದ ಗುಣಮಟ್ಟ, ಉತ್ತಮ ಕ್ಯಾಮರಾ ಅದೆಲ್ಲಕ್ಕಿಂತ ಹೆಚ್ಚಾಗಿ ರಾಜಿಯಾಗದ ಸೆಕ್ಯುರಿಟಿ ಫೀಚರ್‌ಗಾಗಿ ಅನೇಕರು ಐಫೋನ್ ಬಯಸುತ್ತಾರೆ. ಇತ್ತೀಚೆಗೆ ತಾನೇ ಐಫೋನ್ 16 ಸರಣಿ ಬಿಡುಗಡೆಯಾಗಿದೆ. ಈ ಸರಣಿಯ ಅತ್ಯುನ್ನತ ಮಾದರಿಯಾದ ಐಫೋನ್ 16 ಪ್ರೊ ಮ್ಯಾಕ್ಸ್‌ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಈ ಫೋನಿನ ಬೆಲೆ 256 ಜಿಬಿ ಆಂತರಿಕ ಸಂಗ್ರಹ ಆವೃತ್ತಿಗೆ 1,44,900 ರೂ. 512 ಜಿಬಿ ಸಂಗ್ರಹ ಆವೃತ್ತಿಗೆ 1,64,900 ರೂ. ಹಾಗೂ1 ಟಿಬಿ ಆವೃತ್ತಿಗೆ 1,84,900 ರೂ.  ಬ್ಲ್ಯಾಕ್ ಟೈಟಾನಿಯಂ, ವೈಟ್ ಟೈಟಾನಿಯಂ, ನ್ಯಾಚುರಲ್ ಟೈಟಾನಿಯಂ ಮತ್ತು ಹೊಸದಾಗಿ ಪರಿಚಯಿಸಿರುವ ಡೆಸರ್ಟ್ ಟೈಟಾನಿಯಂ ಬಣ್ಣದಲ್ಲಿ ಲಭ್ಯವಿದೆ.

ವಿನ್ಯಾಸ: ವಿನ್ಯಾಸದಲ್ಲಿ ಮೊದಲ ನೋಟಕ್ಕೆ ಇದು ಐಫೋನ್‍15 ಪ್ರೊ ಮ್ಯಾಕ್ಸ್‌ ರೀತಿಯೇ ಕಾಣುತ್ತದೆ. ಆದರೆ ಸೂಕ್ಷ್ಮವಾಗಿ ಗಮನಿಸಿದಾಗ ಅದಕ್ಕಿಂತಲೂ ದೊಡ್ಡ ಪರದೆ, ತೆಳುವಾದ ಬೆಜೆಲ್‌ಗಳು, ಸಣ್ಣ ಅಂಚುಗಳು ಮತ್ತು ಹೊಸ ಕ್ಯಾಮರಾ ಬಟನ್ ಇರುವುದು ಅರಿವಿಗೆ ಬರುತ್ತದೆ.

ಐಫೋನ್‍ 16 ಪ್ರೊ ಮ್ಯಾಕ್ಸ್‌, ಏರೋಸ್ಪೇಸ್ ಗ್ರೇಡ್‍ 5 ಟೈಟಾನಿಯಂ ದೇಹ ಹೊಂದಿದೆ. ಟೈಟಾನಿಯಂ ಅತ್ಯಂತ ಬಲಿಷ್ಠ ಲೋಹ. ಆದರೆ ತೂಕದಲ್ಲಿ ಹಗುರ. ಗೀರು ನಿರೋಧಕ. ಫೋನ್‍ 227 ಗ್ರಾಂ ತೂಕವಿದೆ.

ಫೋನಿನ ಎಡಭಾಗದಲ್ಲಿ ಧ್ವನಿ ಹೆಚ್ಚು ಕಡಿಮೆ ಮಾಡುವ ಬಟನ್, ಅದರ ಮೇಲ್ಭಾಗದಲ್ಲಿ ಆಕ್ಷನ್ ಬಟನ್ ಇದ್ದು, ಇದನ್ನು ನಮಗೆ ಬೇಕಾದ ಕಾರ್ಯಾಚರಣೆಗೆ ಸೆಟ್ ಮಾಡಿಕೊಳ್ಳಬಹುದು. ಸೈಲೆಂಟ್‍-ರಿಂಗ್ ಟೋನ್, ಟಾರ್ಚ್, ವಾಯ್ಸ್‌ ಮೆಮೋ, ಫೋಕಸ್ ಹೀಗೆ ಅನೇಕ ಆಯ್ಕೆಗೆ ಬಳಸಬಹುದು. ಆದರೆ ಹೆಚ್ಚಾಗಿ ಸೈಲೆಂಟ್ ರಿಂಗ್‌ ಗೆ ಈ ಬಟನ್ ಆಯ್ಕೆ ಮಾಡಿಕೊಳ್ಳುತ್ತಾರೆ. ಬಲ ಬದಿಯಲ್ಲಿ ಆನ್ ಆಫ್ ಬಟನ್ ಇದ್ದು ಅದರ ಕೆಳಗೆ ಐಫೋನ್‍ 16 ಸರಣಿಯ ಹೊಸ ಪರಿಚಯವಾದ, ಕ್ಯಾಮರಾ ಆಕ್ಷನ್ ಬಟನ್ ಅನ್ನು ಇರಿಸಲಾಗಿದೆ.

ಪರದೆ: ಹಿಂದಿನ ಸರಣಿಯಲ್ಲಿ ಐಫೋನ್ ಪ್ರೊ ಮ್ಯಾಕ್ಸ್ 6.7 ಇಂಚಿನ ಪರದೆ ಹೊಂದಿತ್ತು 16 ಪ್ರೊ ಮ್ಯಾಕ್ಸ್ 6.9 ಇಂಚಿನ ಓಎಲ್‌ಇಡಿ 460 ಪಿಪಿಐ ಪರದೆಯನ್ನು ಹೊಂದಿದೆ. ಐಫೋನ್ ಇತಿಹಾಸದಲ್ಲೇ ಇದು ದೊಡ್ಡ ಅಳತೆಯ ಪರದೆಯಾಗಿದೆ! ಸುಪರ್ ರೆಟಿನಾ ಎಕ್ಸ್‌ ಡಿ ಆರ್ ಡಿಸ್ ಪ್ಲೇ ಹೊಂದಿವೆ. ಈ ಪರದೆ ನೀರು ಮತ್ತು ಧೂಳು ನಿರೋಧಕವಾಗಿದ್ದು, ಹೊಸ ತಲೆಮಾರಿನ ಸಿರಾಮಿಕ್ ಶೀಲ್ಡ್‌ ಹೊಂದಿದೆ. ಇದು ಯಾವುದೇ ಸ್ಮಾರ್ಟ್ ಫೋನಿನ ಗಾಜಿಗಿಂತ ಎರಡು ಪಟ್ಟು ಬಲಿಷ್ಠ ಎಂದು ಆಪಲ್ ತಿಳಿಸಿದೆ. ಬಹಳ ತೆಳುವಾದ ಅಂಚುಗಳನ್ನು ಹೊಂದಿದೆ. ಪರದೆ 120 ಹರ್ಟ್ಜ್‌ ರಿಫ್ರೆಶ್ ರೇಟ್ ಹೊಂದಿದೆ.

ಇದರ ಪರದೆಯ ಅಳತೆ ವಿಶಾಲ ಪರದೆ ಬಯಸುವ ಬಳಕೆದಾರರಿಗೆ ಪ್ರಶಸ್ತವಾಗಿದೆ. ಈ ಬಾರಿ ಐಫೋನ್‍ 16 ಪ್ರೊ ಮತ್ತು ಪ್ರೊ ಮ್ಯಾಕ್ಸ್‌ ನಲ್ಲಿ ಪರದೆಯ ಅಳತೆ ಹೊರತುಪಡಿಸಿ ಇನ್ನೆಲ್ಲಾ ವಿಶೇಷಣಗಳು ಒಂದೇ ಆಗಿವೆ. ಪ್ರೊ 6.3 ಇಂಚಿನ ಪರದೆ ಹೊಂದಿದೆ. ಅದು ಸಾಲುವುದಿಲ್ಲ, ಇನ್ನೂ ದೊಡ್ಡ ಪರದೆ ಬೇಕು ಎನ್ನುವ ‘ವಿಶಾಲಾಕ್ಷ- ವಿಶಾಲಾಕ್ಷಿ’ಯರಿಗೆ ಪ್ರೊ ಮ್ಯಾಕ್ಸ್‌ ಮಾದರಿಯಾಗಿದೆ! ಈ ದೊಡ್ಡ ಮತ್ತು ರೆಟಿನಾ ಡಿಸ್‌ಪ್ಲೇಯಲ್ಲಿ ಚಿತ್ರಗಳು, ವಿಡಿಯೋಗಳು ಸ್ಫುಟವಾಗಿ ಕಾಣುತ್ತವೆ. ಐಫೋನ್ ಪರದೆಯ ವಿಶೇಷವೆಂದರೆ ಅದರ ಪರದೆಯಲ್ಲಿ ಮೂಡಿಬರುವ ಬೆಳಕು ಕಣ್ಣಿಗೆ ಕಿರಿಕಿರಿ ಎನಿಸುವುದಿಲ್ಲ. 120 ರಿಫ್ರೆಶ್‌ರೇಟ್ ಪರದೆಯನ್ನು ಲೀಲಾಜಾಲವಾಗಿ ಸರಿಸುತ್ತದೆ. 2000 ನಿಟ್ಸ್‌ ಬ್ರೈಟ್ ನೆಸ್ ಹೊಂದಿದ್ದು, ಹೊರಾಂಗಣದಲ್ಲಿ ಬಿರು ಬಿಸಿಲಿನಲ್ಲೂ ಪರದೆ ಸ್ಪಷ್ಟವಾಗಿ ಕಾಣುತ್ತದೆ.

ಪ್ರೊಸೆಸರ್‍ ಮತ್ತು ಕಾರ್ಯಾಚರಣೆ: ಇದು ಹೊಸ ಸುಧಾರಿತ A18 ಪ್ರೊ ಚಿಪ್‌ಸೆಟ್‌ ಹೊಂದಿವೆ. 2 Gen 3nm ಟ್ರಾನ್ಸಿಸ್ಟರ್‌ಗಳಲ್ಲಿ ನಿರ್ಮಿಸಲಾಗಿದೆ. ಹೊಸ ಚಿಪ್ 6-ಕೋರ್ GPU ಅನ್ನು ಹೊಂದಿದೆ ಎಂದು ಆಪಲ್ ಹೇಳಿದೆ. ಇದು ಹಿಂದಿನ A17 Pro ಗಿಂತ 20% ವೇಗವಾಗಿ ಕಾರ್ಯ ನಿರ್ವಹಿಸುತ್ತದೆ. USB 3 ಮತ್ತು ProRes ವೀಡಿಯೊ ರೆಕಾರ್ಡಿಂಗ್ ಬೆಂಬಲ ಹೊಂದಿವೆ.

ಗೇಮಿಂಗ್‌ ಸ್ಟ್ರೀಮಿಂಗ್, ವೀಡಿಯೊ ಎಡಿಟಿಂಗ್, ಫೋಟೋ ಎಡಿಟಿಂಗ್ ಮತ್ತು AI ಅಪ್ಲಿಕೇಶನ್‌ಗಳವರೆಗೆ ಯಾವುದನ್ನೇ ಬಳಸಿದರೂ 16 ಪ್ರೊ ಮ್ಯಾಕ್ಸ್ ಎಲ್ಲಿಯೂ ಅಡತಡೆ ತೋರುವುದಿಲ್ಲ. ಇದು ಅತ್ಯಂತ ವೇಗದ ಕಾರ್ಯಾಚರಣೆಯ ಫೋನ್ ಆಗಿದೆ. ಹೆವಿ ಗೇಮ್‍ ಗಳನ್ನು ಆಡಿದಾಗಲೂ ಸೂಪರ್ ಕೂಲ್ ಆಗಿ ಕಾರ್ಯನಿರ್ವಹಿಸುತ್ತದೆ. ಬೆಚ್ಚಗಾಗುವುದಿಲ್ಲ, ಬೇಗನೆ ಕೂಲ್‍ ಆಗುತ್ತದೆ.

ಕ್ಯಾಮೆರಾವನ್ನು ತ್ವರಿತವಾಗಿ ಟ್ಯಾಪ್ ಮಾಡಬಹುದು ಮತ್ತು ಇದು 10FPS ವೇಗದಲ್ಲಿ DSLR ಫೈರಿಂಗ್‌ನಂತೆ ಫೋಟೋಗಳನ್ನು ತೆಗೆಯುತ್ತದೆ. ನಿಮಿಷದಲ್ಲಿ ನೂರಾರು ಫೋಟೋಗಳ ಮೂಲಕ ಸ್ಕ್ರಾಲ್ ಮಾಡಬಹುದು. ಅಪ್ಲಿಕೇಶನ್‌ಗಳನ್ನು ಓಪನ್‍ ಮಾಡಿ ಮುಚ್ಚುವುದು, ಬದಲಿಸುವುದು ಏನೇ ಮಾಡಿದರೂ ಫೋನ್‍ ಅತ್ಯಂತ ವೇಗವಾಗಿ ಕೆಲಸ ನಿರ್ವಹಿಸುತ್ತದೆ.  16 ಸರಣಿಗಳು iOS 18 version ಹೊಂದಿವೆ. ಇದರ ಇಂಟರ್ ಫೇಸ್ ನಲ್ಲಿ ಒಂದಷ್ಟು ಹೊಸ ವಿನ್ಯಾಸ ಸೇರಿಸಲಾಗಿದೆ.  ಈ ವರ್ಷನ್‍ ನಲ್ಲಿ ಶೀಘ್ರವೇ ಆಪಲ್‍ ಇಂಟೆಲಿಜೆನ್ಸ್ ಎಐ ನೀಡುವುದಾಗಿ ಕಂಪೆನಿ ತಿಳಿಸಿದೆ. ಆಗ ಇದರಲ್ಲಿ ಅನೇಕ ಹೊಸ ಫೀಚರ್ ಗಳು ದೊರಕಲಿವೆ.

iPhone 16 Pro Max ನೆಲ ಮಾಳಿಗೆಯಂತಹ ದುರ್ಬಲ ಸಿಗ್ನಲ್‍ ಸಿಗುವ ಸ್ಥಳ ಗಳಲ್ಲೂ ಉತ್ತಮ ಕನೆಕ್ಟಿವಿಟಿ ನೀಡುತ್ತದೆ. ಫೋನ್‍ ಭರ್ಜರಿಯಾಗಿರುವಂತೆಯೇ ಸ್ಪೀಕರ್ ನ ಸೌಂಡ್‍ ಸಹ ಜೋರಾಗಿದೆ. ಒಂದು ಸಾಧಾರಣ ಬ್ಲೂಟೂತ್‍ ಸ್ಪೀಕರ್‍ ನಷ್ಟೇ ಸ್ಪಷ್ಟವಾಗಿ, ಜೋರಾಗಿ ಕೇಳುತ್ತದೆ!. ಜೊತೆಗೆ ಇಯರ್‍ ಫೋನ್‍, ಇಯರ್‍ ಬಡ್‍ನಲ್ಲಿ ಕೇಳುವುದಕ್ಕೂ ಉತ್ತಮ ಗುಣಮಟ್ಟ ಹೊಂದಿವೆ.

ಕ್ಯಾಮರಾ: 16 ಪ್ರೊ, ಮತ್ತು ಮ್ಯಾಕ್ಸ್‍ ನಲ್ಲಿ ಮೂರು ಲೆನ್ಸಿನ ಹಿಂಬದಿ ಕ್ಯಾಮೆರಾ ಹೊಂದಿದೆ. iPhone 16 Pro ಮಾದರಿಗಳು ಹೊಸ 48MP ಫ್ಯೂಷನ್‍, 12 ಮೆ.ಪಿ. ಟೆಲಿಫೋಟೋ, 48 ಮೆ.ಪಿ. ಅಲ್ಟ್ರಾ ವೈಡ್ ಕ್ಯಾಮರಾ ಹೊಂದಿದೆ.  10ಎಕ್ಸ್ ಆಪ್ಟಿಕಲ್‍ ಜೂಮ್‍, 25 ಎಕ್ಸ್ ಡಿಜಿಟಲ್‍ ಜೂಮ್‍ ಹೊಂದಿದೆ. 4ಕೆ ಡಾಲ್ಬಿ ವಿಷನ್‍ ವಿಡಿಯೋ ರೆಕಾರ್ಡಿಂಗ್‍ ಸೌಲಭ್ಯ ಒಳಗೊಂಡಿವೆ.

ಉತ್ತಮ ಬೆಳಕೇ ಇರಲಿ, ಮಂದ ಬೆಳಕೇ ಇರಲಿ ಇದರ ಫೋಟೋಗಳು ಉತ್ತಮವಾಗಿ ಮೂಡಿ ಬರುತ್ತವೆ. ಹೊಸ 48-ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಕ್ಯಾಮೆರಾ ಅದ್ಭುತವಾಗಿದೆ. 25 ಎಕ್ಸ್ ಜೂಮ್‍ ಹೊಂದಿದೆ. ಅಷ್ಟು ಜೂಮ್‍ ನಲ್ಲೂ ಫೋಟೋಗಳ ಸ್ಪಷ್ಟತೆ ನಿಖರವಾಗಿದೆ. ಮ್ಯಾಕ್ರೋ ಲೆನ್ಸ್‍ ಕ್ಯಾಮರಾ ಅತ್ಯಂತ ಕಡಿಮೆ ಅಂತರದಲ್ಲಿ ಸೂಕ್ಷವಾಗಿ ವಸ್ತುಗಳನ್ನು ಸೆರೆಹಿಡಿಯುತ್ತದೆ. ವಿಡಿಯೋ ಕ್ಯಾಮರಾದ ಗುಣಮಟ್ಟದ ಬಗ್ಗೆ ಮಾತನಾಡುವಂತೆಯೇ ಇಲ್ಲ, ಕಿರುಚಿತ್ರಗಳನ್ನು ನಿರ್ಮಿಸಲು ಸಹ ಸೂಕ್ತವಾದ 4ಕೆ ಡಾಲ್ಬಿ ವಿಷನ್‍ ವಿಡಿಯೋ ರೆಕಾರ್ಡಿಂಗ್‍, ಸಿನೆಮ್ಯಾಟಿಕ್‍ ಮೋಡ್‍, ಸ್ಪೇಷಿಯಲ್‍ ವಿಡಿಯೋ, ಪ್ರೊರೆಸ್‍ ವಿಡಿಯೋ ಸೇರಿದಂತೆ ಅನೇಕ ವಿಶೇಷಣಗಳನ್ನು ಇದು ಒಳಗೊಂಡಿದೆ.

ಕ್ಯಾಮೆರಾ ಬಟನ್: 16 ಸರಣಿಯ ಐಫೋನ್‍ ಗಳಲ್ಲಿ ಕ್ಯಾಮರಾ ಬಟನ್‍ ಅನ್ನು ನೀಡಿರುವುದು ವಿಶೇಷ. ಇದನ್ನುಬಳಸಿಕೊಂಡು ಪರದೆಯಲ್ಲಿರುವ ಆಯ್ಕೆ ಬಳಸದೇ ಬಟನ್‍ನಲ್ಲೇ ಜೂಮ್‍, ಎಕ್ಸ್ ಪೋಸರ್‍, ಡೆಪ್ತ್, ಟೋನ್‍ ಮುಂತಾದ ಆಯ್ಕೆಗಳನ್ನು ಮಾಡಿಕೊಳ್ಳಬಹುದು. ಆದರೂ ನಮಗೆಲ್ಲ ಕ್ಯಾಮರಾ ಪರದೆಯ ಮೇಲೆ ಎಲ್ಲ ಆಯ್ಕೆಗಳೂ ಸುಲಭವಾಗಿ ಸಿಗುವುದರಿಂದ ಬಟನ್‍ ಗಿಂತ, ಹಳೆಯ ಆಯ್ಕೆಯೇ ಸರಳ ಎನಿಸುತ್ತದೆ.

ಬ್ಯಾಟರಿ: iPhone 16 Pro Max ಬ್ಯಾಟರಿ ಚಾಂಪ್ ಆಗಿದ್ದು, ಹೆಚ್ಚು ಫೋನ್ ಬಳಕೆ ಮಾಡುವವರಿಗೂ 24 ಗಂಟೆಗಳ ಕಾಲ ಬ್ಯಾಟರಿ ಬಾಳಿಕೆ ಬರುತ್ತದೆ. ಸದ್ಯ ಮಾರುಕಟ್ಟೆಯಲ್ಲಿರುವ ಫೋನ್‍ ಗಳಲ್ಲಿ ಅತ್ಯುತ್ತಮ ಬ್ಯಾಟರಿ ಹೊಂದಿರುವ ಫೋನ್‍ಗಳ ಸಾಲಿನಲ್ಲಿ ಇದು ನಿಲ್ಲುತ್ತದೆ. ಐಫೋನ್‍ ಸ್ಪೆಸಿಕೇಷನ್‍ನಲ್ಲಿ ಇದರ ಎಂಎಎಚ್‍ ನಮೂದಿಸಿಲ್ಲ. ಆದರೆ 33 ಗಂಟೆಗಳ ವಿಡಿಯೋ ಪ್ಲೇಬ್ಯಾಕ್‍ ಮಾಡುವುದಾಗಿ ಆಪಲ್‍ ತಿಳಿಸಿದೆ. ಇದು 30 ವ್ಯಾಟ್ಸ್ ಚಾರ್ಜರ್‍ ನಲ್ಲಿ 30 ನಿಮಿಷದಲ್ಲಿ ಶೇ. 50ರಷ್ಟು ಚಾರ್ಜ್ ಆಗುತ್ತದೆ. ಯುಎಸ್‍ಬಿ ಟೈಪ್‍ ಸಿ ಚಾರ್ಜಿಂಗ್‍ ಕೇಬಲ್‍ ಹೊಂದಿದೆ. ಸಂಪೂರ್ಣ ಶೇ. 100ರಷ್ಟು ಚಾರ್ಜ್ ಆಗಲು ಸುಮಾರು ಒಂದೂವರೆ ಗಂಟೆ ತೆಗೆದುಕೊಳ್ಳುತ್ತದೆ. ಚಾರ್ಜ್ ಆಗುವಾಗ ಫೋನ್‍ ಬಿಸಿಯಾದರೆ ಐಫೋನ್‍ ಚಾರ್ಜ್ ಅನ್ನು ನಿಧಾನ ಮಾಡುತ್ತದೆ. ಫೋನಿನ ಸುರಕ್ಷತೆಯ ದೃಷ್ಟಿಯಿಂದ ಕೆಲವೊಮ್ಮೆ ಶೇ. 80ಕ್ಕೆ ಚಾರ್ಜಿಂಗ್ ‍ಅನ್ನು ಸ್ಥಗಿತಗೊಳಿಸುತ್ತದೆ.

ಫೇಸ್‍ ಐಡಿ ಮತ್ತು ಸಿರಿ: ಐಫೋನ್‍ ಬಗ್ಗೆ ಹೇಳುವಾಗ ಸಿರಿ ಮತ್ತು ಫೇಸ್‍ ಐಡಿಯ ಅನುಕೂಲತೆಗಳನ್ನು ಹೇಳದಿದ್ದರೆ ಅದು ಕೊರತೆಯಾಗುತ್ತದೆ. ಇದರ ಫೇಸ್‍ ಐಡಿ ಯಾವುದೇ ಆಂಡ್ರಾಯ್ಡ್ ಫೋನ್‍ ಗಿಂತ ವೇಗವಾದುದು. ಬ್ಯಾಂಕ್‍ ಆಪ್‍ಗಳು, ಫೋನ್‍ ಪೇ ಎಲ್ಲಕ್ಕೂ ಪಿನ್‍ ಒತ್ತುವ ರಗಳೆಯಿಲ್ಲದೇ ಥಟ್ಟನೆ ಓಪನ್‍ ಮಾಡುತ್ತದೆ. ಬಹಳ ಮಂದ ಬೆಳಕಿದ್ದಾಗಲೂ ಫೋನನ್ನು ಎದುರು ಹಿಡಿದರೆ ತಕ್ಷಣ ಅನ್‍ಲಾಕ್‍ ಆಗುತ್ತದೆ. ಇಷ್ಟು ನಿಖರತೆ ಆಂಡ್ರಾಯ್ಡ್ ನಲ್ಲಿ ಕಂಡುಬಂದಿಲ್ಲ.

ಮತ್ತೆ ಸಿರಿ ಕರೆ ಮಾಡಲು ಹೆಚ್ಚು ಉಪಯುಕ್ತವಾಗಿದೆ. ಫೋನ್‍ ನಂಬರ್‍ ಆಯ್ಕೆ ಮಾಡಿ ಕರೆ ಮಾಡುವ ಸಮಯವನ್ನು ಉಳಿಸುತ್ತದೆ. ನಮ್ಮ ಫೋನ್‍ ಬುಕ್‍ ನಲ್ಲಿರುವ ಹೆಸರುಗಳನ್ನು ಸ್ಪಷ್ಟವಾಗಿ ಹೇಳಿದರೆ ಫೋನ್‍ ಅನ್‍ ಲಾಕ್‍ ಆಗಿದ್ದರೂ ತಕ್ಷಣ ಕರೆ ಮಾಡುತ್ತದೆ. ಆಂಡ್ರಾಯ್ಡ್ ನ ಓಕೆ ಗೂಗಲ್‍ ನಲ್ಲಿ ಇಷ್ಟು ಸಲೀಸಾಗಿ ಕರೆ ಮಾಡಲಾಗುವುದಿಲ್ಲ. ಸೆಟಿಂಗ್‍ ಗಳನ್ನು ಓಪನ್ ಮಾಡಲು ಸಹ ಸಿರಿಯ ಅನುಕೂಲತೆ ಚೆನ್ನಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ ಅತ್ಯಂತ ಉನ್ನತವಾದ ಫೀಚರ್‍ ಗಳಿರಬೇಕು, ಕ್ಯಾಮರಾ, ವೇಗ, ಭರ್ಜರಿ ಬ್ಯಾಟರಿ, ಸುರಕ್ಷತೆ ಎಲ್ಲವನ್ನೂ ಬಯಸುವ ಸಿರಿವಂತ ಗ್ರಾಹಕರಿಗೆ ಐಫೋನ್‍ 16 ಪ್ರೊ ಮ್ಯಾಕ್ಸ್ ಹೇಳಿಮಾಡಿಸಿದಂತಿದೆ.

ಕೆ.ಎಸ್‍. ಬನಶಂಕರ ಆರಾಧ್ಯ

ಟಾಪ್ ನ್ಯೂಸ್

Panaji

Panaji: ಮುಟ್ಟಾದ ಮಹಿಳೆ ಮನೆಯಿಂದ ಹೊರಗೆ: ಸುಪ್ರೀಂ ನ್ಯಾಯಮೂರ್ತಿ ಕಳವಳ

Raja-Acci

Accident: ರಾಜಸ್ಥಾನದಲ್ಲಿ ಟೆಂಪೋ-ಬಸ್‌ ಡಿಕ್ಕಿ: 12 ಮಂದಿ ದುರ್ಮರಣ

Bihar-tragey

Bihar: ಕಳ್ಳಭಟ್ಟಿ ದುರಂತ; ಇಬ್ಬರ ಅಮಾನತು, 21 ಮಂದಿ ಬಂಧನ

Isha-Found

Compliant: ಈಶಾ ಸಂಸ್ಥೆಯಲ್ಲಿ ಮಗನಿಗೆ ಲೈಂಗಿಕ ದೌರ್ಜನ್ಯ: ದಂಪತಿ ಆರೋಪ

ODISHA-GIRL

Odisha: ಕುಟುಂಬಸ್ಥರ ಕಣ್ತಪ್ಪಿಸಲು ಟ್ರಂಕ್‌ನಲ್ಲಿ ಪ್ರಿಯಕರನ ಬಚ್ಚಿಟ್ಟ ಯುವತಿ!

Newz-Air

Policy: ವಿಮಾನ ನಿಲ್ದಾಣದಲ್ಲಿ ಅಪ್ಪುಗೆಗೆ ಸಮಯ ಮಿತಿ ಹೇರಿದ ನ್ಯೂಜಿಲೆಂಡ್‌ ಸರಕಾರ!

Airport

Compensation: ವಿಮಾನ ಅಪಘಾತದಲ್ಲಿ ಸತ್ತರೆ 1.7 ಕೋಟಿ ರೂ. ಪರಿಹಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Technology: ಇತ್ತೀಚಿನ ದಿನಗಳ ತಂತ್ರಜ್ಞಾನ- ಒಂದು ಪರಿಕಲ್ಪನೆ

Technology: ಇತ್ತೀಚಿನ ದಿನಗಳ ತಂತ್ರಜ್ಞಾನ- ಒಂದು ಪರಿಕಲ್ಪನೆ

Instagram down: ಭಾರತದಾದ್ಯಂತ ಇನ್ಸ್ಟಾಗ್ರಾಮ್‌ ಡೌನ್; ಬಳಕೆದಾರರು ಪರದಾಟ

Instagram down: ಭಾರತದಾದ್ಯಂತ ಇನ್ಸ್ಟಾಗ್ರಾಮ್‌ ಡೌನ್; ಬಳಕೆದಾರರು ಪರದಾಟ

5

ಅಮೆಜಾನ್‌ನಲ್ಲಿ ಶೀಘ್ರ 14,000 ಉದ್ಯೋಗ ಕಡಿತ: ವರದಿ

Mahindra Thar ROXX: 60 ನಿಮಿಷಗಳಲ್ಲಿ 1,76,218 ಮಹೀಂದ್ರಾ ಥಾರ್‌ ರೊಕ್ಸ್‌ ಬುಕ್ಕಿಂಗ್!

Mahindra Thar ROXX: 60 ನಿಮಿಷಗಳಲ್ಲಿ 1,76,218 ಮಹೀಂದ್ರಾ ಥಾರ್‌ ರೊಕ್ಸ್‌ ಬುಕ್ಕಿಂಗ್!

Airport:ಕಸ್ಟಮ್ಸ್‌ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ಮಹಿಳೆ-26 iPhone 16 Pro Max ವಶಕ್ಕೆ!

Airport:ಕಸ್ಟಮ್ಸ್‌ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ಮಹಿಳೆ-26 iPhone 16 Pro Max ವಶಕ್ಕೆ!

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

ಹೊಸ ಸೇರ್ಪಡೆ

Panaji

Panaji: ಮುಟ್ಟಾದ ಮಹಿಳೆ ಮನೆಯಿಂದ ಹೊರಗೆ: ಸುಪ್ರೀಂ ನ್ಯಾಯಮೂರ್ತಿ ಕಳವಳ

Raja-Acci

Accident: ರಾಜಸ್ಥಾನದಲ್ಲಿ ಟೆಂಪೋ-ಬಸ್‌ ಡಿಕ್ಕಿ: 12 ಮಂದಿ ದುರ್ಮರಣ

Chattsi-Blood

Chhattisgarh: ಅಜ್ಜಿಯ ನರಬಲಿ ನಡೆಸಿ ಶಿವಲಿಂಗಕ್ಕೆ ರಕ್ತ ಅರ್ಪಣೆ!

Bihar-tragey

Bihar: ಕಳ್ಳಭಟ್ಟಿ ದುರಂತ; ಇಬ್ಬರ ಅಮಾನತು, 21 ಮಂದಿ ಬಂಧನ

Isha-Found

Compliant: ಈಶಾ ಸಂಸ್ಥೆಯಲ್ಲಿ ಮಗನಿಗೆ ಲೈಂಗಿಕ ದೌರ್ಜನ್ಯ: ದಂಪತಿ ಆರೋಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.