Health: ರೋಗಿ ಸುರಕ್ಷೆಗೆ ಒಂದು ನಮನ


Team Udayavani, Oct 20, 2024, 5:12 PM IST

11

ಕಳೆದ ವಾರದಿಂದ

ಅರಿವಳಿಕೆಯ ವಿಕಾಸ

1846: ಮಸಾಚುಸೆಟ್ಸ್‌ ಜನರಲ್‌ ಹಾಸ್ಪಿಟಲ್‌ನಲ್ಲಿ ವಿಲಿಯಂ ಟಿ.ಜಿ. ಮೋರ್ಟನ್‌ ಅವರು ಈಥರ್‌ ಅನಸ್ಥೇಶಿಯಾದ ಬಹಿರಂಗ ಬಳಕೆಯನ್ನು ಮೊತ್ತಮೊದಲ ಬಾರಿಗೆ ನಡೆಸಿದರು.

1860: ಮೊತ್ತಮೊದಲ ಸ್ಥಳೀಯ ಅರಿವಳಿಕೆಯನ್ನು ಆವಿಷ್ಕರಿಸಲಾಯಿತು.

1898: ಡಾ| ಆಗಸ್ಟ್‌ ಬಯರ್‌ (1861-1949) ಅವರು ಕೊಕೇನ್‌ ಉಪಯೋಗಿಸಿ ಬೆನ್ನಿನ ಅರಿವಳಿಕೆಯನ್ನು ಮೊದಲ ಬಾರಿಗೆ ನಡೆಸಿದರು.

1901: ಫ್ರಾನ್ಸ್‌ನ ಡಾ| ಜೀನ್‌ ಆ್ಯಂಟನೀಸ್‌ ಸಿಕಾರ್ಡ್‌ ಮತ್ತು ಡಾ| ಫ‌ರ್ಡಿನಂಡ್‌ ಕ್ಯಾಥಲಿನ್‌ ಅವರು ಕಾಡಲ್‌ ಎಪಿಡ್ನೂರಲ್‌ ಅನಲ್ಜೇಸಿಯಾವನ್ನು ಸ್ವತಂತ್ರವಾಗಿ ವಿವರಿಸಿದರು.

1914: ಡಾ| ಡೆನಿಸ್‌ ಇ. ಜಾಕ್ಸನ್‌ ಅವರು ಕಾರ್ಬನ್‌ ಡಯಾಕ್ಸೈಡ್(ಇO2) ಹೀರುವಿಕೆ ಸಹಿತ ಅರಿವಳಿಕೆ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದರು. ಇದರಲ್ಲಿ ರೋಗಿಯು ಉಸಿರಿನ ಮೂಲಕ ಹೊರಬಿಟ್ಟ ಅನಸ್ಥೆಟಿಕ್‌ ಹೊಂದಿರುವ ಗಾಳಿ ಯನ್ನು ಕಾರ್ಬನ್‌ ಡಯಾಕ್ಸೈಡ್ರಹಿತಗೊಳಿಸಿ ಮರಳಿ ಉಸಿರಾಡುವಂತೆ ಮಾಡಲಾಗುತ್ತಿತ್ತು, ಇದರಿಂದಾಗಿ ಕಡಿಮೆ ಅನಸ್ಥೆಟಿಕ್‌ ಸಾಕಾಗುತ್ತಿತ್ತು ಮತ್ತು ವ್ಯರ್ಥವಾಗುವುದು ತಪ್ಪುತ್ತಿತ್ತು.

1923: ಡಾ| ಇಸಾಬೆಲ್ಲಾ ಹರ್ಬ್ ಅವರು ಇಥಿಲೀನ್‌-ಆಕ್ಸಿಜನ್‌ ಶಸ್ತ್ರಚಿಕಿತ್ಸಾತ್ಮಕ ಅನಸ್ಥೆಟಿಕ್‌ ಅನ್ನು ಪ್ರಯೋಗಿಸಿದರು. ಮನುಷ್ಯರಲ್ಲಿ ಕಡಿಮೆ ಡೋಸ್‌ನ ಇಥಿಲೀನ್‌ ಉಂಟುಮಾಡಬಹುದಾದ ಗಮನಾರ್ಹ ಶುಷುಪ್ತಿ ಸದೃಶ ಸ್ಥಿತಿಯನ್ನು ಆಕೆ ಪ್ರಾತ್ಯಕ್ಷಿಕೆಯ ಮೂಲಕ ತೋರಿಸಿದರು.

1941: ಡಾ| ರಾಬರ್ಟ್‌ ಹಿಂಗ್‌ಸನ್‌ ಅವರು ಕಂಟೀನ್ಯುಯಸ್‌ ಕಾಡಲ್‌ ಅನಸ್ಥೇಶಿಯಾವನ್ನು ಅಭಿವೃದ್ಧಿಪಡಿಸಿದರು. ದೀರ್ಘ‌ ಸಮಯದ ಅಥವಾ ಕಷ್ಟಕರವಾದ ಪ್ರಸೂತಿಯ ಸಂದರ್ಭದಲ್ಲಿ ನೋವಿನಿಂದ ನಿರಂತರ ಮುಕ್ತಿಯನ್ನು ಒದಗಿಸುವ ಪ್ರಸೂತಿಶಾಸ್ತ್ರೀಯ ಅರಿವಳಿಕೆಯ ಆವಿಷ್ಕಾರ ಇದಾಗಿತ್ತು.

1942: ಸ್ಕ್ವಿಬ್‌ನ ಲೆವಿಸ್‌ ಎಚ್‌. ರೈಟ್‌ ಅವರು ಫಾರ್ಮಸುಟಿಕಲ್‌ ದರ್ಜೆಯ ಕ್ಯುರೇರ್‌ ಅನ್ನು ಡಾ| ಗ್ರಿಫಿತ್‌ ಮತ್ತು ಡಾ| ಜಾನ್ಸನ್‌ ಅವರಿಗೆ ಸರಬರಾಜು ಮಾಡಿದರು. ಇದನ್ನು ಜಗತ್ತಿನ ಮೊತ್ತಮೊದಲ ಯಶಸ್ವಿ ಸ್ನಾಯು ರಿಲ್ಯಾಕ್ಸೆಂಟ್‌ ಆಗಿ ಉಪಯೋಗಿಸಲಾಯಿತು.

1956: ಯುನೈಟೆಡ್‌ ಕಿಂಗ್‌ಡಮ್‌ನ ಮೈಕೆಲ್‌ ಜಾನ್‌ ಸ್ಟನ್‌ ಅವರು ಹ್ಯಾಲೊಥೇನ್‌ ಅನ್ನು ವೈದ್ಯಕೀಯವಾಗಿ ಪರಿಚಯಿಸಿದರು. ಇದು ಆಧುನಿಕ ಕಾಲದ ಮೊದಲ ಬ್ರೋಮಿನ್‌ ‌ಯುಕ್ತ ಸಂಪೂರ್ಣ ಅರಿವಳಿಕೆಯಾಗಿದೆ.

1960: ಡಾ| ಜೋಸೆಫ್ ಆರ್ಟುಸಿಯೊ, ಡಾ| ಅಲನ್‌ ವಾನ್‌ ಪೊನಕ್‌ ಉಸಿರಾಟದ ಮೂಲಕ ನೀಡಬಲ್ಲಂತಹ ಅರಿವಳಿಕೆ ದ್ರವ್ಯ ಮೆಥೊಕ್ಸಿಫ್ಲುರೇನ್‌ನ್ನು ಮಾನವರ ಮೇಲೆ ಪ್ರಯೋಗ ಆರಂಭಿಸಿದರು.

1964: ಡಾ| ಗುಂಥರ್‌ ಕೋರ್ಸೆನ್‌ ಅವರು ಡಿಸೊಸೇಟಿವ್‌ ಇಂಟ್ರಾವೇನಸ್‌ ಅರಿವಳಿಕೆ ಕೆಟಾಮಿನ್‌ನ್ನು ಮಾನವರ ಮೇಲೆ ಪ್ರಯೋಗ ಆರಂಭಿಸಿದರು.

1966: ಡಾ| ರಾಬರ್ಟ್‌ ವರ್ಚ್ಯೂ ಅವರು ಉಸಿರಾಟದ ಮೂಲಕ ನೀಡಬಲ್ಲಂತಹ ಅರಿವಳಿಕೆ ಎನ್‌ಫ್ಲುರೇನ್ ನ್ನು‌  ಮನುಷ್ಯರ ಮೇಲೆ ಪ್ರಯೋಗ ಆರಂಭಿಸಿದರು.

1972: ಐಸೊಫ್ಲುರೇನ್ ನ್ನು ಉಸಿರಾಟದ ಮೂಲಕ ನೀಡುವ ಅರಿವಳಿಕೆ ದ್ರವ್ಯವಾಗಿ ವೈದ್ಯಕೀಯವಾಗಿ ಪರಿಚಯಿಸಲಾಯಿತು.

1992: ಉಸಿರಾಟದ ಮೂಲಕ ನೀಡುವ ಅರಿವಳಿಕೆ ದ್ರವ್ಯವಾಗಿ ಡೆಸ್‌ಫ್ಲುರೇನ್‌ ನ್ನು ವೈದ್ಯಕೀಯವಾಗಿ ಪರಿಚಯಿಸಲಾಯಿತು.

1994: ಉಸಿರಾಟದ ಮೂಲಕ ನೀಡುವ ಅರಿವಳಿಕೆ ದ್ರವ್ಯವಾಗಿ ಸೆವೊಫ್ಲುರೇನ್ ನ್ನು ವೈದ್ಯಕೀಯವಾಗಿ ಪರಿಚಯಿಸಲಾಯಿತು.

ಅರಿವಳಿಕೆಶಾಸ್ತ್ರದಲ್ಲಿ ಇತ್ತೀಚೆಗಿನ ಪ್ರಗತಿಗಳು

1846ರಲ್ಲಿ ಅರಿವಳಿಕೆಯು ವೈದ್ಯಕೀಯ ಜಗತ್ತಿಗೆ ಪರಿಚಯಗೊಂಡ ಬಳಿಕ ಅದನ್ನು ನೀಡುವುದು ಮತ್ತು ರೋಗಿಯ ಮೇಲಣ ನಿಗಾ ವಹಿಸುವಿಕೆಯಲ್ಲಿ ಆಗಿರುವ ಪ್ರಗತಿಗಳಿಂದಾಗಿ ಅರಿವಳಿಕೆಯು ಇಂದು ಬಹಳ ಸುರಕ್ಷಿತ ಮತ್ತು ಹೆಚ್ಚು ದಕ್ಷವಾಗಿದೆ. ಕಳೆದ ದಶಕದಲ್ಲಿ ಅರಿವಳಿಕೆಶಾಸ್ತ್ರದಲ್ಲಿ ಆಗಿರುವ ಕೆಲವು ಗಮನಾರ್ಹ ಪ್ರಗತಿಗಳನ್ನು ಉಲ್ಲೇಖೀಸುವುದಾದರೆ:

  • ಆಧುನಿಕ ಅರಿವಳಿಕೆ ಯಂತ್ರವು ಒಂದು ಸಂಕೀರ್ಣ ಉಪಕರಣವಾಗಿದ್ದು, ಉಸಿರಾಟದ ಮೂಲಕ ನೀಡುವ ಅರಿವಳಿಕೆ ದ್ರವ್ಯಗಳನ್ನು ಒದಗಿಸುವುದಕ್ಕೆ ಬೇಕಾದ ವೆಂಟಿಲೇಟರ್‌ನ್ನು ಕೂಡ ಒಳಗೊಂಡಿರುತ್ತದೆ.
  • ಇದು ರೋಗಿಗೆ ಸರಿಯಾದ ಪ್ರಮಾಣದಲ್ಲಿ ಆಮ್ಲಜನಕ ಒದಗಣೆ ಮತ್ತು ಗಾಳಿಯಾಟವನ್ನು ಖಾತರಿಪಡಿಸುವುದಷ್ಟೇ ಅಲ್ಲದೆ ಅರಿವಳಿಕೆ ಅನಿಲಗಳ ನಿಖರ ಮಿಶ್ರಣವನ್ನು ಹಾಗೂ ಅವು ಶಸ್ತ್ರಚಿಕಿತ್ಸಾ ಕೊಠಡಿಯಲ್ಲಿ ಕಾರ್ಯನಿರತರಾಗಿರುವ ಸಿಬಂದಿ ಈ ಅರಿವಳಿಕೆ ಅನಿಲಗಳಿಗೆ ಒಡ್ಡಿಕೊಳ್ಳುವುದು ಅತೀ ಕನಿಷ್ಠ ಪ್ರಮಾಣದಲ್ಲಿ ಇರುವಂತೆ ಮಾಡುತ್ತವೆ.

ಅರಿವಳಿಕೆ ಕಾರ್ಯಯಂತ್ರದಲ್ಲಿ ಒಳಗೊಂಡಿರುವ ಉತ್ಕೃಷ್ಟ ಮಟ್ಟದ ನಿಗಾ ಉಪಕರಣಗಳು ಶಸ್ತ್ರಚಿಕಿತ್ಸೆಯ ಸಂದರ್ಭದಲ್ಲಿ ರೋಗಿಯ ಹೀಮೊಡೈನಾಮಿಕ್‌, ಆಕ್ಸಿಜನೇಶನ್‌, ವೆಂಟಿಲೇಶನ್‌ ಮತ್ತು ನ್ಯುರಾಲಜಿಕಲ್‌ ಸ್ಥಿತಿಗತಿಗಳ ಬಗ್ಗೆ ನೈಜ ಸಮಯದಲ್ಲಿ ಸತತವಾಗಿ ಉಚ್ಚ ದರ್ಜೆಯ ನಿಗಾ ಇರಿಸುವುದನ್ನು ಸಾಧ್ಯವಾಗಿಸುತ್ತವೆ. ಉಸಿರಾಟದ ಮೂಲಕ ನೀಡುವ ಹೊಸ ಅರಿವಳಿಕೆ ಆಗಿರುವ ಸೆವೊಫ್ಲುರೇನ್ ಮತ್ತು ಡೆಸ್‌ಫ್ಲುರೇನ್ ಕ್ಷಿಪ್ರವಾಗಿ ಮತ್ತು ಸುಖಕರವಾಗಿ ಅನಿಲ ರೂಪದಲ್ಲಿ ಅರಿವಳಿಕೆ ಉಂಟಾಗುವಂತೆ ಮಾಡುತ್ತವೆಯಲ್ಲದೆ ಅತ್ಯಂತ ಕನಿಷ್ಠ ಪ್ರಮಾಣದ ‘ಹ್ಯಾಂಗೋವರ್‌’ ಪರಿಣಾಮದೊಂದಿಗೆ ಕ್ಷಿಪ್ರವಾಗಿ ರೋಗಿ ಪೂರ್ವ ಸ್ಥಿತಿಗೆ ಮರಳುವ ಪರಿಣಾಮ ವನ್ನು ಹೊಂದಿವೆ.

ಮುಂದಿನ ವಾರಕ್ಕೆ…

ಟಾಪ್ ನ್ಯೂಸ್

Raja-Acci

Accident: ರಾಜಸ್ಥಾನದಲ್ಲಿ ಟೆಂಪೋ-ಬಸ್‌ ಡಿಕ್ಕಿ: 12 ಮಂದಿ ದುರ್ಮರಣ

Bihar-tragey

Bihar: ಕಳ್ಳಭಟ್ಟಿ ದುರಂತ; ಇಬ್ಬರ ಅಮಾನತು, 21 ಮಂದಿ ಬಂಧನ

Isha-Found

Compliant: ಈಶಾ ಸಂಸ್ಥೆಯಲ್ಲಿ ಮಗನಿಗೆ ಲೈಂಗಿಕ ದೌರ್ಜನ್ಯ: ದಂಪತಿ ಆರೋಪ

ODISHA-GIRL

Odisha: ಕುಟುಂಬಸ್ಥರ ಕಣ್ತಪ್ಪಿಸಲು ಟ್ರಂಕ್‌ನಲ್ಲಿ ಪ್ರಿಯಕರನ ಬಚ್ಚಿಟ್ಟ ಯುವತಿ!

Newz-Air

Policy: ವಿಮಾನ ನಿಲ್ದಾಣದಲ್ಲಿ ಅಪ್ಪುಗೆಗೆ ಸಮಯ ಮಿತಿ ಹೇರಿದ ನ್ಯೂಜಿಲೆಂಡ್‌ ಸರಕಾರ!

Airport

Compensation: ವಿಮಾನ ಅಪಘಾತದಲ್ಲಿ ಸತ್ತರೆ 1.7 ಕೋಟಿ ರೂ. ಪರಿಹಾರ

Manipur

Conflict: ಮಣಿಪುರದಲ್ಲಿ ಹಿಂಸೆ: ಗ್ರಾಮ ಮುಖ್ಯಸ್ಥನ ಮನೆಗೆ ಬೆಂಕಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

10

Health: ಚಟುವಟಿಕೆಗಳ ಮೂಲಕ ಮಾನಸಿಕ ಆರೋಗ್ಯಕ್ಕೆ ಉತ್ತೇಜನ

7

Health: ಮಾತನಾಡುವ ಕಲೆ ಮತ್ತು ಆಲಿಸುವ ಶಕ್ತಿ

1

World Osteoporosis Day: ಆಸ್ಟಿಯೊಪೊರೋಸಿಸ್‌ ಅಥವಾ ಮೂಳೆ ಸವಕಳಿ ಎಂದರೇನು?

6-anasthesia

Anesthesia: ರೋಗಿ ಸುರಕ್ಷೆಗೆ ಒಂದು ನಮನ – ವಿಶ್ವ ಅರಿವಳಿಕೆ ದಿನ ಅಕ್ಟೋಬರ್‌ 16

5-health

Global Infection Control: ಜಾಗತಿಕ ಸೋಂಕು ನಿಯಂತ್ರಣ ಸಪ್ತಾಹ

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

ಹೊಸ ಸೇರ್ಪಡೆ

Raja-Acci

Accident: ರಾಜಸ್ಥಾನದಲ್ಲಿ ಟೆಂಪೋ-ಬಸ್‌ ಡಿಕ್ಕಿ: 12 ಮಂದಿ ದುರ್ಮರಣ

Chattsi-Blood

Chhattisgarh: ಅಜ್ಜಿಯ ನರಬಲಿ ನಡೆಸಿ ಶಿವಲಿಂಗಕ್ಕೆ ರಕ್ತ ಅರ್ಪಣೆ!

Bihar-tragey

Bihar: ಕಳ್ಳಭಟ್ಟಿ ದುರಂತ; ಇಬ್ಬರ ಅಮಾನತು, 21 ಮಂದಿ ಬಂಧನ

Isha-Found

Compliant: ಈಶಾ ಸಂಸ್ಥೆಯಲ್ಲಿ ಮಗನಿಗೆ ಲೈಂಗಿಕ ದೌರ್ಜನ್ಯ: ದಂಪತಿ ಆರೋಪ

ODISHA-GIRL

Odisha: ಕುಟುಂಬಸ್ಥರ ಕಣ್ತಪ್ಪಿಸಲು ಟ್ರಂಕ್‌ನಲ್ಲಿ ಪ್ರಿಯಕರನ ಬಚ್ಚಿಟ್ಟ ಯುವತಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.