BY Election: ಮಗ ಭರತ್‌ಗೆ ಟಿಕೆಟ್ ಬೇಡ ಅಂದಿದ್ದೆ, ಇದು ವರಿಷ್ಠರ ತೀರ್ಮಾನ: ಬೊಮ್ಮಾಯಿ
ಸ್ಥಳೀಯ ಕಾರ್ಯಕರ್ತರಿಗೆ ಟಿಕೆಟ್ ಕೊಡಲು ಕೇಳಿದ್ದೆ: ಸಂಸದ
Team Udayavani, Oct 21, 2024, 6:45 AM IST
ಬೆಂಗಳೂರು: ಈ ಬಾರಿ ನನ್ನ ಮಗನಿಗೆ ಬೇಡ. ಸ್ಥಳೀಯ ಕಾರ್ಯಕರ್ತರಿಗೇ ಕೊಡಬೇಕೆಂಬ ಪ್ರಸ್ತಾವನೆಯೊಂದಿಗೆ ದೆಹಲಿಗೆ ಹೋಗಿದ್ದೆ. ಆದರೆ, ವರಿಷ್ಠರು ಕೊಟ್ಟ ಪಟ್ಟಿಯಲ್ಲಿ ಭರತ್ ಹೆಸರಿತ್ತು. ಹೆಚ್ಚು ಮಾತನಾಡಲೂ ಅವಕಾಶ ನೀಡದೆ, ಪಕ್ಷದ ನಿರ್ಧಾರವನ್ನು ಒಪ್ಪಿಕೊಳ್ಳಬೇಕು. ಜವಾಬ್ದಾರಿ ತೆಗೆದುಕೊಂಡು ಗೆಲ್ಲಿಸಿಕೊಂಡು ಬರುವಂತೆ ಪಕ್ಷ ಹೇಳಿದೆ. ಅದನ್ನು ಒಪ್ಪಿಕೊಂಡಿದ್ದೇನೆ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಭಾನುವಾರ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ಥಳೀಯವಾಗಿ ಯಾರಿಗೇ ಕೊಟ್ಟರೂ ನನ್ನ ಮಗನಂತೆ ಸಂಪೂರ್ಣ ಜವಾಬ್ದಾರಿ ತೆಗೆದುಕೊಂಡು ಬೆಂಬಲಕ್ಕೆ ನಿಂತು ಕೆಲಸ ಮಾಡುತ್ತೇನೆ ಎಂದೆ. ಪಕ್ಷ, ಪ್ರಸ್ತುತ ರಾಜಕಾರಣ ಹಾಗೂ ಕ್ಷೇತ್ರದ ಹಿತದೃಷ್ಟಿಯಿಂದ ನಿರ್ಧರಿಸಿದ್ದೇವೆ ಎಂದು ವರಿಷ್ಠರು ಹೇಳಿದರು.
ಆದರೂ 2 ದಿನ ಸಮಯ ಕೊಡುವಂತೆಯೂ ಕೇಳಿದೆ. ನಾವು ಎಲ್ಲ ರೀತಿಯಿಂದ ಅಳೆದು-ತೂಗಿ, ಸರ್ವೇಗಳನ್ನು ನೋಡಿ ತೀರ್ಮಾನಿಸಿದ್ದೇವೆ. ಸಮಯ ಕೊಡಲಾಗಲ್ಲ ಎಂದರು. ಅಷ್ಟೇ ಅಲ್ಲದೆ, ಗೃಹ ಸಚಿವ ಅಮಿತ್ ಶಾ ಅವರಿಗೂ ದೂರವಾಣಿ ಕರೆ ಮಾಡಿ ಕೊಟ್ಟರು. ಸರ್ವಸಮ್ಮತದ ನಿರ್ಣಯ ಇದೆ. ಸ್ಪರ್ಧಿಸಿ, ಗೆಲ್ಲಿ ಬೇರೆ ಏನೂ ಮಾತನಾಡಬೇಡಿ. ಗೆಲ್ಲುವುದಷ್ಟೇ ನಮಗೆ ಮುಖ್ಯ ಎಂದರು.
ಜವಾಬ್ದಾರಿಯಿಂದ ಹಿಂದೆ ಸರಿಯಲ್ಲ:
ವ್ಯಕ್ತಿಗಿಂತ ಪಕ್ಷ, ಪಕ್ಷಕ್ಕಿಂತ ದೇಶ ಮುಖ್ಯ ಎಂಬುದು ನಮ್ಮ ಪಕ್ಷದ ಹಿರಿಯರ ಮಾತು. ನನ್ನ ಮನಸ್ಸಿನಲ್ಲಿ ಬೇರೆಯದೇ ವಿಚಾರ ಇತ್ತು. ಪಕ್ಷ ವಿಶ್ವಾಸವಿಟ್ಟು ಒತ್ತಾಯಪೂರ್ವಕವಾಗಿ ಹೇಳಿದಾಗ ಜವಾಬ್ದಾರಿಯಿಂದ ಹಿಂದೆ ಸರಿಯಬಾರದೆಂದು ಒಪ್ಪಿಕೊಂಡಿದ್ದೇನೆ. ನಾವು ಬೆಳೆಯಲು ಪಕ್ಷ ಕಾರಣ. ಪಕ್ಷ ಹೇಳಿದ್ದನ್ನು ಮಾಡಲೇಬೇಕಿದೆ. ಕ್ಷೇತ್ರದ ಜನತೆ ಒಂದು ವಾರದಿಂದ ದೊಡ್ಡ ಒತ್ತಡ ಹೇರಿದ್ದರು. ಅವರ ಭಾವನೆ ಅದೇ ಇತ್ತು. ಸ್ಥಳೀಯರಿಗೆ ವಸ್ತುಸ್ಥಿತಿ ಗೊತ್ತಿದೆ. ಗೆಲ್ಲಬೇಕೆಂಬುದು ಅವರ ಭಾವನೆ ಇದೆ. ರಾಜಕೀಯ ಅಸ್ತಿತ್ವದ ಪ್ರಶ್ನೆ ಎಂಬ ಭಾವನೆ ವ್ಯಕ್ತಪಡಿಸಿದ್ದರು. ಈ ಎಲ್ಲ ಕಾರಣಗಳ ಹಿನ್ನೆಲೆಯಲ್ಲಿ ಪಕ್ಷದ ತೀರ್ಮಾನವನ್ನು ಒಪ್ಪಿಕೊಂಡಿದ್ದೇನೆ ಎಂದು ತಿಳಿಸಿದರು.
ಪ್ರತಿ ಚುನಾವಣೆಯಲ್ಲೂ ಒಂದಲ್ಲ ಒಂದು ರೀತಿಯ ಸವಾಲು ಇದ್ದೇ ಇರುತ್ತದೆ. ಉಪ ಚುನಾವಣೆಯಲ್ಲೂ ಹಲವು ಸಂದರ್ಭಗಳು ಬರುತ್ತವೆ. ನಾವೂ ಸರ್ಕಾರ ನಡೆಸುತ್ತಿದ್ದಾಗ ಉಪಚುನಾವಣೆಗಳು ಬಂದಿವೆ. ಕೆಲವು ಗೆದ್ದಿದ್ದೇವೆ, ಕೆಲವು ಸೋತಿದ್ದೇವೆ. ಆದರೆ, ಅನುಭವ ಅಂತೂ ಇದೆ. ಆಡಳಿತ ಪಕ್ಷವಾಗಿ ಏನು ಮಾಡುತ್ತಾರೆಂಬುದೂ ಗೊತ್ತಿದೆ. ನಾವು ಎದುರಿಸಲು ಸಿದ್ಧರಿದ್ದೇವೆ.
– ಬಸವರಾಜ ಬೊಮ್ಮಾಯಿ, ಬಿಜೆಪಿ ಸಂಸದ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ಜಿಲ್ಲಾಸ್ಪತ್ರೆಯಲ್ಲಿ ಒಂದು ವರ್ಷದ ಮಗು ಅಪಹರಣ: ಸಿಸಿಟಿವಿಯಲ್ಲಿ ದೃಶ್ಯ
Lakkundi: ಹೊಸದಾಗಿ 5 ಬಾವಿ, 5 ಶಾಸನಗಳು, ಸಾವಿರಕ್ಕೂ ಹೆಚ್ಚು ಶಿಲ್ಪಕಲೆಗಳ ಅನ್ವೇಷಣೆ
JDS ರಾಮನಗರದಿಂದಲೂ ಔಟ್: ‘ಮೈತ್ರಿ’ಗೂ ಲಾಭ ತಂದು ಕೊಡದ ದಳ
Vikram Gowda Case: ವಿಕ್ರಂ ಗೌಡ ಎನ್‌ಕೌಂಟರ್; ತನಿಖೆ ಚುರುಕು
Karnataka Congress; ‘ಭ್ರಷ್ಟ’ಆರೋಪ ಮಧ್ಯೆ ವಿಪಕ್ಷಗಳಿಗೆ ಮರ್ಮಾಘಾತ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.