Heavy Rain: ಅ.21ರಂದು ರಾಜ್ಯದ 3-4 ಜಿಲ್ಲೆಗಳಲ್ಲಿ ಭಾರೀ ಮಳೆ?

19 ಜಿಲ್ಲೆಗಳಿಗೆ ಹಳದಿ ಅಲರ್ಟ್‌ ಘೋಷಿಸಿದ ಹವಾಮಾನ ಇಲಾಖೆ

Team Udayavani, Oct 20, 2024, 7:32 PM IST

Heavy Rain: ಅ.21ರಂದು ರಾಜ್ಯದ 3-4 ಜಿಲ್ಲೆಗಳಲ್ಲಿ ಭಾರೀ ಮಳೆ?

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ಕರ್ನಾಟಕದ 19 ಜಿಲ್ಲೆಗಳಲ್ಲಿ  ಸೋಮವಾರ(ಅ.21ರಂದು) ಭಾರೀ ಮಳೆಯಾಗುವ ಸಾಧ್ಯತೆಗಳಿವೆ.

ಹೀಗಾಗಿ ಹವಾಮಾನ ಇಲಾಖೆಯು ಮುನ್ನೆಚ್ಚರಿಕಾ ಕ್ರಮವಾಗಿ ಈ ಜಿಲ್ಲೆಗಳಿಗೆ ಹಳದಿ ಅಲರ್ಟ್‌ ಘೋಷಿಸಿದೆ. ಇನ್ನು ರಾಜ್ಯದಲ್ಲಿ ವಾಡಿಕೆಗಿಂತ ಹೆಚ್ಚುವರಿಯಾಗಿ ಶೇ.44ರಷ್ಟು ಮಳೆ ಸುರಿದಿದೆ.

ಆಂಧ್ರಪ್ರದೇಶ ಹಾಗೂ ತಮಿಳುನಾಡಿನ ಕರಾವಳಿ ತೀರದಲ್ಲಿ ಸರ್ಕ್ನೂಲೇಶನ್‌ 5.8 ಕಿ.ಮೀ. ಎತ್ತರದವರೆಗೆ ಇವೆ. ಇದರ ಪ್ರಭಾವದಿಂದ ದಕ್ಷಿಣ ಒಳನಾಡು, ಕರಾವಳಿ ಹಾಗೂ ಉತ್ತರ ಒಳನಾಡಿನಲ್ಲಿ ಅ.23ರ ವರೆಗೆ ವ್ಯಾಪಕವಾಗಿ ಮಳೆಯಾಗುವ ಹೆಚ್ಚಿನ ಸಾಧ್ಯತೆಗಳಿವೆ.

ಬೆಂಗಳೂರು, ಉತ್ತರ ಕನ್ನಡ, ಉಡುಪಿ, ಬೆಳಗಾವಿ, ಧಾರವಾಢ, ಹಾವೇರಿ, ಬಾಗಲಕೋಟೆ, ಗದಗ, ಕೊಪ್ಪಳ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಚಿತ್ರದುರ್ಗ, ದಾವಣಗೆರೆ, ಬಳ್ಳಾರಿ, ಚಿಕ್ಕಬಳ್ಳಾಪುರ, ತುಮಕೂರು, ಕೋಲಾರ ಹಾಗೂ ರಾಮನಗರ ಜಿಲ್ಲೆಗಳ ಕೆಲವು ಕಡೆ ಭಾರೀ ಮಳೆಯಾಗುವ ಸಾಧ್ಯತೆಗಳಿವೆ.

ಈ ಜಿಲ್ಲೆಗಳಿಗೆ ಹವಾಮಾನ ಇಲಾಖೆಯು ಅ.21ರಂದು ಹಳದಿ ಅಲರ್ಟ್‌ ಘೋಷಣೆ ಮಾಡಿದೆ. ಬೆಂಗಳೂರಿನಲ್ಲಿ ಅ.22ರ ವರೆಗೆ ಭಾರೀ ಮಳೆಯಾಗುವ ಹೆಚ್ಚಿನ ಸಾಧ್ಯತೆಗಳಿವೆ ಎಂದು ಭಾರತೀಯ ಹವಾಮಾನ ಇಲಾಖೆಯ ಬೆಂಗಳೂರು ವಿಭಾಗದ ನಿರ್ದೇಶಕ ಸಿ.ಎಸ್‌.ಪಾಟೀಲ್‌ ತಿಳಿಸಿದ್ದಾರೆ.

ಕೆಂಗೇರಿಯಲ್ಲಿ ಅತ್ಯಧಿಕ ಮಳೆ:
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (ಕೆಎಸ್‌ಎನ್‌ಡಿಎಂಸಿ) ಪ್ರಕಾರ ಬೆಂಗಳೂರಿನ ಕೆಂಗೇರಿಯಲ್ಲಿ ಭಾನುವಾರ 141.5 ಮಿ.ಮೀ ಗರಿಷ್ಠ ಮಳೆ ದಾಖಲಾಗಿದೆ. ಇದು ರಾಜ್ಯದಲ್ಲೇ ಅತ್ಯಧಿಕವಾಗಿ ಸುರಿದ ಮಳೆಯಾಗಿದೆ.

ರಾಜ್ಯದಲ್ಲಿ ಶೇ.44
ಹೆಚ್ಚುವರಿ ಮಳೆ
ಅ.1 ರಿಂದ 19ರ ವರೆಗೆ ಕರ್ನಾಟಕದಾದ್ಯಂತ 133 ಮೀಮೀ ಮಳೆ ಸುರಿದಿದೆ. ಈ ಅವಧಿಯಲ್ಲಿ ವಾಡಿಕೆಯಂತೆ 92 ಮೀಮೀ ಮಳೆಯಾಗಬೇಕಿತ್ತು. ಆದರೆ ವಾಡಿಕೆಗಿಂತ ಶೇ.44 ಹೆಚ್ಚುವರಿ ಮಳೆಯಾಗಿದೆ. ದಕ್ಷಿಣ ಒಳನಾಡಿನಲ್ಲಿ ಶೇ.58, ಉತ್ತರ ಒಳನಾಡಿನಲ್ಲಿ ಶೇ.34, ಮಲೆನಾಡು ಶೇ.46, ಕರಾವಳಿ ಶೇ.40 ಹೆಚ್ಚುವರಿ ಮಳೆ ಸುರಿದಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರವು ತಿಳಿಸಿದೆ.

ಟಾಪ್ ನ್ಯೂಸ್

Horoscope: ಆದಾಯದ ಹೊಸ ಮೂಲಗಳು ತಾವಾಗಿ ಬರುವ ಸಾಧ್ಯತೆ

Horoscope: ಆದಾಯದ ಹೊಸ ಮೂಲಗಳು ತಾವಾಗಿ ಬರುವ ಸಾಧ್ಯತೆ

CHandrababu-Naidu

Andhra Pradesh; 2 ಮಕ್ಕಳಿದ್ದವರಿಗೆ ಮಾತ್ರ ಚುನಾವಣ ಟಿಕೆಟ್‌!

Server Problem: ಸಿಗದ ಅನ್ನಭಾಗ್ಯ! ವಿಳಂಬದ ಜತೆಗೆ ಮಂದಗತಿಯಲ್ಲಿದೆ ಪಡಿತರ ವಿತರಣೆ

Server Problem: ಸಿಗದ ಅನ್ನಭಾಗ್ಯ! ವಿಳಂಬದ ಜತೆಗೆ ಮಂದಗತಿಯಲ್ಲಿದೆ ಪಡಿತರ ವಿತರಣೆ

Accident-logo

Government Data: ರಸ್ತೆ ಅಪಘಾತದಲ್ಲಿ ಸಾವು: ಕರ್ನಾಟಕಕ್ಕೆ 5ನೇ ಸ್ಥಾನ!

Kashi

Foundation: ಕಾಶಿಯಲ್ಲಿ ದೀಪಾವಳಿ ಮುನ್ನ ಅಭಿವೃದ್ಧಿ ಹಬ್ಬ: ಪ್ರಧಾನಿ ನರೇಂದ್ರ ಮೋದಿ

ಮಳೆ ಅಬ್ಬರಕ್ಕೆ ಜಮೀನಲ್ಲೇ ಕೊಳೆಯುತ್ತಿರುವ ಬೆಳೆಗಳು!

ಮಳೆ ಅಬ್ಬರಕ್ಕೆ ಜಮೀನಲ್ಲೇ ಕೊಳೆಯುತ್ತಿರುವ ಬೆಳೆಗಳು!

C P YOgeshwar

C. P. Yogeshwara; ತೆನೆ ಕೊಡುಗೆ ಒಪ್ಪದ ಸೈನಿಕ: ಚನ್ನಪಟ್ಟಣ ಕಗ್ಗಂಟು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Server Problem: ಸಿಗದ ಅನ್ನಭಾಗ್ಯ! ವಿಳಂಬದ ಜತೆಗೆ ಮಂದಗತಿಯಲ್ಲಿದೆ ಪಡಿತರ ವಿತರಣೆ

Server Problem: ಸಿಗದ ಅನ್ನಭಾಗ್ಯ! ವಿಳಂಬದ ಜತೆಗೆ ಮಂದಗತಿಯಲ್ಲಿದೆ ಪಡಿತರ ವಿತರಣೆ

ಮಳೆ ಅಬ್ಬರಕ್ಕೆ ಜಮೀನಲ್ಲೇ ಕೊಳೆಯುತ್ತಿರುವ ಬೆಳೆಗಳು!

ಮಳೆ ಅಬ್ಬರಕ್ಕೆ ಜಮೀನಲ್ಲೇ ಕೊಳೆಯುತ್ತಿರುವ ಬೆಳೆಗಳು!

C P YOgeshwar

C. P. Yogeshwara; ತೆನೆ ಕೊಡುಗೆ ಒಪ್ಪದ ಸೈನಿಕ: ಚನ್ನಪಟ್ಟಣ ಕಗ್ಗಂಟು

siddanna-2

Code of Conduct ಅಡ್ಡಿ: ಜಾತಿಗಣತಿ, ಒಳಮೀಸಲಾತಿಗೆ ಸದ್ಯಕ್ಕೆ ತಡೆ

BY Election: ಬಿಜೆಪಿಯಿಂದ ಟಿಕೆಟ್‌ ಸಿಗದಿದ್ದರೆ ಸಿಪಿವೈ ಬಿಎಸ್‌ಪಿಯಿಂದ ಸ್ಪರ್ಧೆ?

BY Election: ಬಿಜೆಪಿಯಿಂದ ಟಿಕೆಟ್‌ ಸಿಗದಿದ್ದರೆ ಸಿಪಿವೈ ಬಿಎಸ್‌ಪಿಯಿಂದ ಸ್ಪರ್ಧೆ?

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

ಹೊಸ ಸೇರ್ಪಡೆ

Horoscope: ಆದಾಯದ ಹೊಸ ಮೂಲಗಳು ತಾವಾಗಿ ಬರುವ ಸಾಧ್ಯತೆ

Horoscope: ಆದಾಯದ ಹೊಸ ಮೂಲಗಳು ತಾವಾಗಿ ಬರುವ ಸಾಧ್ಯತೆ

CHandrababu-Naidu

Andhra Pradesh; 2 ಮಕ್ಕಳಿದ್ದವರಿಗೆ ಮಾತ್ರ ಚುನಾವಣ ಟಿಕೆಟ್‌!

Server Problem: ಸಿಗದ ಅನ್ನಭಾಗ್ಯ! ವಿಳಂಬದ ಜತೆಗೆ ಮಂದಗತಿಯಲ್ಲಿದೆ ಪಡಿತರ ವಿತರಣೆ

Server Problem: ಸಿಗದ ಅನ್ನಭಾಗ್ಯ! ವಿಳಂಬದ ಜತೆಗೆ ಮಂದಗತಿಯಲ್ಲಿದೆ ಪಡಿತರ ವಿತರಣೆ

Accident-logo

Government Data: ರಸ್ತೆ ಅಪಘಾತದಲ್ಲಿ ಸಾವು: ಕರ್ನಾಟಕಕ್ಕೆ 5ನೇ ಸ್ಥಾನ!

Kashi

Foundation: ಕಾಶಿಯಲ್ಲಿ ದೀಪಾವಳಿ ಮುನ್ನ ಅಭಿವೃದ್ಧಿ ಹಬ್ಬ: ಪ್ರಧಾನಿ ನರೇಂದ್ರ ಮೋದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.