Mangaluru: ನಂತೂರು ಬಳಿ ಅಪಘಾತ: ಯುವತಿ ಮೃತ್ಯು

ರಸ್ತೆಗೆ ಬಿದ್ದ ಯುವತಿ ತಲೆ ಮೇಲೆಯೇ ಸಾಗಿದ ಮೀನು ಸಾಗಾಟದ ಲಾರಿ, ಕದ್ರಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

Team Udayavani, Oct 20, 2024, 8:02 PM IST

Nanthooru-Acci

ಮಂಗಳೂರು: ನಂತೂರಿನಲ್ಲಿ ರವಿವಾರ ನಡೆದ ಅಪಘಾತದಲ್ಲಿ ಕೋಡಿಕಲ್ ನಿವಾಸಿ ಕ್ರಿಸ್ಟಿ ಕ್ರಾಸ್ತಾ (27) ಗಂಭೀರ ಗಾಯಗೊಂಡು ಮೃತಪಟ್ಟಿದ್ದಾರೆ.

ನಗರದ ಕಂಕನಾಡಿ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರು. ರವಿವಾರ ಮಧ್ಯಾಹ್ನ ಮನೆಯಿಂದ ಆಸ್ಪತ್ರೆಯತ್ತ ದ್ವಿಚಕ್ರ ವಾಹನದಲ್ಲಿ ನಂತೂರು ಜಂಕ್ಷನ್‌ನಲ್ಲಿ ತೆರಳುತ್ತಿದ್ದಾಗ ಸ್ಕೂಟರ್ ಸ್ಕಿಡ್ ಆಗಿ ರಸ್ತೆಗೆ ಬಿದ್ದಿದ್ದಾರೆ. ಇದೇ ವೇಳೆ ಕೇರಳ ಕಡೆಗೆ ತೆರಳುತ್ತಿದ್ದ ಮೀನು ತುಂಬಿದ ಲಾರಿಯೊಂದರ ಹಿಂಬದಿ ಚಕ್ರಕ್ಕೆ ಅವರ ತಲೆ ಸಿಲುಕಿದೆ.ಇದರ ಪರಿಣಾಮ ಯುವತಿ ಕ್ರಿಸ್ಟಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಯುವತಿ ಕ್ರಿಸ್ಟಿ ತಂದೆ, ತಾಯಿ ಮತ್ತು ಸಹೋದರನನ್ನು ಅಗಲಿದ್ದಾರೆ. ಕದ್ರಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಮಂಗಳೂರು: ನಗರದ ನಂತೂರಿನಲ್ಲಿ ಜಂಕ್ಷನ್‌ ಸಮೀಪದ ಬಜ್ಜೋಡಿ ಶಾಂತಿ ಕಿರಣ ಬಳಿ ಸ್ಕೂಟರ್‌ ಸ್ಕಿಡ್‌ ಆಗಿ ಬಿದ್ದು, ಹಿಂದಿನಿಂದ ಬರುತ್ತಿದ್ದ ಮೀನಿನ ಲಾರಿಯ ಚಕ್ರಕ್ಕೆ ತಲೆ ಸಿಲುಕಿ ಸವಾರೆ ಸ್ಥಳದಲ್ಲೇ ಮೃತಪಟ್ಟ ಘಟನೆ ರವಿವಾರ ಸಂಜೆ ಸಂಭವಿಸಿದೆ.

ಕೋಡಿಕಲ್‌ 5ನೇ ಅಡ್ಡರಸ್ತೆ ನಿವಾಸಿ ಕ್ರಿಸ್ಟಿ ಕ್ರಾಸ್ತಾ (27) ಮೃತಪಟ್ಟವರು. ರವಿವಾರ ಸಂಜೆ ತನ್ನ ದ್ವಿಚಕ್ರ ವಾಹನದಲ್ಲಿ ಕೋಡಿಕಲ್‌ನಿಂದ ಪಂಪ್‌ವೆಲ್‌ನತ್ತ ತೆರಳುತ್ತಿದ್ದರು. ನಂತೂರಿನ ಬಜ್ಜೋಡಿ ಶಾಂತಿಕಿರಣ್‌ ಸಮೀಪ ಸ್ಕೂಟರ್‌ ಸ್ಕಿಡ್‌ ಆಗಿ ಯುವತಿ ರಸ್ತೆಗೆ ಬಿದ್ದಿದ್ದಾರೆ. ಇದೇ ವೇಳೆ ಹಿಂದಿನಿಂದ ಬಂದ ಕೇರಳಕ್ಕೆ ಮೀನು ಸಾಗಿಸುತ್ತಿದ್ದ ಲಾರಿಯ ಹಿಂಬದಿ ಚಕ್ರಕ್ಕೆ ಯುವತಿಯ ತಲೆ ಸಿಲುಕಿದೆ.

ಪರಿಣಾಮ ಕ್ರಿಸ್ಟಿ ಕ್ರಾಸ್ತಾ ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ.ತಂದೆ, ತಾಯಿ ಮತ್ತು ಸಹೋದರನನ್ನು ಅವರು ಅಗಲಿದ್ದಾರೆ. ನಗರದ ಖಾಸಗಿ ಸಂಸ್ಥೆಯಲ್ಲಿ ಸ್ಪೀಚ್‌ ಆ್ಯಂಡ್‌ ಹಿಯರಿಂಗ್‌ ತರಬೇತಿ ನೀಡುತ್ತಿದ್ದರು. ಯುವತಿಗೆ ಮದುವೆ ನಿಶ್ಚಯವಾಗಿದ್ದು, ಮುಂದಿನ ತಿಂಗಳು ಮದುವೆ ನಡೆಸಲು ಸಿದ್ಧತೆ ನಡೆದಿತ್ತು ಎಂದು ತಿಳಿದು ಬಂದಿದೆ. ಘಟನೆಗೆ ಮೀನು ಲಾರಿ ಚಾಲಕನ ಅಜಾಗರೂಕತೆಯೇ ಕಾರಣ ಎಂದು ಕದ್ರಿ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗುಡ್ಡ ಅಗೆದ ಮಣ್ಣು ರಸ್ತೆಗೆ
ನಂತೂರು ಜಂಕ್ಷನ್‌ನಲ್ಲಿ ರಾಷ್ಟ್ರೀಯ ಹೆದ್ದಾರಿಯ ಅಭಿವೃದ್ಧಿ ಕಾಮಗಾರಿಗಾಗಿ ಸುತ್ತಲಿನ ಎತ್ತರದ ಗುಡ್ಡ ಪ್ರದೇಶಗಳನ್ನು ನೆಲಸಮ ಮಾಡುವ ಕೆಲಸಗಳು ನಡೆ ಯುತ್ತಿದೆ. ಇದರಿಂದಾಗಿ ರಸ್ತೆಯಲ್ಲಿ ಸಣ್ಣ ಕಲ್ಲುಗಳಿಂದ ಕೂಡಿದ ಮಣ್ಣು ಸಂಗ್ರಹಗೊಂಡಿದೆ. ಮಳೆಯಿಂದಾಗಿಯೂ ಕಲ್ಲು ಮಣ್ಣು ಸಹಿತ ನೀರು ಹರಿದು ಬರುತ್ತದೆ. ಇದರಿಂದಾಗಿ ದ್ವಿಚಕ್ರ ವಾಹನಗಳು ಸ್ಕಿಡ್‌ ಆಗುವ ಸಾಧ್ಯತೆ ಅಧಿಕವಾಗಿದೆ. ಕಾಮಗಾರಿ ನಿರ್ವಹಿಸುತ್ತಿರುವವರು ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಟಾಪ್ ನ್ಯೂಸ್

RJD

Election: ಝಾರ್ಖಂಡ್‌ನ‌ಲ್ಲಿ ಏಕಾಂಗಿಯಾಗಿ ಸ್ಪರ್ಧಿಸಿದರೂ ವಿಪಕ್ಷಕ್ಕೆ ಬೆಂಬಲ: ಆರ್‌ಜೆಡಿ

Panaji

Panaji: ಮುಟ್ಟಾದ ಮಹಿಳೆ ಮನೆಯಿಂದ ಹೊರಗೆ: ಸುಪ್ರೀಂ ನ್ಯಾಯಮೂರ್ತಿ ಕಳವಳ

Raja-Acci

Accident: ರಾಜಸ್ಥಾನದಲ್ಲಿ ಟೆಂಪೋ-ಬಸ್‌ ಡಿಕ್ಕಿ: 12 ಮಂದಿ ದುರ್ಮರಣ

Bihar-tragey

Bihar: ಕಳ್ಳಭಟ್ಟಿ ದುರಂತ; ಇಬ್ಬರ ಅಮಾನತು, 21 ಮಂದಿ ಬಂಧನ

Isha-Found

Compliant: ಈಶಾ ಸಂಸ್ಥೆಯಲ್ಲಿ ಮಗನಿಗೆ ಲೈಂಗಿಕ ದೌರ್ಜನ್ಯ: ದಂಪತಿ ಆರೋಪ

ODISHA-GIRL

Odisha: ಕುಟುಂಬಸ್ಥರ ಕಣ್ತಪ್ಪಿಸಲು ಟ್ರಂಕ್‌ನಲ್ಲಿ ಪ್ರಿಯಕರನ ಬಚ್ಚಿಟ್ಟ ಯುವತಿ!

Newz-Air

Policy: ವಿಮಾನ ನಿಲ್ದಾಣದಲ್ಲಿ ಅಪ್ಪುಗೆಗೆ ಸಮಯ ಮಿತಿ ಹೇರಿದ ನ್ಯೂಜಿಲೆಂಡ್‌ ಸರಕಾರ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

drowned

Suratkal; ಎಂಜಿನಿಯರಿಂಗ್‌ ವಿದ್ಯಾರ್ಥಿ ಸಮುದ್ರಪಾಲು

1–arsss

Mangaluru: RSS ವಿಜಯ ದಶಮಿ ಪಥಸಂಚಲನ

suicide (2)

MRPL ಸೆಕ್ಯುರಿಟಿ ಗಾರ್ಡ್‌ ಆತ್ಮಹ*ತ್ಯೆ ದೃಢ

9

Ullal: ಕುಸಿಯುವ ಭೀತಿಯಲ್ಲಿದೆ ಗ್ರಾಮ ಪಂಚಾಯತ್ ಸದಸ್ಯೆ ಮನೆ!

8

Mangaluru: ಹೃದ್ರೋಗ, ಕ್ಯಾನ್ಸರ್‌ಗೂ ಪ್ಲಾಸ್ಟಿಕ್‌ ದಾರಿ, ಹುಷಾರ್‌!

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

ಹೊಸ ಸೇರ್ಪಡೆ

RJD

Election: ಝಾರ್ಖಂಡ್‌ನ‌ಲ್ಲಿ ಏಕಾಂಗಿಯಾಗಿ ಸ್ಪರ್ಧಿಸಿದರೂ ವಿಪಕ್ಷಕ್ಕೆ ಬೆಂಬಲ: ಆರ್‌ಜೆಡಿ

Panaji

Panaji: ಮುಟ್ಟಾದ ಮಹಿಳೆ ಮನೆಯಿಂದ ಹೊರಗೆ: ಸುಪ್ರೀಂ ನ್ಯಾಯಮೂರ್ತಿ ಕಳವಳ

Raja-Acci

Accident: ರಾಜಸ್ಥಾನದಲ್ಲಿ ಟೆಂಪೋ-ಬಸ್‌ ಡಿಕ್ಕಿ: 12 ಮಂದಿ ದುರ್ಮರಣ

Chattsi-Blood

Chhattisgarh: ಅಜ್ಜಿಯ ನರಬಲಿ ನಡೆಸಿ ಶಿವಲಿಂಗಕ್ಕೆ ರಕ್ತ ಅರ್ಪಣೆ!

Bihar-tragey

Bihar: ಕಳ್ಳಭಟ್ಟಿ ದುರಂತ; ಇಬ್ಬರ ಅಮಾನತು, 21 ಮಂದಿ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.