K. S. Eshwarappa: ಸಂಕ್ರಾಂತ್ರಿಗೆ ಸಂತರಿಂದಲೇ ಹೊಸ ಸಂಘಟನೆ

ಬಸವಣ್ಣನವರ ಐಕ್ಯಸ್ಥಳ ಕೂಡಲಸಂಗಮದಲ್ಲಿ ಚಾಲನೆ

Team Udayavani, Oct 20, 2024, 8:26 PM IST

K. S. Eshwarappa: ಸಂಕ್ರಾಂತ್ರಿಗೆ ಸಂತರಿಂದಲೇ ಹೊಸ ಸಂಘಟನೆ

ಬಾಗಲಕೋಟೆ: ತೀವ್ರ ಕುತೂಹಲ ಕೆರಳಿಸಿದ್ದ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್‌.ಈಶ್ವರಪ್ಪ ನೇತೃತ್ವದ ಹೊಸ ಬ್ರಿಗೇಡ್‌ ರಚನೆಗೆ ಈಗ ಮುಂದಿನ ವರ್ಷದ ಸಂಕ್ರಾಂತಿ ಮುಹೂರ್ತ ಸಿಕ್ಕಿಯಾಗಿದೆ.

ನಗರದಲ್ಲಿ ಭಾನುವಾರ ನಡೆದ ಚಿಂತನ-ಮಂಥನ ಸಭೆಯ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಈಶ್ವರಪ್ಪ ಅವರು, ಈ ವಿಷಯ ತಿಳಿಸಿ, ಅಂದೇ ಬ್ರಿಗೇಡ್‌ಗೆ ಅಧಿಕೃತ ಚಾಲನೆ ದೊರೆಯಲಿದೆ ಎಂದು ಪ್ರಕಟಿಸಿದರು.

2025ರ ಜನವರಿ 15ರ ಸಂಕ್ರಾಂತಿಯಂದು ಬಸವಣ್ಣನವರ ಐಕ್ಯಸ್ಥಳ ಕೂಡಲಸಂಗಮದಲ್ಲಿ ಮೊದಲ ಹಂತದ ಕಾರ್ಯಕ್ರಮ ನಡೆಯಲಿದೆ.

ಸುಮಾರು ಒಂದು ಸಾವಿರ ಜನ ಮಠಾಧೀಶರು, 50 ಸಾವಿರ ಜನ ಪ್ರಮುಖರು ಭಾಗವಹಿಸಲಿದ್ದಾರೆ.

ಆ ಸಭೆಯಲ್ಲಿ ಸ್ವಾಮೀಜಿಗಳೇ ನೂತನ ಬ್ರಿಗೇಡ್‌ನ‌ ಹೆಸರು, ಅದರ ಕಾರ್ಯ ವ್ಯಾಪ್ತಿ, ಮುಂದೆ ದಲಿತ-ಹಿಂದುಳಿದವರ ಹಾಗೂ ಹಿಂದೂ ಸಮಾಜ ಬಾಂಧವರಿಗಾಗಿ ನಡೆಸಬೇಕಾದ ಸಂಘಟನೆಯ ರೂಪುರೇಷೆ ಕುರಿತು ತಿಳಿಸಲಿದ್ದಾರೆ ಎಂದು ಹೇಳಿದರು.

ಈ ಹಿಂದೆ ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ ರಚಿಸಿದ್ದು, ಅದನ್ನು ಪಕ್ಷದ ಕೇಂದ್ರ ನಾಯಕರ ಮಾತು ಕೇಳಿ ಹಿಂಪಡೆದಿದ್ದೆ. ಈ ಬಾರಿ ಯಾವುದೇ ಸಂದರ್ಭ ಬಂದರೂ ಹೊಸ ಬ್ರಿಗೇಡ್‌ ಹಿಂದಕ್ಕೆ ಪಡೆಯಲ್ಲ. ಇದು ನನಗಾಗಿ ಅಥವಾ ನನ್ನ ಮಗನ ರಾಜಕೀಯ ಭವಿಷ್ಯಕ್ಕಾಗಿ ಅಲ್ಲ. ರಾಜ್ಯದ ದಲಿತ, ಹಿಂದುಳಿದವರ, ಸಮಸ್ತ ಹಿಂದೂ ಸಮಾಜದವರ ಹಿತರಕ್ಷಣೆಗೆ ಎಂದು ಸ್ಪಷ್ಟಪಡಿಸಿದರು.

ಇದಕ್ಕೂ ಮುನ್ನ ಅವರು, ಸುಮಾರು 50ಕ್ಕೂ ಹೆಚ್ಚು ಸ್ವಾಮೀಜಿಗಳು, ವಿಜಯಪುರ, ಬಾಗಲಕೋಟೆ, ಬೆಳಗಾವಿ, ಕೊಪ್ಪಳ, ಗದಗ ಹೀಗೆ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಪ್ರಮುಖರನ್ನೊಳಗೊಂಡ ಚಿಂತನ-ಮಂಥನ ಸಭೆಯಲ್ಲಿ ಹೊಸ ಬ್ರಿಗೇಡ್‌ ರಚನೆ ಕುರಿತು ಘೋಷಣೆ ಮಾಡಿದರು.

ಈ ಚಿಂತನ-ಮಂಥನ ಸಭೆ ನನಗಾಗಿ ಅಥವಾ ನನ್ನ ಪುತ್ರನಿಗಾಗಿ ಅಲ್ಲ. ಬಿಜೆಪಿಯಲ್ಲಿ ನಡೆಯುತ್ತಿರುವ ಹೊಂದಾಣಿಕೆ, ಕುಟುಂಬ ರಾಜಕಾರಣ ಕೊನೆಗಾಣಿಸಲು. ಈ ಸಭೆಗೆ ಬರದಂತೆ ಎಷ್ಟೋ ಜನರನ್ನು ತಡೆಯಲಾಗಿದೆ. ಆದರೂ ಬಹಳಷ್ಟು ಜನ ಬಂದಿದ್ದಾರೆ. ಇಲ್ಲಿ ಬಂದವರ ಮಾಹಿತಿ ಎಲ್ಲ ಅವರಿಗೆ(ಯಡಿಯೂರಪ್ಪ ಕುಟುಂಬಕ್ಕೆ) ಹೋಗಬಹುದು. ಬಂದವರು ಇಲಿಗಳಲ್ಲ. ಹುಲಿಗಳು. ಹೀಗಾಗಿ ಯಾರೂ ಭಯ ಬೀಳುವವರಲ್ಲ ಎಂದರು.

ಟಾಪ್ ನ್ಯೂಸ್

RJD

Election: ಝಾರ್ಖಂಡ್‌ನ‌ಲ್ಲಿ ಏಕಾಂಗಿಯಾಗಿ ಸ್ಪರ್ಧಿಸಿದರೂ ವಿಪಕ್ಷಕ್ಕೆ ಬೆಂಬಲ: ಆರ್‌ಜೆಡಿ

Panaji

Panaji: ಮುಟ್ಟಾದ ಮಹಿಳೆ ಮನೆಯಿಂದ ಹೊರಗೆ: ಸುಪ್ರೀಂ ನ್ಯಾಯಮೂರ್ತಿ ಕಳವಳ

Raja-Acci

Accident: ರಾಜಸ್ಥಾನದಲ್ಲಿ ಟೆಂಪೋ-ಬಸ್‌ ಡಿಕ್ಕಿ: 12 ಮಂದಿ ದುರ್ಮರಣ

Bihar-tragey

Bihar: ಕಳ್ಳಭಟ್ಟಿ ದುರಂತ; ಇಬ್ಬರ ಅಮಾನತು, 21 ಮಂದಿ ಬಂಧನ

Isha-Found

Compliant: ಈಶಾ ಸಂಸ್ಥೆಯಲ್ಲಿ ಮಗನಿಗೆ ಲೈಂಗಿಕ ದೌರ್ಜನ್ಯ: ದಂಪತಿ ಆರೋಪ

ODISHA-GIRL

Odisha: ಕುಟುಂಬಸ್ಥರ ಕಣ್ತಪ್ಪಿಸಲು ಟ್ರಂಕ್‌ನಲ್ಲಿ ಪ್ರಿಯಕರನ ಬಚ್ಚಿಟ್ಟ ಯುವತಿ!

Newz-Air

Policy: ವಿಮಾನ ನಿಲ್ದಾಣದಲ್ಲಿ ಅಪ್ಪುಗೆಗೆ ಸಮಯ ಮಿತಿ ಹೇರಿದ ನ್ಯೂಜಿಲೆಂಡ್‌ ಸರಕಾರ!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mudhol: ನದಿಯಲ್ಲಿದ್ದ ಮೋಟಾರ್‌ ತೆಗೆಯುವಾಗ ವಿದ್ಯುತ್‌ ತಗುಲಿ ರೈತ ಮೃತ್ಯು

Mudhol: ನದಿಯಲ್ಲಿದ್ದ ಮೋಟಾರ್‌ ತೆಗೆಯುವಾಗ ವಿದ್ಯುತ್‌ ತಗುಲಿ ರೈತ ಮೃತ್ಯು

Mudhol: ಘಟಪ್ರಭಾ ನದಿಗೆ ಹರಿದು ಬಂದ ಹೆಚ್ಚಿನ‌ ನೀರು… ಮುಳುಗಿದ ಬ್ಯಾರೇಜ್

Mudhol: ಘಟಪ್ರಭಾ ನದಿಗೆ ಹರಿದು ಬಂದ ಹೆಚ್ಚಿನ‌ ನೀರು… ಮುಳುಗಿದ ಬ್ಯಾರೇಜ್

K. S. Eshwarappa: ಪಕ್ಷದ ಶುದ್ಧೀಕರಣ ಆಗದೆ ಬಿಜೆಪಿಗೆ ಹೋಗಲಾರೆ

K. S. Eshwarappa: ಪಕ್ಷದ ಶುದ್ಧೀಕರಣ ಆಗದೆ ಬಿಜೆಪಿಗೆ ಹೋಗಲಾರೆ

K. S. Eshwarappa: ಬ್ರಿಗೇಡ್ ನಿಂದ ಸರ್ಕಾರಗಳನ್ನು ಜಾಗೃತಗೊಳಿಸೋಣ

K. S. Eshwarappa: ಬ್ರಿಗೇಡ್ ನಿಂದ ಸರ್ಕಾರಗಳನ್ನು ಜಾಗೃತಗೊಳಿಸೋಣ

ಬಾಗಲಕೋಟೆ: ರೈತರಿಗೆ ಚಿಂತೆ ಹಚ್ಚಿದ ಚಿತ್ತಿ ಮಳೆ- ಈರುಳ್ಳಿ ಬೆಳೆಗಾರರ ಕಣ್ಣೀರು!

ಬಾಗಲಕೋಟೆ: ರೈತರಿಗೆ ಚಿಂತೆ ಹಚ್ಚಿದ ಚಿತ್ತಿ ಮಳೆ- ಈರುಳ್ಳಿ ಬೆಳೆಗಾರರ ಕಣ್ಣೀರು!

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

ಹೊಸ ಸೇರ್ಪಡೆ

RJD

Election: ಝಾರ್ಖಂಡ್‌ನ‌ಲ್ಲಿ ಏಕಾಂಗಿಯಾಗಿ ಸ್ಪರ್ಧಿಸಿದರೂ ವಿಪಕ್ಷಕ್ಕೆ ಬೆಂಬಲ: ಆರ್‌ಜೆಡಿ

Panaji

Panaji: ಮುಟ್ಟಾದ ಮಹಿಳೆ ಮನೆಯಿಂದ ಹೊರಗೆ: ಸುಪ್ರೀಂ ನ್ಯಾಯಮೂರ್ತಿ ಕಳವಳ

Raja-Acci

Accident: ರಾಜಸ್ಥಾನದಲ್ಲಿ ಟೆಂಪೋ-ಬಸ್‌ ಡಿಕ್ಕಿ: 12 ಮಂದಿ ದುರ್ಮರಣ

Chattsi-Blood

Chhattisgarh: ಅಜ್ಜಿಯ ನರಬಲಿ ನಡೆಸಿ ಶಿವಲಿಂಗಕ್ಕೆ ರಕ್ತ ಅರ್ಪಣೆ!

Bihar-tragey

Bihar: ಕಳ್ಳಭಟ್ಟಿ ದುರಂತ; ಇಬ್ಬರ ಅಮಾನತು, 21 ಮಂದಿ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.