BBK11: ಹೋದವರನ್ನೆಲ್ಲ ವಾಪಸ್ ಕರೆಸಿದರೆ ಹುಚ್ಚ ವೆಂಕಟ್ ಅವರನ್ನು ಸಹ ಕರೆಸಬೇಕು.. ಕಿಚ್ಚ

ಹೋದವರ ಬಗ್ಗೆ ಜಾಸ್ತಿ ಮಾತನಾಡಲ್ಲ ಎಂದ ಸುದೀಪ್

Team Udayavani, Oct 20, 2024, 11:00 PM IST

BBK11: ಹೋದವರನ್ನೆಲ್ಲ ವಾಪಸ್ ಕರೆಸಿದರೆ ಹುಚ್ಚ ವೆಂಕಟ್ ಅವರನ್ನು ಸಹ ಕರೆಸಬೇಕು.. ಕಿಚ್ಚ

ಬೆಂಗಳೂರು: ಬಿಗ್ ಬಾಸ್ ಮನೆಗೆ ಹೊಸ ಸದಸ್ಯರೊಬ್ಬರು ವೈಲ್ಡ್ ಕಾರ್ಡ್ ಎಂಟ್ರಿಯಾಗಿ ಬಂದಿದ್ದಾರೆ.

ಸರಿಗಮಪ ರಿಯಾಲಿಟಿ ಶೋನಿಂದ ಜನಪ್ರಿಯತೆಯನ್ನು ಗಳಿಸಿರುವ ಹನುಮಂತ ಬಿಗ್ ಬಾಸ್ ಮನೆಗೆ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದಾರೆ.

ಪಕ್ಕಾ ಹಳ್ಳಿ ಸೊಗಡಿನಲ್ಲಿ ಬಂದ ಹನುಮಂತ ಅವರಿಗೆ ಬಂದ ತಕ್ಷಣ ಮನೆಯ ಕ್ಯಾಪ್ಟನ್ ಆಗಿ ಆಯ್ಕೆ ಮಾಡಲಾಗಿದೆ.

ಮನೆಗೆ ಬಂದು ಕ್ಯಾಪ್ಟನ್ ಆಗಿ ಆಯ್ಕೆಯಾದ ಹನುಮಂತ ಅವರು ಮನೆಯ ಸದಸ್ಯರಿಗೆ ಮನೆ ಕೆಲಸದ ಜವಾಬ್ದಾರಿಯನ್ನು ಹಂಚಿದ್ದಾರೆ.

ವಿಡಿಯೋ ಕಾಲ್‌ನಲ್ಲಿ ಮಾತನಾಡಿ ಕ್ಷಮೆ ಕೇಳಿದ ಜಗದೀಶ್..‌ 
ಕಿಚ್ಚನ ಮುಂದೆ ವಿಡಿಯೋ ಕಾಲ್‌ನಲ್ಲಿ ಮಾತನಾಡಿರುವ ಜಗದೀಶ್ ಹಂಸಾ, ಸುದೀಪ್ ನಿಮ್ಮ ಬಳಿ ಮೊದಲಿಗೆ ಕ್ಷಮೆ ಕೇಳುತ್ತೇನೆ.  ಕೆಲವೊಂದು ಘಟನೆಗಳು ಆಗಬಾರದಿತ್ತು. ನನ್ನ ಆಟದ ಬಗ್ಗೆ ನನಗೆ ಖುಷಿಯಿದೆ. ನಾನು ತಪ್ಪು ಮಾಡಬಾರಬಾರದಿತ್ತು. ರಂಜಿತ್, ಮಾನಸ ಎಲ್ಲ ನಮ್ಮನೆ ಅಣ್ಣ ತಮ್ಮಂದಿರು. ಅವರನ್ನು ನಾನೇ ಸಹಿಸಿಕೊಳ್ಳಬಹುದಿತ್ತು. ನಾನು ಎಲ್ಲರಲ್ಲಿ ಮಕ್ಕಳನ್ನು ‌ನೋಡ್ತೇನೆ. ರಂಜಿತ್ ಅವರನ್ನು ಬಲಿಪಶು ಮಾಡಿದ್ರಾ ಅಂಥ ನನಗೆ ಅನ್ನಿಸುತ್ತದೆ. ಬಹುಶಃ ನಾನೇ ಅದನ್ನು ಮಾಡಿರಬಹುದು ಅಂಥ ಅನ್ನಿಸುತ್ತದೆ. ನನ್ನಿಂದ ತಪ್ಪಾಗಿದೆ.  ನನ್ನದೊಂದು ಮನವಿ ಇದೆ ಸಾಧ್ಯವಾದರೆ ನನ್ನನ್ನು ವಾಪಸ್‌ ಒಳಗೆ ಕರೆಸಿಕೊಳ್ಳಿ ಎಂದು ಜಗದೀಶ್‌ ವಿಡಿಯೋದಲ್ಲಿ  ಹೇಳಿದ್ದಾರೆ.

ನಾನು ಹಂಸಾಗೆ ಸಾರಿ ಕೇಳ್ತೇನೆ.‌ ನಿನ್ನ ಕಣ್ಣೀರನ್ನು ನಾನ ಒರೆಸಿದ್ದೇನೆ. ನನ್ನಿಂದ ನಿನ್ನ ಕಣ್ಣಲ್ಲಿ ನೀರು ಬರಬಾರದಿತ್ತು. ಬಿಗ್ ಬಾಸ್ ತಂಡಕ್ಕೆ, ಕರ್ನಾಟಕದ ಎಲ್ಲ ಜನತೆಗೆ ನನ್ನ ವರ್ತನೆಯಿಂದ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ ಎಂದಿದ್ದಾರೆ.

ಕಿಚ್ಚನಿಂದ ಸ್ಪರ್ಧಿಗಳಿಗೆ ಖಡಕ್‌ ಮಾತು.. 
ಸ್ಪರ್ಧಿಗಳ ಮಾತು ಕೇಳಿದ ಕಿಚ್ಚ ರೂಲ್ಸ್‌ ಬ್ರೇಕ್‌ ಮಾಡಿ ಅವರು ಆಚೆ ಹೋಗಿಲ್ಲ. ನೀವಿದನ್ನು ಗೊಂದಲ ಮಾಡಿಕೊಳ್ಳಬೇಡಿ. ನಡವಳಿಕೆ, ಬಳಸಿರುವ ಮಾತುಗಳಿಂದ ಅವರು ಹೊರಗಡೆ ಹೋಗಿದ್ದಾರೆ ವಿನಃ ರೂಲ್ಸ್‌ ಬ್ರೇಕ್‌ ಮಾಡಿಹೋಗಿಲ್ಲ.
ತಪ್ಪು ಮಾಡಿರುವವರು ಹೊರಗಡೆ ಹೋದರು. ನಿಮ್‌ ಗಳಲ್ಲಿಎಷ್ಟು ಜನ ಸರಿಯಿದ್ದೀರಿ. ಒಬ್ಬ ಚಪ್ಪಲಿ ಎತ್ತಿ ಬಿಸಾಡುತ್ತಿದ್ದಾರೆ ಅಂದ್ರೆ ಅದು ಓಕೆನಾ? ಎಂದಾಗ ಹಂಸಾ ಅವರು ಪ್ರಾಮಾಣಿಕವಾಗಿ ಎಂದು ಮಾತು ಆರಂಭಿಸುವಾಗಲೇ ಅವರ ಮಾತನ್ನು ಅರ್ಧಕ್ಕೇ ತಡೆದ ಕಿಚ್ಚ ಪ್ರಾಮಾಣಿಕ ಎನ್ನುವ ಪದವೇ ಈ ಮನೆಗೆ ಸೂಕ್ತವಾಗಲ್ಲ. ಮಾನಸ ಮೇಡಂ ಮಾತುಗಳಿಂದಲೇ ಈ ಮನೆಯಿಂದ ಒಬ್ಬ ವ್ಯಕ್ತಿ ಹೊರಗಡೆ ಹೋದರು ಅಂದರೆ ನೀವು ಮಾತನಾಡಿದ ಕೆಲ ತಪ್ಪು ಮಾತುಗಳಿಂದ ನಿಮ್ಮನ್ನು ಯಾಕೆ ಒಳಗಡೆ ಇಟ್ಟುಕೊಳ್ಳಬೇಕು ಎಂದು ಕಿಚ್ಚ‌ ಹೇಳಿದ್ದಾರೆ.

ಚೈತ್ರಾಗೆ ಕಿಚ್ಚ ಹೇಳಿದ್ದೇನು?:
ಚೈತ್ರಾ ಅವರೇ ಹೆಣ್ಮಕ್ಕಳ ಬಗ್ಗೆ ಮಾತನಾಬೇಡಿ ಅಂತೀರಿ ಒಬ್ಬ ಅಪ್ಪನಿಗೆ ಹುಟ್ಟಿದರೆ ಅಂದರೆ ಯಾವ ನನ್ಮಗ ಕೂಡ ಅಪ್ಪನಿಗೆ ಬೈಯ್ತಾ ಇಲ್ಲ ಮೇಡಮ್‌ ತಾಯಿಗೆ ಬೈಯುತ್ತಿರುವುದು ಎಂದು ಕಿಚ್ಚ ಗರಂ ಆಗಿದ್ದಾರೆ.

ಹೆಣ್ಮಕ್ಕಳ ಬಗ್ಗೆ ಮಾತನಾಡಬೇಡಿ ಅಂತೀರಾ ಆದ್ರೆ ಗಂಡ್ಮಕ್ಕಳಿಗೂ ಗೌರವ ಕೊಡಬೇಕಲ್ವಾ ಮೇಡಂ ಎಂದು ಚೈತ್ರಾಗೆ ಕಿಚ್ಚ ಖಡಕ್ ಆಗಿ ಪ್ರಶ್ನಿಸಿದ್ದಾರೆ.

ಚೈತ್ರಾ ಮಾತನಾಡುವಾಗ ಕಿಚ್ಚ ಮಾತನ್ನು ‌ಮಧ್ಯದಲ್ಲೇ ತಡೆದು, ಟಾಪಿಕ್ ಬದಲಾಯಿಸಬೇಡಿ. ನೀವು ಟಾಪಿಕ್ ಬದಲಾಯಿಸುತ್ತಿದ್ದೀರಿ ಎಂದಾಗ, ಗೊತ್ತು ಗೊತ್ತಿಲ್ಲದೆಯೇ ನಾನು ಮಾತನಾಡಿದೆ. ಈ ಮಾತಿಗೆ ನಾನು ಕ್ಷಮೆ ಕೇಳುತ್ತೇನೆ ಎಂದು ಚೈತ್ರಾ ಹೇಳಿದ್ದಾರೆ.

ಒಬ್ಬ ‌ವ್ಯಕ್ತಿ ತಪ್ಪು ಅಂಥ ಹೇಳೋಕೆ ತುಂಬಾ ಸುಲಭ. ಹೆಣ್ಮಕ್ಕಳಿಗೆ ಅವಮಾನ ಮಾಡ್ಬೇಡಿ, ಮಾಡ್ಬೇಡಿ ಅಂತ ಹೇಳ್ತೀರಿ. ಆದ್ರೆ ಹೆಣ್ಮಕ್ಕಳೇ‌ ನೀವು ಸರಿ ಆಗಿರಿ ಎಂದು ‌ಕಿಚ್ಚ ಪಾಠ ಮಾಡಿದ್ದಾರೆ.

ನೀವೆಲ್ಲ ಆಚೆ ಹೋಗಬೇಕಿತ್ತಲ್ವಾ?:
ಮಂಜು, ಮಾನಸ, ಭವ್ಯಾ ನೀವೆಲ್ಲ ಜಗದೀಶ್ ಅವರನ್ನು ತಳ್ಳಿದ್ದಾರೆ. ಆ ನಿಟ್ಟಿನಲ್ಲಿ ನೀವು ಕೂಡ ಹೊರಗೆ ಹೋಗಬೇಕಿತ್ತು ಅಲ್ವಾ? ನೀವು ತಳ್ಳಿದ್ದೀರಿ ಆದ್ರೆ ನಿಮ್ಮ ಮೇಲೆ ಒಂದು ವೇಳೆ ಹಾಗೆಯೇ ಒಬ್ಬ ಗಂಡಸಿನ ಕೈ ಬಂದಿದ್ದಾರೆ ಸರಿ ಆಗಿರುತ್ತಿತ್ತಾ?ಎಂದು ಭವ್ಯಾ ಅವರಿಗೆ ಕಿಚ್ಚ ಹೇಳಿದ್ದಾರೆ.

ನೀವು ಯಾರಿಗೂ ಏನೂ ಹೇಳ್ಬೇಕೋ ಅದನ್ನು ನೇರವಾಗಿ ಅವರ ಬಳಿಯೇ ಹೇಳಿ. ಅದು ಬಿಟ್ಟು ಬೇರೆ ಅವರ ಜತೆ ಅದನ್ನು ಹೇಳಬೇಡಿ ಎಂದು ಕಿಚ್ಚ ಸ್ಪರ್ಧಿಗಳಿಗೆ ಸರಿ – ತಪ್ಪುಗಳ ಪಾಠ ಮಾಡಿದ್ದಾರೆ.

ಹೋಗುರವವರ ಬಗ್ಗೆ ಜಾಸ್ತಿ‌ ಮಾತನಾಡಲ್ಲ. ಹೋದವರನ್ನು ವಾಪಸ್ ಕರೆಸಿದರೆ ಹುಚ್ಚ ವೆಂಕಟ್ ಅವರನ್ನು ವಾಪಸ್ ಕರೆಸಬೇಕು, ಇನ್ನೊಬ್ಬರನ್ನು ವಾಪಸ್ ಕರೆಸಬೇಕು. ನಿಯಮದ ಚೌಕಟ್ಟಿಗೆ ಬಿಗ್ ಬಾಸ್ ಬದ್ದವಾಗಿರುತ್ತದೆ. ಸರಿ ತಪ್ಪುಗಳ ನಿರ್ಣಯವನ್ನು ನಿಮಗೆ ಬಿಡುತ್ತೇನೆ ಎಂದು ಕಿಚ್ಚ ಹೇಳಿದ್ದಾರೆ.

ಟಾಪ್ ನ್ಯೂಸ್

BY Election: ಮಗ ಭರತ್‌ಗೆ ಟಿಕೆಟ್‌ ಬೇಡ ಅಂದಿದ್ದೆ, ಇದು ವರಿಷ್ಠರ ತೀರ್ಮಾನ: ಬೊಮ್ಮಾಯಿ

BY Election: ಮಗ ಭರತ್‌ಗೆ ಟಿಕೆಟ್‌ ಬೇಡ ಅಂದಿದ್ದೆ, ಇದು ವರಿಷ್ಠರ ತೀರ್ಮಾನ: ಬೊಮ್ಮಾಯಿ

BY Election: ಚನ್ನಪಟ್ಟಣಕ್ಕೆ ಪಟ್ಟು: ನಾಳೆ ಜೆಡಿಎಸ್‌ ಶಕ್ತಿಪ್ರದರ್ಶನ ?

BY Election: ಚನ್ನಪಟ್ಟಣಕ್ಕೆ ಪಟ್ಟು: ನಾಳೆ ಜೆಡಿಎಸ್‌ ಶಕ್ತಿಪ್ರದರ್ಶನ ?

Vimana 2

Airports; 25 ವಿಮಾನಗಳಿಗೆ ಹುಸಿ ಬಾಂಬ್‌ ಬೆದರಿಕೆ: ಸಂಸ್ಥೆಗಳಿಗೆ ಭಾರೀ ನಷ್ಟ

1-a-MLC

MLC Election; ಇಂದು ವಿಧಾನಪರಿಷತ್‌ ಉಪ ಚುನಾವಣೆ

sidda dkshi

Congress; ಸಂಡೂರು ಅಂತಿಮ: ಶಿಗ್ಗಾವಿ, ಚನ್ನಪಟ್ಟಣ ತಲೆನೋವು

CNG-Hike

Burden: ನೈಸರ್ಗಿಕ ಅನಿಲ ಪೂರೈಕೆ ಕೊರತೆ: ಪ್ರತಿ ಕೆ.ಜಿ. ಸಿಎನ್‌ಜಿಗೆ 6 ರೂ. ದರ ಹೆಚ್ಚಳ?

1-a-trail

Railway track ದುಷ್ಕೃತ್ಯಕ್ಕೆ ಸಂಚು: ಉಳ್ಳಾಲ, ರೈಲ್ವೇ ಪೊಲೀಸರಿಂದ ತನಿಖೆ ಚುರುಕು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Director Guruprasad: ʼಮಠʼ ನಿರ್ದೇಶಕ ಗುರುಪ್ರಸಾದ್ ವಿರುದ್ಧ ದೂರು; ಆಗಿದ್ದೇನು?

Director Guruprasad: ʼಮಠʼ ನಿರ್ದೇಶಕ ಗುರುಪ್ರಸಾದ್ ವಿರುದ್ಧ ದೂರು; ಆಗಿದ್ದೇನು?

Easy Take it Easy song from Maryade prashne movie

Easy Take it Easy…; ಮಧ್ಯಮ ವರ್ಗದ ಸುತ್ತ ಮರ್ಯಾದೆ ಪ್ರಶ್ನೆ

Mayur Patel: ಭೂಮಿ ಅತಿಕ್ರಮಣ ಆರೋಪ; ನಟ ಮಯೂರ್‌ ವಿರುದ್ಧ ಎಫ್ಐಆರ್‌

Mayur Patel: ಭೂಮಿ ಅತಿಕ್ರಮಣ ಆರೋಪ; ನಟ ಮಯೂರ್‌ ವಿರುದ್ಧ ಎಫ್ಐಆರ್‌

ಕಿಚ್ಚನಿಗೆ ಮಾತೃ ವಿಯೋಗ; ಸುದೀಪ್‌ ತಾಯಿ ಸರೋಜಾ ಸಂಜೀವ್‌ ಇನ್ನಿಲ್ಲ

Saroja Sanjeev: ಕಿಚ್ಚನಿಗೆ ಮಾತೃ ವಿಯೋಗ; ಸುದೀಪ್‌ ತಾಯಿ ಸರೋಜಾ ಸಂಜೀವ್‌ ಇನ್ನಿಲ್ಲ

Simple Suni introduces Keerthi Krishna and Divita Rai in Devaru Ruju Madidanu Movie

Devaru Ruju Madidanu Movie ಸುನಿ ಸಿನಿಮಾದ ನಾಯಕಿಯರಿವರು..

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

ಹೊಸ ಸೇರ್ಪಡೆ

BY Election: ಮಗ ಭರತ್‌ಗೆ ಟಿಕೆಟ್‌ ಬೇಡ ಅಂದಿದ್ದೆ, ಇದು ವರಿಷ್ಠರ ತೀರ್ಮಾನ: ಬೊಮ್ಮಾಯಿ

BY Election: ಮಗ ಭರತ್‌ಗೆ ಟಿಕೆಟ್‌ ಬೇಡ ಅಂದಿದ್ದೆ, ಇದು ವರಿಷ್ಠರ ತೀರ್ಮಾನ: ಬೊಮ್ಮಾಯಿ

BY Election: ಚನ್ನಪಟ್ಟಣಕ್ಕೆ ಪಟ್ಟು: ನಾಳೆ ಜೆಡಿಎಸ್‌ ಶಕ್ತಿಪ್ರದರ್ಶನ ?

BY Election: ಚನ್ನಪಟ್ಟಣಕ್ಕೆ ಪಟ್ಟು: ನಾಳೆ ಜೆಡಿಎಸ್‌ ಶಕ್ತಿಪ್ರದರ್ಶನ ?

Vimana 2

Airports; 25 ವಿಮಾನಗಳಿಗೆ ಹುಸಿ ಬಾಂಬ್‌ ಬೆದರಿಕೆ: ಸಂಸ್ಥೆಗಳಿಗೆ ಭಾರೀ ನಷ್ಟ

1-a-MLC

MLC Election; ಇಂದು ವಿಧಾನಪರಿಷತ್‌ ಉಪ ಚುನಾವಣೆ

sidda dkshi

Congress; ಸಂಡೂರು ಅಂತಿಮ: ಶಿಗ್ಗಾವಿ, ಚನ್ನಪಟ್ಟಣ ತಲೆನೋವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.