Udupi: ಗೀತಾರ್ಥ ಚಿಂತನೆ 71: ದುಯೋಧನಾದಿಗಳನ್ನು ಮಣಿಸುವಲ್ಲಿ ಅರ್ಜುನನ ದ್ವಂದ್ವ
Team Udayavani, Oct 22, 2024, 1:14 AM IST
ಅರ್ಜುನ ತನಗೆ ಮೂರು ಲೋಕವನ್ನು ಕೊಟ್ಟರೂ ಬಂಧುಗಳನ್ನು ಕೊಂದು ನಾನು ರಾಜನಾಗುವುದು ಬೇಡವೆನ್ನುತ್ತಾನೆ. ಇಲ್ಲೊಂದು ಸಾಮಾನ್ಯ ಮಾನವರ ಬುದ್ಧಿ ಕಾಣುತ್ತದೆ. ಆತನಿಗೆ ದುರ್ಯೋಧನಾದಿಗಳಿಂದ ಮೆಚ್ಚುಗೆ ಗಳಿಸಬೇಕೆಂದಿದೆ. ಅವರೇ ಸತ್ತ ಮೇಲೆ ಯಾರಿಗಾಗಿ ಬದುಕುವುದು ಎಂಬ ಚಿಂತೆ ಇದೆ. ಮನುಷ್ಯರಿಗೆ ವಿರೋಧಿಗಳು ತಮ್ಮನ್ನು ಹೊಗಳಬೇಕೆನಿಸುತ್ತದೆ.
ತಮಗೆ ಪರಿಚಯವಿಲ್ಲದವರು ಹೊಗಳುವುದನ್ನು ನಿರೀಕ್ಷಿಸುವುದಿಲ್ಲ. ಜನರು ಆಭರಣಗಳನ್ನು ಧರಿಸುವುದು ತನಗೆ ಪರಿಚಿತರಾದವರು ನೋಡಬೇಕೆಂದು. ದುರ್ಯೋಧನಾದಿಗಳು ದುಷ್ಟರೆನ್ನುತ್ತಾನೆ, ಆತತಾಯಿಗಳೆನ್ನುತ್ತಾನೆ. ಅವರನ್ನು ಕೊಂದರೆ ಪಾಪ ಬರುತ್ತದೆ ಎಂದೂ ಹೇಳುತ್ತಾನೆ. ಆತತಾಯಿಗಳೆಂದರೆ ವಿಷ ಹಾಕುವವರು, ಮನೆಗೆ ಬೆಂಕಿ ಹಾಕುವವವರು. ಈ ಎಲ್ಲ ಕೆಲಸಗಳನ್ನು ಪಾಂಡವರಿಗೆ ದುರ್ಯೋಧನಾದಿಗಳನ್ನು ಮಾಡಿದವರೇ.
ಒಂದೆಡೆ ಬಂಧುಗಳು, ಆತತಾಯಿಗಳು, ಶತ್ರುಗಳು ಇದೇ ವೇಳೆ ಅವರನ್ನು ಕೊಲ್ಲಬಾರದು ಹೀಗೆ ದ್ವಂದ್ವತ್ವ ಅರ್ಜುನನಲ್ಲಿ ಕಂಡುಬರುತ್ತದೆ. ಇಲ್ಲಿ ಅರ್ಜುನ ತಾನೇನು ಮಾಡಬೇಕೆಂದು ಶ್ರೀಕೃಷ್ಣನನ್ನು ಜನಾರ್ದನ ಎಂದು ಬೇಡಿಕೊಳ್ಳುತ್ತಾನೆ. ಇದಕ್ಕೆ ಕಾರಣ ಜನಾರ್ದನ= ಜನನಾದಿಗಳಿಗೆ ಅಧಿದೇವತೆ. ಇದೇ ಕಾರಣದಿಂದ ಶ್ರಾದ್ಧಾದಿಗಳಲ್ಲಿ ಜನನ, ಮರಣಾದಿಗಳಿಗೆ ಅಧಿದೇವತೆಯಾದ ಜನಾರ್ದನನನ್ನು ಪೂಜಿಸುವ ಕ್ರಮ ಬಂದಿದೆ.
-ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು,
ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠ,
-ಕೋಟಿ ಗೀತಾ ಲೇಖನ ಯಜ್ಞದಲ್ಲಿ ಪಾಲೊಳ್ಳಿ
ಗೀತಾ ಮಂದಿರ,ಉಡುಪಿ
ಸಂಪರ್ಕ ಸಂಖ್ಯೆ: 8055338811
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.