Bagheera Trailer: ʼರಕ್ತ ಕುಡಿಯುವ ರಾಕ್ಷಸʼ, ಜನರ ರಕ್ಷಕ.. ʼಬಘೀರʼ ಟ್ರೇಲರ್ ಔಟ್
Team Udayavani, Oct 21, 2024, 10:37 AM IST
ಬೆಂಗಳೂರು: ರೋರಿಂಗ್ ಸ್ಟಾರ್ ಶ್ರೀಮುರಳಿ (Sri Murali) ನಾಯಕನಾಗಿ ನಟಿಸಿರುವ ʼಬಘೀರʼ (Bagheera) ಚಿತ್ರದ ಮಾಸ್ ಟ್ರೇಲರ್ ರಿಲೀಸ್ ಆಗಿದೆ.
ಶೂಟಿಂಗ್ ಹಂತದಲ್ಲೇ ಸೌಂಡ್ ಮಾಡುತ್ತಿದ್ದ ʼಬಘೀರʼ, ಒಂದಷ್ಟು ವಿಳಂಬದ ಬಳಿಕ ಇದೀಗ ರಿಲೀಸ್‌ಗೆ ಸಿದ್ಧವಾಗಿದೆ. ಇತ್ತೀಚೆಗೆ ಚಿತ್ರದ ʼರುಧಿರ ಧಾರಾʼ ಎನ್ನುವ ಹಾಡನ್ನು ರಿಲೀಸ್ ಮಾಡಲಾಗಿತ್ತು.ಈಗ ಟ್ರೇಲರ್ ಬಿಡುಗಡೆ ಮಾಡಿ ಸಿನಿಮಾದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಾಗುವಂತೆ ಮಾಡಿದೆ.
ಟ್ರೇಲರ್ ನಲ್ಲಿ ಏನಿದೆ?: ಅಮ್ಮ ದೇವರು ಯಾಕಮ್ಮ ರಾಮಾಯಣ, ಮಹಾಭಾರತ ಅಂಥ ಬರುತ್ತಾನೆ ಯಾವಾಗಲೂ ಯಾಕಮ್ಮ ಬರಲ್ಲ ಎಂದು ಮಗಳು ತಾಯಿಯೊಬ್ಬಳ ಬಳಿ ಕೇಳುವುದನ್ನು ತೋರಿಸಲಾಗಿದೆ. ದೇವರು ಯಾವಾಗಲೂ ಬರಲ್ಲ. ಸಮಾಜದಲ್ಲಿ ಪಾಪಗಳು ಮಿತಿ ಮೀರಿದಾಗ, ಒಳ್ಳೆದರ ಮೇಲೆ ಕೆಟ್ಟದ್ದು ಆವಿಯಾದಾಗ, ಸಮಾಜ ಕುಲಗೆಟ್ಟಾಗ, ಮನುಷ್ಯರು ಮೃಗಳದಾಗ ಅವನು ಅವತಾರ ಎತ್ತುತ್ತಾನೆ. ಅವನು ಯಾವಾಗಲೂ ದೇವರಾಗೇ ಬರಲ್ಲ, ರಾಕ್ಷಸನಾಗಿಯೂ ಬರಬಹುದು ಎಂದು ಸುಧಾರಾಣಿ ಅವರ ಹಿನ್ನೆಲೆ ಧ್ವನಿಯಲ್ಲಿ ʼಬಘೀರʼನ ಮಾಸ್ ಎಂಟ್ರಿಯನ್ನು ತೋರಿಸಲಾಗಿದೆ.
ʼಬಘೀರʼ ಮುಖವಾಡ ಹಾಕಿಕೊಂಡು ಸಾಲು ಸಾಲು ಕ್ರಿಮಿನಲ್ ಗಳನ್ನು ಭೀಕರವಾಗಿ ಕೊಲ್ಲುತ್ತಿರುತ್ತಾನೆ. ʼರಕ್ತ ಕುಡಿಯುವ ರಾಕ್ಷಸʼನಾದ ʼಬಘೀರʼ ಯಾರು ಎನ್ನುವುದು ಪೊಲೀಸ್ ಇಲಾಖೆಗೂ ತಲೆನೋವು ಆಗಿ ಕಾಡುವುದನ್ನು ಟ್ರೇಲರ್ ನಲ್ಲಿ ತೋರಿಸಲಾಗಿದೆ.
ʼವೇದಾಂತ್ʼ ಆಗಿ ಪೊಲೀಸ್ ಅವತಾರದಲ್ಲಿ ಶ್ರೀಮುರಳಿ ಮಿಂಚಿದ್ದಾರೆ. ʼಬಘೀರʼ ಹಾಗೂ ಖಾಕಿ ತೊಟ್ಟ ಪೊಲೀಸ್ ಆಗಿ ಎರಡು ಶೇಡ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಯಾಕೆ ಮುಖವಾಡ ಧರಿಸಿಕೊಂಡು ʼಬಘೀರʼ ಕ್ರಿಮಿನಲ್‌ಗಳನ್ನು ಸಾಯಿಸುತ್ತಾನೆ ಎನ್ನುವುದು ಟ್ರೇಲರ್‌ನಲ್ಲಿ ಅವಿತಿರುವ ಗುಟ್ಟು. ಶ್ರೀಮುರಳಿ ಫೈಟ್ ಸೀನ್ ಗಳೇ ಟ್ರೇಲರ್‌ನಲ್ಲಿ ಹೈಲೈಟ್ ಆಗಿ ತೋರಿದೆ.
ಉಳಿದಂತೆ ರುಕ್ಮಿಣಿ ವಸಂತ್, ಅಚ್ಯುತ್ ಕುಮಾರ್, ರಂಗಾಯಣ ರಘು, ಹಾಗೂ ಪ್ರಕಾಶ್ ರಾಜ್ ಅವರ ಪೊಲೀಸ್ ಲುಕ್ ನ್ನು ಟ್ರೇಲರ್ ನಲ್ಲಿ ತೋರಿಸಲಾಗಿದೆ.
ನಾಯಕಿಯಾಗಿ ರುಕ್ಮಿಣಿ ವಸಂತ್ ನಟಿಸಿದರೆ, ಇನ್ನುಳಿದಂತೆ ಪ್ರಕಾಶ್ ರಾಜ್, ರಂಗಾಯಣ ರಘು, ಅಚ್ಯುತ್ ಕುಮಾರ್, ಗರುಡ ರಾಮ್ ಸೇರಿ ಇನ್ನೂ ಹತ್ತಾರು ಕಲಾವಿದರು ನಟಿಸಿದ್ದಾರೆ. ತಾಂತ್ರಿಕ ಬಳಗದಲ್ಲಿ ಎ.ಜೆ ಶೆಟ್ಟಿ ಛಾಯಾಗ್ರಹಣ, ಅಜನೀಶ್ ಲೋಕನಾಥ್ ಸಂಗೀತ, ಪ್ರಣವ್ ಶ್ರೀ ಪ್ರಸಾದ್ ಸಂಕಲನ, ರವಿ ಸಂತೆಹಕ್ಲು ಕಲಾ ನಿರ್ದೇಶನದ ಜವಾಬ್ದಾರಿ ಹೊಂದಿದ್ದಾರೆ. ಚೇತನ್ ಡಿಸೋಜ್ ಈ ಚಿತ್ರಕ್ಕೆ ಸಾಹಸ ನಿರ್ದೇಶನ ಮಾಡಿದ್ದಾರೆ.
ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ʼಬಘೀರʼ ಇದೇ ಅಕ್ಟೋಬರ್ 31ರಂದು ಆಗಲಿದೆ.
ಟ್ರೇಲರ್ ಫ್ಯಾನ್ಸ್ ಗಳು ಫಿದಾ ಆಗಿದ್ದಾರೆ. ಕನ್ನಡದ BATMAN ಬಂದಾಯ್ತು! BOX OFFICE ಕೊಳ್ಳೆ ಹೊಡಿಲಿ ನಮ್ಮ ʼಬಘೀರʼ ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. 3 ವರ್ಷ ವೇಟ್ ಮಾಡಿದ್ದಕ್ಕೆ ಸಾರ್ಥಕ ಆಯ್ತು ಎಂದು ಟ್ರೇಲರ್ ನೋಡಿ ಮತ್ತೊಬ್ಬರು ಬರೆದುಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Davangere: 2021ರಲ್ಲಿ ಅಪ್ರಾಪ್ತೆಯನ್ನು ಅಪಹರಿಸಿ ಅತ್ಯಾಚಾರವೆಸಗಿದ್ದವನಿಗೆ ಶಿಕ್ಷೆ ಪ್ರಕಟ
Chitradurga: ನಿವೃತ್ತ ಶಿಕ್ಷಕಿ ಬಳಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ರೇಡ್
Mangaluru: ವೆನ್ಲಾಕ್‌ನಲ್ಲಿ ದೊರೆಯಲಿದೆ ಕಿಮೋಥೆರಪಿ
Ullal: ತೊಕ್ಕೊಟ್ಟು ಜಂಕ್ಷನ್ – ಭಟ್ನಗರ ರಸ್ತೆಯಲ್ಲಿ ಉಲ್ಟಾ ಸಂಚಾರ!
Kasganj: ವಿವಾಹಿತನಿಗೆ ಪೊಲೀಸ್ ಠಾಣೆಯಲ್ಲಿ ಬಲವಂತದಿಂದ ಮತ್ತೊಂದು ವಿವಾಹ!SPಗೆ ದೂರು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.