ODI Match: ವೆಸ್ಟ್ ಇಂಡೀಸ್ ವಿರುದ್ಧ ಶ್ರೀಲಂಕಾಕ್ಕೆ ಜಯ
Team Udayavani, Oct 21, 2024, 7:57 PM IST
ಪಲ್ಲೆಕೆಲೆ: ಪ್ರವಾಸಿ ವೆಸ್ಟ್ ಇಂಡೀಸ್ ಎದುರಿನ ಮೊದಲ ಏಕದಿನ ಪಂದ್ಯವನ್ನು ಶ್ರೀಲಂಕಾ ಡಿಎಲ್ಎಸ್ ನಿಯಮದಂತೆ 5 ವಿಕೆಟ್ಗಳಿಂದ ಗೆದ್ದಿದೆ.
ವೆಸ್ಟ್ ಇಂಡೀಸ್ 38.3 ಓವರ್ಗಳಲ್ಲಿ 4ಕ್ಕೆ 185 ರನ್ ಗಳಿಸಿದ ವೇಳೆ ಮಳೆ ಸುರಿಯಿತು. ವಿಂಡೀಸ್ ಇನ್ನಿಂಗ್ಸ್ ಇಲ್ಲಿಗೇ ಕೊನೆಗೊಂಡಿತು. ಬಳಿಕ ಲಂಕೆಗೆ 37 ಓವರ್ಗಳಲ್ಲಿ 232 ರನ್ ಗುರಿ ಲಭಿಸಿತು. ಅದು 31.5 ಓವರ್ಗಳಲ್ಲಿ 5 ವಿಕೆಟಿಗೆ 234 ರನ್ ಬಾರಿಸಿ ಜಯಭೇರಿ ಮೊಳಗಿಸಿತು. ಚರಿತ ಅಸಲಂಕ 77 ರನ್ (71 ಎಸೆತ, 8 ಬೌಂಡರಿ, 3 ಸಿಕ್ಸರ್), ಕಮಿಂಡು ಮೆಂಡಿಸ್ ಅಜೇಯ 30 ರನ್ ರನ್ ಬಾರಿಸಿ ತಂಡವನ್ನು ದಡ ಮುಟ್ಟಿಸಿದರು. ಆರಂಭಕಾರ ನಿಶಾನ್ ಮದುಷ್ಕ 69 ರನ್ ಮಾಡಿದರು.
ವೆಸ್ಟ್ ಇಂಡೀಸ್ ಸರದಿಯಲ್ಲಿ ಮಿಂಚಿದವರೆಂದರೆ ಶಫೇನ್ ರುದರ್ಫೋರ್ಡ್ (ಅಜೇಯ 74), ರೋಸ್ಟನ್ ಚೇಸ್ (ಅಜೇಯ 33) ಮತ್ತು ಕೇಸಿ ಕಾರ್ಟಿ (37).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Dakshina Kannada: ಮಂಗಳೂರು ಸೇರಿ ಇತರೆಡೆ ಮಳೆ, ಬೆಳ್ತಂಗಡಿಯಲ್ಲಿ ಗುಡುಗು ಸಹಿತ ವರ್ಷಧಾರೆ
Vaccination Campaign: 6ನೇ ಸುತ್ತಿನ ಕಾಲುಬಾಯಿ ಜ್ವರ ಲಸಿಕಾ ಅಭಿಯಾನ ಆರಂಭ: ಜಿಪಂ ಸಿಇಒ
Police Martyrs Day: ದೇಶದ ಅಖಂಡತೆಗೆ ಹುತಾತ್ಮರ ತ್ಯಾಗ ಸಹಾಯಕ: ನ್ಯಾಯಾಧೀಶ
Mangaluru: ಹುತಾತ್ಮ ಪೊಲೀಸರ ಸ್ಮರಣೆ ನಮ್ಮ ಕರ್ತವ್ಯ: ಕುಲಪತಿ ಪ್ರೊ. ಪಿ.ಎಲ್.ಧರ್ಮ
Council By Poll: ಉಡುಪಿ ಜಿಲ್ಲೆಯಲ್ಲಿ ಶೇ. 96.57 ಮತದಾನ; ಎಲ್ಲೂ ಶೇ.100 ಇಲ್ಲ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.