BRICS Summit: ರಷ್ಯಾಗೆ ಇಂದು ಪ್ರಧಾನಿ ಮೋದಿ ಭೇಟಿ

ಆರ್ಥಿಕ, ಇಂಧನ, ಆರೋಗ್ಯ ಕ್ಷೇತ್ರ ಸಹಕಾರ ವೃದ್ಧಿಗೆ ಒತ್ತು

Team Udayavani, Oct 22, 2024, 7:10 AM IST

BRICS Summit: ರಷ್ಯಾಗೆ ಇಂದು ಪ್ರಧಾನಿ ಮೋದಿ ಭೇಟಿ

ನವದೆಹಲಿ: ರಷ್ಯಾದಲ್ಲಿ ನಡೆಯಲಿರುವ 16ನೇ ಬ್ರಿಕ್ಸ್‌ ಶೃಂಗಸಭೆಗಾಗಿ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ರಷ್ಯಾಗೆ ಭೇಟಿ ನೀಡಲಿದ್ದಾರೆ. ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರ ಆಹ್ವಾನದ ಮೇರೆ ಪ್ರಧಾನಿ ತೆರಳುತ್ತಿದ್ದು, ಭಾರತವು ಬ್ರಿಕ್ಸ್‌ಗೆ ಅತಿದೊಡ್ಡ ಮೌಲ್ಯವನ್ನು ತಂದುಕೊಟ್ಟಿದೆ ಎಂದು ವಿದೇಶಾಂಗ ಸಚಿವಾಲಯದ ಕಾರ್ಯದರ್ಶಿ ವಿಕ್ರಮ್‌ ಮಿಸ್ರಿ ಹೇಳಿದ್ದಾರೆ.

ಪ್ರಧಾನಿ ಭೇಟಿ ಕುರಿತಂತೆ ಮಾಧ್ಯಮಗಳಿಗೆ ಮಿಸ್ರಿ ಮಾಹಿತಿ ನೀಡಿದ್ದು, ರಷ್ಯಾದ ಕಜಾನ್‌ನಲ್ಲಿ ಶೃಂಗಸಭೆ ಮಂಗಳವಾರ ಆರಂಭವಾದರೂ, ಮುಖ್ಯ ಸಭೆ ಇರುವುದು ಬುಧವಾರ. ಆ ಸಭೆಯ ಬಳಿಕ ಪ್ರಧಾನಿ ಬ್ರಿಕ್ಸ್‌ ಸದಸ್ಯ ರಾಷ್ಟ್ರಗಳ ಜತೆಗೆ ದ್ವಿಪಕ್ಷೀಯ ಸಭೆಗಳನ್ನೂ ನಡೆಸಲಿದ್ದಾರೆ. ಜಾಗತಿಕ ಅಭಿವೃದ್ಧಿ ಮತ್ತು ಭದ್ರತೆಯಲ್ಲಿ ಬಹು ಪಾಲುದಾರಿಕೆಯನ್ನು ಹೆಚ್ಚಿಸುವುದು ಈ ಬಾರಿ ಶೃಂಗಸಭೆಯ ಧ್ಯೇಯವಾಗಿದೆ ಎಂದಿದ್ದಾರೆ.

ಅಲ್ಲದೇ, ಭಾರತವು ಬ್ರಿಕ್ಸ್‌ನ ಸಂಸ್ಥಾಪಕ ಸದಸ್ಯನಾಗಿದ್ದು, ಪ್ರತಿ ಕಾರ್ಯಕ್ರಮಗಳಲ್ಲಿ ಯೋಜನೆಗಳಲ್ಲಿ ಅಭೂತಪೂರ್ವ ಕೊಡುಗೆಗಳನ್ನು ನೀಡುವ ಮೂಲಕ ಬ್ರಿಕ್ಸ್‌ಗೆ ಬಹುದೊಡ್ಡ ಮೌಲ್ಯ ತಂದುಕೊಟ್ಟಿದೆ. ಬ್ರಿಕ್ಸ್‌ ವಿಸ್ತಾರವಾದ ಬಳಿಕದ ಮೊದಲ ಮಹತ್ವದ ಶೃಂಗದಲ್ಲೂ ಭಾರತ ಭಾಗಿಯಾಗುತ್ತಿದ್ದು, ಈ ಶೃಂಗವು ಆರ್ಥಿಕ ಸಹಕಾರ ಹಾಗೂ ಇಂಧನ, ಆಹಾರ ಭದ್ರತೆ, ಆರೋಗ್ಯ ಕ್ಷೇತ್ರಗಳಲ್ಲಿನ ಸಹಕಾರವನ್ನೂ ಹೆಚ್ಚಿಸಲಿದೆ ಎಂದಿದ್ದಾರೆ. 2009ರಲ್ಲಿ ಕಡೆಯದಾಗಿ ರಷ್ಯಾದಲ್ಲಿ ಬ್ರಿಕ್ಸ್‌ ಶೃಂಗ ಸಭೆ ನಡೆದಿತ್ತು.

ಇರಾನ್‌ ಅಧ್ಯಕ್ಷರ ಭೇಟಿ ಸಾಧ್ಯತೆ
ಬ್ರಿಕ್ಸ್‌ ಸಮ್ಮೇಳನದ ಬಳಿಕ ಪ್ರಧಾನಿ ಮೋದಿ ಅವರೊಂದಿಗೆ ಇರಾನ್‌ ಅಧ್ಯಕ್ಷ ಮಸೌದ್‌ ಪೆಜೇಶ್ಕಿಯಾನ್‌ ಅವರು ದ್ವಿಪಕ್ಷೀಯ ಸಭೆ ನಡೆಸುವ ಸಾಧ್ಯತೆ ಇದೆ. ಇಸ್ರೇಲ್‌-ಇರಾನ್‌ ನಡುವಿನ ಬಿಕ್ಕಟ್ಟು ಉಲ್ಬಣಿಸಿರುವಂತೆಯೇ ಈ ಭೇಟಿ ಮಹತ್ವ ಪಡೆಯಲಿದೆ. ಜತೆಗೆ ಇರಾನ್‌ ಅಧ್ಯಕ್ಷರಾಗಿ ಮಸೌದ್‌ ಅಧಿಕಾರವಹಿಸಿಕೊಂಡ ಬಳಿಕ ಪ್ರಧಾನಿ ಮೋದಿ ಅವರ ಜತೆಗಿನ ಮೊದಲ ಭೇಟಿಯೂ ಇದೇ ಆಗಿರಲಿದೆ.

ಇಸ್ರೇಲ್‌ ಮೇಲೆ ದಾಳಿ ನಡೆಸಿದ ಹಮಾಸ್‌ ಉಗ್ರರಿಗೆ ಇರಾನ್‌ ಬೆಂಬಲ ನೀಡಿದ್ದು, ಲೆಬನಾನ್‌ನಲ್ಲಿರುವ ಹೆಜ್ಬುಲ್ಲಾ ಉಗ್ರರಿಗೂ ಮಣೆಹಾಕಿದೆ ಎಂದು ಇಸ್ರೇಲ್‌ ಆರೋಪಿಸಿ ಇತ್ತೀಚೆಗೆ ಇರಾನ್‌ ಮೇಲೆ ದಾಳಿ ನಡೆಸಿತ್ತು. ಪ್ರತಿಯಾಗಿ ಇರಾನ್‌ ಕೂಡ ಕ್ಷಿಪಣಿ ದಾಳಿ ನಡೆಸಿ ಮಧ್ಯಪ್ರಾಚ್ಯ ಬಿಕ್ಕಟ್ಟು ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಇಸ್ರೇಲ್‌ ಮತ್ತು ಇರಾನ್‌ ನಡುವೆ ಶಾಂತಿ ಸಂಧಾನಕ್ಕೆ ಪುಟಿನ್‌ ಆಸಕ್ತಿ ವಹಿಸಿದ್ದು, ಪ್ರಧಾನಿ ಮೋದಿ ಅವರ ಜತೆಗಿನ ಭೇಟಿಯಲ್ಲೂ ಈ ವಿಚಾರ ಪ್ರಸ್ತಾಪವಾಗುವ ನಿರೀಕ್ಷೆ ಇದೆ.

ಟಾಪ್ ನ್ಯೂಸ್

Bishnoi: ಬಿಷ್ಣೋಯಿನ ಕೊಂದ ಪೊಲೀಸ್‌ ಅಧಿಕಾರಿಗೆ 1.11 ಕೋಟಿ ರೂ. ಬಹುಮಾನ! ಕರ್ಣಿ ಸೇನಾ

Bishnoi: ಬಿಷ್ಣೋಯಿನ ಕೊಲ್ಲುವ ಪೊಲೀಸ್‌ ಅಧಿಕಾರಿಗೆ 1.11 ಕೋಟಿ ರೂ. ಬಹುಮಾನ! ಕರ್ಣಿ ಸೇನಾ

ರೈಸ್‌ ಪುಲ್ಲಿಂಗ್: ಉದ್ಯಮಿಗೆ ಆಸ್ತಿ ವಂಚನೆ… ಹಾಸನದ ಮಹಿಳೆ ಸೇರಿ ಐವರ ಬಂಧನ

ರೈಸ್‌ ಪುಲ್ಲಿಂಗ್: ಉದ್ಯಮಿಗೆ ಆಸ್ತಿ ವಂಚನೆ… ಹಾಸನದ ಮಹಿಳೆ ಸೇರಿ ಐವರ ಬಂಧನ

Bengaluru Rain: ಪರಿಹಾರ ಕಾರ್ಯಕ್ಕೆ 1,000 ಕೋಟಿ ನೀಡಿ; ಅಶೋಕ್‌

Bengaluru Rain: ಪರಿಹಾರ ಕಾರ್ಯಕ್ಕೆ 1,000 ಕೋಟಿ ನೀಡಿ; ಅಶೋಕ್‌

Bengaluru: ಆಟವಾಡುವಾಗ ಕೆಂಗೇರಿ ಕೆರೆಗೆ ಬಿದ್ದ ಅಣ್ಣ- ತಂಗಿಗೆ ಹುಡುಕಾಟ

Bengaluru: ಆಟವಾಡುವಾಗ ಕೆಂಗೇರಿ ಕೆರೆಗೆ ಬಿದ್ದ ಅಣ್ಣ- ತಂಗಿಗೆ ಹುಡುಕಾಟ

Rain: ಚಿತ್ರದುರ್ಗದಲ್ಲಿ ತಡರಾತ್ರಿ ವರುಣನ ಅಬ್ಬರ… ಕೆರೆಯಂತಾದ ನಾಯಕನಹಟ್ಟಿ ಪೊಲೀಸ್ ಠಾಣೆ

Rain: ಚಿತ್ರದುರ್ಗದಲ್ಲಿ ತಡರಾತ್ರಿ ವರುಣನ ಅಬ್ಬರ… ಕೆರೆಯಂತಾದ ನಾಯಕನಹಟ್ಟಿ ಪೊಲೀಸ್ ಠಾಣೆ

UPI Payment: ಮಾಲ್ದೀವ್ಸ್‌ನಲ್ಲಿ ಭಾರತದ ಯುಪಿಐ ಪಾವತಿ ವ್ಯವಸ್ಥೆ!

UPI Payment: ಮಾಲ್ದೀವ್ಸ್‌ನಲ್ಲಿ ಭಾರತದ ಯುಪಿಐ ಪಾವತಿ ವ್ಯವಸ್ಥೆ!

jayarama-Acharya

Yakshagana Jayarama Acharya: ‘ಆರೋಗ್ಯಕರ ಹಾಸ್ಯ ಹಂಚಿದ ಕಲಾವಿದ ಜಯರಾಮಣ್ಣ’

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bishnoi: ಬಿಷ್ಣೋಯಿನ ಕೊಂದ ಪೊಲೀಸ್‌ ಅಧಿಕಾರಿಗೆ 1.11 ಕೋಟಿ ರೂ. ಬಹುಮಾನ! ಕರ್ಣಿ ಸೇನಾ

Bishnoi: ಬಿಷ್ಣೋಯಿನ ಕೊಲ್ಲುವ ಪೊಲೀಸ್‌ ಅಧಿಕಾರಿಗೆ 1.11 ಕೋಟಿ ರೂ. ಬಹುಮಾನ! ಕರ್ಣಿ ಸೇನಾ

Rain: ನಾಡಿದ್ದು ಪಶ್ಚಿಮ ಬಂಗಾಲ,ಒಡಿಶಾಕ್ಕೆ ಚಂಡಮಾರುತ:ಮುನ್ನೆಚ್ಚರಿಕೆ ನೀಡಿದ ಹವಾಮಾನ ಇಲಾಖೆ

Rain: ನಾಡಿದ್ದು ಪಶ್ಚಿಮ ಬಂಗಾಲ,ಒಡಿಶಾಕ್ಕೆ ಚಂಡಮಾರುತ:ಮುನ್ನೆಚ್ಚರಿಕೆ ನೀಡಿದ ಹವಾಮಾನ ಇಲಾಖೆ

Uttarakhand: ಲಿವ್‌-ಇನ್‌ ಜೋಡಿಗಳ ನೋಂದಾಣಿಗೆ ಕೇವಲ 1 ತಿಂಗಳ ಗಡುವು

Uttarakhand: ಲಿವ್‌-ಇನ್‌ ಜೋಡಿಗಳ ನೋಂದಾಣಿಗೆ ಕೇವಲ 1 ತಿಂಗಳ ಗಡುವು

SHOCKING! ಪಾನಿಪೂರಿಗೆ ರುಚಿ ಹೆಚ್ಚಿಸಲು ಹಾರ್ಪಿಕ್‌, ಯೂರಿಯಾ ಬಳಕೆ

SHOCKING! ಪಾನಿಪೂರಿಗೆ ರುಚಿ ಹೆಚ್ಚಿಸಲು ಹಾರ್ಪಿಕ್‌, ಯೂರಿಯಾ ಬಳಕೆ

Tirupati Ticket Scandal: ಜಗನ್‌ ಪಕ್ಷದ ನಾಯಕಿಯಿಂದ ತಿರುಪತಿ ಟಿಕೆಟ್‌ ಗೋಲ್ಮಾಲ್‌!

Tirupati Ticket Scandal: ಜಗನ್‌ ಪಕ್ಷದ ನಾಯಕಿಯಿಂದ ತಿರುಪತಿ ಟಿಕೆಟ್‌ ಗೋಲ್ಮಾಲ್‌!

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

ಹೊಸ ಸೇರ್ಪಡೆ

Bishnoi: ಬಿಷ್ಣೋಯಿನ ಕೊಂದ ಪೊಲೀಸ್‌ ಅಧಿಕಾರಿಗೆ 1.11 ಕೋಟಿ ರೂ. ಬಹುಮಾನ! ಕರ್ಣಿ ಸೇನಾ

Bishnoi: ಬಿಷ್ಣೋಯಿನ ಕೊಲ್ಲುವ ಪೊಲೀಸ್‌ ಅಧಿಕಾರಿಗೆ 1.11 ಕೋಟಿ ರೂ. ಬಹುಮಾನ! ಕರ್ಣಿ ಸೇನಾ

ರೈಸ್‌ ಪುಲ್ಲಿಂಗ್: ಉದ್ಯಮಿಗೆ ಆಸ್ತಿ ವಂಚನೆ… ಹಾಸನದ ಮಹಿಳೆ ಸೇರಿ ಐವರ ಬಂಧನ

ರೈಸ್‌ ಪುಲ್ಲಿಂಗ್: ಉದ್ಯಮಿಗೆ ಆಸ್ತಿ ವಂಚನೆ… ಹಾಸನದ ಮಹಿಳೆ ಸೇರಿ ಐವರ ಬಂಧನ

Crime: ನಿಧಾನವಾಗಿ ಮಾತನಾಡಿ ಎಂದಿದ್ದಕ್ಕೆ  ಗಲಾಟೆ; ಪಾನಿಪೂರಿ ವ್ಯಾಪಾರಿ ಹತ್ಯೆ

Crime: ನಿಧಾನವಾಗಿ ಮಾತನಾಡಿ ಎಂದಿದ್ದಕ್ಕೆ  ಗಲಾಟೆ; ಪಾನಿಪೂರಿ ವ್ಯಾಪಾರಿ ಹತ್ಯೆ

Bengaluru Rain: ಪರಿಹಾರ ಕಾರ್ಯಕ್ಕೆ 1,000 ಕೋಟಿ ನೀಡಿ; ಅಶೋಕ್‌

Bengaluru Rain: ಪರಿಹಾರ ಕಾರ್ಯಕ್ಕೆ 1,000 ಕೋಟಿ ನೀಡಿ; ಅಶೋಕ್‌

Bengaluru: ಆಟವಾಡುವಾಗ ಕೆಂಗೇರಿ ಕೆರೆಗೆ ಬಿದ್ದ ಅಣ್ಣ- ತಂಗಿಗೆ ಹುಡುಕಾಟ

Bengaluru: ಆಟವಾಡುವಾಗ ಕೆಂಗೇರಿ ಕೆರೆಗೆ ಬಿದ್ದ ಅಣ್ಣ- ತಂಗಿಗೆ ಹುಡುಕಾಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.