545 PSI ನೇಮಕಾತಿ: ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ
Team Udayavani, Oct 21, 2024, 11:34 PM IST
ಬೆಂಗಳೂರು: ಈ ಹಿಂದೆ ರಾಜ್ಯ ರಾಜಕೀಯ ಮತ್ತು ಪೊಲೀಸ್ ಇಲಾಖೆಯಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದ 545 ಪಿಎಸ್ಐ ನೇಮಕಾತಿ ಸಂಬಂಧ ಗೃಹ ಇಲಾಖೆ ಕೊನೆಗೂ ಅಭ್ಯರ್ಥಿಗಳ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಸೋಮವಾರ ಪ್ರಕಟಿಸಿದೆ.
ನಾಲ್ಕು ವರ್ಷಗಳ ಹಿಂದೆ 545 ಪಿಎಸ್ಐ ನೇಮಕಾತಿ ಸಂಬಂಧ ಅಧಿಸೂಚನೆ ಹೊರಡಿಸಿ, ಪರೀಕ್ಷೆ ನಡೆಸಿ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಿಸಲಾಗಿತ್ತು. ಆದರೆ, ಈ ಪರೀಕ್ಷೆಯಲ್ಲಿ ಭಾರೀ ಅವ್ಯವಹಾರ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಎಸ್ಐಟಿ ತನಿಖೆಗೆ ಆದೇಶಿಸಿತ್ತು. ಈ ಬೆನ್ನಲ್ಲೇ ನೇಮಕಾತಿ ಅವ್ಯವಹಾರದಲ್ಲಿ ಭಾಗಿಯಾದ ಆರೋಪದಡಿ ಪೊಲೀಸ್ ನೇಮಕಾತಿ ವಿಭಾಗದ ಅಂದಿನ ಎಡಿಜಿಪಿ ಅಮೃತ್ ಪೌಲ್ ಸೇರಿ ಹತ್ತಾರು ಮಂದಿ ಪೊಲೀಸ್ ಅಧಿಕಾರಿ-ಸಿಬಂದಿ ಹಾಗೂ ಪಿಎಸ್ಐ ಪರೀಕ್ಷಾ ಆಕಾಂಕ್ಷಿಗಳ ಸಹಿತ ಹಲವರ ಬಂಧನವಾಗಿತ್ತು.
ಕೊನೆಗೂ ಹೈಕೋರ್ಟ್ ಸೂಚನೆ ಮೇರೆಗೆ ಸ್ವಾಯುತ್ತ ಸಂಸ್ಥೆಯಾದ ಕರ್ನಾಟಕ ಪರೀûಾ ಪ್ರಾಧಿಕಾರ (ಕೆಇಎ) ಕಳೆದ ಜನವರಿಯಲ್ಲಿ 545 ಪಿಎಸ್ಐ ನೇಮಕಾತಿ ಸಂಬಂಧ ಮರು ಪರೀಕ್ಷೆ ನಡೆಸಿತ್ತು. ಮಾ. 28ರಂದು ಅಭ್ಯರ್ಥಿಗಳ ಅಂಕಗಳನ್ನು ಪ್ರಕಟಿಸಿತ್ತು. ಕಳೆದ 6 ತಿಂಗಳಿನಿಂದ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಿಸುವಂತೆ ಅಭ್ಯರ್ಥಿಗಳು ಆಗ್ರಹಿಸುತ್ತಿದ್ದರು. ಇದೀಗ ಗೃಹ ಇಲಾಖೆ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Crackers;ನಿಷೇಧಿತ ಕೆಂಪು ಪಟಾಕಿ ಮೇಲೆ ಖಾಕಿ ಕೆಂಗಣ್ಣು: ಆನ್ಲೈನ್ನಲ್ಲಿ ಮಾರಿದರೂ ಕೇಸ್
Audio Viral:ದೂರು ದಾಖಲಿಸಿದ ಕಾಂಗ್ರೆಸ್ ಶಾಸಕ ಶಿವಲಿಂಗೇಗೌಡ ದೂರು
BJP-JDS ಮೈತ್ರಿಯಲ್ಲಿ ಬಿರುಕು?: ದಿಲ್ಲಿಗೆ ದೌಡಾಯಿಸಿದ ಬಿ.ವೈ. ವಿಜಯೇಂದ್ರ
KSRTC ಬಸ್ನಲ್ಲೇ ಅವಳಿ ಮಕ್ಕಳು ಜನನ!
Karkala; ಪರಶುರಾಮನ ಕಂಚಿನ ಪ್ರತಿಮೆ ರಚನೆಯಲ್ಲಿ ಅಕ್ರಮ ಆರೋಪ : ಕೃಷ್ಣ ನಾಯಕ್ ಅರ್ಜಿ ವಜಾ
MUST WATCH
ಹೊಸ ಸೇರ್ಪಡೆ
BRICS Summit: ರಷ್ಯಾಗೆ ಇಂದು ಪ್ರಧಾನಿ ಮೋದಿ ಭೇಟಿ
Tamil Nadu: ದಕ್ಷಿಣ ಭಾರತ ಜನಸಂಖ್ಯೆ ಹೆಚ್ಚಳ ಪರ ತ.ನಾಡು ಸಿಎಂ ಬ್ಯಾಟಿಂಗ್
Mangaluru: ಹೂಡಿಕೆ ಆಮಿಷ; ಲಕ್ಷಾಂತರ ರೂ. ವರ್ಗಾಯಿಸಿಕೊಂಡು ವಂಚನೆ
Karnataka Govt: ಅರ್ಧ ವಾರ್ಷಿಕ ಪಬ್ಲಿಕ್ ಪರೀಕ್ಷೆಗೆ ಸುಪ್ರೀಂ ತಡೆ
Crackers;ನಿಷೇಧಿತ ಕೆಂಪು ಪಟಾಕಿ ಮೇಲೆ ಖಾಕಿ ಕೆಂಗಣ್ಣು: ಆನ್ಲೈನ್ನಲ್ಲಿ ಮಾರಿದರೂ ಕೇಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.