Ranji Trophy: ಕರ್ನಾಟಕಕ್ಕೆ ಮತ್ತೆ ಮಳೆ ಕಾಟ
Team Udayavani, Oct 22, 2024, 12:58 AM IST
ಆಲೂರು: ಸತತವಾಗಿ ಸುರಿದ ಭಾರೀ ಮಳೆಯಿಂದಾಗಿ ಕರ್ನಾಟಕ-ಕೇರಳ ನಡುವಿನ ರಣಜಿ ಪಂದ್ಯದ ಅಂತಿಮ ದಿನದಾಟವೂ ರದ್ದುಗೊಂಡಿತು. ಇದರೊಂದಿಗೆ ಪಂದ್ಯ ಡ್ರಾದಲ್ಲಿ ಕೊನೆಗೊಂಡಿತು.
ಇಂದೋರ್‌ನಲ್ಲಿ ನಡೆದ ಕರ್ನಾಟಕ-ಮಧ್ಯಪ್ರದೇಶ ನಡುವಿನ ಮೊದಲ ಪಂದ್ಯವೂ ಮಳೆಯ ಹೊಡೆತಕ್ಕೆ ಸಿಲುಕಿ ಡ್ರಾಗೊಂಡಿತ್ತು. ಕರ್ನಾಟಕವೀಗ ಅಂಕಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದ್ದು, ನಾಕೌಟ್ ಪ್ರವೇಶಕ್ಕೆ ಭಾರೀ ಹೋರಾಟ ನಡೆಸಬೇಕಾದ ಸ್ಥಿತಿಯಲ್ಲಿದೆ.
ಈ ಪಂದ್ಯದಲ್ಲಿ ಮೊದಲ ದಿನ ಕೆಲವು ಓವರ್ ಹಾಗೂ ದ್ವಿತೀಯ ದಿನದ ಭೋಜನ ವಿರಾಮ ತನಕ ಸ್ವಲ್ಪ ಹೊತ್ತು ಆಟ ನಡೆದಿತ್ತು. ಅನಂತರದ ಎರಡೂವರೆ ದಿನಗಳ ಆಟ ಸಂಪೂರ್ಣವಾಗಿ ಮಳೆಯಿಂದ ಕೊಚ್ಚಿ ಹೋಯಿತು. ಈ ಸೀಮಿತ ಅವಧಿಯ ಆಟದಲ್ಲಿ ಕೇರಳ 50 ಓವರ್‌ಗಳಲ್ಲಿ 3 ವಿಕೆಟಿಗೆ 161 ರನ್ ಮಾಡಿತ್ತು.
ಕರ್ನಾಟಕದ ಮುಂದಿನ ಎದುರಾಳಿ ಬಿಹಾರ. ಈ ಪಂದ್ಯ ಪಾಟ್ನಾದಲ್ಲಿ ನಡೆಯಲಿದೆ (ಅ. 26-29).
ಮಹಾರಾಷ್ಟ್ರವನ್ನು ಮಣಿಸಿದ ಮುಂಬಯಿ
ಮುಂಬಯಿ: ಹಾಲಿ ಚಾಂಪಿಯನ್ ಮುಂಬಯಿ ಪ್ರಸಕ್ತ ರಣಜಿ ಋತುವಿನಲ್ಲಿ ಗೆಲುವಿನ ಖಾತೆ ತೆರೆದಿದೆ. ಮಹಾರಾಷ್ಟ್ರವನ್ನು 9 ವಿಕೆಟ್‌ಗಳಿಂದ ಮಣಿಸಿ ಹಳಿಯೇರಿದೆ. ಆರಂಭಿಕ ಪಂದ್ಯದಲ್ಲಿ ಅಜಿಂಕ್ಯ ರಹಾನೆ ಪಡೆ ಬರೋಡಕ್ಕೆ 84 ರನ್ನುಗಳಿಂದ ಶರಣಾಗಿತ್ತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.