UV Fusion: ಅಮ್ಮನ ಬೀಡಿಸೂಪಿನೆಡೆಯಿಂದ…


Team Udayavani, Oct 22, 2024, 4:10 PM IST

3-uv-fusion

“ಅಮ್ಮಾ ಒಂದು ಹತ್ತು ರೂಪಾಯಿ ಇದ್ರೆ ಕೊಡಿ. ಕಾಲೇಜಿಗೆ ಲೇಟಾಯ್ತು, ಬಸ್‌ ಸ್ಟಾಂಡ್‌ ತನಕ ರಿಕ್ಷಾದಲ್ಲಿ ಹೋಗ್ತೀನೆ.’  ಸೋಮವಾರ ಬೆಳಗ್ಗೆ ಇಂತಹ ಕೋರಿಕೆಗಳು ಕೇಳಿ ಬಂದಾಗ  “ನಿಂಗೆ ರಾತ್ರಿ ಬೇಗ ಮಲಗ್ಲಿಕೆ ಸನ್ನಿ.. ಬೆಳಗ್ಗೆ ಲೇಟ್‌ ಏಳುದು, ಬೇಗ ಎಬ್ಬಿಸಿದ್ರೂ ನಿಮ್ಮ ಐದು ನಿಮಿಷ ಮುಗಿಲಿಕಿಲ್ಲ.. ಎಲ್ಲ ಆ ಹಾಳಾದ ಮೊಬೈಲಿಂದ! ನನ್ನಲ್ಲಿ ಹತ್ತು ರೂಪಾಯಿ ಅಲ್ಲ ಒಂದು ರೂಪಾಯಿನು ಇಲ್ಲ.’ ಮಣ ಮಣ ಬೈದುಕೊಳ್ಳುತ್ತಲೇ ಬೀಡಿ ಸೂಪಿನೆಡೆಯಿಂದ ಐವತ್ತರಧ್ದೋ ಇಲ್ಲ ನೂರರ ನೋಟೊ ಮೆಲ್ಲಗೆ ಹೊರಗಿಣುಕಿ ಬಂದು ನನ್ನ ಕೈಸೇರಿದರೆ, ನೋಟಿನ ಮೇಲಿದ್ದ ಹೊಗೆಸೊಪ್ಪನ್ನು ಕೊಡವಿ ಹಾಕಿದ್ದ ಬಟ್ಟೆಯಲ್ಲೇ ನೋಟನ್ನೊಮ್ಮೆ ವರೆಸಿ ಪರ್ಸಿನೊಳಗೆ ಇಟ್ಟು ಬಿಟ್ಟರೆ ಅದೆಂತದೋ ಒಂದು ಖುಷಿ.

ಇಂತಹ ಅದೆಷ್ಟೋ ಮುಂಜಾವುಗಳಿಗೆ, ಕಷ್ಟದ ಸಮಸ್ಯೆಗಳಿಗೆ ಹೆಗಲಾಗಿ ನಿಲ್ಲುವ ಬೀಡಿ ಸೂಪಿನೊಂದಿಗಿರುವ ನಂಟು ಅಂತಿತ್ತದ್ದಲ್ಲ. ಪರ ಪರನೇ ಎಲೆ ಕತ್ತರಿಸಿ, ಅದರ ಮೇಲೆಲ್ಲಾ ನೀರು ಚಿಮುಕಿಸಿ ಎಲೆ ಮೆದುವಾದ ಅನಂತರ  ಯಾವುದೋ ಒಂದು ಬಟ್ಟೆಯಲ್ಲಿ ಎಲೆಯನ್ನೆಲ್ಲ ಮುಂಡಾಸಿನಂತೆ ಕಟ್ಟಿ ಸೂಪಿನ ಒಂದು ಬದಿಗಿಟ್ಟು, ಸೂಪಿನ ಮಧ್ಯ ಭಾಗಕ್ಕೆ ಒಂದಿಷ್ಟು ಹೊಗೆಸೊಪ್ಪು ಹಾಕಿ, ಬದಿಯಲ್ಲಿ ಬಣ್ಣದ ನೂಲಿನ ರೀಲಿಟ್ಟರೆ ಅಮ್ಮನ ಕೈಗೆ ಬಿಡುವೇ ಇರುವುದಿಲ್ಲ. ಯಾವ ಮಷೀನಿಗೂ ಕಮ್ಮಿಯಿಲ್ಲ ಚಕಚಕನೇ ಬೀಡಿ ಕಟ್ಟುವ ಅಮ್ಮನ ಕೈ ಬೆರಳುಗಳು.

ಕತ್ತರಿಸಿದ ಎಲೆಯನ್ನು ಎಡಗೈಯಲ್ಲಿ ಅಡ್ಡಲಾಗಿ  ಹಿಡಿದುಕೊಂಡು, ಎಲೆಯ ನಡುವಿಗೆ ಹೊಗೆಸೊಪ್ಪು ಹಾಕಿ ತೋಳ್ಬೆರಳಿನಿಂದ ಉದ್ದಕ್ಕೆ ಒಮ್ಮೆ ಅಗತ್ಯಕ್ಕಿಂತ ಹೆಚ್ಚಿದ್ದ ಹೊಗೆಸೊಪ್ಪನ್ನು ಹೊರಕ್ಕೆ ಹಾಕಿ ಎಲೆಯನ್ನು ಅಂಗೈಯ ನಡುವೆ ತಂದು ಸುರುಳಿ ಸುತ್ತಿ, ಅದರ ತಲೆ, ಬಾಲ ಮಡಚಿ  ಬೀಡಿಯ ಸೊಂಟವನ್ನು ಬಣ್ಣದ ನೂಲಿನಿಂದ ಬಿಗಿದರೆ ಒಂದು ಬೀಡಿ ತಯಾರು. ಹಾಗೆಯೇ ಕಟ್ಟುತ್ತಾಳೆ ಅಮ್ಮ ಬೀಡಿ.. ಬೀಡಿಯ ರಾಶಿ ಶಿಖರಕ್ಕೇರುತ್ತದೆ.

“ಅಮ್ಮಾ.. ಬೀಡಿ ಲೆಕ್ಕ ಮಾಡಿ ಕೊಡ್ಲಾ?’ ಎಂದಾಗ ಆಕೆಗೂ ಒಂದು ಕೆಲಸ ಕಮ್ಮಿ. ಖುಷಿಯಲ್ಲೇ ಹೂಗುಟ್ಟುತ್ತಾಳೆ. “ಒಂದು ಕಟ್ಟಾಯ್ತು.. ನಾಳೆಗೆ ನಲ್ವತ್ತು ಕಟ್ಟು ಬೀಡಿ ಕಟ್ಟಿ ಆಗ್ಬೇಕು!’ ಚಿಂತೆಯಲ್ಲಿ ಹೇಳುತ್ತಾ, ಬೀಡಿ ಕಟ್ಟುವುದು.. ಟಿವಿಯಲ್ಲಿ ಜಾಹೀರಾತು ಮುಗಿದ ಕೂಡಲೇ ಬರುವ ಸೀರಿಯಲ್ಲಿಗೆ ಬಾಯಿಯನ್ನು ಆ ಮಾಡಿಕೊಂಡು ಟಿವಿ ನೋಡುವುದು.. ಪುನಃ ಅದೇ ಬೀಡಿ ಕಟ್ಟುವಿಕೆ. ನಿಯಾನ್‌ ಬಲ್ಬಿನ ಕೆಳಗೆ ಕಣ್ಣೆಳೆಯುತ್ತಿದ್ದರು ನಿದ್ದೆಯನ್ನೆಲ್ಲಾ ನುಂಗಿಕೊಂಡು ಬೀಡಿ ಕಟ್ಟುವುದು, ಸುಮ್ಮನೆ ಕೂತರೆ ಸಂಘದ ಸಾಲಕ್ಕೆ ಮಂಜುನಾಥನೆ ಗತಿ!

ಅದೆಷ್ಟೋ ನೋವು ನಲಿವಿನ ನೆನಪುಗಳಿವೆ ಬೀಡಿ ಸೂಪಿನೆಡೆಯಲ್ಲಿ. ಅಮ್ಮನ ಮನಸಲ್ಲೇ ಬಂಧಿಯಾಗಿರುವ ಸಮಸ್ಯೆಗಳ ಲಿಸ್ಟುಗಳು, ಅದೆಷ್ಟೋ ಬೇಸರದ ಸಂಗತಿಗಳು, ಹೊಸ ಸೀರೆ ತಗೋಬೇಕು ಅನ್ನೋ ಆಸೆಗಳು ಎಲ್ಲವೂ ಬೀಡಿ ಸೂಪಿಗೆ ತೀರಾ ಪರಿಚಿತ ವಿಷಯಗಳು.

ಶನಿವಾರದ ದಿನ ಮಜೂರಿ ಕೈಗೆ ಸಿಕ್ಕಾಗ ನೀರು ಕುಡಿದಷ್ಟು ಖುಷಿ. ಬೀಡಿಯ ತೊಟ್ಟೆ(ಪ್ಲಾಸ್ಟಿಕ್‌) ಯಡಿಯಲ್ಲಿರುವ ಚಿಲ್ಲರೆ ಕೈಗೆ ಸಿಕ್ಕಾಗ ಶುಂಠಿ ಮಿಠಾಯಿ ಖರೀದಿಸಿ ತಿಂದು ತೇಗುವ ಮಜವಿದೆಯಲ್ಲ ಅದಕ್ಕೆ ಸಾಟಿ ಯಾವುದಿದೆ?

” ಇಷ್ಟೇ ಇಷ್ಟು ಪುಗೆರೆ(ಹೊಗೆಸೊಪ್ಪು) ಕೊಟ್ಟಿದ್ದಾರೆ! ಅದೆಲ್ಲಿಗೆ ಸಾಕು? ಎಲೆ ಎಂತದು ಒಳ್ಳೆದಿಲ್ಲ! ನೂಲು ಕುಂಬು! ಹೇಗೆ ಬೀಡಿ ಕಟ್ಟುದು ಅದ್ರಲ್ಲಿ?’ ಪಕ್ಕದ ಮನೆಯವರೊಡನೆ ಬೀಡಿ ಬ್ರೆಂಚಿನ ಧಣಿಗಳಿಗೆ  ಬೈಯದಿದ್ದರೆ ಬೀಡಿ ಕಟ್ಟುವ ಕೈಗಳಿಗೆ ಚೈತನ್ಯವಾದರೂ ಎಲ್ಲಿಂದ ಬರಬೇಕು?

ಬಹುತೇಕ ಕರಾವಳಿಗರಿಗೆ ಬೀಡಿ ಸೂಪಿನ ಮೇಲೊಂದು ಅರಿಯದ ಬಂಧವಿದೆ. ಹೊಟ್ಟೆಗೆ, ಬಟ್ಟೆಗೆ, ವಿದ್ಯೆಗೆ ಎಲ್ಲಕ್ಕೂ ಬೀಡಿ ಸೂಪಿನ ಕೊಡುಗೆ ಅಪಾರ. ನನ್ನದೂ ಬೀಡಿ ಸೂಪಿನ ಕತೆ ಹೇಳುತ್ತಾ ಹೋದರೆ  ಅದಿವತ್ತಿಗೆ ಮುಗಿಯೋದೇ ಇಲ್ಲವೇನೋ!

-ಚೈತ್ರ

ವಿವೇಕಾನಂದ ಕಾಲೇಜು ಪುತ್ತೂರು

ಟಾಪ್ ನ್ಯೂಸ್

Odisha-Dana

Cyclone: ಮುಂದಿನ 48 ಗಂಟೆಗಳಲ್ಲಿ ಒಡಿಶಾ, ಪ.ಬಂಗಾಳಕ್ಕೆ ಅಪ್ಪಳಿಸಲಿದೆ ʼಡಾನಾʼ ಚಂಡಮಾರುತ!

Belagavi: ಕಿತ್ತೂರು ಉತ್ಸವ ಹಿನ್ನೆಲೆಯಲ್ಲಿ 2 ತಾಲೂಕಿನ ಶಾಲೆಗಳಿಗೆ 3 ದಿನ ರಜೆ ಘೋಷಣೆ

Belagavi: ಸಂತೋಷ ಪದ್ಮಣ್ಣವರ ಕೊಲೆ ಪ್ರಕರಣ: ನಾಲ್ಕಕ್ಕೇರಿದ ಬಂಧಿತರ ಸಂಖ್ಯೆ

Belagavi: ಸಂತೋಷ ಪದ್ಮಣ್ಣವರ ಕೊಲೆ ಪ್ರಕರಣ: ನಾಲ್ಕಕ್ಕೇರಿದ ಬಂಧಿತರ ಸಂಖ್ಯೆ

Rain-Kendriya

Cloud Burst: ಬೆಂಗಳೂರಿನ ಯಲಹಂಕದಲ್ಲಿ ದಾಖಲೆಯ ಮಳೆ; 10 ಬಡಾವಣೆ ಜಲಾವೃತ

Under construction building collapses in Bengaluru

Bengaluru: ಕುಸಿದ ನಿರ್ಮಾಣ ಹಂತದ ಕಟ್ಟಡ; ಮೂವರು ಸಾವು, ಹಲವರು ಸಿಲುಕಿರುವ ಶಂಕೆ

Stock Market: ಷೇರುಪೇಟೆ ಸೂಚ್ಯಂಕ 900ಕ್ಕೂ ಅಧಿಕ ಅಂಕ ಕುಸಿತ; 9 ಲಕ್ಷ ಕೋಟಿ ರೂ. ನಷ್ಟ

Stock Market: ಷೇರುಪೇಟೆ ಸೂಚ್ಯಂಕ 900ಕ್ಕೂ ಅಧಿಕ ಅಂಕ ಕುಸಿತ; 9 ಲಕ್ಷ ಕೋಟಿ ರೂ. ನಷ್ಟ

Prithvi Shaw out of the Ranji team too; Is Mumbai player’s cricket life over

Prithvi Shaw: ರಣಜಿ ತಂಡದಿಂದಲೂ ಪೃಥ್ವಿ ಔಟ್;‌ ಮುಗಿಯಿತಾ ಮುಂಬೈ ಆಟಗಾರನ ಕ್ರಿಕೆಟ್‌ ಜೀವನ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5

UV Fusion: ಹೊಸ ಕನಸಿಗೆ ಮೊದಲ ಹೆಜ್ಜೆ

4

UV Fusion: ಕಣ್ಮರೆಯಾಗುತ್ತಿರುವ ಪರಂಪರಾನುಗತ ವೃತ್ತಿಗಳು

11-uv-fusion

Life: ಬಯಸಿದಂತೆಲ್ಲಾ ಇರುವುದಿಲ್ಲ ಬದುಕು

7-uv-fusion

UV Fusion: ಋಣವನ್ನು ಎಂದಿಗೂ ಮರೆಯದಿರೋಣ

6-uv-fusion

UV Fusion: ಸಹವಾಸ ದೋಷ

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

ಹೊಸ ಸೇರ್ಪಡೆ

15(1)

Manipal: ಮಲ್ಪೆಯ ಮರಳು ಭೂಮಿಯಲ್ಲೊಂದು ಸುಂದರ ಉದ್ಯಾನ!

Odisha-Dana

Cyclone: ಮುಂದಿನ 48 ಗಂಟೆಗಳಲ್ಲಿ ಒಡಿಶಾ, ಪ.ಬಂಗಾಳಕ್ಕೆ ಅಪ್ಪಳಿಸಲಿದೆ ʼಡಾನಾʼ ಚಂಡಮಾರುತ!

Belagavi: ಕಿತ್ತೂರು ಉತ್ಸವ ಹಿನ್ನೆಲೆಯಲ್ಲಿ 2 ತಾಲೂಕಿನ ಶಾಲೆಗಳಿಗೆ 3 ದಿನ ರಜೆ ಘೋಷಣೆ

12

Mangaluru: ಪಟಾಕಿ ಮಾರಾಟಕ್ಕೆ 13 ಸ್ಥಳ ನಿಗದಿ; ಬೆಳಕಿನ ಹಬ್ಬಕ್ಕೆ ಭರದ ಸಿದ್ಧತೆ

13(3)

Udupi: ಎರಡು ವರ್ಷಗಳಲ್ಲಿ ಚಿರತೆ ದಾಳಿಗೆ 122 ಜಾನುವಾರುಗಳು ಬಲಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.