ಧಾರವಾಡ: ಕೃಷಿ ಚಟುವಟಿಕೆ ಸ್ಥಗಿತ-ಕೈಕಟ್ಟಿ ಕುಳಿತ ಅನ್ನದಾತ


Team Udayavani, Oct 22, 2024, 12:36 PM IST

ಧಾರವಾಡ: ಕೃಷಿ ಚಟುವಟಿಕೆ ಸ್ಥಗಿತ-ಕೈಕಟ್ಟಿ ಕುಳಿತ ಅನ್ನದಾತ

ಉದಯವಾಣಿ ಸಮಾಚಾರ
ಲಕಮಾಪುರ: ಕಳೆದ ವರ್ಷ ಹಿಂಗಾರು ಮಳೆ ಅಭಾವದಿಂದ ರೈತರಿಗೆ ಬಿತ್ತನೆ ಮಾಡಲು ಸಾಧ್ಯವಾಗಿರಲಿಲ್ಲ. ಆದರೆ ಪ್ರಸಕ್ತ ವರ್ಷ ಅತಿಯಾದ ಮಳೆಯಿಂದ ಕೃಷಿ ಚಟುವಟಿಕೆಗಳು ಸ್ಥಗಿತಗೊಳ್ಳುವಂತೆ ಆಗಿವೆ. ಮೊದಲು ಮಾನ್ಸೂನ್‌ ಮಾರುತಗಳು ರೈತರೊಂದಿಗೆ ಕಣ್ಣಾಮುಚ್ಚಾಲೆ ಆಡುತ್ತಿದ್ದವು. ಆದರೆ ಪ್ರಸಕ್ತ ವರ್ಷ ಹಿಂಗಾರು ಮಳೆ ಎಡೆಬಿಡದೇ ಕಾಡುತ್ತಿವೆ. ಹೀಗಾಗಿ ಈಗಾಗಲೇ ಬೀಜ, ಗೊಬ್ಬರ ಖರೀದಿಸಿ ಬಿತ್ತನೆಗೆ ಸಜ್ಜಾಗಿದ್ದ ರೈತರು ಕೈಕಟ್ಟಿ ಕುಳಿತುಕೊಳ್ಳುವಂತಾಗಿದೆ.

ಭೂಮಿ ಹದವೂ ಆಗಿಲ್ಲ: ಮಳೆಯಿಂದ ಹೊಲಗಳಲ್ಲಿ ನೀರು ನಿಂತು ಕೆರೆಗಳಂತೆ ಕಾಣುತ್ತಿವೆ. ಕೊರಕಲುಗಳು ಬಿದ್ದಿವೆ. ಹೊಲಗಳಿಗೆ ಹೋಗುವ ಕಾಲುದಾರಿಗಳು ತಗ್ಗುಗಳಿಂದ ಕೂಡಿದ್ದು, ನೀರು ತುಂಬಿ ಸಂಪೂರ್ಣ ಹಾಳಾಗಿವೆ. ಟ್ರಾಕ್ಟರ್‌, ಚಕ್ಕಡಿಗಳು ಸಾಗುವ ದಾರಿಗಳು ಕೆಸರುಮಯವಾಗಿವೆ. ಇದರಿಂದ ವಾಹನಗಳ ಮೂಲಕ ಕೃಷಿ ಚಟುವಟಿಕೆಯೂ ಅಸಾಧ್ಯ ಎನ್ನುವಂತಾಗಿದೆ. ಈ ವೇಳೆಗಾಗಲೇ ಹಿಂಗಾರಿನ ಬೆಳೆಗಳ ಎಡೆ ಹೊಡೆಸಿಕೊಳ್ಳುವ ಕಾರ್ಯ ನಡೆಯುತ್ತಿದ್ದವು. ಆದರೆ ಈವರೆಗೆ ಭೂಮಿಯನ್ನು ಹದ ಸಹಿತ ಮಾಡಲು ಸಾಧ್ಯವಾಗಿಲ್ಲ. ಬಿತ್ತನೆ ದೂರದ ಮಾತು. ಸದ್ಯ 10-12 ದಿನಗಳ ಕಾಲ ಮಳೆ ನಿಂತರೆ ಕೃಷಿ ಚಟುವಟಿಕೆ ಕೈಗೊಳ್ಳಲು ಸಹಕಾರಿಯಾಗುತ್ತದೆ.

ದಿಕ್ಕು ತೋಚದ ಸ್ಥಿತಿ: ಹಿಂಗಾರಿನ ಬೆಳೆಗಳು ಅಲ್ಪ ಪ್ರಮಾಣದ ಮಳೆಯಾಶ್ರಿತ, ತಂಪು ಹವಾಮಾನ¨ ಮೇಲೆ ಬರುವ ಬೆಳೆಗಳಾಗಿವೆ. ಆದರೆ ಅತಿಯಾದ ಮಳೆಯಿಂದಾಗಿ ಬಿತ್ತನೆ ಕಾರ್ಯ ಆರಂಭವಾಗಿಲ್ಲ. ಇನ್ನೂ ಮಳೆ ಆಗುವುದಕ್ಕಿಂತ ಮುಂಚೆ ಬಿತ್ತನೆ ಮಾಡಿದ ಬೀಜಗಳು ಕೊಳೆತು ಮಣ್ಣಾಗಿವೆ. ತರಕಾರಿ ಬೆಳೆಗಳೆಲ್ಲ ಮಳೆ ಹೊಡೆತಕ್ಕೆ ಹಾಳಾಗಿವೆ. ಅಲ್ಲದೇ ಕೈಗೆ ಬರಬೇಕಿದ್ದ ಬೆಳೆಗಳು ಅತಿವೃಷ್ಟಿಯಿಂದ ಹಾಳಾಗಿವೆ. ಇದರಿಂದ ರೈತರಿಗೆ ದಿಕ್ಕು ತೋಚದಂತಾಗಿದೆ.

ಮಣ್ಣಿನಲ್ಲೇ ಕೊಳೆಯುತ್ತಿದೆ ಆಲೂಗಡ್ಡೆ 
ಅತಿಯಾದ ಮಳೆಗೆ ಆಲೂಗಡ್ಡೆ ಬೆಳೆ ಮಣ್ಣಿನಲ್ಲಿಯೇ ಶೇ.75 ಕೊಳೆತು ಹೋಗಿದೆ. ಕಡಲೆ ಬಿತ್ತನೆ ಮಾಡಿದ್ದರಲ್ಲಿ ಶೇ.20 ಹುಟ್ಟಿಲ್ಲ. ಕೆಲವು ರೈತರು ಬಿತ್ತಿದ ಕಡಲೆ ಬೀಜಗಳು ಮೊಳಕೆ ಒಡೆದಿದ್ದು, ಅತಿಯಾದ ಮಳೆಯಿಂದ ಕೆಂಪಾಗಿವೆ. ಕೆಲವು ವರ್ಷಗಳಿಂದ ಲಕಮಾಪುರದಲ್ಲಿ ಹತ್ತಿ ಬೆಳೆಗಾರರ ಸಂಖ್ಯೆ ಗಣನೀಯವಾಗಿದೆ. ಶೇ.4 ಹತ್ತಿ ಬೆಳೆಗಾರರು ಇದ್ದಾರೆ. ಹತ್ತಿ ಗಿಡಗಳೆಲ್ಲ ಅತಿಯಾದ ತಂಪಿನಿಂದ ಕೆಂಪಾಗಿವೆ. ಕಾಯಿ ಸಮೇತ ಹತ್ತಿ ಗಿಡಗಳು ನೆಲಕ್ಕುರುಳಿವೆ. ತರಕಾರಿ ಬೆಳೆಗಳಾದ ಟೊಮ್ಯಾಟೋ, ಸೌತೆಕಾಯಿ, ಮೆಣಸಿನ ಕಾಯಿಗಿಡಗಳು ಶೇ.5 ಹಾಳಾಗಿವೆ.

7 ಎಕರೆಯಲ್ಲಿ ಬಿತ್ತಿದ್ದ ಕಡಲೆ ಬೀಜ ಮಳೆಯಿಂದ ನಾಶವಾಗಿದೆ. ಅಲ್ಲಲ್ಲಿ ಮೊಳಕೆಯೊಡೆದ ಬೀಜಗಳನ್ನು ಹಾಗೆ
ಬಿಟ್ಟರೂ ಉಪಯೋಗವಿಲ್ಲ. ಸಾಲಸೋಲ ಮಾಡಿ ಲಾವಣಿಗೆ ಪಡೆದ ಹೊಲಗಳು ಮೈಮೇಲೆ ಬಂದಿವೆ. ಮತ್ತೆ ಹರಗಿ ಬಿತ್ತಲು ಸಾಕಷ್ಟು ಖರ್ಚಾಗುತ್ತದೆ. ಬೀಜ-ಗೊಬ್ಬರ ಮತ್ತೆ ಖರೀದಿಸುವುದು ಕಷ್ಟ.
*ಚಂದ್ರಪ್ಪ ಗಬ್ಬೂರು, ರೈತ

ಒಂಭತ್ತು ಎಕರೆ ಆಲೂಗಡ್ಡೆ ಬೆಳೆ ಬಂದಿದೆ. ಆದರೆ ಆಲೂಗಡ್ಡೆ ತೆಗೆಯಲು ಮಳೆ ಬಿಡುತ್ತಿಲ್ಲ. ಇದರಿಂದ ಭೂಮಿ ಒಳಗೆ ಕೊಳೆಯುತ್ತಿದೆ. ಲಕ್ಷಗಟ್ಟಲೆ ಖರ್ಚು ಮಾಡಲಾಗಿದೆ. ಮಳೆ ಸಡಿಲವಾಗುವಂತೆ ಕಾಣುತ್ತಿಲ್ಲ. ಹೀಗಾದರೆ ಸುಮಾರು 14 ಲಕ್ಷ ರೂ. ಮೌಲ್ಯದ ಬೆಳೆ ಕೈತಪ್ಪಲಿದೆ.
*ಕಾಂತಪ್ಪ ಗಬ್ಬೂರು, ರೈತ

ಅತಿಯಾದ ಮಳೆಯಿಂದ ಹೊಲದಲ್ಲಿ ಯಾವುದೇ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎನ್ನುವಂತಾಗಿದೆ. ಎಷ್ಟೇ ಕಷ್ಟಪಟ್ಟು ದುಡಿದರೂ ಫಲ ಕೈಗೆ ಹತ್ತುತ್ತಿಲ್ಲ. ಇದರಿಂದ  ಮಾಡಿದ ಸಾಲವನ್ನು ತೀರಿಸಲು ಆಗುತ್ತಿಲ್ಲ. ಸರ್ಕಾರ ಹಾನಿಗೆ ಪರಿಹಾರ ಒದಗಿಸಬೇಕು.
*ಮಹಾಂತೇಶ ಬೆಟಗೇರಿ,
ಯುವ ರೈತ, ಲಕಮಾಪೂರ

ನಾಲ್ಕು ತಿಂಗಳ ಕಾಲ ಕಷ್ಟಪಟ್ಟು ಬೆಳೆಸಿದ ಮೆಣಸಿನ ಗಿಡಗಳು ಮಳೆಯಿಂದ ಹಾಳಾಗಿವೆ. ಇದರಿಂದ ಆರ್ಥಿಕ ಹೊರೆಯಾಗಿದೆ.
ಸಾಕಷ್ಟು ಖರ್ಚು ಮಾಡಿ ಬೆಳೆದ ಬೆಳೆಗಳು ಫಲ ನೀಡಲಿಲ್ಲವೆಂದರೆ ಬಹಳಷ್ಟು ನೋವಾಗುತ್ತದೆ. ಮತ್ತೆ ಸಾಲದ ಬರೆ ಹೆಚ್ಚಾಗುತ್ತದೆ.
*ಚನ್ನಬಸಪ್ಪ ಮೂಲಿಮನಿ, ರೈತ

*ಸುನೀಲ ತೇಗೂರ

ಟಾಪ್ ನ್ಯೂಸ್

Hassan: ಎಂಪಿ ಮತದಾನಕ್ಕೆ ಕಾಂಗ್ರೆಸ್‌ನಿಂದ 65 ಕೋಟಿ ರೂ. ಖರ್ಚು: ದೇವರಾಜೇಗೌಡ

Hassan: ಎಂಪಿ ಮತದಾನಕ್ಕೆ ಕಾಂಗ್ರೆಸ್‌ನಿಂದ 65 ಕೋಟಿ ರೂ. ಖರ್ಚು: ದೇವರಾಜೇಗೌಡ

DVG-1

Davanagere: ನಾಪತ್ತೆಯಾಗಿದ್ದ ವ್ಯಕ್ತಿ ಅಣಜಿ ಕೆರೆ ಬಳಿ ಅಸ್ಥಿಪಂಜರವಾಗಿ ಪತ್ತೆ!

Udupi: 51ನೇ ಅ.ಭಾ. ಪ್ರಾಚ್ಯವಿದ್ಯಾ ಸಮ್ಮೇಳನ ಭಾರತೀಯ ಜ್ಞಾನಪರಂಪರೆ ಕುರಿತು ಚಿಂತನ ಮಂಥನ

Udupi: 51ನೇ ಅ.ಭಾ. ಪ್ರಾಚ್ಯವಿದ್ಯಾ ಸಮ್ಮೇಳನ ಭಾರತೀಯ ಜ್ಞಾನಪರಂಪರೆ ಕುರಿತು ಚಿಂತನ ಮಂಥನ

Many leaders left BJP and joined JMM

Jharkhand: ಬಿಜೆಪಿ ತೊರೆದು ಜೆಎಂಎಂ ಸೇರಿದ ಹಲವು ನಾಯಕರು!

Mandya; Kidnapper bites his hand and escapes; A cinematic kind of case

Mandya; ಕಿಡ್ನ್ಯಾಪರ್‌ ಕೈಗೆ ಕಚ್ಚಿ ತಪ್ಪಿಸಿಕೊಂಡ ಬಾಲಕ; ಸಿನಿಮೀಯ ರೀತಿಯ ಪ್ರಕರಣ

Vijayapura: ರೇಂಜರ್ ಸ್ವಿಂಗ್‌ನಿಂದ ಬಿದ್ದು ಯುವತಿ ಸಾವು, ಕೊನೆ ಕ್ಷಣ ಮೊಬೈಲ್‌ನಲ್ಲಿ ಸೆರೆ

Vijayapura: ರೇಂಜರ್ ಸ್ವಿಂಗ್‌ನಿಂದ ಬಿದ್ದು ಯುವತಿ ಸಾವು, ಕೊನೆ ಕ್ಷಣ ಮೊಬೈಲ್‌ನಲ್ಲಿ ಸೆರೆ

S.-Lad

By Poll: ಸಿ.ಪಿ.ಯೋಗೇಶ್ವರ್ ಕಾಂಗ್ರೆಸ್‌ ಪಕ್ಷಕ್ಕೆ ಬಂದ್ರೆ ಸ್ವಾಗತಿಸುವೆ: ಸಂತೋಷ್ ಲಾಡ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

S.-Lad

By Poll: ಸಿ.ಪಿ.ಯೋಗೇಶ್ವರ್ ಕಾಂಗ್ರೆಸ್‌ ಪಕ್ಷಕ್ಕೆ ಬಂದ್ರೆ ಸ್ವಾಗತಿಸುವೆ: ಸಂತೋಷ್ ಲಾಡ್‌

ಹುಬ್ಬಳ್ಳಿ: ಗೋಡೆ ಕುಸಿದು ಮಹಿಳೆ ಸಾ*ವು, 3500 ಕೋಳಿ ಬಲಿ!

ಹುಬ್ಬಳ್ಳಿ: ಗೋಡೆ ಕುಸಿದು ಮಹಿಳೆ ಸಾ*ವು, 3500 ಕೋಳಿ ಬಲಿ!

ByPolls; ಕಾಂಗ್ರೆಸ್ಸಿಗರು ನನ್ನನ್ನು ಸಂಪರ್ಕಿಸಿಲ್ಲ. ನಾಳೆ ಏನೋ ಗೊತ್ತಿಲ್ಲ..: ಯೋಗೇಶ್ವರ್

ByPolls; ಕಾಂಗ್ರೆಸ್ಸಿಗರು ನನ್ನನ್ನು ಸಂಪರ್ಕಿಸಿಲ್ಲ. ನಾಳೆ ಏನೋ ಗೊತ್ತಿಲ್ಲ..: ಯೋಗೇಶ್ವರ್

Hubli: ಕ್ಷುಲ್ಲಕ ವಿಚಾರಕ್ಕೆ ಚೂರಿ ಇರಿತ; ಓರ್ವನ ಬಂಧನ, ಉಳಿದವರಿಗೆ ಶೋಧ

Hubli: ಕ್ಷುಲ್ಲಕ ವಿಚಾರಕ್ಕೆ ಚೂರಿ ಇರಿತ; ಓರ್ವನ ಬಂಧನ, ಉಳಿದವರಿಗೆ ಶೋಧ

By Election; ಮೂರು ಕ್ಷೇತ್ರಕ್ಕೆ ಶೀಘ್ರ ಅಭ್ಯರ್ಥಿಗಳು ಅಂತಿಮ: ಸಚಿವ ಲಾಡ್

By Election; ಮೂರು ಕ್ಷೇತ್ರಕ್ಕೆ ಶೀಘ್ರ ಅಭ್ಯರ್ಥಿಗಳು ಅಂತಿಮ: ಸಚಿವ ಲಾಡ್

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

ಹೊಸ ಸೇರ್ಪಡೆ

Police have discovered a new branch of Lashkar in Kashmir

Jammu Kashmir: ಲಷ್ಕರ್‌ನ ಹೊಸ ಶಾಖೆ ಪತ್ತೆ ಹಚ್ಚಿದ ಪೊಲೀಸರು

Hassan: ಎಂಪಿ ಮತದಾನಕ್ಕೆ ಕಾಂಗ್ರೆಸ್‌ನಿಂದ 65 ಕೋಟಿ ರೂ. ಖರ್ಚು: ದೇವರಾಜೇಗೌಡ

Hassan: ಎಂಪಿ ಮತದಾನಕ್ಕೆ ಕಾಂಗ್ರೆಸ್‌ನಿಂದ 65 ಕೋಟಿ ರೂ. ಖರ್ಚು: ದೇವರಾಜೇಗೌಡ

Fake bomb threat call for 50 flights in one day!

Threat Call; ಒಂದೇ ದಿನ 50 ವಿಮಾನಗಳಿಗೆ ಹುಸಿ ಬಾಂಬ್‌ ಬೆದರಿಕೆ ಕರೆ!

kas-a

Kasaragod ಅಪರಾಧ ಸುದ್ದಿಗಳು

PKL 11: Hattrick defeat for Bengaluru Bulls

PKL 11: ಬುಲ್ಸ್‌ ಗೆ ಹ್ಯಾಟ್ರಿಕ್‌ ಸೋಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.