Karkala: ಆಗಾಗ ಸುರಿಯುತ್ತಿರುವ ಮಳೆ; ರಸ್ತೆ ದುರಸ್ತಿಗೆ ಅಡ್ಡಿ
ದಿನ ಕಳೆದಂತೆ ಸಮಸ್ಯೆ ಇನ್ನಷ್ಟು ಜಟಿಲ; ವಾಹನ ಸವಾರರಿಗೆ ಸಂಕಷ್ಟ
Team Udayavani, Oct 22, 2024, 5:35 PM IST
ಕಾರ್ಕಳ: ಮಳೆಗಾಲದ ಅವಧಿ ಮುಗಿದಿದ್ದರೂ ಇನ್ನು ಮಳೆ ದೂರವಾಗಿಲ್ಲ. ಸತತ ಮಳೆಗೆ ನಗರದ ರಸ್ತೆಗಳು ಅಲ್ಲಲ್ಲಿ ಹಾನಿಗೊಳಗಾಗಿದ್ದು ಗುಂಡಿಗಳು ನಿರ್ಮಾಣವಾಗಿದೆ, ಇಷ್ಟರ ಅವಧಿಯಲ್ಲಿ ಮಳೆ ದೂರವಾಗಬೇಕಿತ್ತು. ಮಳೆ ನಿಲ್ಲದೆ ದುರಸ್ತಿ ಕಾರ್ಯಕ್ಕೂ ಅಡ್ಡಿಯಾಗಿದೆ. ವಾಹನ ಸವಾರರು ಸಂಚಾರದಲ್ಲಿ ತೊಂದರೆ ಅನುಭವಿಸುತ್ತಲೇ ಇದ್ದಾರೆ.
ಈ ಬಾರಿ ಸುರಿದ ಭಾರೀ ಮಳೆಗೆ ನಗರದ ರಸ್ತೆಗಳಿಗೆಅಪಾರ ಪ್ರಮಾಣದಲ್ಲಿ ಹಾನಿಯಾಗಿತ್ತು.ಮೂರು ಮಾರ್ಗದಿಂದ ಸಾಲ್ಮರ ಕಡೆಗೆ ತೆರಳು ಮಾರ್ಗದ ಕೆಲವೆಡೆ ಒಳಚರಂಡಿ ಚೇಂಬರ್ ಅನ್ನು ಮಳೆಯ ಸಂದರ್ಭ ತಡೆರಹಿತವನ್ನಾಗಿಸಲು ತೆರೆಯಲಾಗಿದ್ದು ಆ ಸ್ಥಳಗಳಲ್ಲಿ ರಸ್ತೆ ಕೆಟ್ಟಿದೆ. ಇನ್ನುಳಿದಂತೆ ಸಾಲ್ಮರ, ಕಾಬೆಟ್ಟುವಿಗೆ ತಿರುವು ಪಡೆಯುವಲ್ಲಿ, ತಾಲೂಕು ಕಚೇರಿ ಸಮೀಪದ ರಸ್ತೆ, ಮುಖ್ಯರಸ್ತೆಯಿಂದ ಸರ್ವಜ್ಞ ವೃತ್ತದ ಕಡೆಗೆ ತೆರಳುವ ರಸ್ತೆಗಳ ಅಲ್ಲಲ್ಲಿ ಹೊಂಡಗುಂಡಿಗಳು ನಿರ್ಮಾಣಗೊಂಡು ಸಂಚಾರಕ್ಕೆ ಅನಾನುಕೂಲವಾಗುತ್ತಿದೆ.
ಬಂಡಿಮಠ, ಅನಂತಶಯನ, ಮೂರು ಮಾರ್ಗದಿಂದ ಆನೆಕರೆ ಕಡೆಗೆ ತೆರಳುವ ರಸ್ತೆಗಳ ಹಲವೆಡೆ ರಸ್ತೆಗಳಿಗೆ ಹಾನಿಯಾಗಿ ಗುಂಡಿಗಳು ನಿರ್ಮಾಣಗೊಂಡು ಅವಾಂತರ ಸೃಷ್ಟಿಸುತ್ತಿವೆ. ಈ ಮಾರ್ಗದಲ್ಲಿ ಮಂಗಳೂರು ಕಡೆಗೆ ತೆರಳುವ ಬಸ್‌ಗಳು ಓಟಾಟ ನಡೆಸುತ್ತಿದ್ದು ಹದಗೆಟ್ಟ ರಸ್ತೆಗಳಲ್ಲಿ ಓಡಾಡುವುದೇ ತ್ರಾಸ ಎನಿಸಿದೆ.
ಇನ್ನು ನಗರದಿಂದ ಒಳರಸ್ತೆಯಾಗಿ ತೆರಳುವ ಮಾರುಕಟ್ಟೆ ಮೂಲಕ ಬಂಡಿಮಠ ತಲುಪುವ ರಸ್ತೆಯೂ ತೀವೃ ರೀತಿಯಲ್ಲಿ ಹಾನಿಗೊಂಡು ಸಂಚಾರದಲ್ಲಿ ತಾಪತ್ರಯ ತರಿಸಿದೆ. ಮಳೆ ಇನ್ನು ನಿಲ್ಲದ ಕಾರಣದಿಂದ ತಾತ್ಕಾಲಿಕ ದುರಸ್ತಿಯೂ ಸಾಧ್ಯವಾಗದೆ ಸಂಚಾರ ಸಮಸ್ಯೆಗಳು ದಿನದಿಂದ ದಿನಕ್ಕೆ ಬಿಗಡಾಯಿಸುತ್ತಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.