Thekkatte: ಸಂಪೂರ್ಣ ಹದಗೆಟ್ಟ ಬಿದ್ಕಲ್‌ಕಟ್ಟೆ-ಕಂಬಿಕಲ್ಲು ರಸ್ತೆ
ವಾಹನ ಸಂಚಾರ ದುಸ್ತರ; ಕಿರಿದಾದ ರಸ್ತೆ ವಿಸ್ತರಣೆಗೆ ಜನರ ಆಗ್ರಹ
Team Udayavani, Oct 22, 2024, 5:48 PM IST
ತೆಕ್ಕಟ್ಟೆ: ಕುಂದಾಪುರ ತಾಲೂಕಿನ ಹಾರ್ದಳ್ಳಿ ಮಂಡಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಿದ್ಕಲ್‌ಕಟ್ಟೆಯ ಕೊಳನಕಲ್ಲು ಶ್ರೀ ಮಹಾಗಣಪತಿ ದೇವಸ್ಥಾನ ಮಹಾದ್ವಾರದಿಂದ – ಕಂಬಿಕಲ್ಲು (ಕಕ್ಕುಂಜೆ) ಶ್ರೀ ಮಹಾಗಣಪತಿ ದೇಗುಲ ಸಂಪರ್ಕ ಕಲ್ಪಿಸುವ ಸುಮಾರು 4 ಕಿ.ಮೀ. ಪ್ರಮುಖ ಕಿರಿದಾದ ರಸ್ತೆ ಸಂಪೂರ್ಣ ಹದಗೆಟ್ಟಿದೆ.
ಕಿರಿದಾಗಿರುವ ಮಾರ್ಗದಲ್ಲಿ ವಾಹನ ಸವಾರರು ಪ್ರಯಾಸ ಪಡಬೇಕಾಗಿರುವುದು ಒಂದೆಡೆಯಾದರೆ, ಇನ್ನೊಂದು ಕಡೆ ಹೊಂಡ ಗುಂಡಿಗಳ ಸವಾಲು. ಕೆಲವು ವಾಹನಿಗರು ಹೊಂಡಗಳನ್ನು ಲೆಕ್ಕಿಸದೆ ಚಲಾಯಿಸುವುದರಿಂದ ಪಾದಚಾರಿಗಳು ಕೂಡಾ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ.
ರಸ್ತೆ ವಿಸ್ತರಣೆಗೆ ಸ್ಥಳೀಯರ ಆಗ್ರಹ
ಬಿದ್ಕಲ್‌ಕಟ್ಟೆಯಿಂದ ಪ್ರಾಕೃತಿಕವಾದ ಮಡಿಲಿನಲ್ಲಿ ಕಂಗೊಳಿಸುತ್ತಿರುವ ಪುರಾಣ ಪ್ರಸಿದ್ದ ಕೊಳನಕಲ್ಲು ಶ್ರೀ ವಿನಾಯಕ ದೇಗುಲ, ಕಂಬಿಕಲ್ಲು ಶ್ರೀ ಮಹಾಗಣಪತಿ ದೇಗುಲ, ಕಕ್ಕುಂಜೆ, ಶಿರೂರು ಮೂರುಕೈ, ಹಾಲಾಡಿ, ಗೋಳಿಯಂಗಡಿ ಸೇರಿದಂತೆ ಗ್ರಾಮೀಣ ಭಾಗಗಳಿಗೆ ಇದು ಸಂಪರ್ಕ ಕೊಂಡಿಯಾಗಿರುವ ರಸ್ತೆಯನ್ನು ಅಗಲಗೊಳಿಸಬೇಕು ಎಂಬ ಬೇಡಿಕೆ ಜನರದ್ದು.
ರಸ್ತೆ ಹದಗೆಟ್ಟು ಸಾರ್ವಜನಿಕರಿಗೆ ತೀವ್ರ ತೊಂದರೆಯಾಗಿದೆ. ಶಾಲಾ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು ಹಾಗೂ ವಾಹನ ಸವಾರರು ಕೂಡಾ ಬಹಳ ಕಷ್ಟದಲ್ಲಿಯೇ ಸಂಚರಿಸಬೇಕಾದ ಅನಿವಾರ್ಯತೆ ಇದೆ ಎನ್ನುತ್ತಾರೆ ಸ್ಥಳೀಯರಾದ ರಾಮ ಶೇರ್ಡಿ.
ಟೆಂಡರ್ ಪ್ರಕ್ರಿಯೆ ಪೂರ್ಣ
ಅಭಿವೃದ್ಧಿ ಕಾಮಗಾರಿಯ ಬಗ್ಗೆ ಹಿಂದಿನ ಸರಕಾರದಲ್ಲಿಯೇ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಪ್ರಸ್ತುತ ಕಾಮಗಾರಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಶೀಘ್ರವೇ ಕಾಮಗಾರಿಗಳು ನಡೆಯಲಿದೆ. ರಸ್ತೆಯ ಎರಡು ಕಡೆಗಳಲ್ಲಿ ಖಾಸಗಿ ಅವರಿಗೆ ಸಂಬಂಧಪಟ್ಟ ಜಾಗಗಳಿದ್ದು, ಈ ಹಿಂದೆ ಅವರ ಸಹಕಾರ ಹಾಗೂ ಕೊಡುಗೆಯಿಂದಲೇ ಈ ರಸ್ತೆ ನಿರ್ಮಾಣವಾಗಿದೆ.
-ಗಣೇಶ್ ಶೆಟ್ಟಿ, ಕೊಳನಕಲ್ಲು ಉಪಾಧ್ಯಕ್ಷರು, ಹಾರ್ದಳ್ಳಿ ಮಂಡಳ್ಳಿ ಗ್ರಾ.ಪಂ.
ಪ್ರವಾಸೋದ್ಯಮಕ್ಕೂ ಆದ್ಯತೆ ನೀಡಿ
ಕೊಳನಕಲ್ಲು ಶ್ರೀ ವಿನಾಯಕ ದೇಗುಲ, ಕಂಬಿಕಲ್ಲು ಶ್ರೀ ಮಹಾಗಣಪತಿ ದೇಗುಲಕ್ಕೆ ಸಾಕಷ್ಟು ಭಕ್ತರು ಬರುತ್ತಾರೆ. ಪ್ರವಾಸೋದ್ಯಮದ ನೆಲೆಯಲ್ಲಿ ಇಲ್ಲಿಗೆ ರಸ್ತೆ ವ್ಯವಸ್ಥೆ, ದಾರಿ ದೀಪ ಹಾಗೂ ಸೂಚನಾ ಫಲಕಗಳು ಅಳವಡಿಸಬೇಕು. ಇದರಿಂದ ಗ್ರಾಮದ ಅಭಿವೃದ್ಧಿಗೂ ಸಹಕಾರಿ ಎನ್ನುವುದು ಬಿದ್ಕಲ್‌ಕಟ್ಟೆ ರಾಘವೇಂದ್ರ ಅಡಿಗರ ಅಭಿಪ್ರಾಯ.ದೆ.
-ಗಣೇಶ್ ಶೆಟ್ಟಿ ಕೊಳನಕಲ್ಲು ಉಪಾಧ್ಯಕ್ಷರು, ಹಾರ್ದಳ್ಳಿ ಮಂಡಳ್ಳಿ ಗ್ರಾ.ಪಂ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.